ಸಂಕಷ್ಟದಲ್ಲಿರುವ ಸ್ಯಾಂಗ್‌ಯಾಂಗ್ ಮೋಟಾರ್ ನೆರವಿಗೆ ಮುಂದಾದ ಹಾ ಆಟೋಮೊಟಿವ್

ದಕ್ಷಿಣ ಕೊರಿಯಾ ಮೂಲದ ಸ್ಯಾಂಗ್‌ಯಾಂಗ್ ಮೋಟಾರ್ ಕಂಪನಿ ವಿಶ್ವದ ಪ್ರಮುಖ ಎಸ್‌ಯುವಿ ತಯಾರಕ ಕಂಪನಿಗಳಲ್ಲಿ ಒಂದು. ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಸ್ಯಾಂಗ್‌ಯಾಂಗ್ ಮೋಟಾರ್ ಕಂಪನಿಯ ಷೇರುಗಳನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಖರೀದಿಸಿತ್ತು.

ಸಂಕಷ್ಟದಲ್ಲಿರುವ ಸ್ಯಾಂಗ್‌ಯಾಂಗ್ ಮೋಟಾರ್ ನೆರವಿಗೆ ಮುಂದಾದ ಹಾ ಆಟೋಮೊಟಿವ್

ಕರೋನಾ ವೈರಸ್ ನಂತರದ ಬೆಳವಣಿಗೆಗಳಲ್ಲಿ ಮಹೀಂದ್ರಾ ಕಂಪನಿಯು ತನ್ನ ವ್ಯವಹಾರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಿದೆ. ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಮಹೀಂದ್ರಾ ಕಂಪನಿಯು, ಸ್ಯಾಂಗ್‌ಯಾಂಗ್ ಮೋಟಾರ್ ನಲ್ಲಿರುವ ತನ್ನ ವ್ಯವಹಾರಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ಸ್ಯಾಂಗ್‌ಯಾಂಗ್ ಮೋಟಾರ್ ಕಂಪನಿ ತನ್ನ ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.

ಸಂಕಷ್ಟದಲ್ಲಿರುವ ಸ್ಯಾಂಗ್‌ಯಾಂಗ್ ಮೋಟಾರ್ ನೆರವಿಗೆ ಮುಂದಾದ ಹಾ ಆಟೋಮೊಟಿವ್

ಕೆಲವು ಕಂಪನಿಗಳು ಸ್ಯಾಂಗ್‌ಯಾಂಗ್ ಮೋಟಾರ್ ನಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿವೆ. ಆದರೆ ಇನ್ನೂ ಕೆಲವು ಕಂಪನಿಗಳು ಸ್ಯಾಂಗ್‌ಯಾಂಗ್ ಕಂಪನಿಯ ಆರ್ಥಿಕ ಸಮಸ್ಯೆ ಹಾಗೂ ಬೆಳವಣಿಗೆಯ ಬಗ್ಗೆ ಆತಂಕಗೊಂಡಿದ್ದು, ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿವೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸಂಕಷ್ಟದಲ್ಲಿರುವ ಸ್ಯಾಂಗ್‌ಯಾಂಗ್ ಮೋಟಾರ್ ನೆರವಿಗೆ ಮುಂದಾದ ಹಾ ಆಟೋಮೊಟಿವ್

ಈಗ ಅಮೆರಿಕಾ ಮೂಲದ ಹಾ ಹೋಲ್ಡಿಂಗ್ಸ್ ಸ್ಯಾಂಗ್‌ಯಾಂಗ್ ಮೋಟಾರ್ ನಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಸ್ಯಾಂಗ್‌ಯಾಂಗ್‌ನಲ್ಲಿ 258 ಮಿಲಿಯನ್ ಡಾಲರ್ (ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ.1,900 ಕೋಟಿ) ಹೂಡಿಕೆ ಮಾಡಲು ಹಾ ಹೋಲ್ಡಿಂಗ್ಸ್ ಕಂಪನಿ ಚಿಂತನೆ ನಡೆಸಿದೆ. ಕಳೆದ ವಾರ ಈ ಬಗ್ಗೆ ಹಾ ಹೋಲ್ಡಿಂಗ್ಸ್, ಷರತ್ತುಬದ್ಧ ಹೂಡಿಕೆ ಯೋಜನೆ ವರದಿಯನ್ನು ಸಲ್ಲಿಸಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಸಂಕಷ್ಟದಲ್ಲಿರುವ ಸ್ಯಾಂಗ್‌ಯಾಂಗ್ ಮೋಟಾರ್ ನೆರವಿಗೆ ಮುಂದಾದ ಹಾ ಆಟೋಮೊಟಿವ್

ಸ್ಯಾಂಗ್‌ಯಾಂಗ್ ಮೋಟಾರ್ ಕಂಪನಿಯು ಜೆಪಿ ಮೋರ್ಗಾನ್, ಬಿಎನ್‌ಪಿ ಪರಿಬಾಸ್ ಹಾಗೂ ಬ್ಯಾಂಕ್ ಆಫ್ ಅಮೆರಿಕಾ ಸೇರಿದಂತೆ ಹಲವು ಬ್ಯಾಂಕುಗಳಿಂದ 322 ಮಿಲಿಯನ್ ಡಾಲರ್ ಸಾಲ ಪಡೆದಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸಂಕಷ್ಟದಲ್ಲಿರುವ ಸ್ಯಾಂಗ್‌ಯಾಂಗ್ ಮೋಟಾರ್ ನೆರವಿಗೆ ಮುಂದಾದ ಹಾ ಆಟೋಮೊಟಿವ್

ಮಹೀಂದ್ರಾ ಕಂಪನಿಯು ತನ್ನ ಷೇರುಗಳನ್ನು ಮಾರಾಟ ಮಾಡಿದರೆ, ಹೊಸ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು ಅದು ಸ್ಯಾಂಗ್‌ಯಾಂಗ್ ಪರವಾಗಿ ಬ್ಯಾಂಕುಗಳ ಸಾಲವನ್ನು ತೀರಿಸಬೇಕಾಗುತ್ತದೆ.

ಸಂಕಷ್ಟದಲ್ಲಿರುವ ಸ್ಯಾಂಗ್‌ಯಾಂಗ್ ಮೋಟಾರ್ ನೆರವಿಗೆ ಮುಂದಾದ ಹಾ ಆಟೋಮೊಟಿವ್

ಈ ಕಾರಣಕ್ಕೆ ಸ್ಯಾಂಗ್‌ಯಾಂಗ್ ಕಂಪನಿಯನ್ನು ನಿಯಂತ್ರಿಸಲು ಮಹೀಂದ್ರಾ ಕಂಪನಿಯು ಕನಿಷ್ಠ 51% ಷೇರುಗಳನ್ನು ಉಳಿಸಿಕೊಳ್ಳಬೇಕೆಂದು ಹೂಡಿಕೆದಾರರು ಒತ್ತಾಯಿಸುತ್ತಿದ್ದಾರೆ. ಈ ಮೂಲಕ ಬ್ಯಾಂಕುಗಳ ಸಾಲವನ್ನು ನಿಯಮಿತವಾಗಿ ಮರುಪಾವತಿ ಮಾಡಬಹುದು. ಇತರ ಹೂಡಿಕೆದಾರರು ರಿಫೈನಾನ್ಸ್ ಪಡೆಯಲು ಯಾವುದೇ ತೊಂದರೆಗಳಿಲ್ಲ ಎಂಬುದು ಹೂಡಿಕೆದಾರರ ಅಭಿಪ್ರಾಯ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸಂಕಷ್ಟದಲ್ಲಿರುವ ಸ್ಯಾಂಗ್‌ಯಾಂಗ್ ಮೋಟಾರ್ ನೆರವಿಗೆ ಮುಂದಾದ ಹಾ ಆಟೋಮೊಟಿವ್

ಸ್ಯಾಂಗ್‌ಯಾಂಗ್ ಮೋಟಾರ್ ನಲ್ಲಿ ಬಹು ಪಾಲು ಷೇರುಗಳನ್ನು ಖರೀದಿಸಿ ಸ್ಯಾಂಗ್‌ಯಾಂಗ್ ನ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸುವಷ್ಟು ಆರ್ಥಿಕ ಶಕ್ತಿ ಹಾ ಹೋಲ್ಡಿಂಗ್ಸ್‌ಗೆ ಇಲ್ಲ. ಹಾ ಆಟೋಮೊಟಿವ್, ಚೀನಾದಲ್ಲಿ ವಾಂಟಾಸ್ ಬ್ರಾಂಡ್ ಹೆಸರಿನಲ್ಲಿ ಕಾರುಗಳನ್ನು ಅಸೆಂಬಲ್ ಮಾಡಿ ಮಾರಾಟ ಮಾಡುತ್ತದೆ.

ಸಂಕಷ್ಟದಲ್ಲಿರುವ ಸ್ಯಾಂಗ್‌ಯಾಂಗ್ ಮೋಟಾರ್ ನೆರವಿಗೆ ಮುಂದಾದ ಹಾ ಆಟೋಮೊಟಿವ್

ಸದ್ಯಕ್ಕೆ 23 ಬಿಲಿಯನ್ ದಕ್ಷಿಣ ಕೊರಿಯಾದ ವೊನ್ ಗಳೊಂದಿಗೆ ವ್ಯವಹಾರ ನಡೆಸುತ್ತಿರುವ ಹಾ ಆಟೋಮೊಟಿವ್, ಸ್ಯಾಂಗ್‌ಯಾಂಗ್ ಮೋಟಾರ್‌ನಲ್ಲಿ ಸೀಮಿತ ಸಂಖ್ಯೆಯ ಷೇರುಗಳನ್ನು ಮಾತ್ರ ಖರೀದಿಸುವ ಸಾಧ್ಯತೆಗಳಿವೆ. ಮತ್ತೊಂದೆಡೆ ವ್ಯವಹಾರವು ಮುಂದುವರೆಯುವಂತಾಗಲು ಸ್ಯಾಂಗ್‌ಯಾಂಗ್ ಮೋಟಾರ್ ನಲ್ಲಿ 500 ಬಿಲಿಯನ್ ಡಾಲರ್ ಗಳ ಹೂಡಿಕೆ ಅಗತ್ಯವಿದೆ ಎಂದು ವರದಿಯಾಗಿದೆ.

Most Read Articles

Kannada
English summary
US based Haah automotive to invest in Ssangyong Motor. Read in Kannada.
Story first published: Tuesday, September 22, 2020, 9:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X