Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೆಕ್ಸಾನ್ ಕಾರು ವಿತರಣೆಯಲ್ಲಿ ವಿಳಂಬ- ಹೊಸ ಕಾರಿಗೆ ಕಾಯುತ್ತಿರುವ ಗ್ರಾಹಕರಿಗೆ ಟಾಟಾದಿಂದ ಗಿಫ್ಟ್
ಹೊಸ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಹಲವು ದಾಖಲೆಗೆ ಕಾರಣವಾಗಿದ್ದು, ಕಂಪ್ಯಾಕ್ಟ್ ಎಸ್ಯುವಿ ಕಾರು ಮಾದರಿಯಾದ ನೆಕ್ಸಾನ್ ಕಾರು ಹಲವು ವಿಶೇಷತೆಗಳೊಂದಿಗೆ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದೆ.

ನೆಕ್ಸಾನ್ ಕಂಪ್ಯಾಕ್ಟ್ ಎಸ್ಯುವಿ ಮೂಲಕ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ 2 ವರ್ಷಗಳ ಅವಧಿಯಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಬೇಡಿಕೆ ಹೆಚ್ಚಿರುವ ಹಿನ್ನಲೆಯಲ್ಲಿ ಟಾಟಾ ಕಾರುಗಳ ವಿತರಣೆಯು ತುಸು ವಿಳಂಬವಾಗುತ್ತಿದೆ. ಉತ್ಪಾದನಾ ಸಾಮಾರ್ಥ್ಯದ ಆಧಾರದ ಮೇಲೆ ಗ್ರಾಹಕರ ಬೇಡಿಕೆಗಳನ್ನು ಪೂರೈಸಲಾಗುತ್ತಿದ್ದು, ಕಾರು ಮಾದರಿಗಳಿಗೆ ಅನುಗುಣವಾಗಿ ಇಂತಿಷ್ಟು ದಿನಗಳ ಕಾಲ ಕಾಯಲೇಬೇಕಿದೆ.

ಹೊಸ ಕಾರಿನ ಬುಕ್ಕಿಂಗ್ ನಂತರ ಬಹುತೇಕ ಕಂಪನಿಗಳು ಗ್ರಾಹಕರಿಗೆ ವಾಹನಗಳ ಉತ್ಪಾದನೆಯ ಆಧಾರದ ಮೇಲೆ ಇಂತಿಷ್ಟು ದಿನಗಳ ಕಾಲ ಕಾಯುವಿಕೆ ಅವಧಿಯನ್ನು ನಿಗದಿಪಡಿಸುತ್ತವೆ. ಹಾಗೆಯೇ ಟಾಟಾ ಮೋಟಾರ್ಸ್ ಕೂಡಾ ಬಹುಬೇಡಿಕೆಯ ನೆಕ್ಸಾನ್ ಖರೀದಿಗಾಗಿ ಒಂದು ನಿಗದಿತ ಕಾಯುವಿಕೆ ಅವಧಿಯನ್ನು ನೀಡುತ್ತಿದೆ.

ಆದರೆ ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಟಾಟಾ ಕಾರುಗಳಿಗೆ ಭಾರೀ ಪ್ರಮಾಣದ ಬೇಡಿಕೆ ಹರಿದುಬಂದಿದ್ದು, ವಿವಿಧ ವೆರಿಯೆಂಟ್ ಮತ್ತು ಬ್ರಾಂಡ್ಗಳಿಗೆ ಅನುಗುಣವಾಗಿ ತುಸು ಹೆಚ್ಚೆ ಕಾಯುವಿಕೆ ಅವಧಿಯನ್ನು ನೀಡಲಾಗುತ್ತಿದೆ.

ಕಾಯುವಿಕೆ ಅವಧಿ ಹೆಚ್ಚಿರುವ ಸಂದರ್ಭದಲ್ಲಿ ಗ್ರಾಹಕರು ಸಾಮಾನ್ಯವಾಗಿ ಪ್ರತಿಸ್ಪರ್ಧಿ ಕಾರು ಮಾದರಿಗಳತ್ತ ಮುಖಮಾಡುವುದು ಸಾಮಾನ್ಯ. ಆದರೆ ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳ ಖರೀದಿಗಾಗಿ ಸಾವಿರಾರು ಗ್ರಾಹಕರ ಹಲವು ದಿನಗಳಿಂದ ಖರೀದಿಗಾಗಿ ಕಾಯುತ್ತಿದ್ದು, ಗ್ರಾಹಕರ ತಾಳ್ಮೆಗೆ ಪ್ರತಿಯಾಗಿ ಹೊಸ ಗಿಫ್ಟ್ ನೀಡಿದೆ.

ನೆಕ್ಸಾನ್ ಕಾರು ಖರೀದಿಗಾಗಿ ತಿಂಗಳುಗಟ್ಟಲೇ ಕಾಯುತ್ತಿರುವ ಸಾವಿರಾರು ಗ್ರಾಹಕರಿಗೆ ಟಾಟಾ ಮೋಟಾರ್ಸ್ ಕಂಪನಿಯು ಒಂದು ವರ್ಷದ ವಿಸ್ತರಿತ ವಾರಂಟಿ ಮತ್ತು 1 ವರ್ಷದ ರಸ್ತೆ ಬದಿಯ ಸೇವೆಗಳನ್ನು ಉಚಿತವಾಗಿ ನೀಡುತ್ತಿದ್ದು, ಹೊಸ ಆಫರ್ ಅನ್ನು ಸಾರ್ವಜನಿಕವಾಗಿ ಎಲ್ಲಿಯೂ ಬಹಿರಂಗಪಡಿಸಿಲ್ಲ.

ಆದರೆ ನೆಕ್ಸಾನ್ ಕಾರು ಖರೀದಿಗಾಗಿ ಕಾಯುತ್ತಿರುವ ಗ್ರಾಹಕರಿಗೆ ವಿಸ್ತರಿತ ವಾರಂಟಿ ಅವಧಿಯ ಬಗ್ಗೆ ಪತ್ರ ರವಾನಿಸಿದ್ದು, ಇದರಿಂದ ನೆಕ್ಸಾನ್ ಖರೀದಿಗಾಗಿ ಕಾಯುತ್ತಿರುವ ಗ್ರಾಹಕರು ಮತ್ತಷ್ಟು ಖುಷಿಯಾಗಿದ್ದಾರೆ.
MOST READ: ಭಾರತದಲ್ಲಿ ಎರಡು ಹೊಸ ಎಸ್ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಇನ್ನು ಬಿಎಸ್-6 ಎಮಿಷನ್ ನಂತರ ಹಲವಾರು ಬದಲಾವಣೆಗಳೊಂದಿಗೆ ಮಾರಾಟವಾಗುತ್ತಿರುವ ನೆಕ್ಸಾನ್ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.70 ಲಕ್ಷ ಬೆಲೆ ಹೊಂದಿದೆ.

ವಿವಿಧ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಬರೋಬ್ಬರಿ 36 ವೆರಿಯೆಂಟ್ಸ್ ಹೊಂದಿರುವ ನೆಕ್ಸಾನ್ ಕಾರು ಮಾದರಿಯು ಬಿಎಸ್-6 ಪ್ರೇರಣೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಬಹುತೇಕ ವೆರಿಯೆಂಟ್ಗಳಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯ ಸೌಲಭ್ಯವನ್ನು ನೀಡಲಾಗಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯು 118-ಬಿಹೆಚ್ಪಿ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದ್ದಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 108-ಬಿಹೆಚ್ಪಿ ಮತ್ತು 260-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.