ಬಲೆನೊ ನಂತರ ಮತ್ತೊಂದು ರಿಬ್ಯಾಡ್ಜ್ ಕಾರು ಬಿಡುಗಡೆಗೊಳಿಸಲಿದೆ ಟೊಯೊಟಾ

ಟೊಯೊಟಾ ಕಿರ್ಲೊಸ್ಕರ್ ಮೋಟರ್ ಹಾಗೂ ಮಾರುತಿ ಸುಜುಕಿ ಕಂಪನಿಗಳು 2017ರಲ್ಲಿ ಜಂಟಿ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ ಟೊಯೊಟಾ ಕಂಪನಿ ಹಾಗೂ ಮಾರುತಿ ಸುಜುಕಿ ಕಂಪನಿಗಳು ತಮ್ಮ ಕಾರುಗಳನ್ನು ಒಬ್ಬರಿಗೊಬ್ಬರು ತಮ್ಮ ಕಂಪನಿಗಳ ಬ್ಯಾಡ್ಜ್ ಅಡಿ ತಯಾರಿಸಿ ಬಿಡುಗಡೆಗೊಳಿಸಿ, ಮಾರಾಟ ಮಾಡಬಹುದು.

ಬಲೆನೊ ನಂತರ ಮತ್ತೊಂದು ರಿಬ್ಯಾಡ್ಜ್ ಕಾರು ಬಿಡುಗಡೆಗೊಳಿಸಲಿದೆ ಟೊಯೊಟಾ

ಇದರಂತೆ ಕಳೆದ ವರ್ಷ ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಕಂಪನಿಯ ಬಲೆನೊ ಕಾರ್ ಅನ್ನು ಗ್ಲಾಂಜಾ ಹೆಸರಿನಲ್ಲಿ ತಯಾರಿಸಿ ಬಿಡುಗಡೆಗೊಳಿಸಿತ್ತು. ವರದಿಗಳ ಪ್ರಕಾರ ಟೊಯೊಟಾ ಕಂಪನಿಯು ಈಗ ಎರ್ಟಿಗಾ ಕಾರ್ ಅನ್ನು ತನ್ನ ಬ್ಯಾಡ್ಜ್ ಅಡಿಯಲ್ಲಿ ತಯಾರಿಸಿ ಬಿಡುಗಡೆಗೊಳಿಸಲಿದೆ.

ಬಲೆನೊ ನಂತರ ಮತ್ತೊಂದು ರಿಬ್ಯಾಡ್ಜ್ ಕಾರು ಬಿಡುಗಡೆಗೊಳಿಸಲಿದೆ ಟೊಯೊಟಾ

ಟೊಯೊಟಾ ಕಂಪನಿಯು ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದ್ದು, ಈ ವರ್ಷ ರಿ ಬ್ಯಾಡ್ಜ್ ಮಾಡಲಾಗುವ ಎರ್ಟಿಗಾ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ರಿ ಬ್ಯಾಡ್ಜ್ ಮಾಡಲಾದ ಗ್ಲಾಂಜಾ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಕಾರಣಕ್ಕೆ ಟೊಯೊಟಾ ಕಂಪನಿಯು ಈ ನಿರ್ಧಾರಕ್ಕೆ ಬಂದಿದೆ.

ಬಲೆನೊ ನಂತರ ಮತ್ತೊಂದು ರಿಬ್ಯಾಡ್ಜ್ ಕಾರು ಬಿಡುಗಡೆಗೊಳಿಸಲಿದೆ ಟೊಯೊಟಾ

ಟೊಯೊಟಾ ರಿಬ್ಯಾಡ್ಜ್ ಮಾಡುವ ಈ ಕಾರು ಎರ್ಟಿಗಾ ಕಾರಿಗಿಂತ ವಿಭಿನ್ನವಾದ ಸಿಗ್ನೇಚರ್ ಡಿಸೈನ್ ಅಂಶಗಳನ್ನು ಹೊಂದಿರಲಿದೆ. ಈ ಕಾರಿನಲ್ಲಿ ಮಾಡಲಾಗುವ ಸಣ್ಣ ಪುಟ್ಟ ಬದಲಾವಣೆಗಳಲ್ಲಿ ಟೊಯೊಟಾದ ಎರಡು ಸ್ಲಾಟ್ ಗ್ರಿಲ್ ಡಿಸೈನ್, ಕ್ರೋಮ್ ಅಂಶಗಳು ಸೇರಿವೆ.

ಬಲೆನೊ ನಂತರ ಮತ್ತೊಂದು ರಿಬ್ಯಾಡ್ಜ್ ಕಾರು ಬಿಡುಗಡೆಗೊಳಿಸಲಿದೆ ಟೊಯೊಟಾ

ಟೊಯೊಟಾ ತನ್ನ ಕಂಪನಿಯ ಡಿಸೈನ್‍‍ಗಳಿಗೆ ಅನುಗುಣವಾಗಿ ಹೆಡ್‍‍ಲೈಟ್ ಹಾಗೂ ಟೇಲ್‍‍ಲೈಟ್ ಅಸೆಂಬ್ಲಿಗಳನ್ನು ರಿ ಡಿಸೈನ್ ಮಾಡುವ ಸಾಧ್ಯತೆಗಳಿವೆ. ಇಂಟಿರಿಯರ್‍‍ನಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋಗಳಿಗೆ ಹೊಂದಿಕೊಳ್ಳುವ ದೊಡ್ಡ ಗಾತ್ರದ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಇರಲಿದೆ.

ಬಲೆನೊ ನಂತರ ಮತ್ತೊಂದು ರಿಬ್ಯಾಡ್ಜ್ ಕಾರು ಬಿಡುಗಡೆಗೊಳಿಸಲಿದೆ ಟೊಯೊಟಾ

ಇದರ ಜೊತೆಗೆ ಲೆದರ್ ಸ್ಟೀಯರಿಂಗ್ ವ್ಹೀಲ್, ಯುವಿ ಕಟ್ ಗ್ಲಾಸ್, ರಿವರ್ಸ್ ಪಾರ್ಕಿಂಗ್ ಕ್ಯಾಮರಾ, ಆಟೋಮ್ಯಾಟಿಕ್ ಹೆಡ್‍‍ಲ್ಯಾಂಪ್ ಹಾಗೂ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್‍ ಸೇರಿದಂತೆ ಹಲವಾರು ಫೀಚರ್‍‍ಗಳಿರಲಿವೆ.

ಬಲೆನೊ ನಂತರ ಮತ್ತೊಂದು ರಿಬ್ಯಾಡ್ಜ್ ಕಾರು ಬಿಡುಗಡೆಗೊಳಿಸಲಿದೆ ಟೊಯೊಟಾ

ರಿಬ್ಯಾಡ್ಜ್ ಮಾಡಲಾಗುವ ಈ ಎರ್ಟಿಗಾ ಕಾರಿನಲ್ಲಿ 1.5 ಲೀಟರಿನ 4 ಸಿಲಿಂಡರ್ ಕೆ 15 ಬಿ ಮೈಲ್ಡ್ ಹೈಬ್ರಿಡ್ ಬಿಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 102 ಬಿ‍‍ಹೆಚ್‍‍ಪಿ ಪವರ್ ಹಾಗೂ 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಲೆನೊ ನಂತರ ಮತ್ತೊಂದು ರಿಬ್ಯಾಡ್ಜ್ ಕಾರು ಬಿಡುಗಡೆಗೊಳಿಸಲಿದೆ ಟೊಯೊಟಾ

ಈ ಎಂಜಿನ್‍‍ನಲ್ಲಿ 5 ಸ್ಪೀಡ್‍ನ ಮ್ಯಾನುವಲ್ ಹಾಗೂ 4 ಸ್ಪೀಡ್‍‍ನ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಅಳವಡಿಸಲಾಗುವುದು. ಈ ಹೊಸ ಟೊಯೊಟಾ ಎರ್ಟಿಗಾ ಎಂಪಿವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.7.5 ಲಕ್ಷದಿಂದ ರೂ.12 ಲಕ್ಷಗಳಾಗುವ ಸಾಧ್ಯತೆಗಳಿವೆ.

ಬಲೆನೊ ನಂತರ ಮತ್ತೊಂದು ರಿಬ್ಯಾಡ್ಜ್ ಕಾರು ಬಿಡುಗಡೆಗೊಳಿಸಲಿದೆ ಟೊಯೊಟಾ

ಈ ಎಂಪಿವಿಯನ್ನು ಸ್ಟಾಂಡರ್ಡ್ ವಾರಂಟಿಯೊಂದಿಗೆ ಮಾರಾಟ ಮಾಡಲಾಗುವುದು. ಈ ಮೊದಲು ಟೊಯೊಟಾ ಕಂಪನಿಯು ಬಲೆನೊ ಕಾರ್ ಅನ್ನು ರಿಬ್ಯಾಡ್ಜ್ ಮಾಡಿ ಬಿಡುಗಡೆಗೊಳಿಸಿತ್ತು. ಈಗ ಎರ್ಟಿಗಾ ಕಾರ್ ಅನ್ನು ರಿಬ್ಯಾಡ್ಜ್ ಮಾಡಿ ಬಿಡುಗಡೆಗೊಳಿಸಲಿದೆ.

ಬಲೆನೊ ನಂತರ ಮತ್ತೊಂದು ರಿಬ್ಯಾಡ್ಜ್ ಕಾರು ಬಿಡುಗಡೆಗೊಳಿಸಲಿದೆ ಟೊಯೊಟಾ

ಇದಾದ ನಂತರ ವಿಟಾರ ಬ್ರಿಝಾ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಎರಡೂ ಕಂಪನಿಗಳ ಒಪ್ಪಂದದ ಪ್ರಕಾರ ಈ ಕಂಪನಿಗಳು ಹೈಬ್ರಿಡ್ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಲಿವೆ.

ಬಲೆನೊ ನಂತರ ಮತ್ತೊಂದು ರಿಬ್ಯಾಡ್ಜ್ ಕಾರು ಬಿಡುಗಡೆಗೊಳಿಸಲಿದೆ ಟೊಯೊಟಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟೊಯೊಟಾ ಕಂಪನಿಯು ರಿಬ್ಯಾಡ್ಜ್ ಮಾಡಿ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಟೊಯೊಟಾ ಮಾರುತಿ ಸುಜುಕಿ ಕಂಪನಿಯ ಈ ಕಾರುಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿದರೆ ಸಾಕು. ರಿಬ್ಯಾಡ್ಜ್ ಮಾಡಲಾಗುವ ಕಾರುಗಳು ಹೆಚ್ಚಿನ ಬೆಲೆಯನ್ನು ಹೊಂದುವ ಸಾಧ್ಯತೆಗಳಿವೆ.

Most Read Articles

Kannada
Read more on ಟೊಯೊಟಾ toyota
English summary
Toyota To Launch Re-Badged Maruti Suzuki Ertiga This Year. Read in Kannada.
Story first published: Friday, January 24, 2020, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X