Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ನೆಕ್ಸಾನ್ ಇವಿ
ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ಇವಿ ಎಸ್ಯುವಿಯು ಭಾರತೀಯ ಮಾರುಕಟ್ಟೆಯ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಬ್ರ್ಯಾಂಡ್ನ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಕಾಂಪ್ಯಾಕ್ಟ್-ಎಸ್ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ ನೆಕ್ಸಾನ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್ಯುವಿಯು ಬಿಡುಗಡೆಯಾದ ಕೇವಲ 10 ತಿಂಗಳಲ್ಲಿ ಒಟ್ಟು 2200 ಯುನಿಟ್ಗಳು ಮಾರಾಟವಾಗುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ನೆಕ್ಸಾನ್ ಎಲೆಕ್ಟ್ರಿಕ್ ಎಸ್ಯುವಿಯು ಭರ್ಜರಿ ಮಾರಾಟವಾಗುತ್ತಿದೆ. ನೆಕ್ಸನ್ ಇವಿ ಈಗ ದೇಶದ ಹೆಚ್ಚು ಆದ್ಯತೆಯ ಎಲೆಕ್ಟ್ರಿಕ್ ಕಾರು ಎಂದು ಟಾಟಾ ಘೋಷಿಸಿದೆ. ಟಾಟಾ ನೆಕ್ಸನ್ ಇವಿ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಶೇ 74 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಟಾಟಾ ಮೋಟಾರ್ಸ್ನ ಪ್ಯಾಸೆಂಜರ್ ವೆಹಿಕಲ್ ಬಿಸಿನೆಸ್ ಯುನಿಟ್ ಅಧ್ಯಕ್ಷ ಶೈಲೇಶ್ ಚಂದ್ರ ಅವರು ಮಾತನಾಡಿ, ಟಾಟಾ ನೆಕ್ಸನ್ ಇವಿ ಪ್ರಾರಂಭವಾದಾಗಿನಿಂದ ಭಾರತದ ಎಲೆಕ್ಟ್ರಿಕ್ ಕಾರುಗಳ ಬೇಡಿಕೆಯನ್ನು ಹೆಚ್ಚುವುದಕ್ಕೆ ದಾರಿ ಮಾಡಿಕೊಟ್ಟಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಮಾಲಿನ್ಯ ರಹಿತ ಮತ್ತು ಆಕರ್ಷಕ ಬೆಲೆಯಲ್ಲಿ ನೆಕ್ಸಾನ್ ಇವಿ ಗ್ರಾಹಕರು ವ್ಯಾಪಕವಾದ ಸ್ವೀಕಾರಿಸಿದ್ದಾರೆ. ಇತ್ತೀಚೆಗೆ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚುತ್ತಿದ್ದು, ಚಾರ್ಜಿಂಗ್ ಮೂಲಸೌಕರ್ಯ ಕೂಡ ಹೆಚ್ಚಾಗಿದೆ. ಅಲ್ಲದೇ ಸರ್ಕಾರವು ಕೂಡ ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಎಲೆಕ್ಟ್ರಿಕ್ ಎಸ್ಯುವಿಯು ಎಕ್ಸ್ಎಂ, ಎಕ್ಸ್ಝಡ್ ಪ್ಲಸ್ ಮತ್ತು ಎಕ್ಸ್ಝಡ್ ಪ್ಲಸ್ ಲಕ್ಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್ಯುವಿಯಲ್ಲಿ 30.2 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಇದು 127 ಬಿಹೆಚ್ಪಿ ಮತ್ತು 245 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬ್ಯಾಟರಿ ಪ್ಯಾಕ್ 8 ವರ್ಷದ ವಾರಂಟಿ ಮತ್ತು ಐಪಿ 67 ವಾಟರ್ ಫ್ರೋಫ್ ಆಗಿದೆ. ಎಲೆಕ್ಟ್ರಿಕ್ ಎಸ್ಯುವಿ ಕೇವಲ 9.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಇನ್ನು ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್ಯುವಿಯ ಪೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ಇದು ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ಇನ್-ಕಾರ್ ಕನೆಕ್ಟಿವಿಟಿ ಟೆಕ್ನಾಲಜಿ ಐಆರ್ಎಯೊಂದಿಗೆ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್ಯುವಿಯ 7-ಇಂಚಿನ ಸಂಪೂರ್ಣ ಡಿಜಿಟಲ್ ಮಾಹಿತಿ ಪ್ರದರ್ಶನ, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಸನ್ರೂಫ್, ರೈನ್ ಸೆನ್ಸಾಸಿಂಗ್, ಇಂಟಿಗ್ರೇಟೆಡ್ ಟರ್ನ್ ಇಂಡೀಕೇಟರ್, ಎಲ್ಇಡಿ ಪ್ರೊಜೆಕ್ಟರ್ ಹೆಡ್ಲೈಟ್ಗಳು ಮತ್ತು ಎಲ್ಇಡಿ ಟೈಲ್ಲ್ಯಾಂಪ್ಗಳನ್ನು ಒಳಗೊಂಡಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್ಯುವಿಯಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಿದೆ. ನೆಕ್ಸಾನ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್ಯುವಿಯಲ್ಲಿ ಡ್ಯುಯಲ್ ಫ್ರಂಟ್ ಏರ್ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಮ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಅನ್ನು ಹೊಂದಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್ಯುವಿಯು ಭಾರತೀಯ ಮಾರುಕಟ್ಟೆಯಲ್ಲೊ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು ಎಂಜಿ ಝಡ್ ಎಸ್ಯುವಿಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಭಾರತದಲ್ಲಿ ಬಿಡುಗಡೆಯಾಗಲಿರುವ ಮಹೀಂದ್ರಾ ಇಎಕ್ಸ್ಯುವಿ 300 ಮಾದರಿಯು ನೆಕ್ಸಾನ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್ಯುವಿಗೆ ನೇರವಾಗಿ ಪೈಪೋಟಿಯನ್ನು ನೀಡುತ್ತದೆ.