Just In
Don't Miss!
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Movies
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು
ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಲವು ಕಾರುಗಳಿವೆ. ಆದರೆ ಮಧ್ಯಮ ಮತ್ತು ಕೆಳ ವರ್ಗದ ಜನರಿಗೆ ಕಾರು ಖರೀದಿಸುವುದು ದೊಡ್ಡ ಸವಾಲಾಗಿದೆ. ತಾವು ಕೂಡಿಟ್ಟ ಹಣದಲ್ಲಿ ಒಂದು ಕಾರು ಖರೀದಿಸಬೇಕೆಂಬ ಕನಸನ್ನು ಹೊಂದಿರುತ್ತಾರೆ.

ಎಲ್ಲರಿಗೂ ಸ್ವಂತವಾಗಿ ಒಂದು ಕಾರು ಇರಬೇಕೆಂಬ ಆಸೆ ಇರುತ್ತದೆ. ಇತ್ತೀಚೆಗೆ ಒಂದು ಮಾಧ್ಯಮ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಸರಾಸರಿ 70% ರಷ್ಟು ಜನರು ಕೆಲಸಕ್ಕಾಗಿ ಪ್ರಯಾಣಿಸಲು ಸ್ವಂತ ವಾಹನಗಳನ್ನು ಆದ್ಯತೆ ನೀಡುವುದಾಗಿ ತಿಳಿದುಬಂದಿದೆ. ಎಲ್ಲರೂ ದೈನಂದಿನ ಬಳಕೆಗೆ ಸಣ್ಣ ಕಾರನ್ನು ಬಳಕೆ ಮಾಡಲು ಇಷ್ಟಪಡುತ್ತಾರೆ. ಇದು ಹಲವು ಸಮೀಕ್ಷೆಗಳಲ್ಲಿ ಸಾಬೀತಾಗಿದ್ದು, ಎಲ್ಲರೂ ಸ್ವಂತ ವಾಹನ ಹೊಂದಲು ಇಷ್ಟಪಡುತ್ತಾರೆ.

ಅದೇ ರೀತಿ ಕಿಯಾ ಮೋಟಾರ್ಸ್ ಇಂಡಿಯಾ ಮಾರ್ಕೆಟಿಂಗ್ ಮತ್ತು ಸೇಲ್ಸ್ ಉಪಾಧ್ಯಕ್ಷ ಮತ್ತು ಮುಖ್ಯಸ್ಥರಾದ ಮನೋಹರ್ ಭಟ್ ಅವರು ಸಾರ್ವಜನಿಕ ಸಾರಿಗೆಯ ಬಳಕೆಯು ಮುಂಬರುವ ದಿನಗಳಲ್ಲಿ ಕಡಿಮೆಯಾಗುತ್ತದೆ ಮತ್ತು ಜನರು ಸಣ್ಣ ಕಾರುಗಳಿಗೆ ಆದ್ಯತೆ ನೀಡುತ್ತಾರೆ ಎಂದು ಹೇಳಿದ್ದಾರೆ. ಹೀಗಾಗಿ ಕಡಿಮೆ ಬೆಲೆಯ ಮತ್ತು ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳನ್ನು ಖರೀದಿಸಲು ಬಯಸುವವರಿಗೆ ಇಲ್ಲೊಂದಿಷ್ಟು ಕಾರುಗಳ ಮಾಹಿತಿ ನೀಡಲಾಗಿದೆ.
MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಮಾರುತಿ ಎಸ್-ಪ್ರೆಸ್ಸೊ
ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಹಲವಾರು ಎಂಟ್ರಿ ಲೆವಲ್ ಕಾರುಗಳನ್ನು ಹೊಂದಿದ್ದು, ಕೈಗೆಟುಕುವ ದರ ಹೊಂದಿರುವ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಆಲ್ಟೊ ಹಾಗೂ ಎಸ್-ಪ್ರೆಸೊ ಕಾರುಗಳ ಮಾರಾಟವು ಹೆಚ್ಚಾಗುವ ಸಾಧ್ಯತೆಗಳಿವೆ.

ಮಾರುತಿ ಎಸ್-ಪ್ರೆಸೊ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.71 ಲಕ್ಷಗಳಾಗಿದೆ. ಎಸ್-ಪ್ರೆಸ್ಸೊ ಮಿನಿ ಎಸ್ಯುವಿ 998 ಸಿಸಿ ಪೆಟ್ರೋಲ್ ಎಂಜಿನ್ 67 ಬಿಎಚ್ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆರಂಭಿಕ ಕಾರು ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಆಟೋ ಗೇರ್ ಶಿಫ್ಟ್(ಎಜಿಎಸ್) ಆಯ್ಕೆಯನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮಾರುತಿ ಸುಜುಕಿ ಆಲ್ಟೋ
800 ಸಿಸಿ ಮಾರುತಿ ಸುಜುಕಿ ಆಲ್ಟೋ ಮತ್ತು 1.0-ಲೀಟರ್ ಮಾರುತಿ ಸುಜುಕಿ ಆಲ್ಟೋ ಕೆ 10 ಅಧಿಕ ಕಾಲ ಕಂಪನಿಯ ಹೆಚ್ಚು ಮಾರಾಟವಾದ ಮಾದರಿಗಳಾಗಿವೆ. 800 ಸಿಸಿ ಮಾದರಿಯು 48 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಮ್ಯಾನುವಲ್ಗೆ ಮಾತ್ರ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ, ಆದರೆ ಕೆ10 ಅನ್ನು ಈಗ ಎಸ್-ಪ್ರೆಸ್ಸೊ ಬದಲಿಸಿದೆ. 800 ಸಿಸಿ ಆಲ್ಟೋ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.95 ಲಕ್ಷಗಳಾಗಿದೆ.

ದಟ್ಸನ್ ರೆಡಿ-ಗೊ ಫೇಸ್ಲಿಫ್ಟ್
ದಟ್ಸನ್ ಕಂಪನಿಯು ತನ್ನ ಎಂಟ್ರಿ ಲೆವೆಲ್ ರೆಡಿ ಗೋ ಫೇಸ್ಲಿಫ್ಟ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 800ಸಿಸಿ ಎಂಜಿನ್ 54 ಬಿಹೆಚ್ಪಿ ಹಾಗೂ 72 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.0 ಲೀಟರ್ ಎಂಜಿನ್ 68 ಬಿಹೆಚ್ಪಿ ಹಾಗೂ 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ರೆಡಿ-ಗೊ ಫೇಸ್ಲಿಫ್ಟ್ ಮಾದರಿಯ ಪ್ರಾರಂಭಿಕ ಬೆಲೆಯು ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ.2.83 ಲಕ್ಷಗಳಾಗಿದೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿ

ರೆನಾಲ್ಟ್ ಕ್ವಿಡ್
ಫ್ರೆಂಚ್ ಮೂಲದ ವಾಹನ ಉತ್ಪಾದನಾ ಕಂಪನಿ ರೆನಾಲ್ಟ್ ತನ್ನ 2020ರ ಕ್ವಿಡ್ ಕಾರನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಬಿಎಸ್-6 ರೆನಾಲ್ಟ್ ಕ್ವಿಡ್ ಕಾರಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.92 ಲಕ್ಷಗಳಾಗಿದೆ.

ಈ ಹ್ಯಾಚ್ಬ್ಯಾಕ್ನಲ್ಲಿ ಎರಡೂ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ 0.8 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 54 ಬಿಹೆಚ್ಪಿ ಪವರ್ ಮತ್ತು 72 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ನೊಂದಿಗೆ 5 ಸ್ಪೀಡ್ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹ್ಯುಂಡೈ ಸ್ಯಾಂಟ್ರೋ
ಬಿಎಸ್-6 ಸ್ಯಾಂಟ್ರೋ ಕಾರು ಪೆಟ್ರೋಲ್ ಮತ್ತು ಸಿಎನ್ಜಿ ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿದೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.57 ಲಕ್ಷಗಳಾಗಿದೆ. ಇದರಲ್ಲಿ ಹೊಸ ಎಂಜಿನ್ನಿಂದಾಗಿ ಎಂಜಿನ್ ಕಾರ್ಯಕ್ಷಮತೆ ಹೆಚ್ಚಿರುವುದಲ್ಲದೇ ಮೈಲೇಜ್ ಪ್ರಮಾಣದಲ್ಲೂ ಸಾಕಷ್ಟು ಸುಧಾರಣೆಯಾಗಿದೆ.