Just In
- 4 hrs ago ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- 5 hrs ago ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- 5 hrs ago ಪ್ರೇರಣಾತ್ಮಕ ಕಥೆ: ಮನೆ ಕೆಲಸದಾಕೆಗೆ 'ಸೈಕಲ್' ಖರೀದಿಸಲು ಸಹಾಯ ಮಾಡಿದ ಮಾಲೀಕ.. ವಿಡಿಯೋ ವೈರಲ್
- 6 hrs ago ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
Don't Miss!
- Movies ಯಾರಿಗೂ ಹೇಳ್ಬೇಡಿ ; ಬಾಲಿವುಡ್ ಯಾರಿಗೂ ಸುರಕ್ಷಿತವಲ್ಲ ಎಂದ ಪ್ರೀತಿ ಜಿಂಟಾ..!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಂಪಿವಿ ಕಾರುಗಳಿವು
ಕರೋನಾ ವೈರಸ್ ಇಡೀ ಪ್ರಪಂಚಕ್ಕೆ ಹಾನಿಯನ್ನುಂಟುಮಾಡಿದೆ. ಲಕ್ಷಾಂತರ ಜನರಿಗೆ ಈ ವೈರಸ್ ಸೋಂಕು ತಗುಲಿದೆ. ಈ ವೈರಸ್ನಿಂದಾಗಿ ಇಡೀ ವಿಶ್ವದ ಆರ್ಥಿಕ ವ್ಯವಸ್ಥೆಯು ಕುಸಿದಿದೆ. ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದರೆ, ಕಂಪನಿಗಳು ದಿವಾಳಿಯಾಗಿವೆ.
ಭಾರತದಲ್ಲಿಯೂ ಈ ವೈರಸ್ ವೇಗವಾಗಿ ಹಾರಾಡುತ್ತಿದೆ. ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಮಾರ್ಚ್ 24ರಿಂದ ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸಿತ್ತು. ಈ ಲಾಕ್ಡೌನ್ನಿಂದಾಗಿ ಭಾರತದ ಆರ್ಥಿಕ ವ್ಯವಸ್ಥೆಯು ಕುಸಿದಿದೆ.
ನಾಲ್ಕನೇ ಹಂತದ ಲಾಕ್ಡೌನ್ನಲ್ಲಿ ಕೇಂದ್ರ ಸರ್ಕಾರವು ಕೆಲವು ಷರತ್ತುಗಳೊಂದಿಗೆ ಕೈಗಾರಿಕೆಗಳ ಕಾರ್ಯಾಚರಣೆಗೆ ಅವಕಾಶ ನೀಡಿತು. ಈ ಕಾರಣಕ್ಕೆ ಆಟೋಮೊಬೈಲ್ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಿದವು. ವಾಹನ ಉತ್ಪಾದನೆಯ ಜೊತೆಗೆ ವಾಹನ ತಯಾರಕ ಕಂಪನಿಗಳು ದೇಶದ ಅನೇಕ ಭಾಗಗಳಲ್ಲಿ ಮಾರಾಟವನ್ನು ಪುನರಾರಂಭಿಸಿದವು.
MOSTREAD: ನಟ ವಿಕ್ರಮ್ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್
ಎಲ್ಲಾ ವಾಹನ ತಯಾರಕ ಕಂಪನಿಗಳು ಮೇ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿವೆ. ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಿನಲ್ಲಿ ಆಟೋ ಮೊಬೈಲ್ ಕಂಪನಿಗಳು ಭಾರೀ ಕುಸಿತವನ್ನು ಅನುಭವಿಸಿವೆ. ಆದರೂ ಮೇ ತಿಂಗಳಿನಲ್ಲಿ ಅನೇಕ ವಾಹನಗಳು ಮಾರಾಟವಾಗಿವೆ.
ಈ ಲೇಖನದಲ್ಲಿ ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಂಪಿವಿಗಳ ಬಗ್ಗೆ ನೋಡೋಣ. ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಮೊದಲ ಸ್ಥಾನದಲ್ಲಿದೆ. ಮೇ ತಿಂಗಳಿನಲ್ಲಿ ಈ ಕಾರಿನ 2,353 ಯುನಿಟ್ಗಳು ಮಾರಾಟವಾಗಿದ್ದರೆ, 2019ರ ಮೇ ತಿಂಗಳಿನಲ್ಲಿ 8,864 ಯುನಿಟ್ಗಳು ಮಾರಾಟವಾಗಿದ್ದವು.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!
ಎರಡನೇ ಸ್ಥಾನದಲ್ಲಿರುವ ಮಹೀಂದ್ರಾ ಬೊಲೆರೊದ 1,715 ಯುನಿಟ್ಗಳು ಮೇ ತಿಂಗಳಿನಲ್ಲಿ ಮಾರಾಟವಾಗಿವೆ. 2019ರ ಮೇ ತಿಂಗಳಿನಲ್ಲಿ ಈ ಕಾರಿನ ಒಟ್ಟು 5,947 ಯುನಿಟ್ಗಳು ಮಾರಾಟವಾಗಿದ್ದವು. ಈ ಮೂಲಕ ಮಾರಾಟ ಪ್ರಮಾಣವು 71%ನಷ್ಟು ಕಡಿಮೆಯಾಗಿದೆ.
ಸ್ಥಾನ | ಮಾದರಿ | ಮೇ 2020 | ಮೇ 2019 | ಏರಿಕೆ ಪ್ರಮಾಣ (%) |
1 | ಮಾರುತಿ ಎರ್ಟಿಗಾ | 2,353 | 8,864 | -73 |
2 | ಮಹೀಂದ್ರಾ ಬೊಲೆರೋ | 1,715 | 5,947 | -71 |
3 | ರೆನಾಲ್ಟ್ ಟ್ರೈಬರ್ | 931 | 0 | - |
4 | ಟೊಯೊಟಾ ಇನೋವಾ ಕ್ರಿಸ್ಟಾ | 759 | 5,631 | -87 |
5 | ಮಾರುತಿ ಎಕ್ಸ್ಎಲ್ 6 | 711 | 0 | - |
6 | ದಟ್ಸನ್ ಗೋ ಪ್ಲಸ್ | 62 | 242 | -74 |
7 | ಕಿಯಾ ಕಾರ್ನಿವಾಲ್ | 50 | 0 | - |
8 | ಟೊಯೊಟಾ ವೆಲ್ಫೈರ್ | 32 | 0 | - |
9 | ಮಹೀಂದ್ರಾ ಮರಾಜೋ | 0 | 1,381 | -100 |
10 | ಮಹೀಂದ್ರಾ ಜೈಲೋ | 0 | 312 | -100 |
11 | ಟಾಟಾ ಹೆಕ್ಸಾ | 0 | 301 | -100 |
12 | ಹೋಂಡಾ ಬಿಆರ್-ವಿ | 0 | 255 | -100 |
13 | ರೆನಾಲ್ಟ್ ಲಾಡ್ಜಿ | 0 | 49 | -100 |
931 ಯುನಿಟ್ಗಳ ಮಾರಾತದೊಂದಿಗೆ ರೆನಾಲ್ಟ್ ಟ್ರೈಬರ್ 3ನೇ ಸ್ಥಾನದಲ್ಲಿದ್ದರೆ, 759 ಯುನಿಟ್ ಮಾರಾಟದೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿರುವ ಮಾರುತಿ ಎಕ್ಸ್ಎಲ್ 6ನ ಒಟ್ಟು 711 ಯುನಿಟ್ಗಳು ಮೇ ತಿಂಗಳಿನಲ್ಲಿ ಮಾರಾಟವಾಗಿವೆ.
Source: Autopunditz.com