ಟಾಟಾ ನೆಕ್ಸಾನ್ ಪೆಟ್ರೋಲ್ ಕಾರಿನ ವಿಶೇಷತೆಗಳೇನು ಗೊತ್ತಾ?

ಟಾಟಾ ನೆಕ್ಸಾನ್ ದೇಶಿಯ ಮಾರುಕಟ್ಟೆಯ ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಹೆಚ್ಚಿನ ಪ್ರಮಾಣದ ಸುರಕ್ಷತಾ ಫೀಚರ್‍‍ಗಳನ್ನು ಅಳವಡಿಸಲಾಗಿದೆ.

ಟಾಟಾ ನೆಕ್ಸಾನ್ ಪೆಟ್ರೋಲ್ ಕಾರಿನ ವಿಶೇಷತೆಗಳೇನು ಗೊತ್ತಾ?

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಎಸ್‍‍ಯುವಿಯನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಇತ್ತೀಚಿಗೆ ಬಿಡುಗಡೆಗೊಳಿಸಿದೆ. ಪೆಟ್ರೋಲ್ ಆವೃತ್ತಿಯ ಎಂಜಿನ್ ಹೆಚ್ಚು ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಸ್‍‍ಯುವಿಯಲ್ಲಿರುವ 1.2 ಲೀಟರಿನ ಪೆಟ್ರೋಲ್ ಎಂಜಿನ್ 107 ಬಿ‍ಹೆಚ್‍‍ಪಿ ಪವರ್ ಹಾಗೂ 170 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಟಾಟಾ ನೆಕ್ಸಾನ್ ಪೆಟ್ರೋಲ್ ಕಾರಿನ ವಿಶೇಷತೆಗಳೇನು ಗೊತ್ತಾ?

ನೆಕ್ಸಾನ್ ಎಸ್‍‍ಯುವಿಯ 1.5 ಲೀಟರಿನ ಡೀಸೆಲ್ ಎಂಜಿ‍‍ನ್‍‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಡೀಸೆಲ್ ಎಂಜಿನ್ 107 ಬಿ‍‍ಹೆಚ್‍‍ಪಿ ಪವರ್ ಹಾಗೂ 260 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಾಟಾ ನೆಕ್ಸಾನ್ ಪೆಟ್ರೋಲ್ ಕಾರಿನ ವಿಶೇಷತೆಗಳೇನು ಗೊತ್ತಾ?

ಟಾಟಾ ನೆಕ್ಸಾನ್‍‍ನ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಲ್ಲಿ 6 ಸ್ಪೀಡಿನ ಮ್ಯಾನುವಲ್ ಅಥವಾ 6 ಸ್ಪೀಡಿನ ಎ‍ಎಂಟಿ ಗೇರ್‍‍ಬಾಕ್ಸ್ ಗಳನ್ನು ನೀಡಲಾಗುವುದು. ಈ ಮಾಹಿತಿಯನ್ನು ಟಾಟಾ ಮೋಟಾರ್ಸ್‍‍‍ನ ವೆಬ್‍‍ಸೈಟಿನಲ್ಲಿ ಪ್ರಕಟಿಸಲಾಗಿದೆ.

ಟಾಟಾ ನೆಕ್ಸಾನ್ ಪೆಟ್ರೋಲ್ ಕಾರಿನ ವಿಶೇಷತೆಗಳೇನು ಗೊತ್ತಾ?

ಹ್ಯುಂಡೈ ವೆನ್ಯೂ ಕಾರಿನಲ್ಲಿ ಅಳವಡಿಸಲಾಗಿರುವ 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ 117 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. ಮಹೀಂದ್ರಾ ಎಕ್ಸ್ ಯುವಿ 300ನಲ್ಲಿರುವ 1.2 ಲೀಟರಿನ ಪೆಟ್ರೋಲ್ ಎಂಜಿನ್ 117 ಬಿ‍‍ಹೆಚ್‍‍ಪಿ ಪವರ್ ಹಾಗೂ 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಟಾಟಾ ನೆಕ್ಸಾನ್ ಪೆಟ್ರೋಲ್ ಕಾರಿನ ವಿಶೇಷತೆಗಳೇನು ಗೊತ್ತಾ?

ಮಹೀಂದ್ರಾ ಕಂಪನಿಯು ಎಕ್ಸ್ ಯುವಿ 300 ಎಸ್‍‍ಯುವಿಯನ್ನು ಟರ್ಬೊ ಪೆಟ್ರೋಲ್ ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಲಿದೆ. ಈ ಎಂಜಿನ್ 127 ಬಿ‍‍ಹೆಚ್‍‍ಪಿ ಪವರ್ ಹಾಗೂ 230 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಾಟಾ ನೆಕ್ಸಾನ್ ಪೆಟ್ರೋಲ್ ಕಾರಿನ ವಿಶೇಷತೆಗಳೇನು ಗೊತ್ತಾ?

ಈ ಕಾರುಗಳಿಗೆ ಪೈಪೋಟಿ ನೀಡಲು ಟಾಟಾ ಮೋಟಾರ್ಸ್ ತನ್ನ ಪೆಟ್ರೋಲ್ ಎಂಜಿನ್ ಕಾರಿನಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಹೊಸ ನೆಕ್ಸಾನ್ ಎಸ್‍‍ಯುವಿಯು ಹೊಸ ಗ್ರಿಲ್ ಸಿಸ್ಟಂ, ಎಲ್‍ಇ‍‍ಡಿ ಪ್ರೊಜೆಕ್ಟರ್ ಹೆಡ್‍‍ಲೈಟ್, ಡಿ‍ಆರ್‍ಎಲ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ ಹಾಗೂ ಎಲ್‍ಇ‍‍ಡಿ ಟೇಲ್ ಲೈಟ್‍‍ಗಳನ್ನು ಹೊಂದಿದೆ.

ಟಾಟಾ ನೆಕ್ಸಾನ್ ಪೆಟ್ರೋಲ್ ಕಾರಿನ ವಿಶೇಷತೆಗಳೇನು ಗೊತ್ತಾ?

ಹೊಸ ನೆಕ್ಸಾನ್‍‍ನಲ್ಲಿರುವ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಅನ್ನು ಹೊಸ ಫೀಚರ್‍‍ಗಳೊಂದಿಗೆ ಅಪ್‍‍ಗ್ರೇಡ್ ಮಾಡಲಾಗಿದೆ. ಈ ಫೀಚರ್‍‍‍ಗಳಲ್ಲಿ ವೆಹಿಕಲ್ ಲೊಕೆಷನ್ ಡಿಟೆಕ್ಷನ್ ಸೌಲಭ್ಯ, ಎಲೆಕ್ಟ್ರಿಕ್ ಸನ್‍‍ರೂಫ್ ಹಾಗೂ ಫ್ಯಾಬ್ರಿಕ್ ಅಪ್‍‍ಹೊಲೆಸ್ಟರಿಗಳು ಸೇರಿವೆ.

ಟಾಟಾ ನೆಕ್ಸಾನ್ ಪೆಟ್ರೋಲ್ ಕಾರಿನ ವಿಶೇಷತೆಗಳೇನು ಗೊತ್ತಾ?

ಹೊಸ ಟಾಟಾ ನೆಕ್ಸಾನ್ ಎಸ್‍‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.6.95 ಲಕ್ಷಗಳಾಗಿದೆ. ಟಾಟಾ ನೆಕ್ಸಾನ್ ದೇಶಿಯ ಮಾರುಕಟ್ಟೆಯಲ್ಲಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್ ಯುವಿ 300 ಹಾಗೂ ಫೋರ್ಡ್ ಇಕೊ‍‍ಸ್ಪೋರ್ಟ್‍‍ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Features of Tata Nexon BS6 Petrol engine car. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X