Just In
Don't Miss!
- News
ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾ ಖಾನ್ ವಿಧಿವಶ
- Movies
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲಾಕ್ಡೌನ್ ನಂತರ ಚೇತರಿಸಿಕೊಂಡ ಟೊಯೊಟಾ ಹೊಸ ಕಾರುಗಳ ಮಾರಾಟ
ಲಾಕ್‌ಡೌನ್ ವೇಳೆ ಸಂಪೂರ್ಣವಾಗಿ ನೆಲಕಚ್ಚಿದ್ದ ಹೊಸ ವಾಹನ ಮಾರಾಟವು ಇದೀಗ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಟೊಯೊಟಾ ಸೇರಿದಂತೆ ವಿವಿಧ ಆಟೋ ಉತ್ಪಾದನಾ ಕಂಪನಿಗಳು ತಮ್ಮ ಮಾರಾಟ ಪ್ರಮಾಣದಲ್ಲಿ ಹೆಚ್ಚಳ ಕಂಡಿವೆ.

ಟೊಯೊಟಾ ಕಂಪನಿಯು ಲಾಕ್‌ಡೌನ್ ತೆರವುಗೊಂಡ ನಂತರ ಮೇ ಮತ್ತು ಜೂನ್ ಅವಧಿಯಲ್ಲಿ 2 ಸಾವಿರ ಯುನಿಟ್ ಮತ್ತು 3 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಇದೀಗ ಜುಲೈ ಅವಧಿಯಲ್ಲಿ ಬರೋಬ್ಬರಿ 5,386 ಯುನಿಟ್ ಮಾರಾಟ ಮಾಡಿದ್ದು, ಲಾಕ್‌ಡೌನ್ ತೆರವುಗೊಂಡ ಇದೇ ಮೊದಲ ಬಾರಿಗೆ ಬಹುತೇಕ ಕಾರು ಕಂಪನಿಗಳು ಉತ್ತಮ ಮಾರಾಟ ಪ್ರಮಾಣವನ್ನು ತಮ್ಮದಾಗಿಸಿಕೊಂಡಿವೆ.

ಹೊಸ ವಾಹನಗಳ ಮಾರಾಟ ಪ್ರಮಾಣವು ಕಳೆದ ವರ್ಷದ ಮಾರಾಟ ಪ್ರಮಾಣಕ್ಕಿಂತಲೂ ಕಡಿಮೆಯಾಗಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಇದು ಉತ್ತಮ ವಹಿವಾಟು ಎಂದು ಅಂದಾಜಿಸಲಾಗಿದ್ದು, ಮುಂಬರುವ ಕೆಲವು ತಿಂಗಳಿನಲ್ಲಿ ಪರಿಸ್ಥಿತಿ ಸುಧಾರಿಸುವ ನೀರಿಕ್ಷೆಯಿದೆ.

ಇನ್ನು ಲಾಕ್‍ಡೌನ್ ಸಡಿಲಿಕೆ ನಂತರ ಹೊಸ ವಾಹನಗಳ ಮಾರಾಟದಲ್ಲಿ ತುಸು ಚೇತರಿಕೆ ಕಂಡುಬಂದಿದ್ದರೂ ನೀರಿಕ್ಷಿತ ಮಟ್ಟದಲ್ಲಿ ಹೊಸ ವಾಹನ ಮಾರಾಟ ಪ್ರಮಾಣವು ದಾಖಲಾಗದಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದೆ ಎನ್ನಬಹುದು.

ಹೀಗಾಗಿ ಹೊಸ ವಾಹನಗಳ ಮಾರಾಟ ಪ್ರಮಾಣವನ್ನು ಸುಧಾರಿಸಲು ಬಹುತೇಕ ಆಟೋ ಕಂಪನಿಗಳು ವಿವಿಧ ಆಫರ್‌ಗಳನ್ನು ಘೋಷಣೆ ಮಾಡಲಾಗುತ್ತಿದ್ದು, ಟೊಯೊಟಾ ಕಂಪನಿಯು ಸಹ ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಸ್ಪೆಷಲ್ ಲೋನ್ ಆಫರ್ ಘೋಷಣೆ ಮಾಡಿದೆ.

ಲಾಕ್‌ಡೌನ್‌ನಿಂದ ತಗ್ಗಿರುವ ಹೊಸ ವಾಹನ ಮಾರಾಟವನ್ನು ಸುಧಾರಿಸಲು ಗರಿಷ್ಠ ಅವಧಿಗಾಗಿ ಲೋನ್ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಆಯ್ದ ಕಾರುಗಳ ಮೇಲೆ ಕ್ಯಾಶ್‌ಬ್ಯಾಕ್ ಆಫರ್ ಮತ್ತು ಕನಿಷ್ಠ ಪ್ರಮಾಣದ ಇಎಂಐ ಸೌಲಭ್ಯಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

ಸದ್ಯಕ್ಕೆ ಹೊಸ ಕಾರು ಖರೀದಿ ಸಾಧ್ಯವಿಲ್ಲವೆಂದು ಮುಂದೂಡುತ್ತಿರುವ ಗ್ರಾಹಕರಿಗೆ ಹೊಸ ಲೋನ್ ಆಫರ್‌ಗಳು ಸಾಕಷ್ಟು ಅನುಕೂಲಕರವಾಗಿದ್ದು, ಯಾವುದೇ ಹೆಚ್ಚುವರಿ ಮೊತ್ತವಿಲ್ಲದೆ ಸಾಲ ಮರುಪಾವತಿಗಾಗಿ ಸಾಕಷ್ಟು ಸಮಯಾವಕಾಶ ನೀಡಲಾಗುತ್ತಿದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಗ್ಲಾಂಝಾ ಮತ್ತು ಇನೋವಾ ಕ್ರಿಸ್ಟಾ ಕಾರು ಖರೀದಿ ಮೇಲೆ ವಿವಿಧ ಮಾದರಿಯ ಆಫರ್ ಘೋಷಿಸಿದ್ದು, ಅತಿ ಕಡಿಮೆ ಇಎಂಐ ಮತ್ತು ಬೈಬ್ಯಾಕ್ ಆಫರ್‌ಗಳನ್ನು ಪರಿಚಯಿಸಿದೆ.

ಹೊಸ ಆಫರ್‌ಗಳಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಖರೀದಿಯ ಮೇಲೆ ರೂ.15 ಸಾವಿರದಷ್ಟು ಕ್ಯಾಶ್‌ಬ್ಯಾಕ್, ಎಕ್ಸ್‌ಚೆಂಜ್ ಬೋನಸ್ ಮತ್ತು ಬೈಬ್ಯಾಕ್ ಆಫರ್ ನೀಡಲಾಗುತ್ತಿದ್ದು, ಹೊಸ ಆಫರ್ ಅನ್ನು ಸಿಮೀತ ಅವಧಿಗಾಗಿ ಮಾತ್ರವೇ ನೀಡಲಾಗುತ್ತಿದೆ.
MOST READ: ವಾಹನ ಖರೀದಿಯನ್ನು ಸುಲಭವಾಗಿಸಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಹಾಗೆಯೇ ಇನೋವಾ ಕ್ರಿಸ್ಟಾ ಕಾರು ಖರೀದಿಯ ಮೇಲೆ ಮೊದಲ ಮೂರು ತಿಂಗಳು ಮಾಸಿಕವಾಗಿ ರೂ.9,999 ಪ್ಯಾಕೇಜ್ ಹೊಂದಿರುವ ಅತಿ ಕಡಿಮೆ ಇಎಂಐ ಆಫರ್ ನೀಡಲಾಗುತ್ತಿದ್ದು, ಎಂಪಿವಿ ಕಾರು ಖರೀದಿಗೂ ಬೈಬ್ಯಾಕ್ ಆಯ್ಕೆ ನೀಡಲಾಗಿದೆ.