ಫೆ.26ರಂದು ಬಿಡುಗಡೆಯಾಗಲಿರುವ ಟೊಯೊಟಾ ವೆಲ್‌ಫೈರ್ ಟೀಸರ್ ಅನಾವರಣ

ಜಪಾನ್ ಆಟೋ ದಿಗ್ಗಜ ಟೊಯೊಟಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಐಷಾರಾಮಿ ಎಂಪಿವಿ ಮಾದರಿಯೊಂದನ್ನು ಬಿಡುಗಡೆಗೊಳಿಸುತ್ತಿದ್ದು, ಇದೇ ತಿಂಗಳು 26ರಂದು ಬಿಡುಗಡೆಯಾಗಲಿರುವ ಹೊಸ ವೆಲ್‌ಫೈರ್ ಕಾರಿನ ಟೀಸರ್ ಅನ್ನು ಇದೀಗ ಅನಾವರಣಗೊಳಿಸಲಾಗಿದೆ.

ಫೆ.26ರಂದು ಬಿಡುಗಡೆಯಾಗಲಿರುವ ಟೊಯೊಟಾ ವೆಲ್‌ಫೈರ್ ಟೀಸರ್ ಅನಾವರಣ

ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಹೊಂದಿರುವ ವೆಲ್‌ಫೈರ್ ಎಂಪಿವಿ ಕಾರು ಟೊಯೊಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡಲಿದ್ದು, ಅಲ್ಫಾರ್ಡ್ ಲಗ್ಷುರಿ ಮಿನಿ ವ್ಯಾನ್ ಡಿಸೈನ್ ಆಧಾರದ ಮೇಲೆ ಈ ಕಾರನ್ನು ಅಭಿವೃದ್ದಿಗೊಳಿಸಲಾಗಿದೆ. ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟಗೊಳ್ಳುತ್ತಿರುವ ಹೊಸ ಕಾರನ್ನು ಕೆಲವು ಬದಲಾವಣೆಗಳೊಂದಿಗೆ ಭಾರತದಲ್ಲೂ ಪರಿಚಯಿಸಲಾಗುತ್ತಿದ್ದು, ಬೆಲೆಯನ್ನು ತುಸು ದುಬಾರಿಯಾಗಲಿರಲಿದೆ.

ಫೆ.26ರಂದು ಬಿಡುಗಡೆಯಾಗಲಿರುವ ಟೊಯೊಟಾ ವೆಲ್‌ಫೈರ್ ಟೀಸರ್ ಅನಾವರಣ

ಮಲ್ಟಿ ಪ್ಯಾಸೆಂಜರ್ ವೆಹಿಕಲ್(ಎಂಪಿವಿ) ಮಾದರಿಯಾಗಿರುವ ವೆಲ್‌ಫೈರ್ ಕಾರು ಟೊಯೊಟಾ ನಿರ್ಮಾಣದ ಐಷಾರಾಮಿ ಕಾರು ಆವೃತ್ತಿಗಳಲ್ಲಿ ಮುಂಚೂಣಿಯಲ್ಲಿದ್ದು, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಆಮದು ನೀತಿಯ ಪರಿಣಾಮ ವೆಲ್‌ಫೈರ್ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

ಫೆ.26ರಂದು ಬಿಡುಗಡೆಯಾಗಲಿರುವ ಟೊಯೊಟಾ ವೆಲ್‌ಫೈರ್ ಟೀಸರ್ ಅನಾವರಣ

2109ರಲ್ಲಿ ಕೇಂದ್ರ ಸರ್ಕಾರವು ಬದಲಾವಣೆ ಮಾಡಿರುವ ಆಮದು ನೀತಿಯು ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳಿಗೆ ವರವಾಗಿ ಪರಿಣಮಿಸಿದ್ದು, ವಾರ್ಷಿಕವಾಗಿ 2,500 ವಾಹನಗಳನ್ನು ವಿದೇಶಿ ಮಾರುಕಟ್ಟೆಯಿಂದ ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ಆಮದು ಮಾಡಿಕೊಳ್ಳುವ ಅವಕಾಶ ನೀಡಿದೆ.

ಫೆ.26ರಂದು ಬಿಡುಗಡೆಯಾಗಲಿರುವ ಟೊಯೊಟಾ ವೆಲ್‌ಫೈರ್ ಟೀಸರ್ ಅನಾವರಣ

ಈ ಹಿನ್ನಲೆಯಲ್ಲಿ ಟೊಯೊಟಾ ಸೇರಿದಂತೆ ಹಲವು ಆಟೋ ಉತ್ಪಾದನಾ ಸಂಸ್ಥೆಗಳು ವಿದೇಶಿ ಮಾರುಕಟ್ಟೆಯಲ್ಲಿರುವ ತಮ್ಮ ಜನಪ್ರಿಯ ವಾಹನಗಳನ್ನು ಭಾರತದಲ್ಲೂ ಮಾರಾಟ ಮಾಡಲು ಸಿದ್ದವಾಗುತ್ತಿದ್ದು, ಲಗ್ಷುರಿ ಎಂಪಿವಿ ವಿಭಾಗದಲ್ಲಿ ಬಿಡುಗಡೆಯಾಗುತ್ತಿರುವ ವೆಲ್‌ಫೈರ್ ಕಾರು ಹಲವು ವಿಶೇಷತೆಗಳೊಂದಿಗೆ ದೇಶಿಯ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗಿದೆ. ವೆಲ್‌ಫೈರ್ ಕಾರನ್ನು ಈಗಾಗಲೇ ಆಯ್ದ ಡೀಲರ್ಸ್‌ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದ್ದು, ಹೊಸ ಕಾರು 4,935-ಎಂಎಂ ಉದ್ದ, 1,850-ಎಂಎಂ ಅಗಲ ಮತ್ತು-1,935 ಎಂಎಂ ಎತ್ತರದೊಂದಿಗೆ ಉತ್ತಮ ಸ್ಥಳಾವಕಾಶ ಹೊಂದಿದೆ.

ಫೆ.26ರಂದು ಬಿಡುಗಡೆಯಾಗಲಿರುವ ಟೊಯೊಟಾ ವೆಲ್‌ಫೈರ್ ಟೀಸರ್ ಅನಾವರಣ

ಆರು ಆಸನ ಸೌಲಭ್ಯವಿರುವ ವೆಲ್‌ಫೈರ್‌ನಲ್ಲಿ ಪ್ರತಿ ಆಸನವು ಪ್ರತ್ಯೇಕ ಕಂಟ್ರೋಲ್ ಬೋರ್ಡ್ ಹೊಂದಿದ್ದು, ಆರಾಮದಾಯಕವಾಗಿ ಪ್ರಯಾಣಿಸುವಂತೆ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಇದು ಐಷಾರಾಮಿ ಪ್ರಯಾಣವನ್ನು ಬಯಸುವ ಗ್ರಾಹಕರಿಗೆ ವಿಶೇಷವಾಗಿ ನಿರ್ಮಾಣ ಮಾಡಲಾಗಿದ್ದು, ಬೆರಳತುದಿಯಲ್ಲೇ ಹಲವು ತಾಂತ್ರಿಕ ಸೌಲಭ್ಯಗಳು ಲಭ್ಯವಿರಲಿವೆ.

ಫೆ.26ರಂದು ಬಿಡುಗಡೆಯಾಗಲಿರುವ ಟೊಯೊಟಾ ವೆಲ್‌ಫೈರ್ ಟೀಸರ್ ಅನಾವರಣ

ಎಂಜಿನ್ ಸಾಮರ್ಥ್ಯ

ವಿದೇಶಿ ಮಾರುಕಟ್ಟೆಗಳಲ್ಲಿ ವೆಲ್‌ಫೈರ್ ಕಾರು 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 3.5-ಲೀಟರ್ ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರಿನಲ್ಲಿ ಕೇವಲ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ವರ್ಷನ್(ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಪವರ್‌ಟ್ರೈನ್) ಮಾತ್ರವೇ ಬಿಡುಗಡೆ ಮಾಡಲಾಗುತ್ತಿದೆ.

ಫೆ.26ರಂದು ಬಿಡುಗಡೆಯಾಗಲಿರುವ ಟೊಯೊಟಾ ವೆಲ್‌ಫೈರ್ ಟೀಸರ್ ಅನಾವರಣ

2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮಾದರಿಯು 180-ಬಿ‍‍ಹೆಚ್‍‍ಪಿ ಮತ್ತು 235-ಎನ್‍ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ನಾಲ್ಕು ಚಕ್ರಗಳಿಗೂ ಪ್ರತ್ಯೇಕವಾಗಿ ಪವರ್ ಒದಗಿಸುವ ಎಲೆಕ್ಟ್ರಿಕ್ ಸಿ‍‍ವಿ‍‍ಟಿ ಗೇರ್‍‍ಬಾಕ್ಸ್ ತಂತ್ರಜ್ಞಾನವನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ.

ಫೆ.26ರಂದು ಬಿಡುಗಡೆಯಾಗಲಿರುವ ಟೊಯೊಟಾ ವೆಲ್‌ಫೈರ್ ಟೀಸರ್ ಅನಾವರಣ

ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳಾದ ಎಲ್‍ಇ‍‍ಡಿ ಹೆಡ್‍‍ಲೈಟ್, ಕಾರ್ನರಿಂಗ್ ಲೈಟ್, ಇನ್‍‍ಕ್ಯಾಂಡಿಸೆಂಟ್ ಲೈಟ್, ಇಂಡಿಕೇಟರ್ ಲೈಟ್, ವೆಂಟಿಲೇಟೆಡ್ ಸೀಟಿಂಗ್, ಇನ್ಫೋಟೈನ್‌ಮೆಂಟ್ ಸಿಸ್ಟಂ, 360 ಡಿಗ್ರಿ ಕ್ಯಾಮರಾ, ಡ್ಯುಯಲ್ ಎಲೆಕ್ಟ್ರಿಕ್ ಸನ್‌ರೂಫ್ ಸೇರಿದಂತೆ ಹಲವಾರು ಸೌಲಭ್ಯಗಳಿವೆ.

ಫೆ.26ರಂದು ಬಿಡುಗಡೆಯಾಗಲಿರುವ ಟೊಯೊಟಾ ವೆಲ್‌ಫೈರ್ ಟೀಸರ್ ಅನಾವರಣ

ಹಾಗೆಯೇ ಪ್ರಯಾಣಿಕ ಸುರಕ್ಷತೆಗಾಗಿ 7 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಹಿಲ್ ಅಸಿಸ್ಟ್, ತ್ರಿ ಜೋನ್ ಆಟೋ ಕ್ಲೈಮೆಟ್ ಕಂಟ್ರೊಲ್, ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಫ್ರಂಟ್ ಅಂಡ್ ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿ ಹಲವು ಸೆಫ್ಟಿ ಫೀಚರ್ಸ್‌ಗಳಿದ್ದು, ಭಾರತದಲ್ಲಿ ಬೆಲೆ ಕಡಿತಗೊಳಿಸುವುದಕ್ಕಾಗಿ ಕೆಲವು ಹೈ ಎಂಡ್ ಫೀಚರ್ಸ್‌ಗಳನ್ನು ಕೈಬಿಡಲಾಗಿದೆ.

ಫೆ.26ರಂದು ಬಿಡುಗಡೆಯಾಗಲಿರುವ ಟೊಯೊಟಾ ವೆಲ್‌ಫೈರ್ ಟೀಸರ್ ಅನಾವರಣ

ಒಟ್ಟಿನಲ್ಲಿ ಹೊಸ ಟೊಯೊಟಾ ವೆಲ್‍‍ಫೈರ್ ಲಗ್ಷುರಿಯ ಎಂ‍ಪಿವಿಯ ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಸದ್ಯ ಮಾರುಕಟ್ಟೆರುವ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್‌ ಕಾರಿಗೆ ಪೈಪೋಟಿ ನೀಡಲಿರುವ ಹೊಸ ಕಾರು ಎಕ್ಸ್ ಲಾಂಜ್ ಎನ್ನುವ ಒಂದೇ ವೆರಿಯೆಂಟ್ ಮೂಲಕ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.70 ಲಕ್ಷದಿಂದ ರೂ.75 ಲಕ್ಷ ಬೆಲೆ ಪಡೆದುಕೊಂಡಿರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Vellfire MPV Launching In India On 26 February. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X