ಕಾರು ಮಾರಾಟದಲ್ಲಿ ಹೊಸ ದಾಖಲೆ ಬರೆದ ಜಮ್ಮು-ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರವು ಕಾರು ಮಾರಾಟದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಸಾಧನೆ ಮಾಡಿದೆ. 2019-20ರ ಆರ್ಥಿಕ ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಕಾರು ಮಾರಾಟದಲ್ಲಿ 53.4%ನಷ್ಟು ಹೆಚ್ಚಳವನ್ನು ದಾಖಲಿಸಿದೆ.

ಕಾರು ಮಾರಾಟದಲ್ಲಿ ಹೊಸ ದಾಖಲೆ ಬರೆದ ಜಮ್ಮು-ಕಾಶ್ಮೀರ

ಇದೇ ವೇಳೆ ದೆಹಲಿಯ ಕಾರು ಮಾರಾಟವು 43.6%ನಷ್ಟು ಕುಸಿದಿದೆ. ವರದಿಗಳ ಪ್ರಕಾರ, ದೇಶದ ಕಾರು ಮಾರಾಟವು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಇತರ ರಾಜ್ಯಗಳಿಗಿಂತ ಉತ್ತಮವಾಗಿದೆ. ಲಾಕ್ ಡೌನ್ ಕಾರಣದಿಂದಾಗಿ ಮಾರ್ಚ್ ತಿಂಗಳ ಮಾರಾಟವು ಕುಸಿದಿದೆ.

ಕಾರು ಮಾರಾಟದಲ್ಲಿ ಹೊಸ ದಾಖಲೆ ಬರೆದ ಜಮ್ಮು-ಕಾಶ್ಮೀರ

2019-20ರ ಆರ್ಥಿಕ ವರ್ಷವು ದೇಶದ ಆಟೋ ಮೊಬೈಲ್ ಉದ್ಯಮಕ್ಕೆ ಸಾಕಷ್ಟು ಸಂಕಷ್ಟವನ್ನು ತಂದಿತ್ತು. ಜಿಎಸ್ ಟಿ ಹಾಗೂ ಬಿಎಸ್ 6 ಮಾನದಂಡಗಳ ಕಾರಣದಿಂದಾಗಿ ಮಾರಾಟವು ಕುಸಿತಗೊಂಡಿತ್ತು.

ಕಾರು ಮಾರಾಟದಲ್ಲಿ ಹೊಸ ದಾಖಲೆ ಬರೆದ ಜಮ್ಮು-ಕಾಶ್ಮೀರ

ಈಗ ಕರೋನಾ ವೈರಸ್ ನಿಂದಾಗಿ ವಾಹನ ಉತ್ಪಾದನೆ ಸ್ಥಗಿತಗೊಂಡಿದೆ. ದೇಶದಲ್ಲಿರುವ ಬಹುತೇಕ ವಾಹನ ಕಂಪನಿಗಳು ಚೀನಾ ಹಾಗೂ ದಕ್ಷಿಣ ಕೊರಿಯಾದಿಂದ 10% ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತವೆ.

ಕಾರು ಮಾರಾಟದಲ್ಲಿ ಹೊಸ ದಾಖಲೆ ಬರೆದ ಜಮ್ಮು-ಕಾಶ್ಮೀರ

ಚೀನಾ ಹಾಗೂ ದಕ್ಷಿಣ ಕೊರಿಯಾದ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದಾಗಿನಿಂದ ಭಾರತದ ಆಟೋ ಮೊಬೈಲ್ ಉದ್ಯಮದ ಕಚ್ಚಾ ವಸ್ತುಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ.

ಕಾರು ಮಾರಾಟದಲ್ಲಿ ಹೊಸ ದಾಖಲೆ ಬರೆದ ಜಮ್ಮು-ಕಾಶ್ಮೀರ

ಏಪ್ರಿಲ್ 1 ರಿಂದ ಬಿಎಸ್ 6 ಮಾಲಿನ್ಯ ನಿಯಮಗಳು ಭಾರತದಲ್ಲಿ ಜಾರಿಗೆ ಬಂದಿವೆ. ಆದರೆ ಭಾರತದಲ್ಲಿರುವ ಆಟೋಮೊಬೈಲ್ ಕಂಪೆನಿಗಳು ಸುಮಾರು 10,000 ಕೋಟಿ ರೂಪಾಯಿ ಮೌಲ್ಯದ ಬಿಎಸ್ 4 ವಾಹನಗಳನ್ನು ಇನ್ನೂ ಮಾರಾಟ ಮಾಡದೇ ಹಾಗೆ ಉಳಿಸಿಕೊಂಡಿವೆ.

ಕಾರು ಮಾರಾಟದಲ್ಲಿ ಹೊಸ ದಾಖಲೆ ಬರೆದ ಜಮ್ಮು-ಕಾಶ್ಮೀರ

ಲಾಕ್‌ಡೌನ್ ಮುಗಿದ ನಂತರ ಬಿಎಸ್ 4 ವಾಹನಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಹೆಚ್ಚುವರಿ 10 ದಿನಗಳ ಕಾಲಾವಕಾಶ ನೀಡಿದ್ದು, ವಾಹನ ವಿತರಕರು ನಿಟ್ಟುಸಿರು ಬಿಡುವಂತಾಗಿದೆ.

ಕಾರು ಮಾರಾಟದಲ್ಲಿ ಹೊಸ ದಾಖಲೆ ಬರೆದ ಜಮ್ಮು-ಕಾಶ್ಮೀರ

ಆದರೆ ಉಳಿದಿರುವ ವಾಹನಗಳನ್ನು ಮಾರಾಟ ಮಾಡಲು ಇನ್ನಷ್ಟು ಕಾಲಾವಕಾಶ ನೀಡಬೇಕಿತ್ತೆಂಬುದು ಆಟೋ ಮೊಬೈಲ್ ಕಂಪನಿಗಳ ಅಭಿಪ್ರಾಯ. ಆಟೋಮೊಬೈಲ್ ಡೀಲರ್ ಗಳು ಈ ತಿಂಗಳ ಕೊನೆಯವರೆಗೂ ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ.

Most Read Articles

Kannada
English summary
Vehicle Registration Jammu-Kashmir witness highest growth. Read in Kannada.
Story first published: Wednesday, April 8, 2020, 14:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X