ಜೂನ್ ಅವಧಿಯ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದಕೊಂಡ ಟೊಯೊಟಾ

ಲಾಕ್‍ಡೌನ್ ಸಡಿಲಿಕೆ ನಂತರ ಹೊಸ ವಾಹನಗಳ ಮಾರಾಟದಲ್ಲಿ ತುಸು ಚೇತರಿಕೆ ಕಂಡುಬಂದಿದ್ದು, ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದ ಬಹುಕೇತ ಆಟೋ ಕಂಪನಿಗಳು ಜೂನ್ ಅವಧಿಯ ವಾಹನ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

ಜೂನ್ ಅವಧಿಯ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದಕೊಂಡ ಟೊಯೊಟಾ

ಕರೋನಾ ವೈರಸ್ ಅಬ್ಬರದ ನಡುವೆಯೂ ಆಟೋ ಕಂಪನಿಗಳು ವಾಹನ ಮಾರಾಟವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವು ಹೊಸ ಸುರಕ್ಷಾ ಕ್ರಮಗಳನ್ನು ಪ್ರಕಟಿಸುವ ಮೂಲಕ ವ್ಯಾಪಾರ ವಹಿವಾಟು ಮುಂದುವರಿಸಿದ್ದು, ಟೊಯೊಟಾ ಕಂಪನಿಯು ಕೂಡಾ ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಜೂನ್ ಅವಧಿಯ ಹೊಸ ಕಾರುಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಜೂನ್ ಅವಧಿಯ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದಕೊಂಡ ಟೊಯೊಟಾ

ಲಾಕ್‌ಡೌನ್‌ನಿಂದಾಗಿ ಸಂಪೂರ್ಣವಾಗಿ ನೆಲಕಚ್ಚಿದ ಹೊಸ ವಾಹನಗಳ ಮಾರಾಟವು ಲಾಕ್‌ಡೌನ್ ಸಡಿಲಿಕೆ ನಂತರವೂ ವೈರಸ್ ಭೀತಿ ಹಿನ್ನಲೆಯಲ್ಲಿ ವಾಹನ ಮಾರಾಟವು ಸಾಕಷ್ಟು ಹಿನ್ನಡೆ ಅನುಭವಿಸಿತ್ತು.

ಜೂನ್ ಅವಧಿಯ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದಕೊಂಡ ಟೊಯೊಟಾ

ಸದ್ಯದ ಪರಿಸ್ಥಿತಿಯಲ್ಲಿ ಕರೋನಾ ಅಬ್ಬರ ಹೆಚ್ಚಿದ್ದರೂ ಕೂಡಾ ಸುರಕ್ಷಿತ ವಾಹನ ಮಾರಾಟಕ್ಕಾಗಿ ಆರಂಭಿಸಲಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಆಟೋ ಕಂಪನಿಗಳಿಗೆ ವರವಾಗಿದ್ದು, ಸುರಕ್ಷಿತ ವಾಹನ ಖರೀದಿ ಗ್ರಾಹಕರೂ ಕೂಡಾ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಜೂನ್ ಅವಧಿಯ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದಕೊಂಡ ಟೊಯೊಟಾ

ಹೀಗಾಗಿ ಮೇ ಅವಧಿಗಿಂತಲೂ ಇದೀಗ ವೈರಸ್ ಹೆಚ್ಚಿದ್ದರೂ ಹೊಸ ವಾಹನಗಳ ಮಾರಾಟ ಪ್ರಮಾಣವು ಸಾಕಷ್ಟು ಏರಿಕೆಯಾಗಿದ್ದು, ಟೊಯೊಟಾ ಕಂಪನಿಯು ಜೂನ್ ಅವಧಿಯಲ್ಲಿ ಒಟ್ಟು 3,866 ಕಾರುಗಳನ್ನು ಮಾರಾಟ ಮಾಡಿದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಜೂನ್ ಅವಧಿಯ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದಕೊಂಡ ಟೊಯೊಟಾ

ಕಳೆದ ತಿಂಗಳು ಮೇ ಅವಧಿಯಲ್ಲಿ ಕೇವಲ 1,639 ಕಾರುಗಳನ್ನು ಮಾರಾಟ ಮಾಡಿದ್ದ ಟೊಯೊಟಾ ಕಂಪನಿಯು ಜೂನ್ ಅವಧಿಯ ಕಾರು ಮಾರಾಟದಲ್ಲಿ ಶೇ.235ರಷ್ಟು ಮುನ್ನಡೆ ಸಾಧಿಸುವ ಮೂಲಕ ಕಾರು ಮಾರಾಟವನ್ನು ಸುಧಾರಿಸಲು ಗರಿಷ್ಠ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಜೂನ್ ಅವಧಿಯ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದಕೊಂಡ ಟೊಯೊಟಾ

ಇನ್ನು ಲಾಕ್‌ಡೌನ್‌ನಿಂದ ತಗ್ಗಿರುವ ಹೊಸ ವಾಹನ ಮಾರಾಟವನ್ನು ಸುಧಾರಿಸಲು ಹಲವು ಆಫರ್‌ಗಳನ್ನು ಸಹ ನೀಡಲಾಗುತ್ತಿದ್ದು, ಗರಿಷ್ಠ ಅವಧಿಗಾಗಿ ಲೋನ್ ಸೌಲಭ್ಯಗಳು, ಆಯ್ದ ಕಾರುಗಳ ಮೇಲೆ ಕ್ಯಾಶ್‌ಬ್ಯಾಕ್ ಆಫರ್ ಮತ್ತು ಕನಿಷ್ಠ ಪ್ರಮಾಣದ ಇಎಂಐ ಸೌಲಭ್ಯಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಜೂನ್ ಅವಧಿಯ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದಕೊಂಡ ಟೊಯೊಟಾ

ಟೊಯೊಟಾ ಕೂಡಾ ಕಾರು ಮಾರಾಟ ಸುಧಾರಿಸುವತ್ತ ಹಲವು ಕ್ರಮಗಳನ್ನು ಕೈಗೊಂಡಿದ್ದು, ತನ್ನ ಜನಪ್ರಿಯ ಕಾರು ಮಾದರಿಗಳಾದ ಗ್ಲಾಂಝಾ ಮತ್ತು ಯಾರಿಸ್ ಕಾರು ಖರೀದಿ ಮೇಲೆ ವಿವಿಧ ಮಾದರಿಯ ಆಫರ್ ಘೋಷಿಸಿದೆ.

ಜೂನ್ ಅವಧಿಯ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದಕೊಂಡ ಟೊಯೊಟಾ

ಹೊಸ ಆಫರ್‌ಗಳಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಖರೀದಿಯ ಮೇಲೆ ರೂ.15 ಸಾವಿರದಷ್ಟು ಕ್ಯಾಶ್‌ಬ್ಯಾಕ್, ಎಕ್ಸ್‌ಚೆಂಜ್ ಬೋನಸ್ ನೀಡಲಾಗುತ್ತಿದ್ದು, ಹೊಸ ಆಫರ್ ಅನ್ನು ಸಿಮೀತ ಅವಧಿಗಾಗಿ ಮಾತ್ರವೇ ನೀಡಲಾಗುತ್ತಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಜೂನ್ ಅವಧಿಯ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದಕೊಂಡ ಟೊಯೊಟಾ

ಹಾಗೆಯೇ ಮತ್ತೊಂದು ಕಾರು ಮಾದರಿಯಾದ ಯಾರಿಸ್ ಸೆಡಾನ್ ಕಾರು ಖರೀದಿಯ ಮೇಲೆ ರೂ.72 ಸಾವಿರದಷ್ಟು ಆಫರ್ ಘೋಷಿಸಲಾಗಿದ್ದು, ಕರೋನಾ ವಾರಿಯರ್ಸ್‌ಗಾಗಿ ಪ್ರತ್ಯೇಕವಾಗಿ ರೂ. 32,500 ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Registers 235% Growth In Monthly Car Sales. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X