Just In
Don't Miss!
- News
ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾ ಖಾನ್ ವಿಧಿವಶ
- Movies
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟೊಯೊಟಾ ಬಿಡುಗಡೆ ಮಾಡಲಿರುವ ಅರ್ಬನ್ ಕ್ರೂಸರ್ ಕಾರಿನ ಮೊದಲ ಚಿತ್ರ ಬಹಿರಂಗ
ಟೊಯೊಟಾ ಕಂಪನಿಯು ರೀಬ್ಯಾಡ್ಜ್ ಕಾರು ಮಾದರಿಯಾದ ಅರ್ಬನ್ ಕ್ರೂಸರ್ ಆವೃತ್ತಿಯ ಬಿಡುಗಡೆಗಾಗಿ ಟೀಸರ್ ಬಿಡುಗಡೆಗೊಳಿಸಿದ ಬೆನ್ನಲ್ಲೇ ಹೊಸ ಕಾರಿನ ಮೊದಲ ಚಿತ್ರವನ್ನು ಹಂಚಿಕೊಂಡಿದ್ದು, ಹೊಸ ಕಾರು ರೀಬ್ಯಾಜ್ಡ್ನೊಂದಿಗೆ ಮತ್ತಷ್ಟು ಬಲಿಷ್ಠ ವಿನ್ಯಾಸ ಪಡೆದುಕೊಂಡಿದೆ.

ಮಾರುತಿ ಸುಜುಕಿ ಬಲೆನೊ ಹ್ಯಾಚ್ಬ್ಯಾಕ್ ಕಾರನ್ನು ಗ್ಲಾಂಝಾ ಎನ್ನುವ ಹೆಸರಿನೊಂದಿಗೆ ರೀಬ್ಯಾಡ್ಜ್ ಆವೃತ್ತಿಯಾಗಿ ಮಾರಾಟ ಮಾಡುತ್ತಿರುವ ಟೊಯೊಟಾ ಕಂಪನಿಯು ಮುಂಬರುವ ಮತ್ತಷ್ಟು ಹೊಸ ರೀಬ್ಯಾಡ್ಜ್ ಕಾರುಗಳನ್ನು ಬಿಡುಗಡೆ ಮಾಡಲು ಬೃಹತ್ ಯೋಜನೆ ರೂಪಿಸಿದೆ. ಗ್ಲಾಂಝಾ ನಂತರ ಇದೀಗ ಕ್ರೆಟಾ ಮತ್ತು ಸೆಲ್ಟೊಸ್ ಕಾರಿಗೆ ಪೈಪೋಟಿಯಾಗಿ ಅರ್ಬನ್ ಕ್ರೂಸರ್ ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಕಾರು ಖರೀದಿಗಾಗಿ ಅಗಸ್ಟ್ ಮಧ್ಯಂತರದಲ್ಲಿ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗುವ ನೀರಿಕ್ಷೆಯಿದೆ.

ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ವಿಟಾರಾ ಬ್ರೆಝಾ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರಲಿದ್ದು, ಟೊಯೊಟಾ ಬ್ಯಾಡ್ಜ್ನೊಂದಿಗೆ ಕಾರಿನ ಖದರ್ ಹೆಚ್ಚಿಸುವ ಮುಂಭಾಗದ ಗ್ರಿಲ್ ಮತ್ತು ಬಂಪರ್ ವಿನ್ಯಾಸದಲ್ಲಿ ಸಾಕಷ್ಟ ಬದಲಾವಣೆ ತರಲಾಗಿದೆ.

ಜೊತೆಗೆ ಗ್ರಿಲ್ ಮತ್ತು ಬಂಪರ್ ವಿನ್ಯಾಸಕ್ಕೆ ಅನುಗುಣವಾಗಿ ಹೆಡ್ಲ್ಯಾಂಪ್ ಕ್ಲಸ್ಟರ್ ಸಹ ಬದಲಾವಣೆ ಮಾಡಲಾಗಿದ್ದು, ಹೊಸ ಕಾರು ಸಾಮಾನ್ಯ ಬ್ರೆಝಾ ಕಾರಿಗಿಂತಲೂ ತುಸು ದುಬಾರಿ ಎನ್ನಿಸಲಿದೆ. ಹೊಸ ಕಾರು ಆರಂಭಿಕವಾಗಿ ರೂ. 9 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

ಅರ್ಬನ್ ಕ್ರೂಸರ್ ಎನ್ನುವ ಹೆಸರಿನೊಂದಿಗೆ ಬಿಡುಗಡೆಯಾಗಲಿರುವ ಹೊಸ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದ್ದು, ಪರ್ಫಾಮೆನ್ಸ್ ಜೊತೆಗೆ ಉತ್ತಮ ಇಂಧನ ದಕ್ಷತೆಯನ್ನು ಹೊಂದಿರಲಿದೆ.

ಅರ್ಬನ್ ಕ್ರೂಸರ್ ಮಾದರಿಯು ಇತ್ತೀಚೆಗೆ ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿರುವ ಟೊಯೊಟಾ ರೈಜ್ ಕಂಪ್ಯಾಕ್ಟ್ ಎಸ್ಯುವಿ ಮಾದರಿಯ ಕೆಲವು ವಿನ್ಯಾಸಗಳನ್ನು ಸಹ ಎರವಲು ಪಡೆದುಕೊಂಡಿದ್ದು, ಮೂಲ ಮಾದರಿಯಾದ ವಿಟಾರಾ ಬ್ರೆಝಾಗಿಂತಲೂ ತುಸು ವಿಭಿನ್ನ ಹೋಲಿಕೆಯನ್ನು ಪಡೆದುಕೊಳ್ಳಲಿದೆ.
MOST READ: ಪ್ರತಿ ಚಾರ್ಜ್ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಈ ಮೂಲಕ ಕಂಪ್ಯಾಕ್ಟ್ ಎಸ್ಯುವಿ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಸೆಲ್ಟೊಸ್, ಕ್ರೆಟಾ ಮತ್ತು ಎಂಜಿ ಹೆಕ್ಟರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿರುವ ಮಾರುತಿ ಸುಜುಕಿ ಮತ್ತು ಟೊಯೊಟಾ ನಿರ್ಮಾಣದ ಹೊಸ ಕಾರು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಇನ್ನು ಕಡ್ಡಾಯವಾಗಿ ಜಾರಿಗೆ ಬಂದಿರುವ ಹೊಸ ಬಿಎಸ್-6 ನಿಯಮದಿಂದಾಗಿ ಕಾರು ಮಾರಾಟದಲ್ಲಿ ಕೆಲವು ಮಹತ್ವದ ಬದಲಾವಣೆ ತಂದಿರುವ ಟೊಯೊಟಾ ಕಂಪನಿಯು ಯಾರಿಸ್ ಸೆಡಾನ್ಗಿಂತಲೂ ಕೆಳಗಿನ ಬಹುತೇಕ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಮಧ್ಯಮ ಗಾತ್ರದಲ್ಲಿರುವ ಮಾರುತಿ ಸುಜುಕಿ ಕಾರುಗಳನ್ನೇ ರೀಬ್ಯಾಡ್ಜ್ ಆವೃತ್ತಿಯಾಗಿ ಮಾರಾಟ ಮಾಡಲು ನಿರ್ಧರಿಸಿದೆ.
MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಸದ್ಯ ಟೊಯೊಟಾ ಕಂಪನಿಯು ಮಾರುತಿ ಸುಜುಕಿಯ ರೀಬ್ಯಾಡ್ಜ್ ಕಾರುಗಳ ಉತ್ಪಾದನೆಗಾಗಿ ಬೆಂಗಳೂರಿನ ಬಿಡದಿ ಘಟಕದಲ್ಲೇ ಅವಕಾಶ ನೀಡಿದ್ದು, ದಕ್ಷಿಣ ಭಾರತದಲ್ಲಿ ಹೊಸ ಕಾರು ಘಟಕ ಸ್ಥಾಪನೆ ಮುಂದಾಗಿದ್ದ ಮಾರುತಿ ಸುಜುಕಿ ಕಂಪನಿಗೆ ತನ್ನದೆ ಘಟಕದಲ್ಲೇ ಅವಕಾಶ ನೀಡುವ ಮೂಲಕ ಜಪಾನ್ ಬ್ರಾಂಡ್ಗಳು ಭಾರತದಲ್ಲಿ ಮತ್ತಷ್ಟು ಜನಪ್ರಿಯಗೊಳ್ಳುತ್ತಿವೆ.