ದೀಪಾವಳಿ ಸಂಭ್ರಮದ ವೇಳೆ ಭರ್ಜರಿ ಕಾರು ಮಾರಾಟ ಮಾಡಿದ ಟೊಯೊಟಾ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು ನವೆಂಬರ್ ಅವಧಿಯ ಕಾರು ಮಾರಾಟ ವರದರಿಯನ್ನು ಪ್ರಕಟಿಸಿದ್ದು, ಕಂಪನಿಯು ದೀಪಾವಳಿ ಸಂಭ್ರಮಾಚರಣೆಯ ವೇಳೆ ಭಾರೀ ಪ್ರಮಾಣದ ಕಾರು ಮಾರಾಟದೊಂದಿಗೆ ಶೇ.2.4 ರಷ್ಟು ಬೆಳವಣಿಗೆ ಸಾಧಿಸಿದೆ.

ದೀಪಾವಳಿ ಸಂಭ್ರಮದ ವೇಳೆ ಭರ್ಜರಿ ಕಾರು ಮಾರಾಟ ಮಾಡಿದ ಟೊಯೊಟಾ

ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟೊ ಕಂಪನಿಯು ನವೆಂಬರ್ ಅವಧಿಯಲ್ಲಿ ಒಟ್ಟು 8,508 ಯುನಿಟ್ ಕಾರು ಮಾರಾಟ ಮಾಡಿದ್ದು, ಕಳೆದ ವರ್ಷದ ನವೆಂಬರ್ ಅವಧಿಯಲ್ಲಿ ಕಾರು ಮಾರಾಟಕ್ಕೆ ಹೋಲಿಕೆ ಮಾಡಿದ್ದಲ್ಲಿ ಶೇ.2.4ರಷ್ಟು ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ 8,312 ಯುನಿಟ್ ಮಾರಾಟ ಮಾಡಿದ್ದ ಟೊಯೊಟಾ ಕಂಪನಿಯು ಇದೀಗ ಹೊಸ ಕಾರು ಮಾದರಿಗಳ ಮೂಲಕ ಗ್ರಾಹಕರ ಬೇಡಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ದೀಪಾವಳಿ ಸಂಭ್ರಮದ ವೇಳೆ ಭರ್ಜರಿ ಕಾರು ಮಾರಾಟ ಮಾಡಿದ ಟೊಯೊಟಾ

ದಸರಾ ಮತ್ತು ದೀಪಾವಳಿ ಸಂಭ್ರಮದಲ್ಲಿ ವಾಹನಗಳ ಮಾರಾಟವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಟೊಯೊಟಾ ಕಂಪನಿಯು ಕೂಡಾ ವಿವಿಧ ಕಾರು ಮಾದರಿಗಳ ಮೂಲಕ ಕಾರು ಮಾರಾಟದಲ್ಲಿ ಮುನ್ನಡೆ ಸಾಧಿಸಿದೆ.

ದೀಪಾವಳಿ ಸಂಭ್ರಮದ ವೇಳೆ ಭರ್ಜರಿ ಕಾರು ಮಾರಾಟ ಮಾಡಿದ ಟೊಯೊಟಾ

ಬಿಎಸ್-6 ಜಾರಿ ಹಿನ್ನಲೆಯಲ್ಲಿ ಇಟಿಯಾಸ್ ಸರಣಿ ಕಾರುಗಳ ಮಾರಾಟವನ್ನು ಸ್ಥಗಿತಗೊಳಿದ ನಂತರ ಕಾರು ಮಾರಾಟದಲ್ಲಿ ಸಾಕಷ್ಟು ಇಳಿಕೆ ಕಂಡಿದ್ದ ಟೊಯೊಟಾ ಕಂಪನಿಯು ರೀಬ್ಯಾಡ್ಜ್ ಕಾರು ಮಾದರಿಗಳಾದ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಮಾದರಿಗಳ ಮೂಲಕ ಮಾರಾಟ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ.

ದೀಪಾವಳಿ ಸಂಭ್ರಮದ ವೇಳೆ ಭರ್ಜರಿ ಕಾರು ಮಾರಾಟ ಮಾಡಿದ ಟೊಯೊಟಾ

ಟೊಯೊಟಾ ಕಾರು ಮಾರಾಟದಲ್ಲಿ ಸದ್ಯ ಇನೋವಾ ಕ್ರಿಸ್ಟಾ ಎಂಪಿವಿ ಮಾದರಿಯೇ ಅಗ್ರಸ್ಥಾನದಲ್ಲಿದ್ದು, ತದನಂತರ ಗ್ಲಾಂಝಾ, ಅರ್ಬನ್ ಕ್ರೂಸರ್, ಯಾರಿಸ್, ಫಾರ್ಚೂನರ್, ಕರೊಲ್ಲಾ ಹೈಬ್ರಿಡ್ ಕಾರು ಮಾದರಿಗಳೊಂದಿಗೆ ಐಷಾರಾಮಿ ಮಾದರಿಯಾದ ವೆಲ್‌ಫೈರ್ ಕೂಡಾ ಉತ್ತಮ ಬೇಡಿಕೆ ಪಡೆದುಕೊಂಡಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ದೀಪಾವಳಿ ಸಂಭ್ರಮದ ವೇಳೆ ಭರ್ಜರಿ ಕಾರು ಮಾರಾಟ ಮಾಡಿದ ಟೊಯೊಟಾ

ಸದ್ಯ ಇನೋವಾ ಕ್ರಿಸ್ಟಾ ಕಾರು ಮಾದರಿಯು ಫೇಸ್‌ಲಿಫ್ಟ್ ಮಾದರಿಯೊಂದಿಗೆ ಬಿಡುಗಡೆಯಾಗಿದ್ದು, ಹೊಸ ಕಾರು ಮಾದರಿಯು ಕಂಪನಿಯ ಕಾರು ಮಾರಾಟ ಹೆಚ್ಚಳದಲ್ಲಿ ಪ್ರಮುಖ ಪಾತ್ರವಹಿಸಲಿದೆ. ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಬೇಕಿದ್ದ ಫೇಸ್‌ಲಿಫ್ಟ್ ಮಾದರಿಯು ಕಾರಣಾಂತರಗಳಿಂದ ನವೆಂಬರ್ ಕೊನೆಯಲ್ಲಿ ಬಿಡುಗಡೆಯಾಗಿದೆ.

ದೀಪಾವಳಿ ಸಂಭ್ರಮದ ವೇಳೆ ಭರ್ಜರಿ ಕಾರು ಮಾರಾಟ ಮಾಡಿದ ಟೊಯೊಟಾ

2005ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಇನೋವಾ ಕಾರು ಮಾದರಿಯು ಕಳೆದ 2016ರಲ್ಲಿ ನ್ಯೂ ಜನರೇಷನ್ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾ ಮಾದರಿಯಾಗಿ ಬಿಡುಗಡೆಗೊಂಡಿತ್ತು. ಇದೀಗ ಹೊಸ ಬದಲಾವಣೆಯೊಂದಿಗೆ 2021ರ ಫೇಸ್‌ಲಿಫ್ಟ್ ಮಾದರಿಯನ್ನು ಬಿಡಗಡೆ ಮಾಡಲಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.26 ಲಕ್ಷದಿಂದ ಟಾಪ್ ಎಂಡ್ ಮಾದರಿಯು 24.33 ಲಕ್ಷ ಬೆಲೆ ಪಡೆದುಕೊಂಡಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ದೀಪಾವಳಿ ಸಂಭ್ರಮದ ವೇಳೆ ಭರ್ಜರಿ ಕಾರು ಮಾರಾಟ ಮಾಡಿದ ಟೊಯೊಟಾ

ಹೊಸ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಮಾದರಿಯು ಜಿಎಕ್ಸ್, ವಿಎಕ್ಸ್ ಮತ್ತು ಜೆಡ್ಎಕ್ಸ್ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಫೀಚರ್ಸ್ ಅಳವಡಿಕೆ ನಂತರ ಕಾರಿನ ಬೆಲೆಯು ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 60 ಸಾವಿರದಿಂದ ರೂ.70 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದೆ. ಪ್ರೀಮಿಯಂ ಫೀಚರ್ಸ್ ಹೊರತಾಗಿ ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

Most Read Articles

Kannada
Read more on ಟೊಯೊಟಾ toyota
English summary
TKM Sold 8,500 Units In November 2020. Read in Kannada.
Story first published: Wednesday, December 2, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X