ಮಾಡಿಫೈಗೊಂಡ ಅಂಬ್ಯುಲೆನ್ಸ್‌ಗಳನ್ನು ದಾನವಾಗಿ ನೀಡಿದ ಟೊಯೊಟಾ

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಪ್ರಪಂಚದಾದ್ಯಂತವಿರುವ ಬಹುತೇಕ ಕಾರು ತಯಾರಕ ಕಂಪನಿಗಳು ವೆಂಟಿಲೇಟರ್‌, ಮಾಸ್ಕ್ ತಯಾರಿಸಿ ತಮ್ಮದೇ ಆದ ರೀತಿಯಲ್ಲಿ ನೆರವಾಗುತ್ತಿವೆ. ಟೊಯೊಟಾ ಕಂಪನಿಯು ಮಾಡಿಫೈಗೊಳಿಸಲಾದ ಇನೊವಾ ಕ್ರಿಸ್ಟಾ ಕಾರ್ ಅನ್ನು ರೆಡ್‌ಕ್ರಾಸ್ ಹಾಗೂ ಇಂಡೋನೇಷ್ಯಾದ ಆರೋಗ್ಯ ಇಲಾಖೆಗೆ ದಾನ ನೀಡಿದೆ.

ಮಾಡಿಫೈಗೊಂಡ ಅಂಬ್ಯುಲೆನ್ಸ್‌ಗಳನ್ನು ದಾನವಾಗಿ ನೀಡಿದ ಟೊಯೊಟಾ

ಟೊಯೊಟಾ ಇನೊವಾ ಕ್ರಿಸ್ಟಾವನ್ನು ಆಂಬ್ಯುಲೆನ್ಸ್ ಆಗಿ ಬದಲಿಸಲಾಗಿದ್ದು, ಎಲ್ಲಾ ಪ್ರಮುಖ ಜೀವ ಉಳಿಸುವ ಸಾಧನಗಳನ್ನು ಈ ಕಾರಿನಲ್ಲಿ ನೀಡಲಾಗಿದೆ. ಟೊಯೊಟಾ ಇನೊವಾ ಕ್ರಿಸ್ಟಾದ ಒಟ್ಟು ಐದು ಯುನಿಟ್‌ಗಳನ್ನು ದಾನ ಮಾಡಲಾಗಿದೆ. ಇಂಡೋನೇಷ್ಯಾದಲ್ಲಿ, ಟೊಯೊಟಾ ಇನೊವಾ ಕ್ರಿಸ್ಟಾವನ್ನು ಟೊಯೊಟಾ ಕಿಜಾಂಗ್ ಇನೊವಾ ಎಂದು ಕರೆಯಲಾಗುತ್ತದೆ.

ಮಾಡಿಫೈಗೊಂಡ ಅಂಬ್ಯುಲೆನ್ಸ್‌ಗಳನ್ನು ದಾನವಾಗಿ ನೀಡಿದ ಟೊಯೊಟಾ

ಇನೊವಾ ಕ್ರಿಸ್ಟಾ ಎಂಪಿವಿಯಾಗಿರುವುದರಿಂದ, ಇದು ಸಾಕಷ್ಟು ಜಾಗವನ್ನು ಹೊಂದಿದೆ. ಕಾರಿನ ಹಿಂಬದಿಯಲ್ಲಿರುವ ಸೀಟುಗಳನ್ನು ತೆಗೆದುಹಾಕಲಾಗಿದೆ. ಕಾರಿನ ಫ್ಲೋರ್ ಅನ್ನು ಮಾಡಿಫೈ ಮಾಡಲಾಗಿದ್ದು, ಪೂರ್ತಿಯಾಗಿ ಸಮತಟ್ಟಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮಾಡಿಫೈಗೊಂಡ ಅಂಬ್ಯುಲೆನ್ಸ್‌ಗಳನ್ನು ದಾನವಾಗಿ ನೀಡಿದ ಟೊಯೊಟಾ

ಕಾರಿನಲ್ಲಿ ಹೆಚ್ಚು ಸ್ಥಳಾವಕಾಶವಿದ್ದು, ಫೋಲ್ಡ್ ಮಾಡಬಹುದಾದ ಸ್ಟ್ರೆಚರ್ ಅನ್ನು ಸುಲಭವಾಗಿ ಇಡಬಹುದಾಗಿದೆ. ಪ್ಯಾರಾ ಮೆಡಿಕಲ್ ಸಿಬ್ಬಂದಿಗಾಗಿ ಎರಡು ಬದಿಯ ಸೀಟುಗಳನ್ನು ನೀಡಲಾಗಿದೆ. ಹಾರ್ಟ್ ಬೀಟ್ ಪರೀಕ್ಷಿಸಲು ಲೈವ್-ಸೇವಿಂಗ್ ಉಪಕರಣಗಳನ್ನು ನೀಡಲಾಗಿದೆ.

ಮಾಡಿಫೈಗೊಂಡ ಅಂಬ್ಯುಲೆನ್ಸ್‌ಗಳನ್ನು ದಾನವಾಗಿ ನೀಡಿದ ಟೊಯೊಟಾ

ಇನೊವಾದ ಹೊರಭಾಗವನ್ನು ಮಾಡಿಫೈ ಮಾಡಿ ಹೆಚ್ಚುವರಿ ಉಪಕರಣಗಳನ್ನು ಅಳವಡಿಸಲಾಗಿದೆ. ಕಾರಿನ ಹಿಂಭಾಗದ ಗೇಟ್‌ನಲ್ಲಿರುವ ಸ್ಪಾಟ್‌ಲೈಟ್ ಕತ್ತಲೆಯಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಕಾರಿನ ಮೇಲ್ಭಾಗದಲ್ಲಿ ಸೈರನ್ ಹಾಗೂ ಫ್ಲಶರ್‌ಗಳನ್ನು ಅಳವಡಿಸಲಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಮಾಡಿಫೈಗೊಂಡ ಅಂಬ್ಯುಲೆನ್ಸ್‌ಗಳನ್ನು ದಾನವಾಗಿ ನೀಡಿದ ಟೊಯೊಟಾ

ಈ ಕಾರ್ ಅನ್ನು ಇಂಡೋನೇಷ್ಯಾದಲ್ಲಿರುವ ಟೊಯೊಟಾ ಕಂಪನಿಯ ಸರಬರಾಜುದಾರರು ಮಾಡಿಫೈಗೊಳಿಸಿದ್ದಾರೆ. ಮಾಧಿಫೈಗೊಳಿಸಲು ಎಷ್ಟು ಖರ್ಚಾಗಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಮಾಡಿಫೈಗೊಂಡಿರುವ ಈ ಕಾರಿನಲ್ಲಿರುವ 2.0 ಲೀಟರ್ ಪೆಟ್ರೋಲ್ ಎಂಜಿನ್ 139 ಬಿಎಚ್‌ಪಿ ಪವರ್ ಹಾಗೂ 183 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಾಡಿಫೈಗೊಂಡ ಅಂಬ್ಯುಲೆನ್ಸ್‌ಗಳನ್ನು ದಾನವಾಗಿ ನೀಡಿದ ಟೊಯೊಟಾ

ಭಾರತದಲ್ಲಿ, ಎಂಜಿ ಮೋಟಾರ್ ಕಂಪನಿಯು ಹೆಕ್ಟರ್ ಎಸ್‌ಯುವಿಯನ್ನು ಇದೇ ರೀತಿ ಮಾಡಿಫೈ ಮಾಡಿ ದಾನ ನೀಡಿತ್ತು. ಹೆಕ್ಟರ್ ಆಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್ ಸಿಲಿಂಡರ್‌, ಆಟೋಮ್ಯಾಟಿಕ್ ಲೋಡಿಂಗ್ ಸ್ಟ್ರೆಚರ್‌, ಔಷಧ ಕ್ಯಾಬಿನೆಟ್‌ಗಳು, ಐದು-ಪ್ಯಾರಾಮೀಟರ್ ಮಾನಿಟರ್‌ಗಳು, ಇಂಟರ್ನಲ್ ಲೈಟ್ ಹಾಗೂ ಕಾರಿನ ಮೇಲ್ಭಾಗದಲ್ಲಿ ಲೈಟ್‌ಗಳಿವೆ.

Most Read Articles

Kannada
English summary
Toyota Innova Crysta modified as Ambulance. Read in Kannada.
Story first published: Thursday, May 21, 2020, 16:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X