Just In
Don't Miss!
- News
ಮತ್ತೊಮ್ಮೆ ಮಹಾ ಹಿಂಸಾಚಾರಕ್ಕೆ ಟ್ರಂಪ್ ಬೆಂಬಲಿಗರಿಂದ ಸ್ಕೆಚ್..?
- Movies
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಸಿಡ್ನಿ, ದಿನ 4, Live ಸ್ಕೋರ್
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್
ಟೊಯೊಟಾ ಕಂಪನಿಯು ಫಾರ್ಚೂನರ್ ಫೇಸ್ಲಿಫ್ಟ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ, ಹೊಸ ಫಾರ್ಚೂನರ್ ಫೇಸ್ಲಿಫ್ಟ್ ಕಾರನ್ನು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ. ಫಾರ್ಚೂನರ್ ಫೇಸ್ಲಿಫ್ಟ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಆನ್ಲೈನ್ನಲ್ಲಿಬಹಿರಂಗವಾಗಿದೆ. ಈ ಸ್ಪೈ ಚಿತ್ರಗಳು ಹೊಸ ಫಾರ್ಚೂನರ್ ಫೇಸ್ಲಿಫ್ಟ್ ಕಾರಿನ ಕೆಲವು ಮಾಹಿತಿಗಳು ಬಹಿರಂಗವಾಗಿದೆ. ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್ ಮಾದರಿಯಲ್ಲಿ ಕೆಲವು ಕಾಸ್ಮೆಟಿಕ್ ನವೀಕರಣಗಳನ್ನು ಮಾಡಲಾಗಿದೆ. ಇಂಟಿರಿಯರ್ ನಲ್ಲಿಯು ಕೂಡ ಕೆಲವು ನವೀಕರಣಗಳನ್ನು ಮಾಡಿರಬಹುದು ಎಂದು ನಿರೀಕ್ಷಿಸುತ್ತೇವೆ.

ಇದರಲ್ಲಿ ಫಾರ್ಚೂನರ್ ಫೇಸ್ಲಿಫ್ಟ್ ಕಾರಿನ ಫ್ರಂಟ್ ಬಂಪರ್, ಇಂಟಿಗ್ರೇಟೆಡ್ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಸ್ಲಿಕ್ ಸೆಟ್ ಹೆಡ್ ಲ್ಯಾಂಪ್, ಹೊಸ ಬ್ಲ್ಯಾಕ್ಡ್ ಔಟ್ ಗ್ರಿಲ್ ಮತ್ತು ಸೆಂಟ್ರಲ್ ಏರ್ ಇನ್ ಟೆಕ್, ಜೊತೆಗೆ ಬ್ಲ್ಯಾಕ್ ಔಟ್ ಫಾಕ್ಸ್ ಸ್ಕಿಡ್ ಪ್ಲೇಟ್ಗಳನ್ನು ಒಳಗೊಂಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಟೊಯೊಟಾ ಫಾರ್ಚೂನರ್ ಮಾದರಿಯ ಎಂಜಿನ್ ಆಯ್ಜೆಯನ್ನು ಈ ಕಾರು ಹೊಂದಿರಬಹುದು. ಈ ಕಾರಿನ ಎಂಜಿನ್ ಬಗ್ಗೆ ಯಾವುದೇ ಮಾಹಿತಿಯು ಬಹಿರಂಗವಾಗಿಲ್ಲ.

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವಬಿಎಸ್-6 ಟೊಯೊಟಾ ಫಾರ್ಚೂನರ್ ಎಸ್ಯುವಿಯಲ್ಲಿ 2.7 ಲೀಟರ್ ಪೆಟ್ರೋಲ್ ಮತ್ತು 2.8 ಲೀಟರ್ ಡೀಸೆಲ್ ಎಂಜಿನ್ಗಳನ್ನು ಅಳವಡಿಸಿದೆ. ಬಿಎಸ್-6 ಫಾರ್ಚೂನರ್ ಎಸ್ಯುವಿನಲ್ಲಿ ಅಳವಡಿಸಿರುವ 2.8 ಲೀಟರಿನ 4 ಸಿಲಿಂಡರ್ ಡೀಸೆಲ್ ಎಂಜಿನ್ 174 ಬಿಹೆಚ್ಪಿ ಪವರ್ ಹಾಗೂ 420 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ನೊಂದಿಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಇನ್ನು 2.7 ಲೀಟರಿನ 4 ಸಿಲಿಂಡರ್ ಬಿಎಸ್ 6 ಪೆಟ್ರೋಲ್ ಎಂಜಿನ್ 164 ಬಿಹೆಚ್ಪಿ ಪವರ್ ಹಾಗೂ 245 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ನೊಂದಿಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಫಾರ್ಚೂನರ್ ಪೆಟ್ರೋಲ್ ಆವೃತ್ತಿಯಲ್ಲಿ 2 ಡಬ್ಲ್ಯೂ ಕಾನ್ಫಿಗರೇಷನ್ ನೀಡಿದರೆ, 4×4 ಕಾನ್ಫಿಗರೇಷನ್ ಸಿಸ್ಟಂ ಅನ್ನು ಡೀಸೆಲ್ ಆವೃತ್ತಿಯಲ್ಲಿ ಮಾತ್ರ ಅಳವಡಿಸಲಾಗಿದೆ. 4×4 ಕಾನ್ಫಿಗರೇಷನ್ ಸಿಸ್ಟಂ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಎಸ್-6 ಫಾರ್ಚೂನರ್ ಎಸ್ಯುವಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸುರಕ್ಷತೆಗಾಗಿ ಪೆಡಲ್ಶಿಫ್ಟರ್, ಏರ್ಬ್ಯಾಗ್, ಬ್ರೇಕ್ ಅಸಿಸ್ಟ್ ಹೊಂದಿರುವ ವೆಹಿಕಲ್ ಸ್ಟಾಬಿಲಿಟಿ, ಹಿಲ್ ಅಸಿಸ್ಟ್ ಕಂಟ್ರೋಲ್, ಇಬಿಡಿ ಹೊಂದಿರುವ ಎಬಿಎಸ್ ನೀಡಲಾಗಿದೆ.

ಇದರೊಂದಿಗೆ ಟೊಯೊಟಾ ಕಂಪನಿಯು ಫಾರ್ಚೂನರ್ ಮಾದರಿಯ ಹೊಸ ಎಪಿಕ್ ಹಾಗೂ ಎಪಿಕ್ ಬ್ಲ್ಯಾಕ್ ಆವೃತ್ತಿ ಕಾರುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.