ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಸುಜುಕಿ ಯುರೋಪ್ ಮಾರುಕಟ್ಟೆಯಲ್ಲಿ ಸ್ವೇಸ್ ಹೈಬ್ರಿಡ್ ಕಾರನ್ನು ಅನಾವರಣಗೊಳಿಸಿದೆ. ಸುಜುಕಿ ಸ್ವೇಸ್ ಕಾರು ಟೊಯೊಟಾ ಕಂಪನಿಯ ಕೊರೊಲ್ಲಾ ಟೂರಿಂಗ್ ಸ್ಪೋರ್ಟ್ಸ್ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾಗಿದೆ.

ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಟೊಯೊಟಾ ಕಿರ್ಲೊಸ್ಕರ್ ಮೋಟರ್ ಹಾಗೂ ಮಾರುತಿ ಸುಜುಕಿ ಕಂಪನಿಗಳು 2017ರಲ್ಲಿ ಜಂಟಿ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ ಟೊಯೊಟಾ ಕಂಪನಿ ಹಾಗೂ ಮಾರುತಿ ಸುಜುಕಿ ಕಂಪನಿಗಳು ತಮ್ಮ ಕಾರುಗಳನ್ನು ಒಬ್ಬರಿಗೊಬ್ಬರು ತಮ್ಮ ಕಂಪನಿಗಳ ಬ್ಯಾಡ್ಜ್ ಅಡಿ ತಯಾರಿಸಿ ಬಿಡುಗಡೆಗೊಳಿಸಿ, ಮಾರಾಟ ಮಾಡಬಹುದು. ಇದರಂತೆ ಕಳೆದ ವರ್ಷ ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಕಂಪನಿಯ ಬಲೆನೊ ಕಾರ್ ಅನ್ನು ಗ್ಲಾಂಜಾ ಹೆಸರಿನಲ್ಲಿ ತಯಾರಿಸಿ ಬಿಡುಗಡೆಗೊಳಿಸಿತ್ತು.

ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಟೊಯೊಟಾದ ಸಹಭಾಗಿತ್ವದಲ್ಲಿ ತಯಾರದ ಎರಡನೇ ರಿಬ್ಯಾಡ್ ಕಾರು ಸುಜುಕಿ ಸ್ವೇಸ್ ಆಗಿದೆ. ಈ ಕಟ್ಟುನಿಟ್ಟಾದ ಯುರೋ ಮಾನದಂಡಗಳನ್ನು ಅನುಸರಿಸಲು ಸುಜುಕಿ ಎಲೆಕ್ಟ್ರಿಕ್ ಮೋಟಾರ್ ನೊಂದಿಗೆ ಬರಲಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಜಪಾನ್ ಮೂಲದ ಎರಡು ದಿಗ್ಗಜ ಕಂಪನಿಗಳಾದ ಸುಜುಕಿ ಮತ್ತು ಟೊಯೊಟಾ ಕಂಪನಿಯು ಸಹಭಾಗಿತ್ವದಲ್ಲಿ ಈ ಸ್ವೇಸ್ ಹೈಬ್ರಿಡ್ ಮಾದರಿಯನ್ನು ಅಭಿವೃದ್ದಿಪಡಿಸಲಾಗಿದೆ. ಕಾಂಪ್ಯಾಕ್ಟ್ ವ್ಯಾಗನ್ ಸುಜುಕಿ ಎ-ಕ್ರಾಸ್ ಅನ್ನು ಈ ಹೊಸ ಸ್ವೇಸ್ ಕಾರು ಆಧರಿಸಿದೆ.

ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಯುರೋಪಿನ ಸುಜುಕಿಯ ಪೋರ್ಟ್ಫೋಲಿಯೊಗೆ ವ್ಯಾಗನ್ ಬಾಡಿ ಸ್ಟೈಲ್ ಅನ್ನು ತರಲು ಸ್ವೇಸ್ ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಟೊಯೊಟಾ ಕೊರೊಲ್ಲಾ ಟೂರಿಂಗ್ ಸ್ಪೋರ್ಟ್ಸ್ ಮಾದರಿಗೆ ಹೋಲಿಸಿದರೆ ಬ್ಯಾಡ್ಜ್ ವಿನಿಮಯದ ಜೊತೆಗೆ ಮುಂಭಾಗದ ಬಂಪರ್ ಸ್ವಲ್ಪ ನವೀಕರಣವನ್ನು ಪಡೆದುಕೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಸುಜುಕಿ ಸ್ವೇಸ್ ಕಾರಿನಲ್ಲಿ 1.8-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇನ್ನು ಇದರೊಂದಿಗೆ ಇರುವ ಎಲೆಕ್ಟ್ರಿಕ್ ಮೋಟಾರ್ ನೊಂದಿಗೆ ಸಂಯೋಜಿತವಾಗಿ 120 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಎಲೆಕ್ಟ್ರಿಕ್ ಮೋಡ್ ನಲ್ಲಿ 71 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ 3.6 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುವುದರಿಂದ ಇದು ಚಾಲನಾ ಸನ್ನಿವೇಶವನ್ನು ಆಧರಿಸಿ ಎಲೆಕ್ಟ್ರಿಕ್ ಮೋಟರ್, ಐಸಿ-ಎಂಜಿನ್ ಅಥವಾ ಎರಡನ್ನೂ ಬಳಸಿ ಪವರ್ ಅನ್ನು ವರ್ಗಾಯಿಸುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಸುಜುಕಿ ಸ್ವೇಸ್ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಸುಜುಕಿ ಸ್ವೇಸ್ ಕಾರನ್ನು ಮುಂದಿನ ವಾರಗಳಲ್ಲಿ ಯುರೋಪಿಯನ್ ಮಾರುಗಳಲ್ಲಿ ಬಿಡುಗಡೆಯಾಗಲಿವೆ. ಈ ವೇಳೆ ಹೊಸ ಸುಜುಕಿ ಸ್ವೇಸ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗುತ್ತದೆ.

ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸುಜುಕಿ ಕಂಪನಿಯು ಎಕ್ರಾಸ್ ಎಸ್‌ಯುವಿಯನ್ನು ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಈ ಎಕ್ರಾಸ್ ಎಸ್‍ಯುವಿಯನ್ನು ಕೂಡ ಎರಡು ದಿಗ್ಗಜ ಕಂಪನಿಗಳಾದ ಸುಜುಕಿ ಮತ್ತು ಟೊಯೊಟಾ ಕಂಪನಿಯ ಸಹಭಾಗಿತ್ವದಲ್ಲಿ ಈ ಎಕ್ರಾಸ್ ಎಸ್‍ಯುವಿಯನ್ನು ಅಭಿವೃದ್ದಿಪಡಿಸಲಾಗಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಸುಜುಕಿ ಎಕ್ರಾಸ್ ಎಸ್‍ಯುವಿಯಲ್ಲಿ 2.5-ಲೀಟರ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿದೆ. ಇದು 173 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ.

ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಸುಜುಕಿ ವಿಟಾರಾ ಬ್ರೇಝಾ ಮಾದರಿಯ ರಿಬ್ಯಾಡ್ಜ್ ಆವೃತ್ತಿ ಅರ್ಬನ್ ಕ್ರೂಸರ್ ಅನ್ನು ಇದೇ ತಿಂಗಳ 23ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಇನ್ನು ಹೊಸ ಸುಜುಕಿ ಸ್ವೇಸ್ ಕಾರು ಶೀಘ್ರದಲ್ಲೇ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
Suzuki Swace Hybrid (Rebadged Toyota Corolla Touring) Unveiled. Read In Kannada.
Story first published: Wednesday, September 16, 2020, 20:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X