Just In
- 43 min ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 3 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 3 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 5 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Movies ನಿರಂತರ ಪ್ಲಾಫ್ ಸಿನಿಮಾಳನ್ನ ನೀಡಿದ ಈ ವಿಶ್ವಸುಂದರಿ ಯಾರು ಗೊತ್ತಾ...?
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ಯಾಮ್ರಿ ಕಾರಿನ 40ನೇ ವಾರ್ಷಿಕೋತ್ಸವಕ್ಕೆ ಬ್ಲ್ಯಾಕ್ ಎಡಿಷನ್ ಬಿಡುಗಡೆಗೊಳಿಸಿದ ಟೊಯೊಟಾ
ಟೊಯೊಟಾ ಕಂಪನಿಯು ಕ್ಯಾಮ್ರಿ ಕಾರಿನ 40ನೇ ವಾರ್ಷಿಕೋತ್ಸವದ ಪ್ರಯುಕ್ತ ತನ್ನ ತವರುಮನೆ ಜಪಾನ್ನಲ್ಲಿ ಹೊಸ 'ಬ್ಲ್ಯಾಕ್ ಎಡಿಷನ್' ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಟೊಯೊಟಾ ಕ್ಯಾಮ್ರಿ 'ಬ್ಲ್ಯಾಕ್ ಎಡಿಷನ್' ಮಾದರಿಯ ಬೆಲೆಯು ರೂ.29.8 ಲಕ್ಷಗಳಾಗಿದೆ.
ಸಾಮಾನ್ಯ ಕ್ಯಾಮ್ರಿ ಮಾದರಿಗೆ ಬ್ಲ್ಯಾಕ್ ಎಡಿಷನ್ ಮಾದರಿಯನ್ನು ಹೋಲಿಸಿದರೆ ರೂಫ್, ಎ-ಪಿಲ್ಲರ್, ಬಿ-ಪಿಲ್ಲರ್ ಮತ್ತು ಸಿ-ಪಿಲ್ಲರ್ನ ಭಾಗಗಳಲ್ಲಿ ಬ್ಲ್ಯಾಕ್ ಬಣ್ಣದ ಅಂಶಗಳನ್ನು ಒಳಗೊಂಡಿದೆ. ಬೂಟ್ನಲ್ಲಿ ಬ್ಲ್ಯಾಕ್ ಸ್ಪಾಯ್ಲರ್ ಕೂಡ ಸಂಯೋಜಿಸಲ್ಪಟ್ಟಿದೆ, ಇದು ಹೊರಭಾಗಕ್ಕೆ ಸ್ಪೋರ್ಟಿ ಸ್ಪರ್ಶವನ್ನು ನೀಡುತ್ತದೆ. ಈ ಹೊಸ ಕ್ಯಾಮ್ರಿ 'ಬ್ಲ್ಯಾಕ್ ಎಡಿಷನ್ ಮಾದರಿಯಲ್ಲಿ 18 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಮತ್ತು ಲೆಕ್ಸಸ್ ತರಹದ 'ಸ್ಪಿಂಡಲ್-ಆಕಾರದ' ಫ್ರಂಟ್ ಗ್ರಿಲ್ ಅನ್ನು ಹೊಂದಿದೆ.
ಹೊಸ ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ಹೆಡ್ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ಗಳು ಆಕರ್ಷಕವಾಗಿದೆ. ಇನ್ನು ಈ ಕಾರಿನಲ್ಲಿ ಸೈಡ್ ಸ್ಕರ್ಟ್ಗಳು, ಫಾಕ್ಸ್ ಲಿಪ್ ಸ್ಪಾಯ್ಲರ್ ಮತ್ತು ಫೇಕ್ ರೇರ್ ಡಿಫ್ಯೂಸರ್ ಸಹ ಒಳಗೊಂಡಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ
ಈ ಬದಲಾವಣೆಗಳನ್ನು ಹೊರತುಪಡಿಸಿದರೆ ಇತರ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೊಂದಿಲ್ಲ. ಸಾಮಾನ್ಯ ಟೊಯೊಟಾ ಕ್ಯಾಮ್ರಿ ಕಾರಿನಂತಿದೆ. ಈ ಕ್ಯಾಮ್ರಿ ಬ್ಲ್ಯಾಕ್ ಎಡಿಷನ್ ಮಾದರಿಯಲ್ಲಿ ಆಕರ್ಷಕ ಇಂಟಿರಿಯರ್ ಅನ್ನು ಹೊಂದಿದೆ.
ಈ ಕ್ಯಾಮ್ರಿ ಬ್ಲ್ಯಾಕ್ ಎಡಿಷನ್ ಮಾದರಿಯ ಇಂಟಿರಿಯರ್ ಡ್ಯುಯಲ್-ಟೋನ್ ಬಣ್ಣದ ಆಯ್ಕೆಯೊಂದಿದೆ ಆಕರ್ಷಕವಾಗಿದೆ. ಈ ಕಾರಿನ ಇಂಟಿರಿಯರ್ 'ಡಬ್ಲ್ಯುಎಸ್' ಮಾದರಿಯ ಪ್ರೇರಣೆಯನ್ನು ಪಡೆದುಕೊಂಡಿದೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್ಯುವಿ
ಇಂಟಿರಿಯರ್ ನಲ್ಲಿ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೇನೆಮೆಂಟ್ ಸಿಸ್ಟಂ, ಜೆಬಿಎಲ್ ಆಡಿಯೊ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಆಗಿ ಹೋಂದಾಣಿಕೆ ಮಾಡಬಹುದಾದ ಫ್ರಂಟ್ ಪ್ಯಾಸೆಂಜರ್ ಸೀಟ್ ಮತ್ತು ಡ್ರೈವರ್ ಸೀಟ್ ಮತ್ತು ಹೆಡ್-ಅಪ್ ಡಿಸ್ ಪ್ಲೇಯನ್ನು ಹೊಂದಿದೆ.
ಬ್ಲ್ಯಾಕ್ ಎಡಿಷನ್ ಮಾದರಿಯ ಮೆಕ್ಯಾನಿಕಲ್ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. 2.5-ಲೀಟರ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಇದು ಸೆಟಪ್ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಅನ್ನು ಒಳಗೊಂಡಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್ಆರ್-ವಿ ಎಸ್ಯುವಿ
ಇದರಲ್ಲಿ ಪೆಟ್ರೋಲ್ ಎಂಜಿನ್ 176 ಬಿಹೆಚ್ಪಿ ಪವರ್ ಮತ್ತು 221 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ, ಇನ್ನು ಎಲೆಕ್ಟ್ರಿಕ್ ಮೋಟಾರ್ 118 ಬಿಹೆಚ್ಪಿ ಪವರ್ ಮತ್ತು 202 ಎನ್ಎಂ ಉತ್ಪಾದಿಸುತ್ತದೆ.
ಟೊಯೊಟಾ ಕ್ಯಾಮ್ರಿ ಬ್ಲ್ಯಾಕ್ ಎಡಿಶನ್ ಮಾದರಿಯಲ್ಲಿ ಸುರಕ್ಷತೆಗಾಗಿ ಏಳು ಏರ್ಬ್ಯಾಗ್ಗಳು, ಎಬಿಎಸ್ ವಿಥ್ ಇಬಿಡಿ, ಪಾರ್ಕಿಂಗ್ ಸೆನ್ಸರ್ಗಳು, ರಿಯರ್ವ್ಯೂ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಫಂಕ್ಷನ್ ಅನ್ನು ಅಳವಡಿಸಿದೆ.