ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು!

ಪ್ರಯಾಣಿಕರ ವಾಹನಗಳಲ್ಲಿನ ಸುರಕ್ಷಾ ಸೌಲಭ್ಯಗಳು ಕಳೆದ ಒಂದು ದಶಕದ ಅವಧಿಯಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ಅಗ್ಗದ ಬೆಲೆಯ ವಾಹನಗಳ ಖರೀದಿಗಿಂತಲೂ ಹೆಚ್ಚು ಸುರಕ್ಷತೆಗೆ ಆದ್ಯತೆ ನೀಡುತ್ತಿರುವ ಗ್ರಾಹಕರು ಹೊಸ ಬದಲಾಣೆಯತ್ತ ಮುಖಮಾಡಿದ್ದಾರೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

ಕೆಲವೇ ವರ್ಷಗಳ ಹಿಂದಷ್ಟೇ ಕಾರು ಖರೀದಿಸುವ ಬಹುತೇಕ ಗ್ರಾಹಕರು ಕಾರುಗಳ ಸುರಕ್ಷತೆಗಿಂತಲೂ ಅಗ್ಗದ ಬೆಲೆಗೆ ಲಭ್ಯವಿರುವ ಕಾರುಗಳ ಖರೀದಿಯತ್ತ ಹೆಚ್ಚು ಗಮನಹರಿಸುತ್ತಿದ್ದರು. ಆದ್ರೆ ಇದೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದ್ದು, ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಕಾರುಗಳಿಂತಲೂ ಹೆಚ್ಚು ಉತ್ತಮ ಸುರಕ್ಷೆತೆಯುಳ್ಳ ಕಾರುಗಳ ಖರೀದಿಯತ್ತ ಗ್ರಾಹಕರು ಹೆಚ್ಚಿನ ಒತ್ತು ನೀಡಲಾಗುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

ಯುರೋಪ್ ಎನ್‌ಸಿಎಪಿ ಮಾದರಿಯಲ್ಲೇ ಭಾರತೀಯ ಪ್ರಯಾಣಿಕ ಕಾರುಗಳಿಗೂ ಗರಿಷ್ಠ ಭದ್ರತೆಯನ್ನು ಖಾತ್ರಿಪಡಿಸಲು ಹೊರಟಿರುವ ಭಾರತ ಸರ್ಕಾರವು 2019ರ ಅಕ್ಟೋಬರ್ 1ರಿಂದ ಪ್ರತಿ ಕಾರಿಗೂ ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರಾಂ (ಎನ್‌ಸಿಎಪಿ) ಕಡ್ಡಾಯಗೊಳಿಸಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ರೇಟಿಂಗ್ ಪಡೆದುಕೊಳ್ಳಲು ಸಾಧ್ಯವಿಲ್ಲದ ಕಾರುಗಳ ಮಾರಾಟಕ್ಕೆ ಬ್ರೇಕ್ ಹಾಕಲಾಗುತ್ತಿದ್ದು, ಹೊಸ ನಿಯಮವನ್ನು ಪಾಲಿಸಲು ಸಾಧ್ಯವಾದ ಹಲವಾರು ಕಾರುಗಳು ಈಗಾಗಲೇ ಮಾರುಕಟ್ಟೆಯಿಂದ ಸ್ಥಗಿತಗೊಂಡಿವೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

ಹಾಗಾದ್ರೆ ಎನ್‌ಸಿಎಪಿ ಸಂಸ್ಥೆಯು ನಡೆಸುತ್ತಿರುವ #SAFECARSFORINDIA ಅಭಿಯಾನದಡಿ ಗರಿಷ್ಠ ಸುರಕ್ಷಾ ರೇಟಿಂಗ್ ಪಡೆದುಕೊಂಡಿರುವ ಬಜೆಟ್ ಕಾರುಗಳ ಪೈಕಿ ಅಗ್ರಸ್ಥಾನದಲ್ಲಿರುವ ಟಾಪ್ 5 ಕಾರುಗಳ ಬಗೆಗೆ ಇಲ್ಲಿ ಚರ್ಚಿಸೋಣ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

ಸದ್ಯ ಮಾರುಕಟ್ಟೆಯಲ್ಲಿ ಹಲವಾರು ಐಷಾರಾಮಿ ಕಾರುಗಳು ಗರಿಷ್ಠ ಪ್ರಯಾಣಿಕ ಸುರಕ್ಷತೆಯೊಂದಿಗೆ ಖರೀದಿಗೆ ಲಭ್ಯವಿದ್ದರೂ ಮಧ್ಯಮ ವರ್ಗದ ಗ್ರಾಹಕರಿಗೆ ಅಂತಹ ಕಾರುಗಳನ್ನು ಖರೀದಿಸುವುದು ಕಷ್ಟ ಸಾಧ್ಯ. ಹೀಗಾಗಿ ಬಜೆಟ್ ಬೆಲೆಯಲ್ಲೇ ಖರೀದಿಸಬಹುದಾದ ಅತ್ಯುತ್ತಮ ಸುರಕ್ಷತೆಯುಳ್ಳ ಕಾರುಗಳು ಇದೀಗ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಸುರಕ್ಷಾ ಕಾರು ಮಾದರಿಯಾಗಿ ಗುರುತಿಸಲು ಕನಿಷ್ಠ 3 ಅಂಕಗಳ ಅವಶ್ಯಕತೆಯಿದ್ದು, 5 ಅಂಕಗಳನ್ನು ಗಿಟ್ಟಿಸಿಕೊಂಡಿರುವ ಕಾರುಗಳು ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿವೆ. 5 ಅಂಕಗಳನ್ನು ಪಡೆಯುವಲ್ಲಿ ಬಜೆಟ್ ಬೆಲೆಯ ಕಾರುಗಳು ಸಹ ಯಶಸ್ವಿಯಾಗಿದ್ದು, ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಗಳಾದ ಮಹೀಂದ್ರಾ ಮತ್ತು ಟಾಟಾ ಅಗ್ರಸ್ಥಾನದಲ್ಲಿವೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

01. ಮಹೀಂದ್ರಾ ಎಕ್ಸ್‌ಯುವಿ300

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರುವ ಎಕ್ಸ್‌ಯುವಿ300 ಮಾದರಿಯು ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿದ್ದು, ಬಜೆಟ್ ಬೆಲೆಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಕಾರು ಮಾದರಿಯಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬರಲಿರುವ ಹೊಸ ವಿಮಾ ನೀತಿ..

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

ಮುಂಭಾಗದ ಪ್ರಯಾಣಿಕರ ಸೇಫ್ಟಿ ವಿಭಾಗದಲ್ಲಿ 5 ಸ್ಟಾರ್ ರೇಟಿಂಗ್ ಮತ್ತು ಚೈಲ್ಡ್ ಸೇಫ್ಟಿನಲ್ಲಿ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿರುವ ಎಕ್ಸ್‌ಯುವಿ300 ಮಾದರಿಯು 1.2-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.12.69 ಲಕ್ಷ ಬೆಲೆ ಹೊಂದಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

02. ಟಾಟಾ ನೆಕ್ಸಾನ್

ಟಾಟಾ ನಿರ್ಮಾಣದ ನೆಕ್ಸಾನ್ ಕೂಡಾ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ಅತ್ಯುತ್ತಮ ಬಜೆಟ್ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಮುಂಭಾಗದ ಪ್ರಯಾಣಿಕರ ಸೇಫ್ಟಿ ವಿಭಾಗದಲ್ಲಿ 5 ಸ್ಟಾರ್ ಮತ್ತು ಚೈಲ್ಡ್ ಸೇಫ್ಟಿ ವಿಭಾಗದಲ್ಲಿ 3 ಸ್ಟಾರ್ ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

ಸದ್ಯ ಬಿಎಸ್-6 ಎಂಜಿನ್‌ನೊಂದಿಗೆ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಮಾರಾಟವಾಗುತ್ತಿರುವ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.95 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10.60 ಲಕ್ಷ ಬೆಲೆಯೊಂದಿಗೆ ಖರೀದಿಗೆ ಲಭ್ಯವಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

03. ಟಾಟಾ ಆಲ್‌ಟ್ರೊಜ್

ನೆಕ್ಸಾನ್ ನಂತರ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡ ಟಾಟಾ ಕಾರುಗಳಲ್ಲಿ ಆಲ್‌ಟ್ರೊಜ್ ಕೂಡಾ ಪ್ರಮುಖ ಕಾರು ಮಾದರಿಯಾಗಿದ್ದು, ಇದು ಕೂಡಾ ನೆಕ್ಸಾನ್ ಮಾದರಿಯಲ್ಲೇ ಮುಂಭಾಗದ ಪ್ರಯಾಣಿಕರ ಸೇಫ್ಟಿ ವಿಭಾಗದಲ್ಲಿ 5 ಸ್ಟಾರ್ ಮತ್ತು ಚೈಲ್ಡ್ ಸೇಫ್ಟಿ ವಿಭಾಗದಲ್ಲಿ 3 ಸ್ಟಾರ್ ಪಡೆದುಕೊಂಡಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಮಾರಾಟವಾಗುತ್ತಿರುವ ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.29 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.34 ಲಕ್ಷ ಬೆಲೆಯೊಂದಿಗೆ ಖರೀದಿಗೆ ಲಭ್ಯವಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

04. ಟಾಟಾ ಟಿಗೋರ್ ಮತ್ತು ಟಿಯಾಗೋ

ಟಾಟಾ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಟಿಗೋರ್ ಮತ್ತು ಕಂಪ್ಯಾಕ್ಟ್ ಸೆಡಾನ್ ಮಾದರಿಯಾದ ಟಿಯಾಗೋ ಕೂಡಾ ಉತ್ತಮ ಸುರಕ್ಷತೆಯೊಂದಿಗೆ ಖರೀದಿಗೆ ಲಭ್ಯವಿದ್ದು, ಈ ಎರಡು ಕಾರುಗಳು ಮುಂಭಾಗದ ಪ್ರಯಾಣಿಕರ ಸೇಫ್ಟಿ ವಿಭಾಗದಲ್ಲಿ 4 ಸ್ಟಾರ್ ಮತ್ತು ಚೈಲ್ಡ್ ಸೇಫ್ಟಿ ವಿಭಾಗದಲ್ಲಿ 3 ಸ್ಟಾರ್ ಪಡೆದುಕೊಂಡಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

05. ಫೋಕ್ಸ್‌ವ್ಯಾಗನ್ ಪೊಲೊ

ಜರ್ಮನ್ ಕಾರು ಉತ್ಪಾದನಾ ಕಂಪನಿ ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಮಾರಾಟ ಮಾಡುತ್ತಿರುವ ಪೊಲೊ ಕಾರು ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ಗರಿಷ್ಠ ಸುರಕ್ಷತೆ ಒದಗಿಸುತ್ತಿದ್ದು, ಇದು ಕೂಡಾ ಮುಂಭಾಗದ ಪ್ರಯಾಣಿಕರ ಸೇಫ್ಟಿ ವಿಭಾಗದಲ್ಲಿ 5 ಸ್ಟಾರ್ ಮತ್ತು ಚೈಲ್ಡ್ ಸೇಫ್ಟಿ ವಿಭಾಗದಲ್ಲಿ 3 ಸ್ಟಾರ್ ಪಡೆದುಕೊಂಡಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಸುರಕ್ಷತೆವುಳ್ಳ ಟಾಪ್ 5 ಕಾರುಗಳಿವು..!

ಇನ್ನುಳಿದಂತೆ ಪ್ರಯಾಣಿಕ ಸುರಕ್ಷತೆಯಲ್ಲಿ ಮಹೀಂದ್ರಾ ಮರಾಜೋ, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ಜೆಸ್ಟ್, ಮಾರುತಿ ಎರ್ಟಿಗಾ, ಫೋರ್ಡ್ ಆಸ್ಪೈರ್, ಹೋಂಡಾ ಮೊಬಿಲಿಯೊ, ರೆನಾಲ್ಟ್ ಡಸ್ಟರ್ ಕಾರುಗಳು 3 ಸ್ಟಾರ್ ರೇಟಿಂಗ್‌ನೊಂದಿಗೆ ಉತ್ತಮ ಕಾರು ಮಾದರಿಗಳಾಗಿ ಗುರುತಿಸಿಕೊಂಡಿದ್ದು, ಇವು ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ನೀಡುವಲ್ಲಿ ಸಾಕಷ್ಟು ಸಹಕಾರಿಯಾಗಿವೆ.

Most Read Articles

Kannada
English summary
Top 5 Safest Car In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X