ಶುರುವಾಯ್ತು ಬಿ‍ಎಸ್ 6 ಟೊಯೊಟಾ ಫಾರ್ಚೂನರ್ ಬುಕ್ಕಿಂಗ್

ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಟೊಯೊಟಾ ಫಾರ್ಚೂನರ್ ಎಸ್‍‍‍ಯುವಿಯನ್ನು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ದೇಶಾದ್ಯಂತವಿರುವ ಕೆಲವು ಡೀಲರ್‍‍ಗಳು ಈಗಾಗಲೇ ಈ ಎಸ್‍‍ಯುವಿಯ ಅನಧಿಕೃತ ಬುಕ್ಕಿಂಗ್‍ಗಳನ್ನು ಆರಂಭಿಸಿದ್ದಾರೆ.

ಶುರುವಾಯ್ತು ಬಿ‍ಎಸ್ 6 ಟೊಯೊಟಾ ಫಾರ್ಚೂನರ್ ಬುಕ್ಕಿಂಗ್

ಹೊಸ ಫಾರ್ಚೂನರ್ ಎಸ್‍‍‍ಯುವಿಯಲ್ಲಿ 2.8 ಲೀಟರಿನ ಟರ್ಬೊ ಬಿಎಸ್ 6 ಡೀಸೆಲ್ ಎಂಜಿನ್ ಹಾಗೂ 2.7 ಲೀಟರಿನ ಬಿ‍ಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. 2.8 ಲೀಟರಿನ 4 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ 174 ಬಿ‍‍ಹೆಚ್‍‍ಪಿ ಪವರ್ ಹಾಗೂ 420 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಶುರುವಾಯ್ತು ಬಿ‍ಎಸ್ 6 ಟೊಯೊಟಾ ಫಾರ್ಚೂನರ್ ಬುಕ್ಕಿಂಗ್

ಈ ಎಂಜಿನ್ ಅನ್ನು ಇನ್ನು ಮುಂದೆ ಟೊಯೊಟಾ ಇನೊವಾ ಕ್ರಿಸ್ಟಾದಲ್ಲಿ ಬಳಸುವುದಿಲ್ಲ. 2.7 ಲೀಟರಿನ 4 ಸಿಲಿಂಡರ್ ಬಿಎಸ್ 6 ಪೆಟ್ರೋಲ್ ಎಂಜಿನ್ 163 ಬಿ‍‍ಹೆಚ್‍‍ಪಿ ಪವರ್ ಹಾಗೂ 245 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಶುರುವಾಯ್ತು ಬಿ‍ಎಸ್ 6 ಟೊಯೊಟಾ ಫಾರ್ಚೂನರ್ ಬುಕ್ಕಿಂಗ್

ಈ ಎರಡೂ ಎಂಜಿನ್‍‍ಗಳಲ್ಲಿ 6 ಸ್ಪೀಡಿನ ಮ್ಯಾನುವಲ್ ಹಾಗೂ 6 ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಗಳನ್ನು ನೀಡಲಾಗಿದೆ. ಡೀಸೆಲ್ ಎಂಜಿನ್‍‍ಗಳಲ್ಲಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನಿಂದಾಗಿ 30 ಎನ್‍ಎಂ ಟಾರ್ಕ್ ಹೆಚ್ಚು ಉತ್ಪಾದನೆಯಾಗುತ್ತದೆ.

ಶುರುವಾಯ್ತು ಬಿ‍ಎಸ್ 6 ಟೊಯೊಟಾ ಫಾರ್ಚೂನರ್ ಬುಕ್ಕಿಂಗ್

ಡೀಸೆಲ್ ಎಂಜಿನ್‍‍ನಲ್ಲಿ ಆಲ್ ವ್ಹೀಲ್ ಡ್ರೈವ್ ಹಾಗೂ ರೇರ್ ವ್ಹೀಲ್ ಡ್ರೈವ್‍‍ಗಳನ್ನು ನೀಡಲಾಗುವುದು. ಇಂಟಿರಿಯರ್ ಬಗ್ಗೆ ಹೇಳುವುದಾದರೆ ಡ್ಯಾಶ್‍‍ಬೋರ್ಡ್ ಡಾರ್ಕ್ ಬ್ರೌನ್ ಹಾಗೂ ಬೀಜ್ ಬಣ್ಣಗಳನ್ನು ಹೊಂದಿರಲಿದೆ.

ಶುರುವಾಯ್ತು ಬಿ‍ಎಸ್ 6 ಟೊಯೊಟಾ ಫಾರ್ಚೂನರ್ ಬುಕ್ಕಿಂಗ್

ಇವುಗಳ ಜೊತೆಗೆ ನ್ಯಾವಿಗೇಶನ್ ಹೊಂದಿರುವ 7 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ, ಪೆಡಲ್‍‍ಶಿಫ್ಟರ್, 7 ಏರ್‍‍ಬ್ಯಾಗ್, ಬ್ರೇಕ್ ಅಸಿಸ್ಟ್ ಹೊಂದಿರುವ ವೆಹಿಕಲ್ ಸ್ಟಾಬಿಲಿಟಿ, ಹಿಲ್ ಅಸಿಸ್ಟ್ ಕಂಟ್ರೋಲ್, ಇಬಿಡಿ ಹೊಂದಿರುವ ಎ‍‍ಬಿ‍ಎಸ್ ನೀಡಲಾಗುವುದು.

ಶುರುವಾಯ್ತು ಬಿ‍ಎಸ್ 6 ಟೊಯೊಟಾ ಫಾರ್ಚೂನರ್ ಬುಕ್ಕಿಂಗ್

ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಫಾರ್ಚೂನರ್ ಎಸ್‍‍ಯುವಿಯ ಬೆಲೆಯು ಬಿ‍ಎಸ್ 4 ಎಂಜಿನ್ ಹೊಂದಿದ್ದ ಎಸ್‍‍ಯುವಿಯ ಬೆಲೆಗಿಂತ ಹೆಚ್ಚಿನ ಪ್ರಮಾಣದಲ್ಲಿರಲಿದೆ. ಟೊಯೊಟಾ ಇನೊವಾ ಡೀಸೆಲ್ ಮಾದರಿಯ ಬೆಲೆಯನ್ನು ರೂ.39,000 ದಿಂದ ರೂ.1.12 ಲಕ್ಷದವರೆಗೂ ಏರಿಕೆ ಮಾಡಲಾಗಿದೆ.

ಶುರುವಾಯ್ತು ಬಿ‍ಎಸ್ 6 ಟೊಯೊಟಾ ಫಾರ್ಚೂನರ್ ಬುಕ್ಕಿಂಗ್

ಇದರಿಂದಾಗಿ ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಫಾರ್ಚೂನರ್ ಬೆಲೆಯು ಸಹ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ. ಮಾರುಕಟ್ಟೆಯಲ್ಲಿರುವ ಬಿ‍ಎಸ್ 4 ಎಂಜಿನ್ ಹೊಂದಿರುವ ಫಾರ್ಚೂನರ್ ಎಸ್‍‍ಯುವಿಯ ಪೆಟ್ರೋಲ್ ಆವೃತ್ತಿಯ ಬೆಲೆ ರೂ.28.18 ಲಕ್ಷದಿಂದ ರೂ.29.77 ಲಕ್ಷಗಳಾದರೆ, ಡೀಸೆಲ್ ಆವೃತ್ತಿಯ ಬೆಲೆ ರೂ.30.19 ಲಕ್ಷದಿಂದ ರೂ.34.20 ಲಕ್ಷಗಳಾಗಿದೆ. ಈ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳಾಗಿವೆ.

Most Read Articles

Kannada
Read more on ಟೊಯೊಟಾ toyota
English summary
Bookings started for BS 6 Toyota Fortuner. Read in Kannada.
Story first published: Monday, January 27, 2020, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X