ಮತ್ತಷ್ಟು ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಇನೋವಾ ಕ್ರಿಸ್ಟಾ

ಟೊಯೊಟಾ ಕಂಪನಿಯು ಈಗಾಗಲೇ ಬಿಎಸ್-6 ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಬಿಎಸ್-6 ಮಾದರಿಗಳ ಬಿಡುಗಡೆಯ ನಂತರ ಇದೀಗ ಎರಡನೇ ಬಾರಿ ಇನೋವಾ ಕ್ರಿಸ್ಟಾ ಮಾದರಿಯ ಬೆಲೆ ಹೆಚ್ಚಳ ಮಾಡಿದೆ.

ಮತ್ತಷ್ಟು ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಇನೋವಾ ಕ್ರಿಸ್ಟಾ

ಲಾಕ್‌ಡೌನ್ ಸಂಕಷ್ಟದಿಂದಾಗಿ ವಾಹನ ಬಿಡಿಭಾಗಗಳ ವೆಚ್ಚ ನಿರ್ವಹಣೆಯು ಹೆಚ್ಚುತ್ತಿದ್ದು, ಈ ಹಿನ್ನಲೆಯಲ್ಲಿ ಟೊಯೊಟಾ ಸೇರಿದಂತೆ ಬಹುತೇಕ ಆಟೋ ಕಂಪನಿಗಳು ಬಿಎಸ್-6 ವಾಹನಗಳ ಬೆಲೆಯಲ್ಲಿ ಎರಡನೇ ಬಾರಿಗೆ ಬೆಲೆ ಹೆಚ್ಚಳ ಮಾಡಿವೆ. ಹೊಸ ದರ ಪಟ್ಟಿಯಲ್ಲಿನ ಮಾಹಿತಿಯಂತೆ ಇನೋವಾ ಕ್ರಿಸ್ಟಾ ಮಾದರಿಯು ಹೆಚ್ಚುವರಿಯಾಗಿ ರೂ.61 ಸಾವಿರ ಹೆಚ್ಚಿಸಲಾಗಿದ್ದು, ಬಿಎಸ್-6 ಎಂಜಿನ್ ಉನ್ನತೀಕರಿಸಿದ ನಂತರ ಇದು 2ನೇ ಬಾರಿ ಬೆಲೆ ಹೆಚ್ಚಳವಾಗಿದೆ.

ಮತ್ತಷ್ಟು ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಇನೋವಾ ಕ್ರಿಸ್ಟಾ

ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ.25 ಸಾವಿರದಿಂದ ಗರಿಷ್ಠ ರೂ.61 ಸಾವಿರ ಬೆಲೆ ಹೆಚ್ಚಳ ಮಾಡಲಾಗಿದ್ದು, ಹೊಸ ದರ ಪಟ್ಟಿಯಂತೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.15.66 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.24.67 ಲಕ್ಷ ಬೆಲೆ ಹೊಂದಿದೆ.

ಮತ್ತಷ್ಟು ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಇನೋವಾ ಕ್ರಿಸ್ಟಾ

ಬಿಎಸ್-6 ಎಮಿಷನ್ ಜಾರಿ ನಂತರ ಇನೋವಾ ಕ್ರಿಸ್ಟಾದಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಈ ಹಿಂದಿನ 2.8-ಲೀಟರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಹೊಸ ಎಮಿಷನ್ ಪ್ರಕಾರ ಸ್ಥಗಿತಗೊಳಿಸಲಾಗಿದೆ.

ಮತ್ತಷ್ಟು ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಇನೋವಾ ಕ್ರಿಸ್ಟಾ

ಹೊಸ ಎಮಿಷನ್ ಜೊತೆಗೆ ಇನೋವಾ ಕ್ರಿಸ್ಟಾ ಕಾರಿನಲ್ಲಿ ಈ ಬಾರಿ ಹಿಲ್ ಸ್ಟಾರ್ಟ್ ಅಸಿಸ್ಟ್, ಸ್ಟ್ಯಾಬಿಲಿಟಿ ಕಂಟ್ರೋಲ್ ಮತ್ತು ಎಮರ್ಜೆನ್ಸಿ ಬ್ರೇಕಿಂಗ್ ಸಿಗ್ನಲ್ ಸೌಲಭ್ಯಗಳನ್ನು ಪ್ರತಿ ವೆರಿಯೆಂಟ್‌ನಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಈ ಹಿಂದಿಗಿಂತಲೂ ಹೊಸ ಕಾರು ಹೆಚ್ಚು ಬಲಶಾಲಿಯಾಗಿರುವುದಲ್ಲದೆ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಮತ್ತಷ್ಟು ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಇನೋವಾ ಕ್ರಿಸ್ಟಾ

ಇನ್ನು ಹೊಸ ಎಂಜಿನ್ ಮತ್ತು ಸೇಫ್ಟಿ ಫೀಚರ್ಚ್‌ಗಳಿಂದಾಗಿ ಬಿಎಸ್-4 ಮಾದರಿಗಿಂತಲೂ ಬಿಎಸ್-6 ಆವೃತ್ತಿಯು ರೂ. 1.32 ಲಕ್ಷದಷ್ಟು ದುಬಾರಿಯಾಗಿದ್ದು, ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭವಾಗಿದೆ.

ಮತ್ತಷ್ಟು ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಇನೋವಾ ಕ್ರಿಸ್ಟಾ

ಜೊತೆಗೆ ಇನೋವಾ ಕಾರು ಮಾದರಿಯು ಭಾರತದಲ್ಲಿ ಪರಿಚಯಿಸಿ 15 ವರ್ಷಗಳ ಸಂಭ್ರಮಕ್ಕಾಗಿ ಇನೋವಾ ಕ್ರಿಸ್ಟಾ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿರುವ ಟೊಯೊಟಾ ಕಂಪನಿಯು ತನ್ನ ನೆಚ್ಚಿನ ಗ್ರಾಹಕರಿಗಾಗಿ ಲೀಡರ್‌ಶಿಪ್ ಎಡಿಷನ್ ಪರಿಚಯಿಸಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಮತ್ತಷ್ಟು ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಇನೋವಾ ಕ್ರಿಸ್ಟಾ

ಸೀಮಿತ ಅವಧಿಗೆ ಮಾತ್ರ ಖರೀದಿ ಲಭ್ಯವಿರುವ ಸ್ಪೆಷನ್ ಎಡಿಷನ್ ಕಾರಿನ ಬೆಲೆಯು ಸಾಮಾನ್ಯ ವಿಎಕ್ಸ್ ವೆರಿಯೆಂಟ್ ಮಾದರಿಗಿಂತಲೂ ರೂ.80 ಸಾವಿರದಷ್ಟು ಹೆಚ್ಚಳವಾಗಿದ್ದು, ಬೆಲೆ ಹೆಚ್ಚಳಕ್ಕೆ ತಕ್ಕಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಣೆಮಾಡಲಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Innova Crysta BS6 Price Hike. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X