Just In
- 28 min ago
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- 1 hr ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 1 hr ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್‌ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 2 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
Don't Miss!
- News
ಚುನಾವಣೆಗೂ ಮುನ್ನ ಅಮಿತ್ ಶಾ ಜೊತೆ ಇಪಿಎಸ್ ಮಹತ್ವದ ಚರ್ಚೆ
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Finance
ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2020ರ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಕಾರುಗಳಿವು
2020ರ ವರ್ಷ ಬಹುತೇಕ ಅಂತ್ಯಗೊಳ್ಳುತ್ತಿದೆ, ಎಲ್ಲಾ ಕ್ಷೇತ್ರಗಳಿಗೂ ಇದು ಅತ್ಯಂತ ಕಠಿಣವಾದ ವರ್ಷವಾಗಿತ್ತು. ಆಟೋಮೊಬೈಲ್ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮವನು ಬೀರಿತ್ತು. ಆದರೆ ಹಬ್ಬದ ಸೀಸನ್ ಬಳಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಚೇತರಿಕೆಯನ್ನು ಕಾಣುತ್ತಿದೆ.

ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹ್ಯುಂಡೈ ಐ20, ಮರ್ಸಿಡಿಸ್ ಬೆಂಝ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‌ಯುವಿ, ಆಡಿ ಕ್ಯೂ2, ಮತ್ತು ಕಿಯಾ ಸೊನೆಟ್ ನಂತಹ ಹಲವಾರು ಜನಪ್ರಿಯ ಮಾದರಿಗಳು ಬಿಡುಗಡೆಯಾಗಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಇನ್ನು ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಇನ್ನು ಹಲವು ಜನಪ್ರಿಯ ಮಾದರಿಗಳು ಬಿಡುಗಡೆಯಾಗಲಿವೆ. ಇದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿವೆ.

ನಿಸ್ಸಾನ್ ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‍ಯುವಿ
ನಿಸ್ಸಾನ್ ಕಂಪನಿಯು ತನ್ನ ಹೊಸ ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ನಿಸ್ಸಾನ್ ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‍ಯುವಿಯು ಎಕ್ಸ್‌ಇ, ಎಕ್ಸ್‌ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎಂಬ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮ್ಯಾಗ್ನೈಟ್ ಕಾಂಪ್ಯಾಕ್ಟ್-ಎಸ್‌ಯುವಿಯಲ್ಲಿ 1.0-ಲೀಟರ್, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 71 ಬಿಹೆಚ್ಪಿ ಪವರ್ ಮತ್ತು 96 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಜಿನ್ ನೊಂದಿಗೆ 5-ಸ್ಫೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಲಾಗುತ್ತದೆ. ಈ ನಿಸ್ಸಾನ್ ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‍ಯುವಿಯು ಡಿಸೆಂಬರ್ ತಿಂಗಳ 2 ರಂದು ಬಿಡುಗಡೆಯಾಗಲಿದೆ

ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್
ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ಕಂಪನಿಯು ತನ್ನ ಹೊಸ ಎಸ್5 ಸ್ಪೋರ್ಟ್‌ಬ್ಯಾಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ನಾಲ್ಕು ಡೋರಿನ ಕೂಪ್ ಆಗಿದೆ.
MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ದೊಡ್ಡ ಸಿಂಗಲ್-ಫ್ರೇಮ್ ಗ್ರಿಲ್ ಅನ್ನು ಹೊಂದಿದೆ. ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನಲ್ಲಿ ಹನಿಕ್ಯೂಬ್ ಮಾದರಿಯೊಂದಿಗೆ ದೊಡ್ಡ ಸಿಂಗಲ್-ಫ್ರೇಮ್ ಗ್ರಿಲ್ ಅನ್ನು ಹೊಂದಿದೆ. ಇನ್ನು ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ನಯವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರೆದಿದೆ. ಇದಲ್ಲದೆ ಹೆಡ್‌ಲ್ಯಾಂಪ್‌ಗಳು ಬ್ಲೂ ಸಿಗ್ನೇಚರ್ ಅಂಶಗಳನ್ನು ಹೊಂದಿದೆ.

ಆಡಿ ಕಂಪನಿಯು ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಮಾದರಿಯಲ್ಲಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಮಾದರಿಯಲ್ಲಿ 3.0-ಲೀಟರ್ ಟಿಎಫ್‌ಎಸ್‌ಐ ಎಂಜಿನ್ ಅನ್ನು ಹೊಂದಿರುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಈ ಎಂಜಿನ್ 349 ಬಿಹೆಚ್ಪಿ ಪವರ್ ಮತ್ತು 500 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತದೆ. ಈ 3.0-ಲೀಟರ್ ಟಿಎಫ್‌ಎಸ್‌ಐ ಎಂಜಿನ್ ನೊಂದಿಗೆ 8-ಸ್ಪೀಡ್ ಟಿಪ್ಟ್ರೋನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಮಾದರಿಯು ಕೇವಲ 4.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಬಹುನಿರೀಕ್ಷಿತ ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಕಾರು ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್
ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಎ-ಕ್ಲಾಸ್ ಕಾರನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಇದೀಗ ಮರ್ಸಿಡಿಸ್ ಬೆಂಝ್ ತನ್ನ ಹೊಸ ಎ-ಕ್ಲಾಸ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಈ ಕಾರಿನಲ್ಲಿ 2.0 ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 306 ಬಿಹೆಚ್ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಇದರೊಂದಿಗೆ ಸ್ಟ್ಯಾಂಡರ್ಡ್ ಎ-ಕ್ಲಾಸ್ ಸೆಡಾನ್ ನಲ್ಲಿ 94 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುವ 2.0 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಮತ್ತು ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಸಹ ಹೊಂದಿರಲಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಮುಂದಿನ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.