ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್ ಎಲೆಕ್ಟಿಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.13.99 ಲಕ್ಷಗಳಾಗಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು ಎಕ್ಸ್ ಎಂ, ಎಕ್ಸ್ ಝಡ್ ಪ್ಲಸ್, ಎಕ್ಸ್ ಝಡ್‍ ಪ್ಲಸ್ ಲಕ್ಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಟಾಪ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.15.99 ಲಕ್ಷಗಳಾಗಿದೆ. ಈ ಎಲ್ಲಾ ಮೂರು ಮಾದರಿಗಳಲ್ಲೂ ಹಲವಾರು ಫೀಚರ್ ಹಾಗೂ ಅಪ್‍‍ಡೇಟ್‍‍ಗಳಿವೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಈ ಎಲೆಕ್ಟ್ರಿಕ್ ಕಾರ್ ಅನ್ನು ನೆಕ್ಸಾನ್ ಫೇಸ್‍‍ಲಿಫ್ಟ್ ಸ್ಟಾಂಡರ್ಡ್ ಕಾರಿನ ಆಧಾರದ ಮೇಲೆ ತಯಾರಿಸಲಾಗಿದೆ. ಈಗಾಗಲೇ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬುಕ್ಕಿಂಗ್‍‍ಗಳನ್ನು ಆರಂಭಿಸಲಾಗಿದೆ. ರೂ.21,000 ಪಾವತಿಸಿ ಈ ಕಾರ್ ಅನ್ನು ಬುಕ್ಕಿಂಗ್ ಮಾಡಬಹುದಾಗಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಆನ್‍‍ಲೈನ್ ಮೂಲಕ ಅಥವಾ ದೇಶಾದ್ಯಂತವಿರುವ ಕಂಪನಿಯ ಆಯ್ದ ಡೀಲರ್‍‍ಗಳ ಮೂಲಕ ಈ ಎಲೆಕ್ಟ್ರಿಕ್ ಕಾರ್ ಅನ್ನು ಬುಕ್ಕಿಂಗ್‍ ಮಾಡಬಹುದಾಗಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ 95 ಕಿ.ವ್ಯಾನ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಈ ಎಲೆಕ್ಟ್ರಿಕ್ ಮೋಟರ್ ಮುಂಭಾಗದ ವ್ಹೀಲ್‍‍ಗಳಿಗೆ ಪವರ್ ನೀಡುತ್ತದೆ. ಈ ಮೋಟರ್‍‍ಗೆ 30.2 ಕಿ.ವ್ಯಾನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿ 129 ಬಿ‍‍ಹೆಚ್‍‍ಪಿ ಪವರ್ ಹಾಗೂ 245 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಎ‍ಆರ್‍ಎ‍ಐ ಪ್ರಮಾಣಪತ್ರದಂತೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಆದರೆ 312 ಕಿ.ಮೀವರೆಗೂ ಚಲಿಸುತ್ತದೆ ಎಂದು ಟಾಟಾ ಕಂಪನಿಯು ಹೇಳಿದೆ. ಆದರೆ ನೈಜ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ಕಾರು 250 - 300 ಕಿ.ಮೀವರೆಗೂ ಚಲಿಸುತ್ತದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಜೊತೆಗೆ ಹೋಂ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ನೀಡಲಾಗುತ್ತದೆ. ಗ್ರಾಹಕರ ಅನುಕೂಲಕ್ಕಾಗಿ ಟಾಟಾ ಕಂಪನಿಯು ಭಾರತದ ಪ್ರಮುಖ ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಆರಂಭಿಸಲಿದೆ. ಹೋಂ ಚಾರ್ಜರ್‍‍ಗಳು ಪೂರ್ತಿಯಾಗಿ ಚಾರ್ಜ್ ಆಗಲು 8 ಗಂಟೆ ತೆಗೆದುಕೊಂಡರೆ, ಫಾಸ್ಟ್ ಚಾರ್ಜರ್‍‍ಗಳು 60 ನಿಮಿಷದಲ್ಲಿ 80%ನಷ್ಟು ಚಾರ್ಜ್ ಮಾಡುತ್ತವೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಟಾಟಾ ಮೋಟಾರ್ಸ್ ಈ ಎಲೆಕ್ಟ್ರಿಕ್ ಕಾರಿನಲ್ಲಿ ಹಲವು ಫೀಚರ್ ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ನೀಡಲಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು ಸಿಗ್ನೇಚರ್ ಟೀಲ್ ಬ್ಲೂ, ಗ್ಲೇಸಿಯರ್ ವೈಟ್ ಹಾಗೂ ಮೂನ್‍‍ಲೈಟ್ ಸಿಲ್ವರ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಭಾರತದ ಮೊದಲ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ನೇರವಾದ ಯಾವುದೇ ಪ್ರತಿಸ್ಪರ್ಧಿಗಳು ಇಲ್ಲದೇ ಇದ್ದರೂ, ಸದ್ಯಕ್ಕೆ ಎಂಜಿ ಝಡ್‍ಎಸ್ ಇವಿ ಹಾಗೂ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡಲಿದೆ. ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ವಿತರಣೆಗಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು.

Most Read Articles

Kannada
English summary
Tata Nexon EV Launched In India. Read in Kannada.
Story first published: Tuesday, January 28, 2020, 14:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X