ವಾಹನ ಸಲಹೆ: ಕಾರಿನಲ್ಲಿ ಈ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ಮೆಕಾನಿಕ್ ಸಂಪರ್ಕಿಸಿ

ಕಾರುಗಳನ್ನು ನಿಯಮಿತವಾಗಿ ಸರ್ವೀಸ್ ಮಾಡುವುದು ಬಹಳ ಮುಖ್ಯ. ಇದರಿಂದ ಕಾರಿನ ಪರ್ಫಾಮೆನ್ಸ್, ಮೈಲೇಜ್ ಹೆಚ್ಚುತ್ತದೆ. ಹೊಸ ಕಾರು ಖರೀದಿಸಿದಾಗ, ಕಂಪನಿಯು ಸರ್ವೀಸ್ ಮಾಡಿಸಬೇಕಾದ ವೇಳಾಪಟ್ಟಿಯನ್ನು ನೀಡುತ್ತದೆ. ಆದರೆ ಹಲವರು ಕಾಲಕಾಲಕ್ಕೆ ಹಳೆಯ ಕಾರುಗಳನ್ನು ಸರ್ವೀಸ್ ಮಾಡಿಸುವುದೇ ಇಲ್ಲ.

ವಾಹನ ಸಲಹೆ: ಕಾರಿನಲ್ಲಿ ಈ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ಮೆಕಾನಿಕ್ ಸಂಪರ್ಕಿಸಿ

ಕಾರು ತಜ್ಞರು ಹೇಳುವ ಪ್ರಕಾರ ಕಾರುಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ, ಇಲ್ಲವೇ ಪ್ರತಿ ವರ್ಷಕ್ಕೊಮ್ಮೆ ಅಥವಾ ಪ್ರತಿ 10,000 ಕಿ.ಮೀಗಳಿಗೆ ಒಮ್ಮೆ ಸರ್ವೀಸ್ ಮಾಡಿಸುವುದು ಅವಶ್ಯಕ. ಕಾರುಗಳಲ್ಲಿ ಕೆಲವು ಸಮಸ್ಯೆಗಳು ಕಂಡು ಬಂದ ತಕ್ಷಣ ಕಾರುಗಳನ್ನು ಸರ್ವೀಸ್ ಸೆಂಟರ್ ಗಳಿಗೆ ಕೊಂಡೊಯ್ಯುವುದು ಅವಶ್ಯಕ. ಯಾವ ಸಮಸ್ಯೆಗಳು ಕಂಡು ಬಂದರೆ ಸರ್ವೀಸ್ ಗೆ ಕೊಂಡೊಯ್ಯ ಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವಾಹನ ಸಲಹೆ: ಕಾರಿನಲ್ಲಿ ಈ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ಮೆಕಾನಿಕ್ ಸಂಪರ್ಕಿಸಿ

1. ಎಂಜಿನ್ ವಾರ್ನಿಂಗ್ ಲೈಟ್

ಕಾರಿನಲ್ಲಿರುವ ಎಂಜಿನ್ ಬೆಳಕು ಬೆಳಗಿದರೆ, ಕಾರಿನ ಎಂಜಿನ್‌ನಲ್ಲಿ ಸಮಸ್ಯೆ ಉಂಟಾಗಿದೆ ಎಂದು ಅರ್ಥ. ತಕ್ಷಣವೇ ಕಾರಿನ ಎಂಜಿನ್ ಅನ್ನು ಪರಿಶೀಲಿಸಿ ಕಾರನ್ನು ಸರ್ವೀಸ್ ಸೆಂಟರ್ ಗೆ ಕೊಂಡೊಯ್ಯುವುದು ಒಳ್ಳೆಯದು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ವಾಹನ ಸಲಹೆ: ಕಾರಿನಲ್ಲಿ ಈ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ಮೆಕಾನಿಕ್ ಸಂಪರ್ಕಿಸಿ

2. ಬ್ರೇಕಿಂಗ್ ಸಮಸ್ಯೆ

ಯಾವುದೇ ವಾಹನವಿರಲಿ ಆ ವಾಹನಕ್ಕೆ ಬ್ರೇಕಿಂಗ್ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಕಾರಿನಲ್ಲಿರುವ ಸುರಕ್ಷತೆ ದೃಷ್ಟಿಯಿಂದ ಬ್ರೇಕ್ ಗಳು ಸುಸ್ಥಿತಿಯಲ್ಲಿರುವುದು ಬಹಳ ಮುಖ್ಯ. ಗಮನಿಸಬೇಕಾದ ಸಂಗತಿಯೆಂದರೆ ದಿನಗಳು ಕಳೆದಂತೆ ವಾಹನಗಳ ಬ್ರೇಕ್ ಪ್ಯಾಡ್‌ಗಳು ಸ್ವಲ್ಪ ಸ್ವಲ್ಪ ಮುಂದೆ ಜರುಗುತ್ತವೆ. ಬ್ರೇಕ್ ನಲ್ಲಿ ಯಾವುದೇ ಸಮಸ್ಯೆ ಕಂಡು ಬಂದರೆ ತಕ್ಷಣವೇ ಕಾರನ್ನು ಸರ್ವೀಸ್ ಸೆಂಟರ್ ಗೆ ಕೊಂಡೊಯ್ಯಿರಿ.

ವಾಹನ ಸಲಹೆ: ಕಾರಿನಲ್ಲಿ ಈ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ಮೆಕಾನಿಕ್ ಸಂಪರ್ಕಿಸಿ

3. ಪವರ್ ಶಾರ್ಟೇಜ್

ಕಾರು ಚಾಲನೆ ಮಾಡುವಾಗ ಕಾರಿನ ಪವರ್ ನಲ್ಲಿ ವ್ಯತ್ಯಾಸ ಕಂಡು ಬಂದರೆ ಅದು ಲೋ ಎಂಜಿನ್ ಕಂಪ್ರೇಷನ್, ಜ್ಯಾಮ್ಡ್ ಫ್ಯೂಯಲ್ ಫಿಲ್ಟರ್ ರೀತಿಯ ಸಮಸ್ಯೆಗಳಾಗಿರಬಹುದು. ಇದು ಕಾರುಗಳ ಕಾರ್ಯ ಹಾಗೂ ಸುರಕ್ಷತೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷಿಸದೇ ತಕ್ಷಣವೇ ಮೆಕ್ಯಾನಿಕ್ ಗೆ ತೋರಿಸಿದರೆ ಒಳಿತು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ವಾಹನ ಸಲಹೆ: ಕಾರಿನಲ್ಲಿ ಈ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ಮೆಕಾನಿಕ್ ಸಂಪರ್ಕಿಸಿ

4. ಸೋರಿಕೆ

ಅನೇಕ ಬಾರಿ ನೀರು, ಎಂಜಿನ್ ಆಯಿಲ್, ಕೂಲೆಂಟ್ ಸೇರಿದಂತೆ ಬೇರೆ ಯಾವುದೇ ವಸ್ತುಗಳು ಕಾರಿನ ಕೆಳಗೆ ಬೀಳುತ್ತಿರುವುದನ್ನು ಕಾಣಬಹುದು. ಈ ರೀತಿಯ ಸೋರಿಕೆ ಮುಂದೆ ದೊಡ್ಡ ಸಮಸ್ಯೆಯಾಗಬಹುದು. ಈ ಚಿಕ್ಕ ಸಮಸ್ಯೆಯನ್ನು ನಿರ್ಲಕ್ಷಿಸದೇ ಕಾರನ್ನು ತಕ್ಷಣವೇ ಮೆಕ್ಯಾನಿಕ್‌ ಬಳಿಗೆ ಕೊಂಡೊಯ್ಯಿರಿ.

ವಾಹನ ಸಲಹೆ: ಕಾರಿನಲ್ಲಿ ಈ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ಮೆಕಾನಿಕ್ ಸಂಪರ್ಕಿಸಿ

5. ವಿಚಿತ್ರವಾದ ಶಬ್ದ

ಕಾರನ್ನು ಸ್ಟಾರ್ಟ್ ಮಾಡುವಾಗ ಅಥವಾ ಕಾರು ಚಾಲನೆಯಲ್ಲಿದ್ದಾಗ ಯಾವುದೇ ರೀತಿಯ ಶಬ್ದ ಕೇಳಿದರೆ, ಶಬ್ದವು ಎಲ್ಲಿಂದ ಬರುತ್ತಿದೆ ಎಂಬುದನ್ನು ಪರೀಕ್ಷಿಸಿ. ಕೆಲವೊಮ್ಮೆ ಇದರಿಂದ ಯಾವುದೇ ತೊಂದರೆಯಾಗದೇ ಹೋದರೂ, ಕೆಲವೊಮ್ಮೆ ಇದು ಗಂಭೀರ ತೊಂದರೆಯನ್ನುಂಟು ಮಾಡಬಹುದು. ಈ ಶಬ್ದವನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ ಕಾರನ್ನು ಸರ್ವೀಸ್ ಸೆಂಟರ್ ಗೆ ಕೊಂಡೊಯ್ಯಿರಿ.

Most Read Articles

Kannada
English summary
Top 5 problems that needs car service. Read in Kannada.
Story first published: Tuesday, August 18, 2020, 18:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X