Just In
Don't Miss!
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Movies
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಟೋ ಎಕ್ಸ್‌ಪೋ 2020: ವಿಂಗರ್ ಮಿನಿ ವ್ಯಾನ್ ಅನಾವರಣಗೊಳಿಸಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ 2020ರ ಆಟೋ ಎಕ್ಸ್ ಪೋದಲ್ಲಿ ಹಲವಾರು ವಾಹನಗಳನ್ನು ಅನಾವರಣಗೊಳಿಸಿದೆ. ಇವುಗಳಲ್ಲಿ ಕೆಲವು ಹೊಸ ವಾಹನಗಳಾದರೆ, ಇನ್ನು ಕೆಲವು ಹಳೆಯ ಅಪ್‍ಡೇಟೆಡ್ ವಾಹನಗಳಾಗಿವೆ. ಇವುಗಳಲ್ಲಿ ಮರುವಿನ್ಯಾಸಗೊಳಿಸಲಾದ ವಿಂಗರ್ ವಾಹನವು ಸಹ ಸೇರಿದೆ. ಟಾಟಾ ವಿಂಗರ್ ಜನಪ್ರಿಯ ಸಾರಿಗೆ ವಾಹನವಾಗಿದೆ.

ಈ ವಾಹನವನ್ನು ಮೊದಲ ಬಾರಿಗೆ 2007ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈಗ ಅಪ್‍ಡೇಟ್ ಮಾಡಲಾದ ವಾಹನವನ್ನು ಅನಾವರಣಗೊಳಿಸಲಾಗಿದೆ. ವಿಂಗರ್ 15 + 1 ಸೀಟ್ ಹೊಂದಿರುವ ಮಿನಿ ವ್ಯಾನ್ ಆಗಿದೆ. ಟಾಟಾ ಮೋಟಾರ್ಸ್ ಈ ವ್ಯಾನ್‍ನಲ್ಲಿ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿದ್ದು, ಬಿಎಸ್ 6 ಎಂಜಿನ್‍ನೊಂದಿಗೆ ಅಪ್‍ಗ್ರೇಡ್‍ಗೊಳಿಸಿದೆ. ಈ ಮಿನಿ ವ್ಯಾನ್‍ನ ಇಂಟಿರಿಯರ್ ಟಾಟಾದ ಜನಪ್ರಿಯ ವಾಹನವಾದ ಹ್ಯಾರಿಯರ್ ಎಸ್‍ಯುವಿಯಂತಿದೆ.

ವಿಂಗರ್ ವಾಹನವನ್ನು ಟಾಟಾ ಮೋಟಾರ್ಸ್‍ನ ಇಂಪ್ಯಾಕ್ಟ್ 2.0 ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಟಾಟಾ ಹ್ಯಾರಿಯರ್ ಎಸ್‍ಯುವಿ ಈ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಲಾದ ಮೊದಲ ವಾಹನವಾಗಿದೆ. ವಿಂಗರ್ ಸಹ ಹ್ಯಾರಿಯರ್ ಎಸ್‍ಯುವಿಯಲ್ಲಿರುವಂತಹ ಎಲ್‍ಇಡಿ ಲೈಟಿಂಗ್‍ಗಳನ್ನು ಹೊಂದಿದೆ. ಟಾಟಾ ಕಂಪನಿಯ ಲೊಗೊ, ಹಾರಿಜಾಂಟಲ್ ಕ್ರೋಮ್ ಸ್ಟ್ರಿಪ್, ರಿವ್ಯಾಂಪ್ ಗ್ರಿಲ್ ಹಾಗೂ ಬಂಪರ್‍ಗಳು ವಿಂಗರ್ ವಾಹನವನ್ನು ಮತ್ತಷ್ಟು ಆಕರ್ಷಕವಾಗಿಸುತ್ತವೆ.

ಈ ಕಮರ್ಷಿಯಲ್ ವ್ಯಾನ್ ಅನ್ನು ಪ್ಯಾಸೆಂಜರ್ ಎಸ್‍ಯುವಿಯಾಗಿಸಿದೆ. ಈ ಬದಲಾವಣೆಗಳು ವ್ಯಾನ್‍ನ ಸುರಕ್ಷತೆಯನ್ನು ಹೆಚ್ಚಿಸಿವೆ. ಮುಂಭಾಗದ ಪ್ರಯಾಣಿಕರಿಗೆ ಹಾಗೂ ಚಾಲಕನಿಗೆ ಹೆಚ್ಚು ಸುರಕ್ಷತೆಯನ್ನು ನೀಡುತ್ತವೆ. ಈ ಬದಲಾವಣೆಗಳಿಂದಾಗಿ ಫ್ಯಾಮಿಲಿಗಳೂ ಸಹ ಈ ವ್ಯಾನ್ ಅನ್ನು ತಮ್ಮ ಸ್ವಂತ ಬಳಕೆಗಾಗಿ ಖರೀದಿಸಲಿ ಎಂಬುದು ಟಾಟಾ ಮೋಟಾರ್ಸ್ ಅಭಿಪ್ರಾಯ. ಟಾಟಾ ಮೋಟಾರ್ಸ್ ಫ್ಯಾಮಿಲಿಗಳಿಗಾಗಿಯೇ ವಿವಿಧ ಫೀಚರ್‍ಗಳನ್ನು ನೀಡಲಿದೆ.

5 ಸ್ಪೋಕ್‍ಗಳ ಅಲಾಯ್ ವ್ಹೀಲ್, ಅಪ್‍ಡೇಟ್ ಮಾಡಲಾಗಿರುವ ಹಿಂಭಾಗದ ಡೋರ್‍ಗಳು ವ್ಯಾನ್ ಅನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ. ಟಾಟಾ ಈ ವ್ಯಾನ್‍ನ ಇಂಟಿರಿಯರ್‍ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ವ್ಯಾನ್‍ನ ಕಾಕ್‍ಪಿಟ್‍ನಿಂದ ರೂಫ್‍ವರೆಗೆ ಹಲವಾರು ಅಪ್‍ಡೇಟ್‍ಗಳನ್ನು ಮಾಡಲಾಗಿದೆ. ಈ ವ್ಯಾನ್‍ನೊಳಗೆ ಟಚ್ ಸ್ಕ್ರೀನ್ ಇನ್ಫೋಟೆನ್‍ಮೆಂಟ್ ಸಿಸ್ಟಂ, ಫ್ರಾಬ್ರಿಕ್ ಸೀಟ್, ಸಿಲ್ವರ್/ಪಿಯಾನೊ ಬ್ಲಾಕ್ ಎಸಿ ಕಂಟ್ರೋಲ್ ಕ್ನಾಪ್, ಪ್ರತಿ ಸೀಟುಗಳಲ್ಲಿ ವಿಭಿನ್ನವಾದ ಯುಎಸ್‍ಬಿ ಚಾರ್ಜಿಂಗ್ ಪೋರ್ಟ್, ಪುಶ್ ಬ್ಯಾಕ್ ಸೀಟ್, ಆಂಪಲ್ ರೂಫ್‍ಗಳಿವೆ.

ವ್ಯಾನ್‍ನಲ್ಲಿರುವ ವೈಬ್ರೆಷನ್‍ಗಳನ್ನು ಕಡಿಮೆ ಮಾಡಲಾಗಿದ್ದು, ಆರಾಮದಾಯಕವಾದ ಸಂಚಾರವನ್ನು ನೀಡುವಂತೆ ಅಭಿವೃದ್ಧಿಪಡಿಸಲಾಗಿದೆ. ಈ ವ್ಯಾನ್ ಅನ್ನು ಬಿಎಸ್ 6 ಎಂಜಿನ್‍ನೊಂದಿಗೆ ಅಪ್‍ಗ್ರೇಡ್‍ಗೊಳಿಸಲಾಗಿದೆ. ಈ ವ್ಯಾನ್‍ನಲ್ಲಿರುವ 2.0 ಲೀಟರಿನ ಡೀಸೆಲ್ ಎಂಜಿನ್ 89 ಬಿಹೆಚ್‍ಪಿ ಪವರ್ ಹಾಗೂ 190 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಗೇರ್‍ಬಾಕ್ಸ್ ಅಳವಡಿಸಲಾಗಿದೆ. ಈ ವ್ಯಾನ್‍ನ ಬೆಲೆಯು ರೂ.12 ಲಕ್ಷದಿಂದ ರೂ.15 ಲಕ್ಷಗಳಾಗಿದೆ.