ಬೆಂಗಳೂರಿನಲ್ಲಿ ರಿಸರ್ಚ್ ಸೆಂಟರ್ ತೆರೆಯಲು ಮುಂದಾದ ಟೆಸ್ಲಾ

ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ಟೆಸ್ಲಾ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಅದರಲ್ಲಿಯೂ ನಮ್ಮ ಬೆಂಗಳೂರಿಲ್ಲಿ ರಿಸರ್ಚ್ ಸೆಂಟರ್ ಆರಂಭಿಸಲು ಕರ್ನಾಟಕ ಸರ್ಕಾರದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದೆ.

ಬೆಂಗಳೂರಿನಲ್ಲಿ ರಿಸರ್ಚ್ ಸೆಂಟರ್ ತೆರೆಯಲು ಮುಂದಾದ ಟೆಸ್ಲಾ

ಟೆಸ್ಲಾ ಕಂಪನಿಯು ಬಹುತೇಕ ಎಲ್ಲಾ ವಿಷಯಗಳ ಬಗ್ಗೆ ಕರ್ನಾಟಕ ಸರ್ಕಾರದ ಜೊತೆಯಲ್ಲಿ ಚರ್ಚೆ ನಡೆಸಿದೆ. ಬೆಂಗಳೂರಿನಲ್ಲಿ ಟೆಸ್ಲಾ ಕಂಪನಿಯು ಹೊಸ ರಿಸರ್ಚ್ ಸೆಂಟರ್ ತೆರಯಲು ಹೆಚ್ಚಿನ ಆಸಕ್ತಿಯನ್ನು ಹೊಂದಿದೆ ಎಂದು ಇಟಿ ಆಟೋ ವರದಿ ಮಾಡಿದೆ. ವರದಿಗಳ ಪ್ರಕಾರ ರಾಜ್ಯ ಸರ್ಕಾರದೊಂದಿಗೆ ಮಾತುಕತೆಯು ಆರಂಭಿಕ ಹಂತದಲ್ಲಿದೆ.

ಬೆಂಗಳೂರಿನಲ್ಲಿ ರಿಸರ್ಚ್ ಸೆಂಟರ್ ತೆರೆಯಲು ಮುಂದಾದ ಟೆಸ್ಲಾ

ಟೆಸ್ಲಾ ಕಂಪನಿಯು ಐಷಾರಾಮಿ ಎಲೆಕ್ತ್ರಿಕ್ ಕಾರುಗಳನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಈ ವರ್ಷದ ಜುಲೈ ತಿಂಗಳಲ್ಲಿ ಹೇಳಿದ್ದರು.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಬೆಂಗಳೂರಿನಲ್ಲಿ ರಿಸರ್ಚ್ ಸೆಂಟರ್ ತೆರೆಯಲು ಮುಂದಾದ ಟೆಸ್ಲಾ

ಮಾತುಕತೆ ಫಲಪ್ರದವಾದರೆ ಟೆಸ್ಲಾ ರಿಸರ್ಚ್ ಸೆಂಟರ್ ಹೊಂದಿರುವ ಎರಡನೇ ದೇಶ ಭಾರತವಾಗಲಿದೆ. ಟೆಸ್ಲಾ ಕಂಪನಿಯು ಈಗಾಗಲೇ ಅಮೆರಿಕಾದಲ್ಲಿ ರಿಸರ್ಚ್ ಮತ್ತು ಅಭಿವೃದ್ದಿ ಸೆಂಟರ್ ಅನ್ನು ಹೊಂದಿದೆ.

ಬೆಂಗಳೂರಿನಲ್ಲಿ ರಿಸರ್ಚ್ ಸೆಂಟರ್ ತೆರೆಯಲು ಮುಂದಾದ ಟೆಸ್ಲಾ

ಬೆಂಗಳೂರು ನಗರ ಈಗಾಗಲೇ ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಮುಂದಿದೆ. ಬೆಂಗಳೂರಿನಲ್ಲಿ ಸ್ಥಳೀಯ ಮತ್ತು ಜಾಗತಿಕ ಕಂಪನಿಗಳಾದ ಡೈಮ್ಲರ್, ಬಾಷ್ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಗಳ ಕೇಂದ್ರವಿದೆ. ಇದರೊಂದಿಗೆ ಓಲಾ ಎಲೆಕ್ಟ್ರಿಕ್, ಸನ್ ಮೊಬಿಲಿಟಿ ಮತ್ತು ಎಥರ್ ನಂತಹ ಭರವಸೆಯ ಇವಿ ಸ್ಟಾರ್ಟ್ಅಪ್ ಗಳು ಇಲ್ಲಿ ನೆಲೆಯೂರಿವೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬೆಂಗಳೂರಿನಲ್ಲಿ ರಿಸರ್ಚ್ ಸೆಂಟರ್ ತೆರೆಯಲು ಮುಂದಾದ ಟೆಸ್ಲಾ

ಎಲೆಕ್ಟ್ರಿಕ್ ವಾಹನಗಳ ಆರ್&ಡಿ ಮತ್ತು ಉತ್ಪಾದನೆಯಲ್ಲಿ ರೂ,31,000 ಕೋಟಿಗಳ ಹೂಡಿಕೆ ಮಾಡುವ ಆಶಯದೊಂದಿಗೆ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ.

ಬೆಂಗಳೂರಿನಲ್ಲಿ ರಿಸರ್ಚ್ ಸೆಂಟರ್ ತೆರೆಯಲು ಮುಂದಾದ ಟೆಸ್ಲಾ

ಇದಾದ ನಂತರ ಗುಜರಾತ್, ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರ ಸೇರಿದಂತೆ 11 ರಾಜ್ಯಗಳು ತಮ್ಮದೇ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿಯನ್ನು ಜಾರಿಗೆಗೊಳಿಸಿವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬೆಂಗಳೂರಿನಲ್ಲಿ ರಿಸರ್ಚ್ ಸೆಂಟರ್ ತೆರೆಯಲು ಮುಂದಾದ ಟೆಸ್ಲಾ

ಇನ್ನು ಈ ವರ್ಷದ ಆರಂಭದಲ್ಲಿ ಅಮೆರಿಕಾ ಮೂಲದ ಕಾರು ತಯಾರಕ ಕಂಪನಿಯಾದ ಟೆಸ್ಲಾ ಶಾಂಘೈನಲ್ಲಿ ಗಿಗಾಫ್ಯಾಕ್ಟರಿ ಕಾರು ಮತ್ತು ಬ್ಯಾಟರಿ ಕಾರ್ಖಾನೆಯನ್ನು ತೆರೆದಿತ್ತು. ಚೀನಾದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಗ್ರ ಮಾರಾಟಗಾರರಾಗಿ ಹೊರಹೊಮ್ಮಿ, ವರ್ಷದ ಮೊದಲಾರ್ಧದಲ್ಲಿ ಕಂಪನಿಯು 50,000 ವಾಹನಗಳನ್ನು ಮಾರಾಟ ಮಾಡಿದೆ ಎಂದು ನಿಕ್ಕಿ ಏಷ್ಯನ್ ರಿವ್ಯೂ ಆಗಸ್ಟ್ 25ರಂದು ವರದಿ ಮಾಡಿದೆ.

ಬೆಂಗಳೂರಿನಲ್ಲಿ ರಿಸರ್ಚ್ ಸೆಂಟರ್ ತೆರೆಯಲು ಮುಂದಾದ ಟೆಸ್ಲಾ

ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ಟೆಸ್ಲಾ ಬೆಂಗಳೂರಿನಲ್ಲಿ ಹೊಸ ರಿಸರ್ಚ್ ಸೆಂಟರ್ ತೆರೆದ ನಂತರ ಎಲೆಕ್ಟ್ರಿಕ್ ಕಾರು ತಂತ್ರಜ್ಚಾನ ಅಭಿವೃದ್ಧಿ ಹಾಗೂ ಸಂಶೋಧನೆಗೆ ಹೆಚ್ಚಿನ ಪ್ರಯೋಜನವಾಗಲಿದೆ.

ಬೆಂಗಳೂರಿನಲ್ಲಿ ರಿಸರ್ಚ್ ಸೆಂಟರ್ ತೆರೆಯಲು ಮುಂದಾದ ಟೆಸ್ಲಾ

ಬೆಂಗಳೂರಿನಲ್ಲಿ 400ಕ್ಕೂ ಹೆಚ್ಚಿನ ರಿಸರ್ಚ್ ಹಾಗೂ ಅಭಿವೃದ್ದಿ ಸೆಂಟರ್ ಗಳಿವೆ. ಇನ್ನು ಟೆಸ್ಲಾ ಕಂಪನಿಯ ಮುಖ್ಯಸ್ಥರು ರಾಜ್ಯ ಸರ್ಕಾರದ ಜೊತೆಯಲ್ಲಿ ಮತ್ತೊಂದು ಸುತ್ತಿನ ಮಾತುಕತೆಯನ್ನು ನಡೆಸಲಿದ್ದಾರೆ ಎಂದು ವರದಿಗಳಾಗಿವೆ.

Most Read Articles

Kannada
Read more on ಟೆಸ್ಲಾ tesla
English summary
Tesla Likely To Establish A Research Centre In Bengaluru. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X