ಯಾರಿಸ್ ಕಾರಿನ ಬೆಲೆ ಹೆಚ್ಚಳದೊಂದಿಗೆ ಪ್ರಮುಖ ವೆರಿಯೆಂಟ್ ಸ್ಥಗಿತಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಈಗಾಗಲೇ ತನ್ನ ಪ್ರಮುಖ ಕಾರು ಮಾದರಿಗಳನ್ನು ಬಿಎಸ್-6 ಎಮಿಷನ್‌ನೊಂದಿಗೆ ಮಾರಾಟ ಮಾಡುತ್ತಿದ್ದು, ಹೊಸ ಎಂಜಿನ್‌ನಿಂದಾಗಿ ಬಿಎಸ್-6 ಕಾರುಗಳ ಬೆಲೆ ಹೆಚ್ಚಳ ಮಾಡಿರುವ ಟೊಯೊಟಾ ಕಂಪನಿಯು ಯಾರಿಸ್ ಕಾರಿನಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಪರಿಚಯಿಸಿದೆ.

ಯಾರಿಸ್ ಕಾರಿನ ಬೆಲೆ ಹೆಚ್ಚಳದೊಂದಿಗೆ ಪ್ರಮುಖ ವೆರಿಯೆಂಟ್ ಸ್ಥಗಿತಗೊಳಿಸಿದ ಟೊಯೊಟಾ

ಹೊಸ ದರ ಪಟ್ಟಿಯಲ್ಲಿ ಯಾರಿಸ್ ಸೆಡಾನ್ ಕಾರು ಹೊಸ ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಭಾರೀ ಪ್ರಮಾಣದ ಬೆಲೆ ಹೆಚ್ಚಳ ಪಡೆದುಕೊಂಡಿದ್ದು, ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯ ಆಧಾರದ ಕೆಲವು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಬಿಎಸ್-6 ಅಪ್‌ಡೇಟ್ ನಂತರ ಯಾರಿಸ್ ಕಾರಿನಲ್ಲಿ ಐದು ಮ್ಯಾನುವಲ್ ಮತ್ತು ಆರು ಆಟೋಮ್ಯಾಟಿಕ್ ಆವೃತ್ತಿಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.

ಯಾರಿಸ್ ಕಾರಿನ ಬೆಲೆ ಹೆಚ್ಚಳದೊಂದಿಗೆ ಪ್ರಮುಖ ವೆರಿಯೆಂಟ್ ಸ್ಥಗಿತಗೊಳಿಸಿದ ಟೊಯೊಟಾ

ಯಾರಿಸ್ ಕಾರು ಪೆಟ್ರೋಲ್ ಆವೃತ್ತಿಯನ್ನು ಮಾತ್ರ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಮ್ಯಾನುವಲ್ ಅಥವಾ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಮಾತ್ರವೇ ಖರೀದಿಸಬಹುದಾಗಿದೆ.

ಯಾರಿಸ್ ಕಾರಿನ ಬೆಲೆ ಹೆಚ್ಚಳದೊಂದಿಗೆ ಪ್ರಮುಖ ವೆರಿಯೆಂಟ್ ಸ್ಥಗಿತಗೊಳಿಸಿದ ಟೊಯೊಟಾ

ಈ ಮೊದಲು ಮ್ಯಾನುವಲ್ ಆವೃತ್ತಿಯಲ್ಲಿ ಏಳು ಮತ್ತು ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಏಳು ವೆರಿಯೆಂಟ್ ಹೊಂದಿದ್ದ ಯಾರಿಸ್ ಕಾರು ಬಿಎಸ್-6 ನಂತರ ಮ್ಯಾನುವಲ್ ವರಿಯೆಂಟ್‌ನಲ್ಲಿ ವಿ, ವಿಎಕ್ಸ್ ಸ್ಥಗಿತಗೊಳಿಸಲಾಗಿದ್ದು, ಆಟೋಮ್ಯಾಟಿಕ್ ಆವೃತ್ತಿಯಲ್ಲಿ ವಿ ಮಾದರಿಯನ್ನು ಸ್ಥಗಿತಗೊಳಿಸಲಾಗಿದೆ.

ಯಾರಿಸ್ ಕಾರಿನ ಬೆಲೆ ಹೆಚ್ಚಳದೊಂದಿಗೆ ಪ್ರಮುಖ ವೆರಿಯೆಂಟ್ ಸ್ಥಗಿತಗೊಳಿಸಿದ ಟೊಯೊಟಾ

ಹೊಸ ಎಂಜಿನ್ ನಂತರ ಸೆಡಾನ್ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.86 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನ ರೂ. 14.30 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಹೊಸ ಕಾರು ಬಿಎಸ್-4 ಮಾದರಿಗಿಂತಲೂ ಭಾರೀ ಪ್ರಮಾಣದಲ್ಲಿ ಬೆಲೆ ಹೆಚ್ಚಳ ಪಡೆದುಕೊಂಡಿದೆ.

ಯಾರಿಸ್ ಕಾರಿನ ಬೆಲೆ ಹೆಚ್ಚಳದೊಂದಿಗೆ ಪ್ರಮುಖ ವೆರಿಯೆಂಟ್ ಸ್ಥಗಿತಗೊಳಿಸಿದ ಟೊಯೊಟಾ

ಬೆಲೆ ಹೆಚ್ಚಳ ನಂತರ ಯಾರಿಸ್ ಕಾರಿನ ಬೆಲೆಯಲ್ಲಿ ಆರಂಭಿಕವಾಗಿ ರೂ. 10 ಸಾವಿರ ಮತ್ತು ಮಧ್ಯಮ ಕ್ರಮಾಂಕದ ಜೆ ಎಂಟಿ/ಸಿವಿಟಿ ಕಾರಿನ ಬೆಲೆಯಲ್ಲಿ ರೂ.1.68 ಲಕ್ಷ ಬೆಲೆ ಹೆಚ್ಚಿಸಲಾಗಿದ್ದು, ಯಾರಿಸ್ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಯಾರಿಸ್ ಕಾರಿನ ಬೆಲೆ ಹೆಚ್ಚಳದೊಂದಿಗೆ ಪ್ರಮುಖ ವೆರಿಯೆಂಟ್ ಸ್ಥಗಿತಗೊಳಿಸಿದ ಟೊಯೊಟಾ

1.5-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, 106-ಬಿಎಚ್‌ಪಿ ಮತ್ತು 140-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಯಾರಿಸ್ ಕಾರಿನ ಬೆಲೆ ಹೆಚ್ಚಳದೊಂದಿಗೆ ಪ್ರಮುಖ ವೆರಿಯೆಂಟ್ ಸ್ಥಗಿತಗೊಳಿಸಿದ ಟೊಯೊಟಾ

ಇನ್ನು ಟೊಯೊಟಾ ಕಂಪನಿಯು ತನ್ನ ಬಹುತೇಕ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿದ್ದು, ಬಿಎಸ್-6 ಎಂಜಿನ್ ಮಾದರಿಗಳ ಬಿಡುಗಡೆಯ ನಂತರ ಎರಡನೇ ಬಾರಿಗೆ ಬೆಲೆಯಲ್ಲಿ ಹೆಚ್ಚಳ ಪಡೆದುಕೊಂಡಿವೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಯಾರಿಸ್ ಕಾರಿನ ಬೆಲೆ ಹೆಚ್ಚಳದೊಂದಿಗೆ ಪ್ರಮುಖ ವೆರಿಯೆಂಟ್ ಸ್ಥಗಿತಗೊಳಿಸಿದ ಟೊಯೊಟಾ

ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಜೊತೆಗೆ ಹೈಬ್ರಿಡ್ ಕಾರು ಮಾದರಿಗಳ ಬೆಲೆಯಲ್ಲೂ ಹೆಚ್ಚಳ ಮಾಡಲಾಗಿದ್ದು, ಟೊಯೊಟಾ ನಿರ್ಮಾಣದ ಗ್ಲಾಂಝಾ, ಇನೋವಾ ಕ್ರಿಸ್ಟಾ, ಕ್ಯಾಮ್ರಿ ಮತ್ತು ವೆಲ್‌ಫೈರ್ ಮಾದರಿಯು ಬೆಲೆ ಹೆಚ್ಚಳ ಪಡೆದುಕೊಂಡಿವೆ. ಬಿಎಸ್-6 ಎಂಜಿನ್ ಜೋಡಣೆಯ ನಂತರ ಇದು ಎರಡನೇ ಬಾರಿಗೆ ಬೆಲೆ ಏರಿಕೆಯಾಗಿದ್ದು, ಲಾಕ್‌ಡೌನ್ ಸಡಿಲಿಕೆ ನಂತರ ಕಾರು ಖರೀದಿಯ ಯೋಜನೆಯಲ್ಲಿದ್ದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

Most Read Articles

Kannada
English summary
Toyota Yaris Price Increase Announced: Select Variants Discontinued. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X