ಸಿಇಒರನ್ನು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದ ಟೆಸ್ಲಾ ಕಂಪನಿಯ ಷೇರುಗಳು

ಟೆಸ್ಲಾ, ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ಕಂಪನಿಯಾಗಿದೆ. ಎಲಾನ್ ಮಸ್ಕ್, ಅಮೆರಿಕಾ ಮೂಲದ ಟೆಸ್ಲಾ ಕಂಪನಿಯ ಸಿಇಒ ಆಗಿದ್ದಾರೆ. ಅವರು ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ.

ಸಿಇಒರನ್ನು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದ ಟೆಸ್ಲಾ ಕಂಪನಿಯ ಷೇರುಗಳು

ಎಲಾನ್ ಮಸ್ಕ್ ಇತ್ತೀಚಿಗೆ ತಮ್ಮ ಮಗುವಿಗೆ ವಿಶಿಷ್ಟವಾದ ಹೆಸರನ್ನು ಇಡುವುದಾಗಿ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನುಂಟು ಮಾಡಿದೆ. ಎಲಾನ್ ಮಸ್ಕ್ ತಮ್ಮ ಮಗುವಿಗೆ ಎಕ್ಸ್ Æ ಎ -12 ಎಂಬ ವಿಭಿನ್ನ ಹೆಸರನ್ನಿಡುವುದಾಗಿ ಹೇಳಿದ್ದರು. ಸಾಮಾನ್ಯವಾಗಿ ಎಲಾನ್ ಮಸ್ಕ್ ರವರ ಟ್ವೀಟ್‌ಗಳು ವಿಡಂಬನೆಗಳಿಂದ ಕೂಡಿರುತ್ತವೆ.

ಸಿಇಒರನ್ನು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದ ಟೆಸ್ಲಾ ಕಂಪನಿಯ ಷೇರುಗಳು

ಎಲಾನ್ ಮಸ್ಕ್ ಈಗ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯ ಸ್ಥಾನಕ್ಕೆ ಏರಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರ ಆಸ್ತಿಯ ಒಟ್ಟು ಮೌಲ್ಯ 30 ಬಿಲಿಯನ್ ಡಾಲರ್ ಗಳಾಗಿತ್ತು. ಆಗ ಅವರು ವಿಶ್ವದ ಹತ್ತನೇ ಶ್ರೀಮಂತ ವ್ಯಕ್ತಿಯಾಗಿದ್ದರು.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಸಿಇಒರನ್ನು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದ ಟೆಸ್ಲಾ ಕಂಪನಿಯ ಷೇರುಗಳು

ಆದರೆ ಮಾರುಕಟ್ಟೆಯಲ್ಲಿನ ಏರಿಕೆಯ ಕಾರಣದಿಂದಾಗಿ ಅವರ ಆಸ್ತಿಯ ಮೌಲ್ಯ ಹೆಚ್ಚಾಗಿದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ ಎಲಾನ್ ಮಸ್ಕ್‌ರವರ ಆಸ್ತಿಯ ಮೌಲ್ಯ ಒಂದೇ ದಿನದಲ್ಲಿ 11%ನಷ್ಟು ರಷ್ಟು ಏರಿಕೆಯಾಗಿದೆ.

ಸಿಇಒರನ್ನು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದ ಟೆಸ್ಲಾ ಕಂಪನಿಯ ಷೇರುಗಳು

ಇದರಿಂದಾಗಿ ಎಲಾನ್ ಮಸ್ಕ್‌ರವರ ಮೌಲ್ಯವು 7.8 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚಾಗಿ, ಅವರು ಈಗ ವಿಶ್ವದ ನಾಲ್ಕನೇ ಶ್ರೀಮಂತರಾಗಿದ್ದಾರೆ. ಅಲ್ಪ ಅವಧಿಯಲ್ಲಿಯೇ ಅವರು ವಿಶ್ವದ ಅನೇಕ ಶ್ರೀಮಂತರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸಿಇಒರನ್ನು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದ ಟೆಸ್ಲಾ ಕಂಪನಿಯ ಷೇರುಗಳು

ಸದ್ಯಕ್ಕೆ ಅವರ ಆಸ್ತಿಯ ಮೊತ್ತ 90 ಬಿಲಿಯನ್ ಡಾಲರ್ ಗಳಾಗಿದೆ. 2020ರ ಹಣಕಾಸು ವರ್ಷದಲ್ಲಿ ಟೆಸ್ಲಾ ಕಂಪನಿಯು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ವರ್ಷ ಟೆಸ್ಲಾ ಕಂಪನಿಯು 350%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಸಿಇಒರನ್ನು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದ ಟೆಸ್ಲಾ ಕಂಪನಿಯ ಷೇರುಗಳು

ಈ ಕಾರಣಕ್ಕೆ ಕಂಪನಿಯ ಸಿಇಒ ಎಲಾನ್ ಮಸ್ಕ್ ರವರ ಆಸ್ತಿಯ ಮೌಲ್ಯವು ಸಹ ಏರಿಕೆಯಾಗಿದೆ. 2012ರಲ್ಲಿ ಕಂಪನಿಯ ಮೌಲ್ಯವು ಕೇವಲ 4 ಬಿಲಿಯನ್ ಡಾಲರ್ ಗಳಾಗಿತ್ತು. ಅಲ್ಪ ಅವಧಿಯಲ್ಲಿಯೇ ಕಂಪನಿಯ ಷೇರುಗಳು ಅನಿರೀಕ್ಷಿತ ಗುರಿಯನ್ನು ಮುಟ್ಟಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸಿಇಒರನ್ನು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದ ಟೆಸ್ಲಾ ಕಂಪನಿಯ ಷೇರುಗಳು

ಟೆಸ್ಲಾ ಕಂಪನಿಯ ಕಾರುಗಳನ್ನು ಹೆಚ್ಚಿನ ಸಂಖ್ಯೆಯ ಜನರು ಖರೀದಿಸುತ್ತಿರುವುದು ಈ ತ್ವರಿತ ಬೆಳವಣಿಗೆಗೆ ಮುಖ್ಯ ಕಾರಣ. ಬಿಎಂಡಬ್ಲ್ಯು ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ಟೆಸ್ಲಾದ ಎಲೆಕ್ಟ್ರಿಕ್ ಕಾರುಗಳು ವಿಶ್ವದಲ್ಲೇ ಹೆಚ್ಚು ಮಾರಾಟವಾಗುವ ಕಾರುಗಳಾಗಿವೆ.

ಸಿಇಒರನ್ನು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದ ಟೆಸ್ಲಾ ಕಂಪನಿಯ ಷೇರುಗಳು

ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರುಗಳು ಮಾರಾಟದಲ್ಲಿ ಬಿಎಂಡಬ್ಲ್ಯು ಕಾರುಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿವೆ. ಟೆಸ್ಲಾ ಕಂಪನಿಯು ಹಲವಾರು ಹೊಸ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸಿಇಒರನ್ನು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದ ಟೆಸ್ಲಾ ಕಂಪನಿಯ ಷೇರುಗಳು

ಇಷ್ಟು ಮಾತ್ರವಲ್ಲದೇ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸುತ್ತಿದೆ. ಟೆಸ್ಲಾ ಕಂಪನಿಯು ತನ್ನ ಜನಪ್ರಿಯ ಮಾದರಿಗಳಾದ ಮಾಡೆಲ್ ಎಸ್ ಹಾಗೂ ಮಾಡೆಲ್ ವೈ ಎಲೆಕ್ಟ್ರಿಕ್ ಕಾರುಗಳಲ್ಲಿ ಕೀ ಬದಲಿಗೆ ಸ್ಮಾರ್ಟ್ ಫೋನ್ ಬಳಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ.

Most Read Articles

Kannada
Read more on ಟೆಸ್ಲಾ tesla
English summary
Tesla company ceo Elon Musk becomes fourth richest man in the world. Read in Kannada.
Story first published: Friday, August 21, 2020, 15:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X