ಕ್ಯಾಮ್ರಿ ಕಾರಿನ 40ನೇ ವಾರ್ಷಿಕೋತ್ಸವಕ್ಕೆ ಬ್ಲ್ಯಾಕ್ ಎಡಿಷನ್ ಬಿಡುಗಡೆಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಕ್ಯಾಮ್ರಿ ಕಾರಿನ 40ನೇ ವಾರ್ಷಿಕೋತ್ಸವದ ಪ್ರಯುಕ್ತ ತನ್ನ ತವರುಮನೆ ಜಪಾನ್‌ನಲ್ಲಿ ಹೊಸ 'ಬ್ಲ್ಯಾಕ್ ಎಡಿಷನ್' ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಟೊಯೊಟಾ ಕ್ಯಾಮ್ರಿ 'ಬ್ಲ್ಯಾಕ್ ಎಡಿಷನ್' ಮಾದರಿಯ ಬೆಲೆಯು ರೂ.29.8 ಲಕ್ಷಗಳಾಗಿದೆ.

ಕ್ಯಾಮ್ರಿ ಕಾರಿನ 40ನೇ ವಾರ್ಷಿಕೋತ್ಸವಕ್ಕೆ ಬ್ಲ್ಯಾಕ್ ಎಡಿಷನ್ ಬಿಡುಗಡೆಗೊಳಿಸಿದ ಟೊಯೊಟಾ

ಸಾಮಾನ್ಯ ಕ್ಯಾಮ್ರಿ ಮಾದರಿಗೆ ಬ್ಲ್ಯಾಕ್ ಎಡಿಷನ್ ಮಾದರಿಯನ್ನು ಹೋಲಿಸಿದರೆ ರೂಫ್, ಎ-ಪಿಲ್ಲರ್, ಬಿ-ಪಿಲ್ಲರ್ ಮತ್ತು ಸಿ-ಪಿಲ್ಲರ್‌ನ ಭಾಗಗಳಲ್ಲಿ ಬ್ಲ್ಯಾಕ್ ಬಣ್ಣದ ಅಂಶಗಳನ್ನು ಒಳಗೊಂಡಿದೆ. ಬೂಟ್‌ನಲ್ಲಿ ಬ್ಲ್ಯಾಕ್ ಸ್ಪಾಯ್ಲರ್ ಕೂಡ ಸಂಯೋಜಿಸಲ್ಪಟ್ಟಿದೆ, ಇದು ಹೊರಭಾಗಕ್ಕೆ ಸ್ಪೋರ್ಟಿ ಸ್ಪರ್ಶವನ್ನು ನೀಡುತ್ತದೆ. ಈ ಹೊಸ ಕ್ಯಾಮ್ರಿ ‘ಬ್ಲ್ಯಾಕ್ ಎಡಿಷನ್ ಮಾದರಿಯಲ್ಲಿ 18 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಮತ್ತು ಲೆಕ್ಸಸ್ ತರಹದ ‘ಸ್ಪಿಂಡಲ್-ಆಕಾರದ' ಫ್ರಂಟ್ ಗ್ರಿಲ್ ಅನ್ನು ಹೊಂದಿದೆ.

ಕ್ಯಾಮ್ರಿ ಕಾರಿನ 40ನೇ ವಾರ್ಷಿಕೋತ್ಸವಕ್ಕೆ ಬ್ಲ್ಯಾಕ್ ಎಡಿಷನ್ ಬಿಡುಗಡೆಗೊಳಿಸಿದ ಟೊಯೊಟಾ

ಹೊಸ ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್‌ಗಳು ಆಕರ್ಷಕವಾಗಿದೆ. ಇನ್ನು ಈ ಕಾರಿನಲ್ಲಿ ಸೈಡ್ ಸ್ಕರ್ಟ್‌ಗಳು, ಫಾಕ್ಸ್ ಲಿಪ್ ಸ್ಪಾಯ್ಲರ್ ಮತ್ತು ಫೇಕ್ ರೇರ್ ಡಿಫ್ಯೂಸರ್ ಸಹ ಒಳಗೊಂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಕ್ಯಾಮ್ರಿ ಕಾರಿನ 40ನೇ ವಾರ್ಷಿಕೋತ್ಸವಕ್ಕೆ ಬ್ಲ್ಯಾಕ್ ಎಡಿಷನ್ ಬಿಡುಗಡೆಗೊಳಿಸಿದ ಟೊಯೊಟಾ

ಈ ಬದಲಾವಣೆಗಳನ್ನು ಹೊರತುಪಡಿಸಿದರೆ ಇತರ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೊಂದಿಲ್ಲ. ಸಾಮಾನ್ಯ ಟೊಯೊಟಾ ಕ್ಯಾಮ್ರಿ ಕಾರಿನಂತಿದೆ. ಈ ಕ್ಯಾಮ್ರಿ ಬ್ಲ್ಯಾಕ್ ಎಡಿಷನ್ ಮಾದರಿಯಲ್ಲಿ ಆಕರ್ಷಕ ಇಂಟಿರಿಯರ್ ಅನ್ನು ಹೊಂದಿದೆ.

ಕ್ಯಾಮ್ರಿ ಕಾರಿನ 40ನೇ ವಾರ್ಷಿಕೋತ್ಸವಕ್ಕೆ ಬ್ಲ್ಯಾಕ್ ಎಡಿಷನ್ ಬಿಡುಗಡೆಗೊಳಿಸಿದ ಟೊಯೊಟಾ

ಈ ಕ್ಯಾಮ್ರಿ ಬ್ಲ್ಯಾಕ್ ಎಡಿಷನ್ ಮಾದರಿಯ ಇಂಟಿರಿಯರ್ ಡ್ಯುಯಲ್-ಟೋನ್ ಬಣ್ಣದ ಆಯ್ಕೆಯೊಂದಿದೆ ಆಕರ್ಷಕವಾಗಿದೆ. ಈ ಕಾರಿನ ಇಂಟಿರಿಯರ್ ‘ಡಬ್ಲ್ಯುಎಸ್' ಮಾದರಿಯ ಪ್ರೇರಣೆಯನ್ನು ಪಡೆದುಕೊಂಡಿದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಕ್ಯಾಮ್ರಿ ಕಾರಿನ 40ನೇ ವಾರ್ಷಿಕೋತ್ಸವಕ್ಕೆ ಬ್ಲ್ಯಾಕ್ ಎಡಿಷನ್ ಬಿಡುಗಡೆಗೊಳಿಸಿದ ಟೊಯೊಟಾ

ಇಂಟಿರಿಯರ್ ನಲ್ಲಿ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೇನೆಮೆಂಟ್ ಸಿಸ್ಟಂ, ಜೆಬಿಎಲ್ ಆಡಿಯೊ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಆಗಿ ಹೋಂದಾಣಿಕೆ ಮಾಡಬಹುದಾದ ಫ್ರಂಟ್ ಪ್ಯಾಸೆಂಜರ್ ಸೀಟ್ ಮತ್ತು ಡ್ರೈವರ್ ಸೀಟ್ ಮತ್ತು ಹೆಡ್-ಅಪ್ ಡಿಸ್ ಪ್ಲೇಯನ್ನು ಹೊಂದಿದೆ.

ಕ್ಯಾಮ್ರಿ ಕಾರಿನ 40ನೇ ವಾರ್ಷಿಕೋತ್ಸವಕ್ಕೆ ಬ್ಲ್ಯಾಕ್ ಎಡಿಷನ್ ಬಿಡುಗಡೆಗೊಳಿಸಿದ ಟೊಯೊಟಾ

ಬ್ಲ್ಯಾಕ್ ಎಡಿಷನ್ ಮಾದರಿಯ ಮೆಕ್ಯಾನಿಕಲ್‌ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. 2.5-ಲೀಟರ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಇದು ಸೆಟಪ್ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಅನ್ನು ಒಳಗೊಂಡಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಕ್ಯಾಮ್ರಿ ಕಾರಿನ 40ನೇ ವಾರ್ಷಿಕೋತ್ಸವಕ್ಕೆ ಬ್ಲ್ಯಾಕ್ ಎಡಿಷನ್ ಬಿಡುಗಡೆಗೊಳಿಸಿದ ಟೊಯೊಟಾ

ಇದರಲ್ಲಿ ಪೆಟ್ರೋಲ್ ಎಂಜಿನ್ 176 ಬಿಹೆಚ್‍ಪಿ ಪವರ್ ಮತ್ತು 221 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ, ಇನ್ನು ಎಲೆಕ್ಟ್ರಿಕ್ ಮೋಟಾರ್ 118 ಬಿಹೆಚ್‍ಪಿ ಪವರ್ ಮತ್ತು 202 ಎನ್ಎಂ ಉತ್ಪಾದಿಸುತ್ತದೆ.

ಕ್ಯಾಮ್ರಿ ಕಾರಿನ 40ನೇ ವಾರ್ಷಿಕೋತ್ಸವಕ್ಕೆ ಬ್ಲ್ಯಾಕ್ ಎಡಿಷನ್ ಬಿಡುಗಡೆಗೊಳಿಸಿದ ಟೊಯೊಟಾ

ಟೊಯೊಟಾ ಕ್ಯಾಮ್ರಿ ಬ್ಲ್ಯಾಕ್ ಎಡಿಶನ್ ಮಾದರಿಯಲ್ಲಿ ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್‌ಗಳು, ಎಬಿಎಸ್ ವಿಥ್ ಇಬಿಡಿ, ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್‌ವ್ಯೂ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಫಂಕ್ಷನ್ ಅನ್ನು ಅಳವಡಿಸಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Camry Black Edition Launched In Japan. Read In Kannada.
Story first published: Tuesday, August 11, 2020, 12:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X