ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಂಪಿವಿ ಕಾರುಗಳಿವು

ಕರೋನಾ ವೈರಸ್ ಇಡೀ ಪ್ರಪಂಚಕ್ಕೆ ಹಾನಿಯನ್ನುಂಟುಮಾಡಿದೆ. ಲಕ್ಷಾಂತರ ಜನರಿಗೆ ಈ ವೈರಸ್ ಸೋಂಕು ತಗುಲಿದೆ. ಈ ವೈರಸ್‌ನಿಂದಾಗಿ ಇಡೀ ವಿಶ್ವದ ಆರ್ಥಿಕ ವ್ಯವಸ್ಥೆಯು ಕುಸಿದಿದೆ. ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದರೆ, ಕಂಪನಿಗಳು ದಿವಾಳಿಯಾಗಿವೆ.

ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಂಪಿವಿ ಕಾರುಗಳಿವು

ಭಾರತದಲ್ಲಿಯೂ ಈ ವೈರಸ್ ವೇಗವಾಗಿ ಹಾರಾಡುತ್ತಿದೆ. ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಮಾರ್ಚ್ 24ರಿಂದ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿತ್ತು. ಈ ಲಾಕ್‌ಡೌನ್‌ನಿಂದಾಗಿ ಭಾರತದ ಆರ್ಥಿಕ ವ್ಯವಸ್ಥೆಯು ಕುಸಿದಿದೆ.

ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಂಪಿವಿ ಕಾರುಗಳಿವು

ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಕೇಂದ್ರ ಸರ್ಕಾರವು ಕೆಲವು ಷರತ್ತುಗಳೊಂದಿಗೆ ಕೈಗಾರಿಕೆಗಳ ಕಾರ್ಯಾಚರಣೆಗೆ ಅವಕಾಶ ನೀಡಿತು. ಈ ಕಾರಣಕ್ಕೆ ಆಟೋಮೊಬೈಲ್ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಿದವು. ವಾಹನ ಉತ್ಪಾದನೆಯ ಜೊತೆಗೆ ವಾಹನ ತಯಾರಕ ಕಂಪನಿಗಳು ದೇಶದ ಅನೇಕ ಭಾಗಗಳಲ್ಲಿ ಮಾರಾಟವನ್ನು ಪುನರಾರಂಭಿಸಿದವು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಂಪಿವಿ ಕಾರುಗಳಿವು

ಎಲ್ಲಾ ವಾಹನ ತಯಾರಕ ಕಂಪನಿಗಳು ಮೇ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿವೆ. ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಿನಲ್ಲಿ ಆಟೋ ಮೊಬೈಲ್ ಕಂಪನಿಗಳು ಭಾರೀ ಕುಸಿತವನ್ನು ಅನುಭವಿಸಿವೆ. ಆದರೂ ಮೇ ತಿಂಗಳಿನಲ್ಲಿ ಅನೇಕ ವಾಹನಗಳು ಮಾರಾಟವಾಗಿವೆ.

ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಂಪಿವಿ ಕಾರುಗಳಿವು

ಈ ಲೇಖನದಲ್ಲಿ ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಂಪಿವಿಗಳ ಬಗ್ಗೆ ನೋಡೋಣ. ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಮೊದಲ ಸ್ಥಾನದಲ್ಲಿದೆ. ಮೇ ತಿಂಗಳಿನಲ್ಲಿ ಈ ಕಾರಿನ 2,353 ಯುನಿಟ್‌ಗಳು ಮಾರಾಟವಾಗಿದ್ದರೆ, 2019ರ ಮೇ ತಿಂಗಳಿನಲ್ಲಿ 8,864 ಯುನಿಟ್‌ಗಳು ಮಾರಾಟವಾಗಿದ್ದವು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಂಪಿವಿ ಕಾರುಗಳಿವು

ಎರಡನೇ ಸ್ಥಾನದಲ್ಲಿರುವ ಮಹೀಂದ್ರಾ ಬೊಲೆರೊದ 1,715 ಯುನಿಟ್‌ಗಳು ಮೇ ತಿಂಗಳಿನಲ್ಲಿ ಮಾರಾಟವಾಗಿವೆ. 2019ರ ಮೇ ತಿಂಗಳಿನಲ್ಲಿ ಈ ಕಾರಿನ ಒಟ್ಟು 5,947 ಯುನಿಟ್‌ಗಳು ಮಾರಾಟವಾಗಿದ್ದವು. ಈ ಮೂಲಕ ಮಾರಾಟ ಪ್ರಮಾಣವು 71%ನಷ್ಟು ಕಡಿಮೆಯಾಗಿದೆ.

ಸ್ಥಾನ ಮಾದರಿ ಮೇ 2020 ಮೇ 2019 ಏರಿಕೆ ಪ್ರಮಾಣ (%)
1 ಮಾರುತಿ ಎರ್ಟಿಗಾ 2,353 8,864 -73
2 ಮಹೀಂದ್ರಾ ಬೊಲೆರೋ 1,715 5,947 -71
3 ರೆನಾಲ್ಟ್ ಟ್ರೈಬರ್ 931 0 -
4 ಟೊಯೊಟಾ ಇನೋವಾ ಕ್ರಿಸ್ಟಾ 759 5,631 -87
5 ಮಾರುತಿ ಎಕ್ಸ್‌ಎಲ್ 6 711 0 -
6 ದಟ್ಸನ್ ಗೋ ಪ್ಲಸ್ 62 242 -74
7 ಕಿಯಾ ಕಾರ್ನಿವಾಲ್ 50 0 -
8 ಟೊಯೊಟಾ ವೆಲ್‌ಫೈರ್ 32 0 -
9 ಮಹೀಂದ್ರಾ ಮರಾಜೋ 0 1,381 -100
10 ಮಹೀಂದ್ರಾ ಜೈಲೋ 0 312 -100
11 ಟಾಟಾ ಹೆಕ್ಸಾ 0 301 -100
12 ಹೋಂಡಾ ಬಿಆರ್-ವಿ 0 255 -100
13 ರೆನಾಲ್ಟ್ ಲಾಡ್ಜಿ 0 49 -100
ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಂಪಿವಿ ಕಾರುಗಳಿವು

931 ಯುನಿಟ್‌ಗಳ ಮಾರಾತದೊಂದಿಗೆ ರೆನಾಲ್ಟ್ ಟ್ರೈಬರ್ 3ನೇ ಸ್ಥಾನದಲ್ಲಿದ್ದರೆ, 759 ಯುನಿಟ್ ಮಾರಾಟದೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿರುವ ಮಾರುತಿ ಎಕ್ಸ್‌ಎಲ್ 6ನ ಒಟ್ಟು 711 ಯುನಿಟ್‌ಗಳು ಮೇ ತಿಂಗಳಿನಲ್ಲಿ ಮಾರಾಟವಾಗಿವೆ.

Source: Autopunditz.com

Most Read Articles

Kannada
English summary
Top 10 best selling MPV in India. Read in Kannada.
Story first published: Friday, June 5, 2020, 18:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X