ಪಾದಚಾರಿಗಳ ಜೊತೆಗೆ ಮಾತನಾಡುತ್ತದೆ ಟೆಸ್ಲಾದ ಈ ಕಾರು..!

ಅಮೇರಿಕಾ ಮೂಲದ ಟೆಸ್ಲಾ ಕಾರು ತಯಾರಕ ಕಂಪನಿಯು ಜಗತ್ತಿನಾದ್ಯಂತ ಕಾರುಗಳನ್ನು ಮಾರಾಟ ಮಾಡುತ್ತದೆ. ಆದರೆ ಇದುವರೆಗೂ ಟೆಸ್ಲಾ ಕಂಪನಿಯು ಭಾರತದಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿಲ್ಲ ಎಂಬುದನ್ನು ಗಮನಿಸಬೇಕು.

ಪಾದಚಾರಿಗಳ ಜೊತೆಗೆ ಮಾತನಾಡುತ್ತದೆ ಟೆಸ್ಲಾದ ಈ ಕಾರು..!

ಈಗಿರುವ ಟೆಸ್ಲಾ ಕಂಪನಿಯ ಸಿ‍ಇ‍ಒರವರು ಟೆಸ್ಲಾ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದಾರೆ. ಇದರ ಜೊತೆಗೆ ಕಾರುಗಳ ಗುಣಮಟ್ಟವನ್ನು ಸಹ ಸುಧಾರಿಸಲು ಮುಂದಾಗಿದ್ದಾರೆ. ಟೆಸ್ಲಾ ಕಂಪನಿಯು ಇತ್ತೀಚಿಗೆ ವಿಭಿನ್ನವಾಗಿರುವ ಪಿಕ್ ಅಪ್ ಟ್ರಕ್ ಅನ್ನು ಅಮೇರಿಕಾದಲ್ಲಿ ಅನಾವರಣಗೊಳಿಸಿದೆ.

ಪಾದಚಾರಿಗಳ ಜೊತೆಗೆ ಮಾತನಾಡುತ್ತದೆ ಟೆಸ್ಲಾದ ಈ ಕಾರು..!

ಟೆಸ್ಲಾ ಇದುವರೆಗೂ ಸೆಡಾನ್ ಹಾಗೂ ಎಸ್‍‍ಯುವಿಗಳನ್ನು ಮಾತ್ರ ಮಾರಾಟ ಮಾಡುತ್ತಿತ್ತು. ಇದನ್ನು ಬದಲಿಸುವ ಕಾರಣಕ್ಕೆ ಪಿಕ್ ಅಪ್ ಟ್ರಕ್‍‍ಗಳನ್ನು ಅನಾವರಣಗೊಳಿಸಿದೆ. ಇದರ ಜೊತೆಗೆ ಕಂಪನಿಯು ಬಸ್ ಹಾಗೂ ವ್ಯಾನ್‍‍ಗಳನ್ನು ಸಹ ಬಿಡುಗಡೆಗೊಳಿಸಲಿದೆ. ಟೆಸ್ಲಾ ಕಂಪನಿಯ ಸಿ‍ಇ‍ಒ ಎಲೆನ್ ಮಸ್ಕ್ ರವರು ತಮ್ಮ ಟ್ವಿಟರ್ ಪೇಜ್‍‍ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ.

ಪಾದಚಾರಿಗಳ ಜೊತೆಗೆ ಮಾತನಾಡುತ್ತದೆ ಟೆಸ್ಲಾದ ಈ ಕಾರು..!

ಈ ಪೋಸ್ಟ್ ನಲ್ಲಿ ಟೆಸ್ಲಾ ಕಂಪನಿಯ ಭವಿಷ್ಯದ ಟೆಕ್ನಾಲಜಿಯ ಬಗ್ಗೆ ಹೇಳಲಾಗಿದೆ. ಈ ಟೆಕ್ನಾಲಜಿಯಲ್ಲಿ ಟೆಸ್ಲಾ ಕಂಪನಿಯ ವಾಹನಗಳು ಪ್ರಯಾಣಿಕರೊಂದಿಗೆ ಮಾತನಾಡುವುದು ಸಹ ಸೇರಿದೆ. ಎಲೆನ್ ಮಸ್ಕ್ ರವರು ಪೋಸ್ಟ್ ಮಾಡಿರುವ ಈ ವೀಡಿಯೊದಲ್ಲಿ ಟೆಸ್ಲಾ ಮಾಡೆಲ್ 3 ಕಾರು ತನಗೆ ಅಡ್ಡ ಬರುವ ಪಾದಚಾರಿಗಳಿಗೆ ಇಲ್ಲಿ ನಿಲ್ಲಬೇಡಿ ಎಂದು ಎಚ್ಚರಿಕೆ ನೀಡುತ್ತಿದೆ.

ಪಾದಚಾರಿಗಳ ಜೊತೆಗೆ ಮಾತನಾಡುತ್ತದೆ ಟೆಸ್ಲಾದ ಈ ಕಾರು..!

ಟೆಸ್ಲಾ ಕಾರುಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಇದು ಸೆನ್ಸಾರ್‍‍ನಂತೆ ಕಾರ್ಯನಿರ್ವಹಿಸಿ ತನಗೆ ಅಡ್ಡಬರುವವರ ಜೊತೆಗೆ ಮಾತನಾಡುತ್ತದೆ. ಇದರ ಜೊತೆಗೆ ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಧರಿಸಲು ಸೂಚಿಸುತ್ತದೆ.

ಪಾದಚಾರಿಗಳ ಜೊತೆಗೆ ಮಾತನಾಡುತ್ತದೆ ಟೆಸ್ಲಾದ ಈ ಕಾರು..!

ಟೆಸ್ಲಾ ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಹೇಳಲಾಗಿಲ್ಲ. ಎಲೆನ್ ಮಸ್ಕ್ ರವರ ಟ್ವಿಟರ್ ಖಾತೆಯಿಂದ ಈ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಪಾದಚಾರಿಗಳ ಜೊತೆಗೆ ಮಾತನಾಡುತ್ತದೆ ಟೆಸ್ಲಾದ ಈ ಕಾರು..!

ಟೆಸ್ಲಾ ಕಾರುಗಳನ್ನು ಭಾರತದಲ್ಲಿ ಯಾವುದೇ ಸಮಯದಲ್ಲಿ ಬಿಡುಗಡೆಗೊಳಿಸಬಹುದು. ಕಂಪನಿಯು ಪಿಕ್ ಅಪ್ ಟ್ರಕ್ ಅನ್ನು ಪ್ರದರ್ಶಿಸಿದ ನಂತರ ಅದರ ವಿನ್ಯಾಸದ ಕಾರಣಕ್ಕೆ ವ್ಯಾಪಕ ಟೀಕೆಗೊಳಗಾಗಿತ್ತು. ಆದರೆ ಕಂಪನಿಯು ಇವುಗಳನ್ನು ಮೆಟ್ಟಿನಿಂತಿದೆ. ಪಿಕ್ ಅಪ್ ಟ್ರಕ್ ಮೂರೇ ದಿನಗಳಲ್ಲಿ ದಾಖಲೆಯ ಪ್ರಮಾಣದ ಬುಕ್ಕಿಂಗ್‍ಗಳನ್ನು ಪಡೆದಿದೆ.

ಪಾದಚಾರಿಗಳ ಜೊತೆಗೆ ಮಾತನಾಡುತ್ತದೆ ಟೆಸ್ಲಾದ ಈ ಕಾರು..!

ಪಿಕ್‍ಅಪ್ ಟ್ರಕ್ ಮಾದರಿಯಲ್ಲಿ ಬುಲೆಟ್ ಪ್ರೂಫ್ ವಿಂಡೊ ಮಿರರ್‍‍ಗಳು, ಗಟ್ಟಿಯಾದ ಬಾಡಿ, ಹೆಚ್ಚು ಲೋಡ್ ಹೊರುವ ಸಾಮರ್ಥ್ಯ, ಹೆಚ್ಚು ಸುರಕ್ಷತೆ ಹಾಗೂ ಎಂಜಿನ್ ಪವರ್‍‍ನಿಂದಾಗಿ ಹೆಚ್ಚಿನ ಪ್ರಮಾಣದ ಬುಕ್ಕಿಂಗ್‍‍ಗಳನ್ನು ಪಡೆದಿದೆ.

ಪಾದಚಾರಿಗಳ ಜೊತೆಗೆ ಮಾತನಾಡುತ್ತದೆ ಟೆಸ್ಲಾದ ಈ ಕಾರು..!

ಆನ್‍‍ಲೈನ್ ಬುಕ್ಕಿಂಗ್ ಶುರುಮಾಡಿದ ಕೇವಲ 48 ಗಂಟೆಗಳಲ್ಲಿ 1.46 ಲಕ್ಷ ಯುನಿಟ್‍‍ಗಳನ್ನು ಪಡೆದಿದೆ. ಇದಾದ ಮೂರು ದಿನಗಳಲ್ಲಿ 1.87 ಲಕ್ಷ ಬುಕ್ಕಿಂಗ್‍‍ಗಳನ್ನು ಮಾಡಲಾಗಿದೆ. ಈ ಎಲೆಕ್ಟ್ರಿಕ್ ಪಿಕ್ ಅಪ್ ಟ್ರಕ್ ಅನ್ನು ಮೂರು ವಿವಿಧ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಪಾದಚಾರಿಗಳ ಜೊತೆಗೆ ಮಾತನಾಡುತ್ತದೆ ಟೆಸ್ಲಾದ ಈ ಕಾರು..!

ಇವುಗಳಲ್ಲಿ ಸಿಂಗಲ್ ಎಲೆಕ್ಟ್ರಿಕ್ ಮೋಟರ್ ಹಾಗೂ ಡ್ಯುಯಲ್ ಎಲೆಕ್ಟ್ರಿಕ್ ಮೋಟರ್‍‍ಗಳು ಸೇರಿವೆ. ಸಿಂಗಲ್ ಎಲೆಕ್ಟ್ರಿಕ್ ಮೋಟರ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 402 ಕಿ.ಮೀಗಳವರೆಗೆ ಚಲಿಸಿದರೆ, ಡ್ಯುಯಲ್ ಮೋಟರ್ 482 ಕಿ.ಮೀಗಳವರೆಗೆ ಚಲಿಸುತ್ತದೆ.

ಪಾದಚಾರಿಗಳ ಜೊತೆಗೆ ಮಾತನಾಡುತ್ತದೆ ಟೆಸ್ಲಾದ ಈ ಕಾರು..!

ಈ ಪಿಕ್ ಅಪ್ ಟ್ರಕ್ ಅನ್ನು ಮೂರು ಎಲೆಕ್ಟ್ರಿಕ್ ಮೋಟರ್‍‍ಗಳಲ್ಲಿಯೂ ಸಹ ಮಾರಾಟ ಮಾಡಲಾಗುತ್ತದೆ. ಇವುಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 804 ಕಿ.ಮೀಗಳವರೆಗೆ ಚಲಿಸುತ್ತವೆ. ಈ ಪಿಕ್ ಅಪ್ ಟ್ರಕ್‍‍ನ ಬೆಲೆಯು ರೂ.29 ಲಕ್ಷದಿಂದ ರೂ.50 ಲಕ್ಷಗಳಾಗುತ್ತದೆ.

Most Read Articles

Kannada
Read more on ಟೆಸ್ಲಾ tesla
English summary
Tesla model 3 talks with pedestrians. Read in Kannada.
Story first published: Tuesday, January 14, 2020, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X