2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಫೆಬ್ರುವರಿ 5ರಿಂದ ದೆಹಲಿಯಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್‌ಪೋ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ವಿವಿಧ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಬಹುನೀರಿಕ್ಷಿತ ಎಸ್‌ಯುವಿ ಕಾರು ಮಾದರಿಗಳ ಪ್ರದರ್ಶನಕ್ಕೆ ಭರ್ಜರಿ ಸಿದ್ದತೆ ನಡೆಸುತ್ತಿವೆ. ಹಾಗಾದ್ರೆ ಪ್ರದರ್ಶನಗೊಳ್ಳಲಿರುವ ಕಾರುಗಳು ಯಾವವು? ಮತ್ತು ಹೊಸ ಕಾರುಗಳ ವಿಶೇಷತೆ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಪಡೆಯಿರಿ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್, ಮಹೀಂದ್ರಾ, ಕಿಯಾ ಮೋಟಾರ್ಸ್, ಸ್ಕೋಡಾ, ರೆನಾಲ್ಟ್ ಸೇರಿದಂತೆ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಗಳು ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ ತಮ್ಮ ಬಹುನೀರಿಕ್ಷಿತ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸಿ ಬಿಡುಗಡೆ ಮಾಡಲಿದ್ದು, 50ಕ್ಕೂ ಹೆಚ್ಚು ಹೊಸ ಕಾರುಗಳು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳುವ ನೀರಿಕ್ಷೆಯಿದೆ. ಇದರಲ್ಲಿ ಕೆಲವು ಕಾರು ಮಾದರಿಗಳು ಪ್ರದರ್ಶನ ನಂತರ ಬಿಡುಗಡೆಯಾಗಲಿದ್ದರೆ ಇನ್ನು ಪರಿಕಲ್ಪನೆ ಮಾದರಿಗಳು ಭವಿಷ್ಯದಲ್ಲಿ ರಸ್ತೆಗಿಳಿಯಲಿವೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಮಾರುತಿ ಸುಜುಕಿ ಕಾರುಗಳು

ದೇಶದ ನಂ.1 ಕಾರು ಉತ್ಪಾದನಾ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ ವಿಟಾರಾ ಬ್ರೆಝಾ ಪೆಟ್ರೋಲ್, ಎಸ್-ಕ್ರಾಸ್ ಪೆಟ್ರೋಲ್ ಮಾದರಿಗಳನ್ನು ಪ್ರದರ್ಶನಗೊಳಿಸಿ ಬಿಡುಗಡೆ ಮಾಡಲಿದ್ದು, ಹೊಸ ಕಾರುಗಳು ಬಿಎಸ್-6 ನಿಯಮದಂತೆ ಅಭಿವೃದ್ದಿಗೊಂಡಿವೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಪ್ರಸ್ತುತ ಮಾರುಕಟ್ಟೆಯಲ್ಲಿ ವಿಟಾರಾ ಬ್ರೆಝಾ ಮತ್ತು ಎಸ್-ಕ್ರಾಸ್ ಕಾರುಗಳು 1.3-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರ ಹೊಂದಿದ್ದು, ಬಿಎಸ್-6 ನಿಯಮದಿಂದಾಗಿ 1.3-ಲೀಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಹೊಸ ನಿಯಮ ಅನುಸಾರ ಸುಧಾರಿತ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಲಿರುವ ಮಾರುತಿ ಹೊಸ ಕಾರುಗಳು ದುಬಾರಿ ಬೆಲೆ ಪಡೆದುಕೊಳ್ಳಲಿವೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಹ್ಯುಂಡೈ ಕಾರುಗಳು

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ನಂತರ ಎರಡನೇ ಸ್ಥಾನದಲ್ಲಿರುವ ಹ್ಯುಂಡೈ ಸಂಸ್ಥೆಯು ತನ್ನ ಜನಪ್ರಿಯ ಕಾರು ಮಾದರಿಯಾದ ಕ್ರೆಟಾ ಫೇಸ್‌ಲಿಫ್ಟ್ ಆವೃತ್ತಿಯನ್ನು ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿ ಮಾರಾಟಕ್ಕೆ ಚಾಲನೆ ನೀಡಲಿದೆ.

ಬಿಎಸ್-6 ನಿಯಮದಿಂದಾಗಿ ಹ್ಯುಂಡೈ ಕೂಡಾ ಕ್ರೆಟಾ ಕಾರಿನಲ್ಲಿ ಸದ್ಯ ಲಭ್ಯವಿರುವ 1.4-ಲೀಟರ್ ಡೀಸೆಲ್, 1.6-ಲೀಟರ್ ಡೀಸೆಲ್ ಮತ್ತು 1.6-ಲೀಟರ್ ಪೆಟ್ರೋಲ್ ಆಯ್ಕೆಗಳನ್ನು ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ತೆಗೆದುಹಾಕಲು ನಿರ್ಧರಿಸಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಜೊತೆಗೆ ಫೇಸ್‌ಲಿಫ್ಟ್ ಕ್ರೆಟಾ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆವೃತ್ತಿಗಿಂತಲೂ ಭಾರೀ ಬದಲಾವಣೆಗಳನ್ನು ಹೊಂದಿದ್ದು, ಹೊಸ ಎಂಜಿನ್ ಆಯ್ಕೆಯಿಂದಾಗಿ ದುಬಾರಿ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಹಾಗೆಯೇ ಹ್ಯುಂಡೈ ನಿರ್ಮಾಣದ ಮತ್ತೊಂದು ಕಾರು ಮಾದರಿಯಾದ ಟಕ್ಸನ್ ಕೂಡಾ ಫೇಸ್‌ಲಿಫ್ಟ್ ಮಾದರಿಯನ್ನು ಪಡೆದುಕೊಳ್ಳಲಿದ್ದು, ಆಟೋ ಎಕ್ಸ್‌ಪೋದಲ್ಲಿ ಹೊಸ ಕಾರಿನ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿವೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಮಹೀಂದ್ರಾ ಕಾರುಗಳು

ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಅಧಿಪತ್ಯ ಸಾಧಿಸಿರುವ ಮಹೀಂದ್ರಾ ಸಂಸ್ಥೆಯು ಸ್ಕಾರ್ಪಿಯೋ, ಎಕ್ಸ್‌ಯುವಿ500 ಮತ್ತು ಥಾರ್ ಕಾರುಗಳ ಮೂಲಕ ಭಾರೀ ಜನಪ್ರಿಯತೆ ಗಳಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ವಿನ್ಯಾಸ ಮತ್ತು ಬಲಿಷ್ಠ ಎಂಜಿನ್ ಪ್ರೇರಿತ 2020ರ ಆವೃತ್ತಿಗಳನ್ನು ಬಿಡುಗಡೆಗೊಳಿಸುತ್ತಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಮಹೀಂದ್ರಾ ಸಂಸ್ಥೆಯು ಸದ್ಯ ಸ್ಕಾರ್ಪಿಯೋ, ಎಕ್ಸ್‌ಯುವಿ500 ಮತ್ತು ಥಾರ್ ನ್ಯೂ ಜನರೇಷನ್ ಆವೃತ್ತಿಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಉನ್ನತಿಕರಿಸುತ್ತಿದ್ದು, ಬಿಎಸ್-6 ಎಂಜಿನ್ ಹೊಂದಿರುವ ಎಕ್ಸ್‌ಯುವಿ300 ಪೆಟ್ರೋಲ್ ಆವೃತ್ತಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇನ್ನುಳಿದ ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300 ಡೀಸೆಲ್ ಮತ್ತು ಥಾರ್ ಕಾರುಗಳನ್ನು ಸಹ ಹೊಸ ನಿಯಮದಂತೆ ಬಿಡುಗಡೆ ಮಾಡುತ್ತಿದ್ದು, ನ್ಯೂ ಜನರೇಷನ್ ಆವೃತ್ತಿಗಳಲ್ಲಿ ಸಾಕಷ್ಟು ಸುಧಾರಿತ ಗುಣಮಟ್ಟದ ಬಿಡಿಭಾಗಗಳು, ಎಂಜಿನ್ ಸೌಲಭ್ಯ ಮತ್ತು ಪರ್ಫಾಮೆನ್ಸ್‌ನಲ್ಲಿ ಗ್ರಾಹಕರ ಆಕರ್ಷಣೆ ಕಾರಣವಾಗಲಿವೆ.

MOST READ: ನಡುರಸ್ತೆಯಲ್ಲೇ ಹೊತ್ತಿ ಉರಿದ ಹೊಚ್ಚ ಹೊಸ ಎಂಜಿ ಹೆಕ್ಟರ್ ಕಾರು..!

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಟಾಟಾ ಮೋಟಾರ್ಸ್ ಕಾರುಗಳು

ಟಾಟಾ ಸಂಸ್ಥೆಯು ಸದ್ಯ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆ ಕಾರಣವಾಗಿದ್ದು, ಹ್ಯಾರಿಯರ್ ನಂತರ ಆಲ್‌ಟ್ರೊಜ್, ನೆಕ್ಸಾನ್ ಎಲೆಕ್ಟ್ರಿಕ್ ಮತ್ತು ಗ್ರಾವಿಟಾಸ್ ಕಾರುಗಳನ್ನು ಬಿಡುಗಡೆಗೆ ಭರ್ಜರಿ ಸಿದ್ದತೆ ನಡೆಸಿದೆ. ಇದರಲ್ಲಿ ಆಲ್‌ಟ್ರೊಜ್ ಕಾರು ಇದೇ ತಿಂಗಳು ಬಿಡುಗಡೆಯಾಗಲಿದ್ದು, ಆಟೋ ಎಕ್ಸ್‌ಪೋದಲ್ಲಿ ಆಲ್‌ಟ್ರೋಜ್ ಎಲೆಕ್ಟ್ರಿಕ್, ನೆಕ್ಸಾನ್ ಎಲೆಕ್ಟ್ರಿಕ್, ಗ್ರಾವಿಟಾಸ್ ಸೇರಿದಂತೆ ಹಲವು ಕಾನ್ಸೆಪ್ಟ್ ಮಾದರಿಗಳನ್ನು ಪ್ರದರ್ಶನಗೊಳ್ಳಲಿವೆ.

MOST READ: ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಇದರಲ್ಲಿ ಹ್ಯಾರಿಯರ್ ವಿನ್ಯಾಸವನ್ನು ಪಡೆದಿರುವ ಗ್ರಾವಿಟಾಸ್ ಕಾರು ಗ್ರಾಹಕರ ಬೇಡಿಕೆಯೆಂತೆ ವಿಶೇಷ ತಾಂತ್ರಿಕ ಸೌಲಭ್ಯವನ್ನು ಪಡೆದುಕೊಂಡಿದ್ದು, ಎಸ್‌ಯುವಿ ಆವೃತ್ತಿಗಳಲ್ಲಿ ಮುಂಚೂಣಿಯಲ್ಲಿರುವ ಫೋರ್ಡ್ ಎಂಡೀವರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಟೊಯೊಟಾ ಫಾರ್ಚೂನರ್‌ ಕಾರಿಗೂ ಗ್ರಾವಿಟಾಸ್ ಪ್ರಬಲ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

MOST READ: ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಕಿಯಾ ಮೋಟಾರ್ಸ್ ಕಾರುಗಳು

ಸೆಲ್ಟೊಸ್ ಬಿಡುಗಡೆಯ ಯಶಸ್ವಿ ನಂತರ ಕಾರ್ನಿವಾಲ್ ಬಿಡುಗಡೆಗೆ ಸಿದ್ದವಾಗುತ್ತಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರಿಗೆ ಪೈಪೋಟಿಯಾಗಿ ಸೊನೆಟ್ ಹೆಸರಿನ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯೊಂದನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ. ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಈಗಾಗಲೇ ವಿವಿಧ ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಸಹ ಪೂರ್ಣಗೊಳಿಸಲಾಗುತ್ತಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಸ್ಟೊನಿಕ್ ಮಾದರಿಯಲ್ಲೇ ಅಭಿವೃದ್ದಿಗೊಂಡಿರುವ ಸೊನೆಟ್ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.7 ಲಕ್ಷದಿಂದ ರೂ.11 ಲಕ್ಷ ಬೆಲೆ ಅಂತರ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಆಟೋ ಎಕ್ಸ್‌ಪೋದಲ್ಲಿ ಹೊಸ ಕಾರಿನ ಎಂಜಿನ್ ಮತ್ತು ಬಿಡುಗಡೆಯ ಅವಧಿಯ ಬಗೆಗೆ ಹೆಚ್ಚಿನ ಮಾಹಿತಿ ದೊರೆಯಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಎಂಜಿ ಮೋಟಾರ್ ಕಾರುಗಳು

ಹೆಕ್ಟರ್ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿರುವ ಎಂಜಿ ಮೋಟಾರ್ ಸಂಸ್ಥೆಯು ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಇದರಲ್ಲಿ 6 ಆಸನ ಸೌಲಭ್ಯವನ್ನು ಹೊಂದಿರುವ ಹೆಕ್ಟರ್ ಪ್ಲಸ್ ಕಾರು ಕೂಡಾ ಒಂದಾಗಿದ್ದು, ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಬಳಿಕ ಖರೀದಿಗೆ ಲಭ್ಯವಾಗಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಹೆಕ್ಟರ್ ಪ್ಲಸ್ ಕಾರಿನಲ್ಲಿ 6 ಆಸನ ಸೌಲಭ್ಯಕ್ಕಾಗಿ ಮೂರನೇ ಸಾಲನ್ನು ನೀಡಲಾಗಿದ್ದು, ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ನೀಡಿರುವುದು ರೋಡ್ ಟೆಸ್ಟಿಂಗ್ ವೇಳೆ ಬಹಿರಂಗಗೊಂಡಿದೆ. ಜೊತೆಗೆ ಹೊಸ ಕಾರಿನ ಹೆಸರನ್ನು ಅಂತಿಮಗೊಳಿಸುವುದಕ್ಕೂ ಮುನ್ನ ಸಾರಿಗೆ ಇಲಾಖೆಯಲ್ಲಿ ದಾಖಲಿಸಲಾಗಿರುವ ನೋಂದಣಿಯಲ್ಲಿ ಹೆಕ್ಟರ್ ಪ್ಲಸ್ ಎನ್ನುವುದು ಬಹಿರಂಗವಾಗಿದ್ದು, ಹೊಸ ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಟಾಟಾ ಹ್ಯಾರಿಯರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಸ್ಕೋಡಾ ಕಾರುಗಳು

ಹೊಸ ಕಾರುಗಳ ಉತ್ಪಾದನೆದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಸ್ಕೋಡಾ ಇಂಡಿಯಾ ಸಂಸ್ಥೆಯು ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ವಿವಿಧ ಮಾದರಿಯ ಆರು ಹೊಸ ಕಾರುಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಇದರಲ್ಲಿ ಮೊದಲ ಹಂತವಾಗಿ ಬಿಡುಗಡೆಯಾಗುವ ಕಾಮಿಕ್, ಟಿ-ರಾಕ್ ಮತ್ತು ಟಿಗ್ವಾನ್ ಆಲ್‌ಸ್ಪೆಸ್ ಮಾದರಿಗಳು ರಸ್ತೆಗಿಳಿಯಲಿದ್ದು, 2020ರ ಆಟೋ ಎಕ್ಸ್‌ಪೋದಲ್ಲೂ ಭಾಗಿಯಾಗುವ ಸಾಧ್ಯತೆಗಳಿವೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಸದ್ಯ ಸ್ಕೋಡಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ರ‍್ಯಾಪಿಡ್ ಸೆಡಾನ್, ಒಕ್ಟಿವಿಯಾ ಸೆಡಾನ್, ಸೂರ್ಪಬ್ ಸೆಡಾನ್ ಮತ್ತು ಕೊಡಿಯಾಕ್ ಎಸ್‌ಯುವಿ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಬಿಡುಗಡೆಯಾಗಲಿರುವ ಆರು ಹೊಸ ಕಾರುಗಳಲ್ಲಿ ಎರಡು ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳಲಾದ ಕಾರು ಮಾದರಿಗಳಾದರೆ ಇನ್ನುಳಿದ ನಾಲ್ಕು ಹೊಸ ಕಾರುಗಳು ಇಂಡಿಯಾ 2.0 ಯೋಜನೆಯಡಿ ಭಾರತದಲ್ಲೇ ನಿರ್ಮಾಣವಾಗಲಿವೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ರೆನಾಲ್ಟ್ ಕಾರುಗಳು

ಟ್ರೈಬರ್ ಮಿನಿ ಎಂಪಿವಿ, ಡಸ್ಟರ್ ಫೇಸ್‌ಲಿಫ್ಟ್ ಮತ್ತು ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆಯ ನಂತರ ಮತ್ತೊಂದು ಹೊಸ ಕಾರು ಆವೃತ್ತಿಗಳ ಬಿಡುಗಡೆಗೆ ಸಿದ್ದವಾಗುತ್ತಿರುವ ರೆನಾಲ್ಟ್ ಸಂಸ್ಥೆಯು ವಿನೂತನ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯೊಂದನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ. ಹ್ಯುಂಡೈ ವೆನ್ಯೂ ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರುಗಳಿಗೆ ಪೈಪೋಟಿಯಾಗಿ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ರಸ್ತೆಗಿಳಿಯಲಿದ್ದು, ಹೆಚ್‌ಬಿಸಿ ಕೋಡ್‌ನೆಮ್ ಆಧಾರದ ಮೇಲೆ ಹೊಸ ಕಾರನ್ನು ಟೆಸ್ಟಿಂಗ್ ಮಾಡಲಾಗುತ್ತಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡಸ್ಟರ್ ಕಾರಿಗಿಂತಲೂ ತುಸು ಸಣ್ಣ ಗಾತ್ರವನ್ನು ಹೊಂದಲಿರುವ ಹೆಚ್‌ಬಿಸಿ ಕಾರು ನಗರ ಪ್ರದೇಶದಲ್ಲಿನ ಪ್ರಯಾಣಕ್ಕಾಗಿ ಸೂಕ್ತ ಆಯ್ಕೆಯಾಗಲಿದ್ದು, ಆಟೋ ಎಕ್ಸ್‌ಪೋದಲ್ಲಿ ಹೊಸ ಕಾರಿನ ಅಧಿಕೃತ ಹೆಸರು ಬಹಿರಂಗವಾಗುವ ಸಾಧ್ಯತೆಗಳಿವೆ. ಕೇವಲ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗಲಿರುವ ರೆನಾಲ್ಟ್ ಹೊಸ ಕಾರು ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾಗಲಿದ್ದು, ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.5.50 ಲಕ್ಷದಿಂದ ರೂ.8 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಗ್ರೇಟ್ ವಾಲ್ ಮೋಟಾರ್ಸ್

ಚೀನಾ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಹೊಸ ಅಧ್ಯಾಯಕ್ಕೆ ಸಜ್ಜಾಗುತ್ತಿದ್ದು, ವಿವಿಧ ಕಾರು ಮಾದರಿಗಳ ಮೂಲಕ ದೇಶಿಯ ಆಟೋ ಉದ್ಯಮದಲ್ಲಿ ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿದೆ. ಇದಕ್ಕೂ ಮುನ್ನ ಮಾರುಕಟ್ಟೆ ಅಧ್ಯಯನ ನಡೆಸಿರುವ ಗ್ರೇಟ್ ವಾಲ್ ಸಂಸ್ಥೆಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, 2020ರ ಆಟೋ ಎಕ್ಸ್‌ಪೋದಲ್ಲಿ ಕೆಲವು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲು ನಿರ್ಧರಿಸಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಗ್ರೇಟ್ ವಾಲ್ ಮೋಟಾರ್ಸ್ ಅಂಗಸಂಸ್ಥೆಯಾದ ಹವಾಲ್ ನಿರ್ಮಾಣದ ಹೆಚ್6 ಎನ್ನುವ ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಯು ಭಾರತದಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದ್ದು, ಎಂಜಿ ಹೆಕ್ಟರ್, ಜೀಪ್ ಕಂಪಾಸ್, ಕಿಯಾ ಸೆಲ್ಟೊಸ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ಪೈಪೋಟಿಯಾಗಿ ಹೆಚ್6 ರಸ್ತೆಗಿಳಿಯಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಮರ್ಸಿಡಿಸ್ ಬೆಂಝ್

ದೇಶದ ಜನಪ್ರಿಯ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ಸಂಸ್ಥೆಯು 2020ರ ಆಟೋ ಎಕ್ಸ್‌ಪೋ ಭಾಗಿಯಾಗುತ್ತಿದ್ದು, ನಾಲ್ಕನೇ ತಲೆಮಾರಿನ ಜಿಎಲ್ಇ ಮತ್ತು ಮೂರನೇ ತಲೆಮಾರಿನ ಜಿಎಲ್ಎಸ್ ಎಸ್‌ಯುವಿ ಕಾರುಗಳನ್ನು ಪ್ರದರ್ಶನಗೊಳಿಸಿ ಬಿಡುಗಡೆ ಮಾಡಲಿದೆ. ಈ ಬಾರಿ ಹೊಸ ಕಾರುಗಳಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬಿಡಿಭಾಗಗಳು ಮತ್ತು ವಿವಿಧ ಮಾದರಿಯ ಎಂಜಿನ್ ಆಯ್ಕೆಗಳು ಗಮನಸೆಳೆಯಲಿದ್ದು, ಬೆಲೆ ಕೂಡಾ ದುಬಾರಿಯಾಗಲಿರಲಿವೆ.

Most Read Articles

Kannada
English summary
Top SUVs Expected To Be Showcased At The Delhi Auto Expo 2020. Read more in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X