ಬಿಡುಗಡೆಗೂ ಮುನ್ನ ಟೊಯೊಟಾ ವೆಲ್‌ಫೈರ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ..!

ಟೊಯೊಟಾ ಬಹುನೀರಿಕ್ಷಿತ ವೆಲ್‌ಫೈರ್ ಐಷಾರಾಮಿ ಕಾರು ಮಾದರಿಯು ದೆಹಲಿ ಆಟೋ ಎಕ್ಸ್‌ಪೋ ನಂತರ ಬಿಡುಗಡೆಯ ಸುಳಿವು ನೀಡಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಸಂಪೂರ್ಣ ಮಾಹಿತಿಯುಳ್ಳ ಕೈಪಿಡಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಿಡುಗಡೆಗೂ ಮುನ್ನ ಟೊಯೊಟಾ ವೈಲ್‌ಫೈರ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ..!

ಮಲ್ಟಿ ಪ್ಯಾಸೆಂಜರ್ ವೆಹಿಕಲ್ ಮಾದರಿಯಾಗಿರುವ ವೆಲ್‌ಫೈರ್ ಕಾರು ಟೊಯೊಟಾ ನಿರ್ಮಾಣದ ಐಷಾರಾಮಿ ಕಾರು ಆವೃತ್ತಿಯಾಗಿದ್ದು, ಅಲ್ಫಾರ್ಡ್ ಲಗ್ಷುರಿ ಮಿನಿ ವ್ಯಾನ್ ಡಿಸೈನ್ ಆಧಾರದ ಮೇಲೆ ಈ ಕಾರನ್ನು ಅಭಿವೃದ್ದಿಗೊಳಿಸಲಾಗಿದೆ. ಈ ಲಗ್ಷುರಿ ವ್ಯಾನ್ ಅನ್ನು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟ ಮಾಡಲಾಗುತ್ತಿದ್ದು, ಇದೀಗ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಗೂ ಲಗ್ಗೆಯಿಡುತ್ತಿರುವುದು ಹೊಸ ಸಂಚಲನಕ್ಕೆ ಕಾರಣವಾಗಿದೆ.

ಬಿಡುಗಡೆಗೂ ಮುನ್ನ ಟೊಯೊಟಾ ವೈಲ್‌ಫೈರ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ..!

ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಹೊಂದಿರುವ ವೆಲ್‌ಫೈರ್ ಕಾರು ಟೊಯೊಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡಲಿದ್ದು, ಕೇಂದ್ರ ಸರ್ಕಾರವು ಬದಲಾವಣೆ ಮಾಡಿರುವ ಆಮದು ನೀತಿಯ ಪರಿಣಾಮವೇ ಟೊಯೊಟಾ ಸೇರಿದಂತೆ ಹಲವು ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಐಷಾರಾಮಿ ವಾಹನಗಳನ್ನು ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿವೆ.

ಬಿಡುಗಡೆಗೂ ಮುನ್ನ ಟೊಯೊಟಾ ವೈಲ್‌ಫೈರ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ..!

ಕೇಂದ್ರ ಸರ್ಕಾರವು ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದ್ದು, ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೇ ವಾರ್ಷಿಕವಾಗಿ 2,500 ವಾಹನಗಳನ್ನು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿದೆ.

ಬಿಡುಗಡೆಗೂ ಮುನ್ನ ಟೊಯೊಟಾ ವೈಲ್‌ಫೈರ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ..!

ಈ ಹಿನ್ನಲೆಯಲ್ಲಿ ಜಪಾನ್ ಆಟೋ ದಿಗ್ಗಜ ಸಂಸ್ಥೆಯಾದ ಟೊಯೊಟಾ ಸೇರಿದಂತೆ ಹಲವು ಆಟೋ ಉತ್ಪಾದನಾ ಸಂಸ್ಥೆಗಳು ವಿದೇಶಿ ಮಾರುಕಟ್ಟೆಯಲ್ಲಿರುವ ತಮ್ಮ ಜನಪ್ರಿಯ ವಾಹನಗಳನ್ನು ಭಾರತದಲ್ಲೂ ಮಾರಾಟ ಮಾಡಲು ಸಿದ್ದವಾಗುತ್ತಿದ್ದು, ವೆಲ್‌ಫೈರ್ ಹಲವು ವಿಶೇಷತೆಗಳೊಂದಿಗೆ ದೇಶಿಯ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗುತ್ತಿದೆ. ಟೊಯೊಟಾ ವೆಲ್‌ಫೈರ್ ಕಾರು ಈಗಾಗಲೇ ಆಯ್ದ ಡೀಲರ್ಸ್‌ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ಹೊಸ ಕಾರು 4,935 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,935 ಎಂಎಂ ಎತ್ತರವಿದೆ.

ಬಿಡುಗಡೆಗೂ ಮುನ್ನ ಟೊಯೊಟಾ ವೈಲ್‌ಫೈರ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ..!

ಆರು ಆಸನ ಸೌಲಭ್ಯವಿರುವ ವೆಲ್‌ಫೈರ್ ಕಾರಿನಲ್ಲಿ ಪ್ರತಿ ಆಸನವು ಪ್ರತ್ಯೇಕ ಕಂಟ್ರೋಲ್ ಹೊಂದಿದ್ದು, ಆರಾಮದಾಯಕವಾಗಿ ಪ್ರಯಾಣಿಸುವಂತೆ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಇದು ಐಷಾರಾಮಿ ಪ್ರಯಾಣವನ್ನು ಬಯಸುವ ಗ್ರಾಹಕರಿಗೆ ವಿಶೇಷವಾಗಿ ನಿರ್ಮಾಣ ಮಾಡಲಾಗಿದ್ದು, ಬೆರಳತುದಿಯಲ್ಲೇ ಹಲವು ತಾಂತ್ರಿಕ ಸೌಲಭ್ಯಗಳು ಲಭ್ಯವಿರಲಿವೆ.

ಬಿಡುಗಡೆಗೂ ಮುನ್ನ ಟೊಯೊಟಾ ವೈಲ್‌ಫೈರ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ..!

ಎಂಜಿನ್ ಸಾಮರ್ಥ್ಯ

ವಿದೇಶಿ ಮಾರುಕಟ್ಟೆಗಳಲ್ಲಿ ವೆಲ್‌ಫೈರ್ ಕಾರು 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 3.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರಿನಲ್ಲಿ ಕೇವಲ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ವರ್ಷನ್(ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಪವರ್‌ಟ್ರೈನ್) ಮಾತ್ರವೇ ಬಿಡುಗಡೆ ಮಾಡಲಾಗುತ್ತಿದೆ.

ಬಿಡುಗಡೆಗೂ ಮುನ್ನ ಟೊಯೊಟಾ ವೈಲ್‌ಫೈರ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ..!

2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮಾದರಿಯು 180-ಬಿ‍‍ಹೆಚ್‍‍ಪಿ ಮತ್ತು 235-ಎನ್‍ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ನಾಲ್ಕು ಚಕ್ರಗಳಿಗೂ ಪ್ರತ್ಯೇಕವಾಗಿ ಪವರ್ ಒದಗಿಸುವ ಎಲೆಕ್ಟ್ರಿಕ್ ಸಿ‍‍ವಿ‍‍ಟಿ ಗೇರ್‍‍ಬಾಕ್ಸ್ ತಂತ್ರಜ್ಞಾನವನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ.

ಬಿಡುಗಡೆಗೂ ಮುನ್ನ ಟೊಯೊಟಾ ವೈಲ್‌ಫೈರ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ..!

ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳಾದ ಎಲ್‍ಇ‍‍ಡಿ ಹೆಡ್‍‍ಲೈಟ್, ಕಾರ್ನರಿಂಗ್ ಲೈಟ್, ಇನ್‍‍ಕ್ಯಾಂಡಿಸೆಂಟ್ ಲೈಟ್, ಇಂಡಿಕೇಟರ್ ಲೈಟ್, ವೆಂಟಿಲೇಟೆಡ್ ಸೀಟಿಂಗ್, ಇನ್ಫೋಟೈನ್‌ಮೆಂಟ್ ಸಿಸ್ಟಂ, 360 ಡಿಗ್ರಿ ಕ್ಯಾಮರಾ, ಡ್ಯುಯಲ್ ಎಲೆಕ್ಟ್ರಿಕ್ ಸನ್‌ರೂಫ್ ಸೇರಿದಂತೆ ಹಲವಾರು ಸೌಲಭ್ಯಗಳಿವೆ.

ಬಿಡುಗಡೆಗೂ ಮುನ್ನ ಟೊಯೊಟಾ ವೈಲ್‌ಫೈರ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ..!

ಹಾಗೆಯೇ ಈ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ 7 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಹಿಲ್ ಅಸಿಸ್ಟ್, ತ್ರಿ ಜೋನ್ ಆಟೋ ಕ್ಲೈಮೆಟ್ ಕಂಟ್ರೊಲ್, ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಫ್ರಂಟ್ ಅಂಡ್ ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿ ಹಲವು ಸೆಫ್ಟಿ ಫೀಚರ್ಸ್‌ಗಳಿದ್ದು, ಭಾರತದಲ್ಲಿ ಬೆಲೆ ಕಡಿತಗೊಳಿಸುವುದಕ್ಕಾಗಿ ಕೆಲವು ಹೈ ಎಂಡ್ ಫೀಚರ್ಸ್‌ಗಳನ್ನು ಕೈಬಿಡಲಾಗಿದೆ.

ಬಿಡುಗಡೆಗೂ ಮುನ್ನ ಟೊಯೊಟಾ ವೈಲ್‌ಫೈರ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ..!

ಒಟ್ಟಿನಲ್ಲಿ ಹೊಸ ಟೊಯೊಟಾ ವೆಲ್‍‍ಫೈರ್ ಲಗ್ಷುರಿಯ ಎಂ‍ಪಿವಿಯ ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಸದ್ಯ ಮಾರುಕಟ್ಟೆರುವ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್‌ಗೆ ಪೈಪೋಟಿ ನೀಡಲಿರುವ ಹೊಸ ಕಾರು ಎಕ್ಸ್ ಲಾಂಜ್ ಎನ್ನುವ ಒಂದೇ ವೆರಿಯೆಂಟ್ ಮೂಲಕ ದೆಹಲಿ ಎಕ್ಸ್‌ಶೋರೂಂ ಪ್ರಕಾರವೇ ರೂ.75 ಲಕ್ಷದಿಂದ ರೂ.80 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Vellfire variant Xlounge details revealed. Read in Kannada.
Story first published: Tuesday, January 28, 2020, 17:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X