ವಿನೂತನ ಫೀಚರ್ಸ್‌ಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಬಿಡುಗಡೆ

ಟೊಯೊಟಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ ಮಾದರಿಯ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರು ವಿನೂತನ ಫೀಚರ್ಸ್‌ಗಳೊಂದಿಗೆ ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಬಿಡುಗಡೆ

2005ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಇನೋವಾ ಕಾರು ಮಾದರಿಯು ಕಳೆದ 2016ರಲ್ಲಿ ನ್ಯೂ ಜನರೇಷನ್ ಫೀಚರ್ಸ್‌ಗಳೊಂದಿಗೆ ಇನೋನಾ ಕ್ರಿಸ್ಟಾ ಮಾದರಿಯಾಗಿ ಬಿಡುಗಡೆಗೊಂಡಿತ್ತು. ಇದೀಗ 2021ರ ಮಾದರಿಯಾಗಿ ಫೇಸ್‌ಲಿಫ್ಟ್ ಮಾದರಿಯನ್ನು ಬಿಡಗಡೆ ಮಾಡಲಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.26 ಲಕ್ಷದಿಂದ ಟಾಪ್ ಎಂಡ್ ಮಾದರಿಯು 24.33 ಲಕ್ಷ ಬೆಲೆ ಪಡೆದುಕೊಂಡಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಬಿಡುಗಡೆ

ಹೊಸ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಮಾದರಿಯು ಜಿಎಕ್ಸ್, ವಿಎಕ್ಸ್ ಮತ್ತು ಜೆಡ್ಎಕ್ಸ್ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಫೀಚರ್ಸ್ ಅಳವಡಿಕೆ ನಂತರ ಕಾರಿನ ಬೆಲೆಯು ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 60 ಸಾವಿರದಿಂದ ರೂ.70 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಬಿಡುಗಡೆ

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರಿನಲ್ಲಿ ಟೊಯೊಟಾ ಕಂಪನಿಯು ಹಲವು ಹೊಸ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಹೊಸ ಕಾರಿನಲ್ಲಿ ಪ್ರಮುಖ ಬದಲಾವಣೆಗಾಗಿ ಕ್ರೊಮ್ ಸೌಲಭ್ಯ ಹೊಂದಿರುವ ಪಿಯಾನೊ ಬ್ಲ್ಯಾಕ್ ಬಣ್ಣದ ಟ್ರಾಪೆಜೊಡಿಯಲ್ ಫ್ರಂಟ್ ಗ್ರಿಲ್ ಮತ್ತು ಹೊಸ ವಿನ್ಯಾಸ ಫ್ರಂಟ್ ಬಂಪರ್ ಪ್ರಮುಖ ಆಕರ್ಷಣೆಯಾಗಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ಬ್ಯಾನೆಟ್ ಹೊಂದಿಕೊಂಡಂತೆ ಫ್ರಂಟ್ ಗ್ರಿಲ್‌ನೊಳಗೆ ಸೇರ್ಪಡೆಯಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್, ಡೈಮಂಡ್ ಕಟ್ ಅಲಾಯ್ ವೀಲ್ಹ್ ಮತ್ತು ಹೊಸದಾದ ಬಣ್ಣದ ಆಯ್ಕೆ ಪಡೆದುಕೊಂಡಿದ್ದು, ಹೊಸ ಬಣ್ಣದ ಆಯ್ಕೆಯನ್ನು ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕ್ರಿಸ್ಟಲ್ ಶೈನ್ ಎಂದು ಹೆಸರಿಸಿದೆ. ಇದು ಕಾರಿನ ಪ್ರೀಮಿಯಂ ಸೌಲಭ್ಯಗಳಿಗೆ ಪೂರಕವಾದ ಹೊಸ ಬಣ್ಣ ಆಯ್ಕೆಯಾಗಿದ್ದು, ಹೊರಭಾಗದಂತೆ ಒಳಭಾಗದಲ್ಲೂ ಪ್ರಮುಖ ಬದಲಾವಣೆಗಳಾಗಿವೆ.

ವಿನೂತನ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಬಿಡುಗಡೆ

ಹೊಸ ಫೇಸ್‌ಲಿಫ್ಟ್ ಕಾರಿನಲ್ಲಿ ಈ ಬಾರಿ ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ ಸರ್ಪೋಟ್ ಮಾಡುವ ಸ್ಮಾರ್ಟ್ ಪ್ಲೇಕಾಸ್ಟ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದ್ದು, ಟಾಪ್ ಎಂಡ್ ಮಾದರಿಯಾದ ಜೆಡ್ಎಕ್ಸ್ ಆವೃತ್ತಿಯಲ್ಲಿ ಹೆಚ್ಚುವರಿಯಾಗಿ ಕ್ಯಾಮೆಲ್ ಟಾನ್ ಕಲರ್ ಲೆದರ್ ಸೀಟುಗಳನ್ನು ನೀಡಿರುವುದು ಪ್ರೀಮಿಯಂ ಲುಕ್ ಹೆಚ್ಚಿಸಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಬಿಡುಗಡೆ

ಫೇಸ್‌ಲಿಫ್ಟ್ ಕಾರಿನ ಮುಂಭಾಗದ ವಿನ್ಯಾಸ ಮತ್ತು ಒಳಭಾಗದಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್ ಹೊರತುಪಡಿಸಿ ಕಾರಿನ ಹಿಂಭಾಗದ ವಿನ್ಯಾಸವನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಎಂಜಿನ್ ಆಯ್ಕೆಯು ಕೂಡಾ ಯಾವುದೇ ಬದಲಾವಣೆ ಪಡೆದುಕೊಂಡಿಲ್ಲ.

ವಿನೂತನ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಬಿಡುಗಡೆ

ಬಿಎಸ್-6 ಎಮಿಷನ್ ಜಾರಿ ನಂತರ ಪರಿಚಯಿಸಲಾದ ಎಂಜಿನ್ ಮಾದರಿಯೇ ಇದೀಗ ಫೇಸ್‌ಲಿಫ್ಟ್ ಮಾದರಿಯಲ್ಲಿ ಜೋಡಿಸಲಾಗಿದ್ದು, ಇನೋವಾ ಕ್ರಿಸ್ಟಾ ಕಾರಿನಲ್ಲಿ ಗ್ರಾಹಕರು 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಬಿಡುಗಡೆ

ಹೊಸ ಎಮಿಷನ್ ನಂತರ 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಿರುವ ಟೊಯೊಟಾ ಕಂಪನಿಯು 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾತ್ರ ಮಾರಾಟ ಮಾಡುತ್ತಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಬಿಡುಗಡೆ

2.7-ಲೀಟರ್ ಪೆಟ್ರೋಲ್ ಮಾದರಿಯು 164-ಬಿಎಚ್‌ಪಿ, 245-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ 2.4-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 160-ಬಿಎಚ್‌ಪಿ, 360-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಇಂಧನ ದಕ್ಷತೆಯಲ್ಲೂ ಸುಧಾರಣೆ ಕಂಡಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಬಿಡುಗಡೆ

ಹೊಸ ಫೇಸ್‌ಲಿಫ್ಟ್ ಕಾರಿಗಾಗಿ ಈಗಾಗಲೇ ಟೊಯೊಟಾ ಕಂಪನಿಯು ಬುಕ್ಕಿಂಗ್ ಆರಂಭಿಸಿರುವುದಲ್ಲದೆ ಹೊಸ ಕಾರಿನ ವಿತರಣೆಯನ್ನು ಇಂದಿನಿಂದಲೇ ಆರಂಭಿಸಿರುವುದಾಗಿ ಮಾಹಿತಿ ನೀಡಿದ್ದು, ಸಾಮಾನ್ಯ ಇನೋವಾ ಕ್ರಿಸ್ಟಾ ಕಾರು ಮಾದರಿಯು ಸ್ಟಾಕ್ ಮುಕ್ತಾಯದ ತನಕ ಮಾತ್ರ ಮಾರಾಟಕ್ಕೆ ಲಭ್ಯವಿರಲಿದೆ. ತದನಂತರ ಫೇಸ್‌ಲಿಫ್ಟ್ ಮಾದರಿಯನ್ನು ಮಾತ್ರ ಮಾರಾಟ ಮಾಡಲಿದ್ದು, ಹೊಸ ಕಾರಿನೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಬಿಡುಗಡೆ

2005ರಿಂದ ಇದುವರೆಗೆ ಭಾರತದಲ್ಲಿ ಇನೋವಾ ಮತ್ತು ಇನೋವಾ ಕ್ರಿಸ್ಟಾ ಮಾದರಿಗಳು ಒಟ್ಟು 8.80 ಲಕ್ಷ ಯುನಿಟ್ ಮಾರಾಟಗೊಂಡಿದ್ದು, ಇದರಲ್ಲಿ 2016ರಲ್ಲಿ ಬಿಡುಗಡೆಯಾದ ಇನೋವಾ ಕ್ರಿಸ್ಟಾ ಮಾದರಿಯೇ 3 ಲಕ್ಷ ಯುನಿಟ್ ಮಾರಾಟ ಗುರಿಸಾಧಿಸಿದೆ.

Most Read Articles

Kannada
English summary
Toyota Innova Crysta Facelift Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X