ಮೆಗಾ ಪಿಕ್ಸೆಲ್ ಆವೃತ್ತಿಯಾಗಿ ಮಾಡಿಫೈಗೊಂಡ ಟಾಟಾ ನ್ಯಾನೊ

ಟಾಟಾ ನ್ಯಾನೊ ಕಾರು ಒಂದು ಲಕ್ಷ ರೂಪಾಯಿ ಕಾರು, ಬಡವರ ಕಾರು ಎಂಬ ಹಲವು ಅಡ್ಡಹೆಸರುಗಳನ್ನು ಹೊಂದಿದೆ. ಈ ಕಾರನ್ನು ಟಾಟಾ ಮೋಟಾರ್ಸ್ ಕಂಪನಿಯು ಬಡ ಹಾಗೂ ಸಾಮಾನ್ಯ ಜನರ ಬಳಕೆಗಾಗಿ ಬಿಡುಗಡೆಗೊಳಿಸಿತ್ತು.

ಮೆಗಾ ಪಿಕ್ಸೆಲ್ ಆವೃತ್ತಿಯಾಗಿ ಮಾಡಿಫೈಗೊಂಡ ಟಾಟಾ ನ್ಯಾನೊ

ಹೊಸ ಸುರಕ್ಷತಾ ನಿಯಮಗಳನ್ನು ಅಳವಡಿಸದ ಕಾರಣ ಹಾಗೂ ಇನ್ನಿತರ ಕೆಲವು ಕಾರಣಗಳಿಂದಾಗಿ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಯಿತು. ಟಾಟಾ ಮೋಟಾರ್ಸ್ ಕಳೆದ ಕೆಲವು ವರ್ಷಗಳಿಂದ ಈ ಕಾರಿಗೆ ಸಂಬಂಧಿಸಿದ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ಆದರೂ ಕೆಲವರು ಈ ಕಾರ್ ಅನ್ನು ಇನ್ನೂ ಬಳಸುತ್ತಿದ್ದಾರೆ.

ಮೆಗಾ ಪಿಕ್ಸೆಲ್ ಆವೃತ್ತಿಯಾಗಿ ಮಾಡಿಫೈಗೊಂಡ ಟಾಟಾ ನ್ಯಾನೊ

ಕೊಯಮತ್ತೂರಿನ ಟಾಟಾ ನ್ಯಾನೊ ಕಾರಿನ ಮಾಲೀಕರೊಬ್ಬರು ತಮ್ಮ ಕಾರನ್ನು ಮೆಗಾ ಪಿಕ್ಸೆಲ್ ಆವೃತ್ತಿಯಾಗಿ ಬದಲಿಸಿದ್ದಾರೆ. ಈ ಬಗ್ಗೆ ಆಟೋ ಟ್ರೆಂಡ್ ಗ್ಯಾರೇಜ್ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮೆಗಾ ಪಿಕ್ಸೆಲ್ ಆವೃತ್ತಿಯಾಗಿ ಮಾಡಿಫೈಗೊಂಡ ಟಾಟಾ ನ್ಯಾನೊ

ಈ ಕಾರಿನಲ್ಲಿದ್ದ ಹಲವು ಬಿಡಿಭಾಗಗಳನ್ನು ತೆಗೆದು ಹಾಕಿ ಹೊಸ ಭಾಗಗಳನ್ನು ಅಳವಡಿಸಲಾಗಿದೆ. ಈ ಟಾಟಾ ನ್ಯಾನೊ ಕಾರಿನ ಮುಂಭಾಗದಲ್ಲಿ ಹೊಸದಾಗಿ ಎಲ್ಇಡಿ ಡಿಆರ್ ಎಲ್ ಹಾಗೂ ಎಲ್ಇಡಿ ಗುಣಮಟ್ಟದ ಹೆಡ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ.

ಮೆಗಾ ಪಿಕ್ಸೆಲ್ ಆವೃತ್ತಿಯಾಗಿ ಮಾಡಿಫೈಗೊಂಡ ಟಾಟಾ ನ್ಯಾನೊ

ಇವುಗಳು ಜನರ ಗಮನವನ್ನು ತಮ್ಮತ್ತ ಸೆಳೆಯುತ್ತವೆ. ಹೆಡ್‌ಲ್ಯಾಂಪ್‌ಗಳ ಸುತ್ತಲೂ ಡಿಆರ್‌ಎಲ್ ಲೈಟ್ ಬಲ್ಬ್ ಅನ್ನು ಬೆಳಗಿಸಲು ಕಾರಿನೊಳಗೆ ಪ್ರತ್ಯೇಕವಾದ ಸ್ವಿಚ್‌ಗಳನ್ನು ನೀಡಲಾಗಿದೆ. ಇದರಿಂದಾಗಿ ಅಗತ್ಯವಿದ್ದಾಗ ಈ ಬಲ್ಬ್ ಗಳನ್ನು ಹಗಲಿನಲ್ಲಿಯೂ ಆನ್ ಮಾಡಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮೆಗಾ ಪಿಕ್ಸೆಲ್ ಆವೃತ್ತಿಯಾಗಿ ಮಾಡಿಫೈಗೊಂಡ ಟಾಟಾ ನ್ಯಾನೊ

ಈ ನ್ಯಾನೊ ಕಾರಿನಲ್ಲಿ ಉತ್ತಮ ಚಾಲನಾ ಸಾಮರ್ಥ್ಯಕ್ಕಾಗಿ ಟಯರ್ ಹಾಗೂ ವ್ಹೀಲ್ ಗಳನ್ನು ಬದಲಿಸಲಾಗಿದೆ. ಬದಲಾವಣೆಯ ನಂತರ 13 ಇಂಚಿನ ವ್ಹೀಲ್ ಹಾಗೂ 155/65 ಆರ್ 13 ಟೈಪ್ ಸಿಯೆಟ್ ಮೈಲೇಜ್ ಟಯರ್‌ಗಳನ್ನು ಅಳವಡಿಸಲಾಗಿದೆ.

ಮೆಗಾ ಪಿಕ್ಸೆಲ್ ಆವೃತ್ತಿಯಾಗಿ ಮಾಡಿಫೈಗೊಂಡ ಟಾಟಾ ನ್ಯಾನೊ

ಹೊಸದಾಗಿ ಅಳವಡಿಸಲಾಗಿರುವ ವ್ಹೀಲ್ ಮೊದಲಿಗಿಂತ ಸ್ವಲ್ಪ ದೊಡ್ಡದಾಗಿದ್ದರೂ ಕಾರಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ ಎಂದು ಕಾರು ಮಾಲೀಕರು ಹೇಳಿದ್ದಾರೆ. ಇದರ ಜೊತೆಗೆ ವ್ಹೀಲ್ ರಿಮ್‌ಗೆ ಹೊಸದಾಗಿ ಗ್ಲಾಸ್ ಬ್ಲಾಕ್ ಹಾಗೂ ಎರಡನೇ ಬಣ್ಣವಾಗಿ ಕೆಂಪು ಸ್ಟಿಕ್ಕರ್‌ಗಳನ್ನು ನೀಡಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮೆಗಾ ಪಿಕ್ಸೆಲ್ ಆವೃತ್ತಿಯಾಗಿ ಮಾಡಿಫೈಗೊಂಡ ಟಾಟಾ ನ್ಯಾನೊ

ಇವುಗಳ ಮೇಲೆ ಸಿಲ್ವರ್ ರಿಮ್ ಕ್ವಾರ್ಟ್ಜ್ ಅಳವಡಿಸಲಾಗಿದೆ. ಜೊತೆಗೆ ಹೊಸದಾಗಿ ಎಕ್ಸ್ ಟಿರಿಯರ್ ಬಣ್ಣವನ್ನು ನೀಡಲಾಗಿದೆ. ಸರ್ಫೆಸ್ ಗೆ ಹೆಚ್ಚು ಹೊಳೆಯುವ ಕೆಂಪು ಬಣ್ಣವನ್ನು ನೀಡಲಾಗಿದೆ. ಅಕ್ಕಪಕ್ಕದಲ್ಲಿ ಟಾಟಾ ನ್ಯಾನೊ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ.

ಮೆಗಾ ಪಿಕ್ಸೆಲ್ ಆವೃತ್ತಿಯಾಗಿ ಮಾಡಿಫೈಗೊಂಡ ಟಾಟಾ ನ್ಯಾನೊ

ಕಾರಿನ ಇಂಟಿರಿಯರ್ ನಲ್ಲಿ ಲೆದರ್ ಬ್ಲಾಂಕೆಟ್, ಸೆಲ್ ಫೋನ್ ಹೋಲ್ಡರ್, ಫ್ಲ್ಯಾಷ್‌ಲೈಟ್, ಗ್ಲೋವ್ ಬಾಕ್ಸ್ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ. ಈ ಒಟ್ಟಾರೆ ಮಾಡಿಫಿಕೇಶನ್ ಗಾಗಿ ರೂ.36,000 ಖರ್ಚು ಮಾಡಲಾಗಿದೆ. ಈ ಚಿತ್ರಗಳನ್ನು ಆಟೋಟ್ರೆಂಡ್ ಟಿವಿಯಿಂದ ಪಡೆಯಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟಾಟಾ ಮೋಟಾರ್ಸ್ ಕಂಪನಿಯು 2008ರಲ್ಲಿ ಮೊದಲ ಬಾರಿಗೆ ನ್ಯಾನೊ ಕಾರನ್ನು ಬಿಡುಗಡೆಗೊಳಿಸಿತು. ಈ ಕಾರಿನಲ್ಲಿ 624 ಸಿಸಿ ಪೆಟ್ರೋಲ್ ಎಂಜಿನ್ ಹಾಗೂ 4 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಮೆಗಾ ಪಿಕ್ಸೆಲ್ ಆವೃತ್ತಿಯಾಗಿ ಮಾಡಿಫೈಗೊಂಡ ಟಾಟಾ ನ್ಯಾನೊ

ಈ ಕಾರು ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಈ ಕಾರು ಹೆಚ್ಚು ಜನಪ್ರಿಯವಾಗಲಿಲ್ಲ.

Most Read Articles

Kannada
English summary
Tata Nano car modified as megapixel edition. Read in Kannada.
Story first published: Wednesday, October 28, 2020, 13:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X