ಹಾರ್ನ್ ಬದಲು ಬೇರೆ ರೀತಿಯ ಶಬ್ದಗಳನ್ನು ನೀಡಲಿದೆ ಈ ಎಲೆಕ್ಟ್ರಿಕ್ ಕಾರು ಕಂಪನಿ

ಹಲವು ವರ್ಷಗಳ ನಿರೀಕ್ಷೆಯ ಟೆಸ್ಲಾ ಕಂಪನಿಯ ಆಟೋಮ್ಯಾಟಿಕ್ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ. ಕಂಪನಿಯ ಎಲೆಕ್ಟ್ರಿಕ್ ಕಾರುಗಳು 2021ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಹಾರ್ನ್ ಬದಲು ಬೇರೆ ರೀತಿಯ ಶಬ್ದಗಳನ್ನು ನೀಡಲಿದೆ ಈ ಎಲೆಕ್ಟ್ರಿಕ್ ಕಾರು ಕಂಪನಿ

ಟೆಸ್ಲಾ ಕಂಪನಿಯ ಕಾರುಗಳು ಭಾರತದಲ್ಲಿ ಬಿಡುಗಡೆಯಾಗುವ ಮಾಹಿತಿಯು ಇಂಟರ್ ನೆಟ್'ನಲ್ಲಿ ಹರಿದಾಡುತ್ತಿವೆ. ಇದರ ಜೊತೆಗೆ ಟೆಸ್ಲಾ ಕಂಪನಿಯ ಹೊಸ ಸಾಫ್ಟ್‌ವೇರ್ ಅಪ್‌ಡೇಟ್‌ನ ಮಾಹಿತಿಯು ಸಹ ವೈರಲ್ ಆಗಿದೆ.

ಹಾರ್ನ್ ಬದಲು ಬೇರೆ ರೀತಿಯ ಶಬ್ದಗಳನ್ನು ನೀಡಲಿದೆ ಈ ಎಲೆಕ್ಟ್ರಿಕ್ ಕಾರು ಕಂಪನಿ

ವರದಿಗಳ ಪ್ರಕಾರ ಟೆಸ್ಲಾ ಕಂಪನಿಯು ಅಪ್‌ಡೇಟ್‌ ಮೂಲಕ ಬೂಮ್‌ಬಾಕ್ಸ್ ಎಂಬ ವಿಶೇಷ ಫೀಚರ್ ಅನ್ನು ನೀಡಲಿದೆ. ಈ ಹೊಸ ಅಪ್‌ಡೇಟ್‌ನೊಂದಿಗೆ ಹೆಚ್ಚಿನ ಅಪ್‌ಡೇಟ್‌'ಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಟೆಸ್ಲಾ ಕಂಪನಿಯು ಹೇಳಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹಾರ್ನ್ ಬದಲು ಬೇರೆ ರೀತಿಯ ಶಬ್ದಗಳನ್ನು ನೀಡಲಿದೆ ಈ ಎಲೆಕ್ಟ್ರಿಕ್ ಕಾರು ಕಂಪನಿ

ಈ ಅಪ್‌ಡೇಟ್‌'ನಿಂದಾಗಿ ಸಾಮಾನ್ಯ ಹಾರ್ನ್'ಗಳ ಬದಲು ವಿಶಿಷ್ಟ ಶಬ್ದಗಳನ್ನು ಕೇಳಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಹಾರ್ನ್ ಬದಲು ಮೇಕೆ ಕಿರುಚುವಂತಹ, ಸಂಗೀತ ನುಡಿಸುವಂತಹ ಆಕರ್ಷಕ ಶಬ್ದಗಳನ್ನು ಕೇಳಬಹುದು.

ಹಾರ್ನ್ ಬದಲು ಬೇರೆ ರೀತಿಯ ಶಬ್ದಗಳನ್ನು ನೀಡಲಿದೆ ಈ ಎಲೆಕ್ಟ್ರಿಕ್ ಕಾರು ಕಂಪನಿ

ಇದು ಹೊಸ ಸಾಫ್ಟ್‌ವೇರ್ ಅಪ್‌ಡೇಟ್‌'ನ ಮುಖ್ಯ ಲಕ್ಷಣವಾಗಿದೆ. ಟೆಸ್ಲಾ ಕಾರುಗಳ ಮಾಲೀಕರು ಸಾಮಾನ್ಯ ಹಾರ್ನ್'ಗಳ ಬದಲು ಇನ್ನು ಮುಂದೆ ಈ ವಿಶಿಷ್ಟ ಶಬ್ದಗಳನ್ನು ಮೆಚ್ಚಿಕೊಳ್ಳುವ ಸಾಧ್ಯತೆಗಳಿವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹಾರ್ನ್ ಬದಲು ಬೇರೆ ರೀತಿಯ ಶಬ್ದಗಳನ್ನು ನೀಡಲಿದೆ ಈ ಎಲೆಕ್ಟ್ರಿಕ್ ಕಾರು ಕಂಪನಿ

ಚಪ್ಪಾಳೆ ತಟ್ಟುವಂತಹ ಶಬ್ದದ ಜೊತೆಗೆ ತಾವು ಇಷ್ಟ ಪಡುವ ಸಂಗೀತವನ್ನು ಸಹ ಸೇರಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಈ ಹೊಸ ಅಪ್‌ಡೇಟ್‌ ಟೆಸ್ಲಾ ಆಟೋಮ್ಯಾಟಿಕ್ ಎಲೆಕ್ಟ್ರಿಕ್ ಕಾರು ಮಾಲೀಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುವ ಸಾಧ್ಯತೆಗಳಿವೆ.

ಹಾರ್ನ್ ಬದಲು ಬೇರೆ ರೀತಿಯ ಶಬ್ದಗಳನ್ನು ನೀಡಲಿದೆ ಈ ಎಲೆಕ್ಟ್ರಿಕ್ ಕಾರು ಕಂಪನಿ

ಟೆಸ್ಲಾ ಕಂಪನಿಯು ಇತ್ತೀಚಿಗೆ ಹೊಸ ಅಪ್‌ಡೇಟ್‌ ಮೂಲಕ ಮೂರು ವೀಡಿಯೊ ಗೇಮ್‌ಗಳನ್ನು ನೀಡುವ ಯೋಜನೆಯನ್ನು ಪ್ರಕಟಿಸಿತು. ಸೆಪ್ಟೆಂಬರ್ 1ರ ನಂತರ ತಯಾರಿಸಿದ ಟೆಸ್ಲಾ ಕಂಪನಿಯ ಎಲ್ಲಾ ಎಲೆಕ್ಟ್ರಿಕ್ ಕಾರುಗಳಲ್ಲಿ ಸ್ಪೀಕರ್ ನೀಡಲಾಗುವುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹಾರ್ನ್ ಬದಲು ಬೇರೆ ರೀತಿಯ ಶಬ್ದಗಳನ್ನು ನೀಡಲಿದೆ ಈ ಎಲೆಕ್ಟ್ರಿಕ್ ಕಾರು ಕಂಪನಿ

ಹೊಸ ಸಾಫ್ಟ್‌ವೇರ್ ಅಪ್‌ಡೇಟ್‌ ಕಾರು ಮಾಲೀಕರು ಇಷ್ಟ ಪಡುವ ಧ್ವನಿಯನ್ನು ಪ್ಲೇ ಮಾಡಲು ನೆರವಾಗುತ್ತದೆ. ಪಾದಚಾರಿಗಳಿಗೆ ಈ ವಿಶೇಷ ಧ್ವನಿಯಿಂದ ಎಚ್ಚರಿಕೆ ನೀಡಬಹುದು. ಇದರ ಜೊತೆಗೆ ಐಸ್ ಕ್ರೀಮ್ ಟ್ರಕ್ ಹಾಗೂ ಇತರ ವಾಹನಗಳ ರೀತಿಯಲ್ಲಿ ವಿಶಿಷ್ಟ ಶಬ್ದಗಳನ್ನು ಮಾಡಲು ಸಾಧ್ಯವಾಗಲಿದೆ.

ಹಾರ್ನ್ ಬದಲು ಬೇರೆ ರೀತಿಯ ಶಬ್ದಗಳನ್ನು ನೀಡಲಿದೆ ಈ ಎಲೆಕ್ಟ್ರಿಕ್ ಕಾರು ಕಂಪನಿ

ಕಾರ್ಯಾಚರಣೆಯನ್ನು ಆರಂಭಿಸಿದ ಕೆಲವೇ ವರ್ಷಗಳಲ್ಲಿ ಟೆಸ್ಲಾ ಕಂಪನಿಯು ವಿಶ್ವದ ಅತಿದೊಡ್ಡ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯ ಕಾರುಗಳು ಭಾರತದಲ್ಲಿ ಬಿಡುಗಡೆಯಾಗುತ್ತವೆ ಎನ್ನುವ ಮಾಹಿತಿಯು ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

Most Read Articles

Kannada
Read more on ಟೆಸ್ಲಾ tesla
English summary
Tesla company to give multiple sound instead of horn. Read in Kannada.
Story first published: Monday, December 28, 2020, 14:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X