ಭಾರತದಲ್ಲೂ ಬಿಡುಗಡೆಯಾಗಲಿದೆ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಜಪಾನ್ ಕಾರು ಉತ್ಪಾದನಾ ಕಂಪನಿಯಾದ ಟೊಯೊಟಾ ತನ್ನ ಜನಪ್ರಿಯ ಎಸ್‌ಯುವಿ ಕಾರು ಮಾದರಿಯಾದ ರಾವ್4 ಹೈಬ್ರಿಡ್ ಕಾರು ಮಾದರಿಯನ್ನು ಭಾರತದಲ್ಲೂ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಕಾರು 2021ರ ಮಧ್ಯಂತರದಲ್ಲಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿವೆ.

ಬಿಡುಗಡೆಯಾಗಲಿದೆ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಭಾರತದಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಆವೃತ್ತಿಗಳಲ್ಲಿ ಹೈಬ್ರಿಡ್ ಪವರ್‌ಟ್ರೈನ್ ಕಾರುಗಳ ಮಾರಾಟವು ಹೆಚ್ಚುತ್ತಿದ್ದು, ಟೊಯೊಟಾ ಕಂಪನಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆ ಹೊಂದಿರುವ ರಾವ್4 ಎಸ್‌ಯುವಿ ಮಾದರಿಯನ್ನು ಭಾರತದಲ್ಲೂ ಬಿಡುಗಡೆಗಾಗಿ ಮಾರುಕಟ್ಟೆ ಅಧ್ಯಯನ ನಡೆಸಿದೆ. ಮಾರುಕಟ್ಟೆ ಅಧ್ಯಯನದಲ್ಲಿ ಹೈಬ್ರಿಡ್ ಕಾರು ಮಾದರಿಗಳಿಗೆ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದ್ದು, ಹೊಸ ಆಮದು ನೀತಿ ಅಡಿ ರಾವ್4 ಕಾರು ಮಾರಾಟ ಮಾಡಲು ನಿರ್ಧರಿಸಿದೆ.

ಬಿಡುಗಡೆಯಾಗಲಿದೆ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಭಾರತದಲ್ಲಿ ಸದ್ಯ ಕೇಂದ್ರ ಸರ್ಕಾರವು ಹೊಸ ಆಮದು ನೀತಿ ಜಾರಿಗೆ ತಂದಿರುವುದು ವಿದೇಶಿ ಆಟೋ ಕಂಪನಿಗಳಿಗೆ ವರವಾಗಿ ಪರಿಣಮಿಸಿದ್ದು, ಟೊಯೊಟಾ ಕೂಡಾ ಹೊಸ ಆಮದು ನೀತಿ ಅಡಿಯಲ್ಲೇ ವೆಲ್‌ಫೈರ್ ಕಾರು ಮಾರಾಟಕ್ಕೆ ಚಾಲನೆ ನೀಡಿದೆ.

ಬಿಡುಗಡೆಯಾಗಲಿದೆ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಇದೀಗ ರಾವ್4 ಹೈಬ್ರಿಡ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದು, ಹೊಸ ಆಮದು ನೀತಿ ಅಡಿ ಪ್ರತಿ ವಿದೇಶಿ ಕಾರು ಉತ್ಪಾದನಾ ಕಂಪನಿಗಳು 2500 ಕಾರುಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಬಿಡುಗಡೆಯಾಗಲಿದೆ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಟೊಯೊಟಾ ಕೂಡಾ ಹೊಸ ಆಮದು ನೀತಿ ಅಡಿ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಕೆಲವು ಐಷಾರಾಮಿ ಕಾರುಗಳನ್ನು ಹೊಸ ಆಮದು ನೀತಿ ಅಡಿಯಲ್ಲಿ ಮಾರಾಟ ಮಾಡುತ್ತಿದ್ದು, ವೆಲ್‌ಫೈರ್ ಎಂಪಿವಿ ನಂತರ ಇದೀಗ ರಾವ್4 ಬಿಡುಗಡೆಯ ಸಿದ್ದತೆಯಲ್ಲಿದೆ.

ಬಿಡುಗಡೆಯಾಗಲಿದೆ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಜಾಗತಿಕವಾಗಿ ಮಾರಾಟಗೊಳ್ಳುವ ಟಾಪ್10 ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ರಾವ್4 ಹೈಬ್ರಿಡ್ ಎಸ್‌ಯುವಿ ಮಾದರಿಯು ಐಷಾರಾಮಿ ಫೀಚರ್ಸ್‌ನೊಂದಿಗೆ ಅತ್ಯುತ್ತಮ ಬೇಡಿಕೆ ಪಡೆದುಕೊಂಡಿದ್ದು, ಭಾರತದಲ್ಲೂ ಹೊಸ ಕಾರು ಐಷಾರಾಮಿ ಕಾರುಗಳ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಬಿಡುಗಡೆಯಾಗಲಿದೆ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ರಾವ್4 ಕಾರು ಮಾದರಿಯಲ್ಲಿ 2.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೈಬ್ರಿಡ್ ತಂತ್ರಜ್ಞಾನ ಜೋಡಣೆ ಮಾಡಲಾಗಿದ್ದು, ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಇಂಧನ ಕಾರ್ಯಕ್ಷಮತೆಯಲ್ಲೂ ರಾವ್4 ಕಾರು ಮುಂಚೂಣಿಯಲ್ಲಿದೆ.

ಬಿಡುಗಡೆಯಾಗಲಿದೆ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಹೈಬ್ರಿಡ್ ತಂತ್ರಜ್ಞಾನವು ಆಲ್ ವೀಲ್ಹ್ ಡ್ರೈವ್ ಮೋಡ್‌ನೊಂದಿಗೆ ನಾಲ್ಕು ಚಕ್ರಗಳಿಗೂ ಸಮಾನ ಶಕ್ತಿ ಪೂರೈಕೆಯೊಂದಿಗೆ 218-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಕ್ವಿಕ್ ಆಟೋ ಗೇರ್‌ಬಾಕ್ಸ್‌ ಪ್ರೇರಣೆ ಮೂಲಕ ಪರ್ಫಾಮೆನ್ಸ್‌ನಲ್ಲಿ ಸಾಕಷ್ಟು ಬಲಿಷ್ಠತೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಡುಗಡೆಯಾಗಲಿದೆ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಟೊಯೊಟಾ ಕಂಪನಿಯು ಈಗಾಗಲೇ ಹೈಬ್ರಿಡ್ ತಂತ್ರಜ್ಞಾನ ಸಾಕಷ್ಟು ಸುಧಾರಣೆ ಕಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಪ್ರಿಯಸ್ ಹೈಬ್ರಿಡ್ ಮಾದರಿಗಿಂತಲೂ ರಾವ್4 ಕಾರು ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಸಿದ್ದಗೊಂಡಿದೆ.

ಬಿಡುಗಡೆಯಾಗಲಿದೆ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಐದನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿರುವ ರಾವ್4 ಎಸ್‌ಯುವಿ ಮಾದರಿಯು ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, 4,600-ಎಂಎಂ ಉದ್ದ, 1,855-ಎಂಎಂ ಅಗಲ, 1,685-ಎಂಎಂ ಎತ್ತರ ಮತ್ತು 2,690-ಎಂಎಂ ವೀಲ್ಹ್ ಬೆಸ್ ಹೊಂದಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಬಿಡುಗಡೆಯಾಗಲಿದೆ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ರಾವ್4 ಎಸ್‌ಯುವಿ ಬೆಲೆ(ಅಂದಾಜು)

ಹೊಸ ರಾವ್4 ಕಾರು ಮಾದರಿಯನ್ನು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳುವುದರಿಂದ ಹೊಸ ಕಾರು ತುಸು ದುಬಾರಿಯಾಗಿರಲಿದ್ದು, ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ.55 ಲಕ್ಷದಿಂದ ರೂ. 60 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

Most Read Articles

Kannada
Read more on ಟೊಯೊಟಾ toyota
English summary
Toyota RAV4 Expected India Launch Next Year. Read in Kannada.
Story first published: Tuesday, August 11, 2020, 19:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X