ಮಾಡೆಲ್ ಎಸ್ ಎಲೆಕ್ಟ್ರಿಕ್ ಸೆಡಾನ್ ಮೈಲೇಜ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟೆಸ್ಲಾ

ಅಮೆರಿಕದ ಜನಪ್ರಿಯ ಎಲೆಕ್ಟ್ರಿಕ್ ಕಾರು ನಿರ್ಮಾಣ ಕಂಪನಿಯಾದ ಟೆಸ್ಲಾ ತನ್ನ ಮಾಡೆಲ್ ಎಸ್ ಎಲೆಕ್ಟ್ರಿಕ್ ಸೆಡಾನ್ ಕಾರು ಮಾದರಿಯ ಮೈಲೇಜ್ ವಿಚಾರದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಎಲೆಕ್ಟ್ರಿಕ್ ಕಾರುಗಳಲ್ಲೇ ಅತಿ ಹೆಚ್ಚು ಮೈಲೇಜ್ ನೀಡುವ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಎಲೆಕ್ಟ್ರಿಕ್ ಸೆಡಾನ್ ಮೈಲೇಜ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟೆಸ್ಲಾ

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸುತ್ತಿರುವ ಟೆಸ್ಲಾ ಕಂಪನಿಯು ಅಮೆರಿಕದಲ್ಲಿ ಮಾತ್ರವಲ್ಲದೇ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೂ ತನ್ನ ಕಾರು ಮಾರಾಟವನ್ನು ವಿಸ್ತರಣೆ ಮಾಡುತ್ತಿದ್ದು, ಮಾಡೆಲ್ ಎಸ್ ಕಾರು ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಬಲಿಷ್ಠ ಮತ್ತು ಗರಿಷ್ಠ ಮೈಲೇಜ್ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದಿರುವುದು ಐಷಾರಾಮಿ ಕಾರು ಖರೀದಿದಾರರ ಮೆಚ್ಚುಗೆಗೆ ಕಾರಣವಾಗಿದೆ.

ಎಲೆಕ್ಟ್ರಿಕ್ ಸೆಡಾನ್ ಮೈಲೇಜ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟೆಸ್ಲಾ

ಟೆಸ್ಲಾ ಕಂಪನಿಯು ಸದ್ಯ ಗ್ರಾಹಕರ ಬೇಡಿಕೆ ಅನುಸಾರವಾಗಿ ಮಾಡೆಲ್ ಎಸ್, ಮಾಡೆಲ್ 3, ಮಾಡೆಲ್ ಎಕ್ಸ್ ಮತ್ತು ಮಾಡೆಲ್ ವೈ ಎಲೆಕ್ಟ್ರಿಕ್ ಸೆಡಾನ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಮಾಡೆಲ್ ಎಸ್ ಕಾರು ಇದೀಗ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮೈಲೇಜ್ ವಿಚಾರದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

ಎಲೆಕ್ಟ್ರಿಕ್ ಸೆಡಾನ್ ಮೈಲೇಜ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟೆಸ್ಲಾ

ಈ ಹಿಂದೆ ಪ್ರತಿ ಚಾರ್ಜ್‌ಗೆ 600 ಕಿ.ಮೀ ಮೈಲೇಜ್ ಹೊಂದಿದ್ದ ಮಾಡೆಲ್ ಎಸ್ ಲಾಂಗ್ ರೇಂಜ್ ಆವೃತ್ತಿಯು ಇದೀಗ ಅದೇ ಬ್ಯಾಟರಿ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 647 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತಿದ್ದು, ಬ್ಯಾಟರಿ ತಂತ್ರಜ್ಞಾನ ಮತ್ತು ಕಾರಿನ ನಿರ್ಮಾಣ ವಿನ್ಯಾಸದಲ್ಲಿ ಕೆಲವು ಬದಲಾವಣೆ ಮಾಡಿರುವುದೇ ಮೈಲೇಜ್ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಎಲೆಕ್ಟ್ರಿಕ್ ಸೆಡಾನ್ ಮೈಲೇಜ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟೆಸ್ಲಾ

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಸುಮಾರು 8 ವರ್ಷಗಳ ಅನುಭವ ಹೊಂದಿರುವ ಟೆಸ್ಲಾ ಕಂಪನಿಯು ಮಾಡೆಲ್ ಎಸ್ ಕಾರಿನ ವಿನ್ಯಾಸ ಮತ್ತು ನಿರ್ಮಾಣದ ಗುಣಮಟ್ಟದಲ್ಲಿ ಈಗಾಗಲೇ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಹಳೆಯ ಮಾದರಿಗಿಂತ ಹೊಸ ಕಾರಿನ ತೂಕದಲ್ಲಿ ಸಾಕಷ್ಟು ಕಡಿತಗೊಳಿಸಲಾಗಿದೆ.

ಎಲೆಕ್ಟ್ರಿಕ್ ಸೆಡಾನ್ ಮೈಲೇಜ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟೆಸ್ಲಾ

ಹಾಗೆಯೇ ಬ್ಯಾಟರಿ ತಂತ್ರಜ್ಞಾನದಲ್ಲೂ ಕೆಲವು ಸುಧಾರಣೆ ತಂದಿರುವುದರಿಂದ ಮೈಲೇಜ್ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದು, ಈ ಮೂಲಕ ಮತ್ತಷ್ಟು ಎಲೆಕ್ಟ್ರಿಕ್ ಕಾರು ಖರೀದಿದಾರರನ್ನು ಸೆಳೆಯುತ್ತಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಎಲೆಕ್ಟ್ರಿಕ್ ಸೆಡಾನ್ ಮೈಲೇಜ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟೆಸ್ಲಾ

ಸದ್ಯ ಅಮೆರಿಕದಲ್ಲಿ 74,990 ಯುಎಸ್‌ ಡಾಲರ್(ರೂ.57.15 ಲಕ್ಷ) ಬೆಲೆ ಹೊಂದಿರುವ ಮಾಡೆಲ್ ಎಸ್ ಕಾರಿನ ಬೆಲೆಯಲ್ಲಿ 5,000 ಯುಎಸ್ ಡಾಲರ್ ಇಳಿಕೆ ಮಾಡಿರುವ ಟೆಸ್ಲಾ ಕಂಪನಿಯು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ.

ಎಲೆಕ್ಟ್ರಿಕ್ ಸೆಡಾನ್ ಮೈಲೇಜ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟೆಸ್ಲಾ

ಹಾಗೆಯೇ ಮಾಡೆಲ್ 3 ಕಾರಿನ ಬೆಲೆಯಲ್ಲಿ 3,000 ಯುಎಸ್ ಡಾಲರ್ ಮತ್ತು ಮಾಡೆಲ್ ಎಕ್ಸ್ ಕಾರಿನ ಬೆಲೆಯಲ್ಲಿ 5,000 ಯುಎಸ್ ಡಾಲರ್ ಕಡಿತ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಟೆಸ್ಲಾ ಕಾರು ಮಾರಾಟವು ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಎಲೆಕ್ಟ್ರಿಕ್ ಸೆಡಾನ್ ಮೈಲೇಜ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟೆಸ್ಲಾ

ಭಾರತದಲ್ಲಿ ಸದ್ಯ ಟೆಸ್ಲಾ ಕಾರುಗಳು ಅಧಿಕೃತವಾಗಿ ಖರೀದಿಗೆ ಲಭ್ಯವಿಲ್ಲವಾದರೂ ಹಲವು ಉದ್ಯಮಿಗಳು, ನಟರು ದುಬಾರಿ ಬೆಲೆಯೊಂದಿಗೆ ಆಮದು ಮಾಡಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಟೆಸ್ಲಾ ಕಂಪನಿಯೇ ಭಾರತದಲ್ಲಿ ಅಧಿಕೃತವಾಗಿ ಕಾರು ಮಾರಾಟವನ್ನು ಆರಂಭಿಸುವ ಪ್ರಕ್ರಿಯೆಯಲ್ಲಿದೆ.

Most Read Articles

Kannada
Read more on ಟೆಸ್ಲಾ tesla
English summary
Tesla Model S Long Range Plus Covers 647km Over A Single Charge. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X