ಎಂಪಿವಿ ಕಾರು ಮಾರಾಟದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಹೊಸ ದಾಖಲೆ

ಮಲ್ಟಿ ಪ್ಯಾಸೆಂಜರ್ ವೆಹಿಕಲ್ ಮಾರಾಟ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಟೊಯೊಟೊ ಇನೋವಾ ಕ್ರಿಸ್ಟಾ ಕಾರು ದುಬಾರಿ ಬೆಲೆ ಹೊಂದಿದ್ದರು ಸಹ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನದಲ್ಲಿದ್ದು, 2006ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಇನೋವಾ ಆವೃತ್ತಿಯು ಇದುವರೆಗೆ ಭಾರೀ ಪ್ರಮಾಣದಲ್ಲಿ ಮಾರಾಟಗೊಂಡಿದೆ.

ಎಂಪಿವಿ ಕಾರು ಮಾರಾಟದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಹೊಸ ದಾಖಲೆ

ಇನೋವಾ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ 15 ವರ್ಷ ಪೂರೈಸಿದ್ದು, ಮೊದಲ ಬಾರಿಗೆ ಬಿಡುಗಡೆಗೊಂಡಾಗ ಇದ್ದ ಬೇಡಿಕೆಯು ಇದುವರೆಗೂ ಕಡಿಮೆಯಾಗಿಲ್ಲ. ಕಾಲ ಕಾಲಕ್ಕೆ ತಕ್ಕಂತೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬದಲಾವಣೆಯೊಂದಿಗೆ ಮಾರಾಟವಾಗುತ್ತಿರುವ ಇನೋವಾ ಆವೃತ್ತಿಯು ಕಳೆದ 2018ರಲ್ಲಿ ಇನೋವಾ ಕ್ರಿಸ್ಟಾ ಮಾದರಿಯಾಗಿ ಮಾರಾಟಗೊಳ್ಳುತ್ತಿದೆ. ಕೈಗೆಟುಕುವ ಬೆಲೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರುವುದೇ ಬೇಡಿಕೆಗೆ ಪ್ರಮುಖ ಕಾರಣವಾಗಿದೆ.

ಎಂಪಿವಿ ಕಾರು ಮಾರಾಟದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಹೊಸ ದಾಖಲೆ

ಬಿಡುಗಡೆಯ ದಿನದಿಂದ ಇದುವರೆಗೆ ಪ್ರತಿ ತಿಂಗಳು ಸರಾಸರಿಯಾಗಿ 4,500ರಿಂದ 5 ಸಾವಿರ ಯುನಿಟ್ ಮಾರಾಟಗೊಂಡಿದ್ದು, ಇದುವರೆಗೆ 9 ಲಕ್ಷ ಯುನಿಟ್ ಮಾರಾಟಗೊಳ್ಳುವ ಮೂಲಕ ಎಂಪಿವಿ ಕಾರಗಳ ಮಾರಾಟದಲ್ಲೇ ಹೊಸ ದಾಖಲೆಗೆ ಕಾರಣವಾಗಿದೆ.

ಎಂಪಿವಿ ಕಾರು ಮಾರಾಟದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಹೊಸ ದಾಖಲೆ

ಇನೋವಾ ಕ್ರಿಸ್ಟಾ ಕಾರು ಸದ್ಯ ಮಾರುಕಟ್ಟೆಯಲ್ಲಿ ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.14 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 24.06 ಲಕ್ಷ ಬೆಲೆ ಹೊಂದಿದೆ.

ಎಂಪಿವಿ ಕಾರು ಮಾರಾಟದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಹೊಸ ದಾಖಲೆ

ಇದರಲ್ಲಿ ಸಾಮಾನ್ಯ ಕಾರು ಮಾದರಿಗಿಂತಲೂ 15 ವರ್ಷಗಳ ಸಂಭ್ರಮಕ್ಕಾಗಿ ಪರಿಚಯಿಸಲಾಗಿರುವ ಲೀಡರ್‌ಶಿಪ್ ಎಡಿಷನ್‌ಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.21.21 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹೊಸ ಕಾರಿನ ಬೆಲೆಯು ಸಾಮಾನ್ಯ ವಿಎಕ್ಸ್ ವೆರಿಯೆಂಟ್ ಮಾದರಿಗಿಂತಲೂ ರೂ.61 ಸಾವಿರದಷ್ಟು ಹೆಚ್ಚಳವಾಗಿದ್ದು, ಬೆಲೆ ಹೆಚ್ಚಳಕ್ಕೆ ತಕ್ಕಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಣೆಮಾಡಲಾಗಿದೆ.

ಎಂಪಿವಿ ಕಾರು ಮಾರಾಟದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಹೊಸ ದಾಖಲೆ

ಲೀಡರ್‌ಶಿಪ್ ಎಡಿಷನ್ ಕಾರಿನಲ್ಲಿ ಟೊಯೊಟಾ ಸಂಸ್ಥೆಯು ಬಿಎಸ್-6 ಎಂಜಿನ್ ಅಳವಡಿಕೆ ಮಾಡಿದ್ದು, ಹೊಸ ಕಾರಿನ ಹೊರ ಮತ್ತು ಒಳವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಸ್ಪೆಷಲ್ ಎಡಿಷನ್‌ನಲ್ಲಿ ಹೆಚ್ಚುವರಿಯಾಗಿ ಕ್ರೋಮ್ ಗಾರ್ನಿಶ್, ಕಾರಿನ ಎರಡು ಬದಿಗಳಲ್ಲಿ ಮತ್ತು ಹಿಂಭಾಗದಲ್ಲಿ ಲೀಡರ್‌ಶಿಪ್ ಬ್ಯಾಡ್ಜ್, ಕಪ್ಪು ಬಣ್ಣದ ಹೊರ ಕವಚ ಹೊಂದಿರುವ 17-ಇಂಚಿನ ಅಲಾಯ್ ಚಕ್ರಗಳು, ರಿಯರ್ ಸ್ಪಾಯ್ಲರ್, ಸೈಡ್ ಸ್ಕರ್ಟ್ ಮತ್ತು ಫ್ರಂಟ್ ಲಿಪ್ಸ್‌ಗಳನ್ನ ನೀಡಲಾಗಿದೆ.

ಎಂಪಿವಿ ಕಾರು ಮಾರಾಟದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಹೊಸ ದಾಖಲೆ

ಕಾರಿನ ಒಳಭಾಗದಲ್ಲೂ ಹಲವಾರು ಆಕರ್ಷಕ ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದ್ದು, ಲೀಡರ್‌ಶಿಪ್ ಹೆಸರುಪಡೆದುಕೊಂಡಿರುವ ಆಸನಗಳು, ಡ್ಯಾಶ್‌ಬೋರ್ಡ್ ಜೊತೆಗೆ ಕ್ಯಾಬಿನ್‌ನಲ್ಲೂ ಆಲ್ -ಬ್ಯಾಕ್ ಥೀಮ್ ಮುಂದುವರಿಸಲಾಗಿದೆ.

ಎಂಪಿವಿ ಕಾರು ಮಾರಾಟದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಹೊಸ ದಾಖಲೆ

ಜೊತೆಗೆ 360 ಡಿಗ್ರಿ ಕ್ಯಾಮೆರಾ, ಆಟೋ-ಫೋಲ್ಡಿಂಗ್ ರಿಯರ್ ವ್ಯೂ ಮಿರರ್, ಪೆಡಲ್ ಲ್ಯಾಂಪ್ಸ್, ಕೀ ಲೆಸ್ ಎಂಟ್ರಿ, ಫುಶ್ ಸ್ಟಾರ್ಟ್/ಸ್ಟಾಪ್ ಬಟನ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಸ್ಪೆಷಲ್ ಎಡಿಷನ್‌ನಲ್ಲಿ ನೀಡಲಾಗಿದೆ.

ಎಂಪಿವಿ ಕಾರು ಮಾರಾಟದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಹೊಸ ದಾಖಲೆ

ಹಾಗೆಯೇ ಹೊಸ ಕಾರಿನಲ್ಲಿ ಡ್ಯುಯಲ್ ಟೋನ್ ಕಲರ್ ಆಯ್ಕೆಯನ್ನು ನೀಡಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವೈಡ್‌ಫೈರ್ ರೆಡ್ ಜೊತೆ ಬ್ಲ್ಯಾಕ್ ಮತ್ತು ವೈಟ್ ಪರ್ಲ್ ಕ್ರಿಸ್ಟಲ್ ಜೊತೆ ಬ್ಲ್ಯಾಕ್ ಬಣ್ಣವನ್ನು ಆಯ್ಕೆ ಮಾಡಬಹುದಾಗಿದೆ.

ಎಂಪಿವಿ ಕಾರು ಮಾರಾಟದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಹೊಸ ದಾಖಲೆ

ಎಂಜಿನ್ ಸಾಮರ್ಥ್ಯ

ಇನೋವಾ ಕ್ರಿಸ್ಟಾ ಲೀಡರ್‌ಶಿಪ್ ಎಡಿಷನ್ ಕಾರು ಬಿಎಸ್-6 ವೈಶಿಷ್ಟ್ಯತೆಯ 2.4-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 148-ಬಿಚ್‌ಪಿ ಮತ್ತು 343-ಎನ್ಎಂ ಟಾರ್ಕ್‌ನೊಂದಿಗೆ ಉತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

ಎಂಪಿವಿ ಕಾರು ಮಾರಾಟದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಹೊಸ ದಾಖಲೆ

ಬಿಎಸ್-6 ಎಮಿಷನ್ ಜಾರಿ ನಂತರ ಇನೋವಾ ಕ್ರಿಸ್ಟಾದಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಈ ಹಿಂದಿನ 2.8-ಲೀಟರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಹೊಸ ಎಮಿಷನ್ ಪ್ರಕಾರ ಸ್ಥಗಿತಗೊಳಿಸಲಾಗಿದೆ.

ಎಂಪಿವಿ ಕಾರು ಮಾರಾಟದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಹೊಸ ದಾಖಲೆ

ಹೊಸ ಎಮಿಷನ್ ಜೊತೆ ಬಿಎಸ್-6 ಇನೋವಾ ಕ್ರಿಸ್ಟಾ ಕಾರುಗಳಲ್ಲಿ ಈ ಬಾರಿ ಹಿಲ್ ಸ್ಟಾರ್ಟ್ ಅಸಿಸ್ಟ್, ಸ್ಟ್ಯಾಬಿಲಿಟಿ ಕಂಟ್ರೋಲ್ ಮತ್ತು ಎಮರ್ಜೆನ್ಸಿ ಬ್ರೇಕ್ ಸಿಗ್ನಲ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಬಿಎಸ್-4 ಮಾದರಿಗಿಂತ ಬಿಎಸ್-6 ಆವೃತ್ತಿಯು ರೂ. 1.32 ಲಕ್ಷದಷ್ಟು ದುಬಾರಿಯಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Innova crosses 9 lakh sales unit in India. Read in Kannada.
Story first published: Saturday, March 14, 2020, 16:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X