ಸಿಯೆರಾ ಕಾನ್ಸೆಪ್ಟ್ ಕಾರಿನ ವೀಡಿಯೊ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಕಂಪನಿಯ ಲೆಜೆಂಡರಿ ಎಸ್‍‍ಯುವಿಯಾದ ಸಿಯೆರಾವನ್ನು ಈ ಬಾರಿಯ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಯಿತು. ಸಿಯೆರಾ ಕಾನ್ಸೆಪ್ಟ್ ಮಾದರಿಯಾದರೂ ಸಹ ಹೆಚ್ಚು ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಿಯೆರಾ ಎಸ್‍‍ಯುವಿ ದೇಶಿಯ ಮಾರುಕಟ್ಟೆಗೆ ಕಾಲಿಡುತ್ತಿರುವುದು ಕಾರು ಪ್ರಿಯರನ್ನು ರೋಮಾಂಚನಗೊಳಿಸಿದೆ.

ಸಿಯೆರಾ ಕಾನ್ಸೆಪ್ಟ್ ಕಾರಿನ ವೀಡಿಯೊ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಈ ಎಸ್‍‍ಯುವಿ 1990ರ ದಶಕದಲ್ಲಿ ಬಿಡುಗಡೆಯಾಗುತ್ತಿದ್ದ ಬಹುತೇಕ ಭಾರತೀಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಟಾಟಾ ಸಿಯೆರಾ ಕಾನ್ಸೆಪ್ಟ್ ಮಾದರಿಯಾದರೂ, ಈ ಎಸ್‍ಯುವಿಯನ್ನು ಅಭಿವೃದ್ಧಿಪಡಿಸಿ ಭವಿಷ್ಯದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾನ್ಸೆಪ್ಟ್ ಮಾದರಿಯು ತನ್ನದೇ ಆದ ವಿಭಿನ್ನವಾದ ವಿನ್ಯಾಸವನ್ನು ಹೊಂದಿದೆ.

ಸಿಯೆರಾ ಕಾನ್ಸೆಪ್ಟ್ ಕಾರಿನ ವೀಡಿಯೊ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಸಿಯೆರಾ ಕಾನ್ಸೆಪ್ಟ್ ಮಾದರಿಯ ಹೊಸ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದೆ. ಈ ವೀಡಿಯೊದಲ್ಲಿ ಈ ಕಾನ್ಸೆಪ್ಟ್ ಮಾದರಿಯ ಡಿಸೈನ್ ಅನ್ನು ಮುಖ್ಯವಾಗಿ ತೋರಿಸಲಾಗಿದೆ. 1990ರ ದಶಕದಲ್ಲಿದ್ದ ಮೂಲ ಕಾರಿನೊಂದಿಗೆ ಈ ವೀಡಿಯೊ ಆರಂಭವಾಗುತ್ತದೆ.

ಸಿಯೆರಾ ಕಾನ್ಸೆಪ್ಟ್ ಕಾರಿನ ವೀಡಿಯೊ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಸಿಯೆರಾ ಕಾನ್ಸೆಪ್ಟ್ ಕಾರ್ ಅನ್ನು ಟಾಟಾ ಮೋಟಾರ್ಸ್‍‍ನ ಅಜೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ ಅಂದರೆ ಆಲ್ಫಾ ಪ್ಲಾಟ್‍ಫಾರಂ ಮೇಲೆ ತಯಾರಿಸಲಾಗಿದೆ. ಹೊಸ ಟಾಟಾ ಅಲ್ಟ್ರಾಸ್ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರ್ ಅನ್ನು ಇದೇ ಪ್ಲಾಟ್‍‍ಫಾರಂನಲ್ಲಿ ತಯಾರಿಸಲಾಗುವುದು.

ಸಿಯೆರಾ ಕಾನ್ಸೆಪ್ಟ್ ಕಾರಿನ ವೀಡಿಯೊ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಸಿಯೆರಾ ಎಸ್‍‍ಯುವಿ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಅಂತಿಮ ಉತ್ಪಾದನೆಗೆ ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ. ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾದ ಕಾನ್ಸೆಪ್ಟ್ ಮಾದರಿಯು ಎಲೆಕ್ಟ್ರಿಕ್ ಆವೃತ್ತಿಯಾಗಿತ್ತು ಎಂಬುದನ್ನು ಗಮನಿಸಬೇಕು.

ಸಿಯೆರಾ ಕಾನ್ಸೆಪ್ಟ್ ಕಾರಿನ ವೀಡಿಯೊ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಇದರಿಂದಾಗಿ ಹೊಸ ಸಿಯೆರಾ ಎಸ್‍‍ಯುವಿ ಎಲೆಕ್ಟ್ರಿಕ್ ಆವೃತ್ತಿಯಾಗಿರಲಿದೆ ಎಂಬುದು ಖಚಿತವಾಗಿದೆ. ಮೂಲ ಮಾದರಿಯ ಸಿಯೆರಾ ಮೂರು ಡೋರ್‍‍ಗಳನ್ನು ಹೊಂದಿದ್ದರೆ, ಈ ಕಾನ್ಸೆಪ್ಟ್ ಕಾರು ನಾಲ್ಕು ಡೋರ್‍‍ಗಳನ್ನು ಹೊಂದಿದೆ.

ಸಿಯೆರಾ ಕಾನ್ಸೆಪ್ಟ್ ಕಾರಿನ ವೀಡಿಯೊ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಹೊಸ ತಲೆಮಾರಿನ ಕಾನ್ಸೆಪ್ಟ್ ನಾಲ್ಕು ಡೋರ್‍‍ಗಳನ್ನು ಹೊಂದಿದ್ದು, ಎಡಭಾಗದಲ್ಲಿ ಎರಡು ಸೈಡ್ ಡೋರ್‍‍ಗಳು, ಟೇಲ್‌ಗೇಟ್ ಹಾಗೂ ಬಲಭಾಗದಲ್ಲಿ ಕೇವಲ ಒಂದು ಡೋರ್ ಅನ್ನು ಹೊಂದಿದೆ. ಹಿಂಭಾಗದಲ್ಲಿರುವ ಏಕೈಕ ಡೋರ್ ಸ್ಲೈಡ್‌ ಹೊಂದಿದೆ.

ಸಿಯೆರಾ ಕಾನ್ಸೆಪ್ಟ್ ಕಾರಿನ ವೀಡಿಯೊ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಈ ಕಾನ್ಸೆಪ್ಟ್ ಕಾರಿನಲ್ಲಿ ಬಿ-ಪಿಲ್ಲರ್ ಮುಂಭಾಗದ ಡೋರ್‍‍ನೊಂದಿಗೆ ಕನೆಕ್ಟ್ ಆಗುವುದಿಲ್ಲ. ಕಾರಿನ ಹಿಂಭಾಗದ ಪ್ರಯಾಣಿಕರಿಗಾಗಿ ವಿಭಿನ್ನವಾದ ಸೀಟುಗಳನ್ನು ನೀಡಲಾಗಿದೆ. ಟಾಟಾ ಸಿಯೆರಾದ ಕಾನ್ಸೆಪ್ಟ್ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಈ ಕಾನ್ಸೆಪ್ಟ್ ಕಾರಿನ ಮುಂಭಾಗವು ಹ್ಯಾರಿಯರ್‍‍ನಂತಿದೆ. ಮುಂಭಾಗದಲ್ಲಿ ದೊಡ್ಡ ಗಾತ್ರದ ಫ್ಲಾಟ್ ಬಾನೆಟ್, ತೆಳ್ಳಗಿರುವ ಎಲ್‍ಇ‍‍ಡಿ ಡಿ‍ಆರ್‍ಎಲ್ ಹಾಗೂ ಹ್ಯಾರಿಯರ್ ಟೋನ್ ನೀಡಲಾಗಿದೆ. ಕಾನ್ಸೆಪ್ಟ್ ಕಾರಿನ ಅಂಡರ್ ಕ್ಯಾರಿಯೇಜ್‍‍ನಲ್ಲಿ ಪ್ಲಾಸ್ಟಿಕ್ ಕ್ಲಾಡಿಂಗ್ ಹಾಗೂ ರೌಂಡಿಂಗ್ ನೀಡಲಾಗಿದೆ.

ಸಿಯೆರಾ ಕಾನ್ಸೆಪ್ಟ್ ಕಾರಿನ ವೀಡಿಯೊ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಸಿಯೆರಾ ಕಾನ್ಸೆಪ್ಟ್ ಎಸ್‍‍ಯುವಿಯ ಈ ಬಾರಿಯ ಆಟೋ ಎಕ್ಸ್ ಪೋದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಹಲವಾರು ಕಾರುಗಳನ್ನು ಪ್ರದರ್ಶಿಸಿತು. ಇವುಗಳಲ್ಲಿ ಗ್ರಾವಿಟಾ, ಹೆಚ್‍‍ಬಿ‍ಎಕ್ಸ್ ಮಿನಿ ಎಸ್‍‍ಯುವಿ, ಹೆಕ್ಸಾ ಸಫಾರಿ ಎಡಿಷನ್, ಆಲ್ಟ್ರೋಜ್ ಎಲೆಕ್ಟ್ರಿಕ್ ಹಾಗೂ ವಿಂಗರ್ ವಾಹನಗಳು ಸೇರಿವೆ.

Most Read Articles

Kannada
English summary
Tata Sierra Concept SUV video released. Read in Kannada.
Story first published: Tuesday, February 11, 2020, 10:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X