ಬಿಡುಗಡೆಯಾಯ್ತು ಟಾಟಾ ನೆಕ್ಸಾನ್ ಫೇಸ್‍‍ಲಿಫ್ಟ್ ಕಾರು

ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್ ಫೇಸ್‍‍ಲಿಫ್ಟ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಪೆಟ್ರೋಲ್ ಎಂಜಿನ್ ಕಾರಿನ ಬೆಲೆಯು ರೂ.6.95 ಲಕ್ಷಗಳಾದರೆ, ಡೀಸೆಲ್ ಎಂಜಿನ್ ಹೊಂದಿರುವ ಕಾರಿನ ಬೆಲೆ ರೂ.8.45 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಟಾಟಾ ನೆಕ್ಸಾನ್ ಫೇಸ್‍‍ಲಿಫ್ಟ್ ಕಾರು

ಪೆಟ್ರೋಲ್ ಎಂಜಿನ್ ಕಾರು ಮಾರುಕಟ್ಟೆಯಲ್ಲಿರುವ ಕಾರಿಗಿಂತ ರೂ.22,000 ಹೆಚ್ಚು ಬೆಲೆಯನ್ನು ಹೊಂದಿದ್ದರೆ, ಡೀಸೆಲ್ ಎಂಜಿನ್ ಕಾರು ಪ್ರಸ್ತುತ ಮಾದರಿಗಿಂತ ರೂ.56,000 ಹೆಚ್ಚು ಬೆಲೆಯನ್ನು ಹೊಂದಿದೆ. ಟಾಟಾ ಮೋಟಾರ್ಸ್ ಈಗಾಗಲೇ ಈ ಕಾರುಗಳ ಬುಕ್ಕಿಂಗ್‍‍ಗಳನ್ನು ಆರಂಭಿಸಿದೆ.

ಬಿಡುಗಡೆಯಾಯ್ತು ಟಾಟಾ ನೆಕ್ಸಾನ್ ಫೇಸ್‍‍ಲಿಫ್ಟ್ ಕಾರು

ರೂ.11,000 ಪಾವತಿಸಿ ಈ ಕಾರುಗಳನ್ನು ಬುಕ್ಕಿಂಗ್ ಮಾಡಬಹುದಾಗಿದೆ. ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಈ ಕಾರುಗಳನ್ನು ಫೆಬ್ರವರಿಯಲ್ಲಿ ವಿತರಿಸಲಾಗುವುದು. ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿದರೆ, ನೆಕ್ಸಾನ್ ಫೇಸ್‍‍ಲಿಫ್ಟ್ ಕಾರು ಕಳೆದ ವರ್ಷ ಬಿಡುಗಡೆಯಾದ ಕಾರಿನಲ್ಲಿರುವ ವಿನ್ಯಾಸಗಳನ್ನೇ ಹೊಂದಿದೆ.

ಬಿಡುಗಡೆಯಾಯ್ತು ಟಾಟಾ ನೆಕ್ಸಾನ್ ಫೇಸ್‍‍ಲಿಫ್ಟ್ ಕಾರು

ಫೇಸ್‍‍ಲಿಫ್ಟ್ ಕಾರಿನಲ್ಲಿರುವ ಮುಂಭಾಗದಲ್ಲಿರುವ ಬಂಪರ್, ಬಾನೆಟ್ ಡಿಸೈನ್ ಹಾಗೂ ಹೆಡ್‍‍ಲ್ಯಾಂಪ್ ಕ್ಲಸ್ಟರ್‍‍ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ನೆಕ್ಸಾನ್ ಕಾರು ಹೊಸ ವಿನ್ಯಾಸದ ಡಿ‍ಆರ್‍ಎಲ್, ಮರುವಿನ್ಯಾಸಗೊಳಿಸಲಾದ ಫ್ರಂಟ್ ಗ್ರಿಲ್‍‍ಗಳನ್ನು ಹೊಂದಿದೆ. ಈ ಫೀಚರ್‍‍ಗಳನ್ನು ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿಯೂ ಸಹ ನೀಡಲಾಗಿದೆ.

ಬಿಡುಗಡೆಯಾಯ್ತು ಟಾಟಾ ನೆಕ್ಸಾನ್ ಫೇಸ್‍‍ಲಿಫ್ಟ್ ಕಾರು

ಈ ಕಾರಿನ ಕ್ಯಾಬಿನ್‍‍ನಲ್ಲಿ ಹಲವಾರು ಅಪ್‍ಡೇಟ್‍‍ಗಳನ್ನು ಮಾಡಲಾಗಿದೆ. ಸಾಂಪ್ರಾದಾಯಿಕ ಮಾದರಿಯ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಬದಲಿಗೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನೀಡಲಾಗಿದೆ. ಈಗ ಟಿಯಾಗೋದಲ್ಲಿರುವಂತಹ ಡಿಜಿಟಲ್ ಯುನಿಟ್ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಟಾಟಾ ನೆಕ್ಸಾನ್ ಫೇಸ್‍‍ಲಿಫ್ಟ್ ಕಾರು

ಇದರ ಜೊತೆಗೆ ಹೊಸ ಫ್ಲಾಟ್ ಬಾಟಂ ಸ್ಟೀಯರಿಂಗ್ ಯುನಿಟ್ ನೀಡಲಾಗಿದೆ. ಈ ಕಾರಿನಲ್ಲಿರುವ 1.2 ಲೀಟರಿನ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರಿನ ಡೀಸೆಲ್ ಎಂಜಿನ್‍‍ಗಳನ್ನು ಬಿ‍ಎಸ್ 6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಅಪ್‍‍ಗ್ರೇಡ್ ಮಾಡಲಾಗಿದೆ.

ಬಿಡುಗಡೆಯಾಯ್ತು ಟಾಟಾ ನೆಕ್ಸಾನ್ ಫೇಸ್‍‍ಲಿಫ್ಟ್ ಕಾರು

ಈ ಬಿ‍ಎಸ್ 6 ಪೆಟ್ರೋಲ್ ಎಂಜಿನ್‍ ಬಿ‍ಎಸ್ 4 ಪೆಟ್ರೋಲ್ ಎಂಜಿನ್‍‍ನಂತೆ 110 ಬಿ‍‍ಹೆಚ್‍‍ಪಿ ಪವರ್ ಹಾಗೂ 170 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 110 ಬಿ‍‍ಹೆಚ್‍‍ಪಿ ಪವರ್ ಹಾಗೂ 260 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಟಾಟಾ ನೆಕ್ಸಾನ್ ಫೇಸ್‍‍ಲಿಫ್ಟ್ ಕಾರು

ಈ ಎಂಜಿನ್‍‍ಗಳಲ್ಲಿ 6 ಸ್ಪೀಡಿನ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಗಳನ್ನು ಜೋಡಿಸಲಾಗುವುದು. ನೆಕ್ಸಾನ್ ಫೇಸ್‍‍ಲಿಫ್ಟ್ ಕಾರ್ ಅನ್ನು ಎಕ್ಸ್ ಇ, ಎಕ್ಸ್ ಎಂ, ಎಕ್ಸ್ ಝಡ್, ಎಕ್ಸ್ ಝಡ್ ಪ್ಲಸ್ ಹಾಗೂ ಎಕ್ಸ್ ಝಡ್ ಪ್ಲಸ್ (ಒ) ಎಂಬ ಐದು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಬಿಡುಗಡೆಯಾಯ್ತು ಟಾಟಾ ನೆಕ್ಸಾನ್ ಫೇಸ್‍‍ಲಿಫ್ಟ್ ಕಾರು

ಎಂಟ್ರಿ ಲೆವೆಲ್‍‍ನ ಎಕ್ಸ್ ಇ ಮಾದರಿಯಲ್ಲಿ ಡ್ಯುಯಲ್ ಏರ್‍‍ಬ್ಯಾಗ್, ಎ‍‍ಬಿ‍ಎಸ್, ರೇರ್ ಪಾರ್ಕಿಂಗ್ ಸೆನ್ಸಾರ್, ಫ್ರಂಟ್ ಪವರ್ ವಿಂಡೋ, ಮ್ಯಾನುವಲ್ ಎ‍‍ಸಿ, ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ ಸೇರಿದಂತೆ ಹಲವಾರು ಫೀಚರ್‍‍ಗಳನ್ನು ನೀಡಲಾಗುವುದು.

ಬಿಡುಗಡೆಯಾಯ್ತು ಟಾಟಾ ನೆಕ್ಸಾನ್ ಫೇಸ್‍‍ಲಿಫ್ಟ್ ಕಾರು

ಟಾಪ್ ಮಾದರಿಗಳಲ್ಲಿ ರೇರ್ ಎಸಿ ವೆಂಟ್ಸ್, ಆಟೋ ಕ್ಲೈಮೆಟ್ ಕಂಟ್ರೋಲ್, 7.0 ಇಂಚಿನ ಟಚ್‍‍ಸ್ಕ್ರೀನ್, ಕೀ ಲೆಸ್ ಎಂಟ್ರಿ, ಆಟೋ ವೈಪರ್, ಹೆಡ್‍‍ಲ್ಯಾಂಪ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ ಹೊಂದಿರುವ ಎಲ್‍ಇ‍‍ಡಿ ಡಿ‍ಆರ್‍ಎಲ್, ಕ್ರೂಸ್ ಕಂಟ್ರೋಲ್ ಹಾಗೂ ಪವರ್ ಸನ್‍‍ರೂಫ್‍‍ಗಳಿರಲಿವೆ.

ಬಿಡುಗಡೆಯಾಯ್ತು ಟಾಟಾ ನೆಕ್ಸಾನ್ ಫೇಸ್‍‍ಲಿಫ್ಟ್ ಕಾರು

ಟಾಟಾ ನೆಕ್ಸಾನ್, ಟಾಟಾ ಆಲ್ಟ್ರೋಜ್ ಕಾರಿನ ನಂತರ ಗ್ಲೋಬಲ್ ಎನ್‍‍ಸಿಎ‍‍ಪಿಯಿಂದ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ ಪಡೆದಿದೆ. ನೆಕ್ಸಾನ್ ಫೇಸ್‍‍ಲಿಫ್ಟ್ ಕಾರು ಮಾರುತಿ ಸುಜುಕಿ ಕಂಪನಿಯ ವಿಟಾರ ಬ್ರಿಝಾ, ಫೋರ್ಡ್ ಇಕೊಸ್ಪೋರ್ಟ್, ಹ್ಯುಂಡೈ ವೆನ್ಯೂ ಹಾಗೂ ಮಹೀಂದ್ರಾ ಎಕ್ಸ್ ಯುವಿ 300 ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Tata Nexon Facelift launched in India. Read in Kannada.
Story first published: Wednesday, January 22, 2020, 15:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X