ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಫಾಡಾ, ಭಾರೀ ಕುಸಿತ ಕಂಡ ವಾಹನ ಮಾರಾಟ

ಕರೋನಾ ವೈರಸ್ ಕಾರಣದಿಂದಾಗಿ, ಎಲ್ಲಾ ಆಟೋಮೊಬೈಲ್ ತಯಾರಕ ಕಂಪನಿಗಳ ಮಾರಾಟವು ಗಣನೀಯವಾಗಿ ಕುಸಿದಿದೆ. ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನ ಸೇರಿದಂತೆ ಎಲ್ಲಾ ವಾಹನಗಳ ಮಾರಾಟದಲ್ಲೂ ಗಣನೀಯ ಪ್ರಮಾಣದ ಕುಸಿತ ಉಂಟಾಗಿದೆ.

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಫಾಡಾ, ಭಾರೀ ಕುಸಿತ ಕಂಡ ವಾಹನ ಮಾರಾಟ

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ (ಎಫ್‌ಎಡಿಎ) ಜುಲೈ ತಿಂಗಳಿನಲ್ಲಿ ಮಾರಾಟವಾದ ವಾಹನಗಳ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. ಈ ಅಂಕಿಅಂಶಗಳ ಪ್ರಕಾರ 2020ರ ಜುಲೈ ತಿಂಗಳಿನಲ್ಲಿ ವಾಹನ ಮಾರಾಟವು ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ 36.27%ನಷ್ಟು ಕುಸಿತ ಕಂಡಿದೆ. ಈ ವರ್ಷದ ಜುಲೈ ತಿಂಗಳಿನಲ್ಲಿ ಕಂಪನಿಗಳು ಒಟ್ಟು 11,42,633 ವಾಹನಗಳನ್ನು ಮಾರಾಟ ಮಾಡಿವೆ.

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಫಾಡಾ, ಭಾರೀ ಕುಸಿತ ಕಂಡ ವಾಹನ ಮಾರಾಟ

2019ರ ಜುಲೈ ತಿಂಗಳಿನಲ್ಲಿ ಒಟ್ಟು 17,92,879 ವಾಹನಗಳು ಮಾರಾಟವಾಗಿದ್ದವು. ಆದರೆ ಈ ವರ್ಷದ ಜೂನ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜುಲೈ ತಿಂಗಳಿನಲ್ಲಿ ಹೊಸ ವಾಹನಗಳ ನೋಂದಣಿಯಲ್ಲಿ ಹೆಚ್ಚಳ ಕಂಡುಬಂದಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಫಾಡಾ, ಭಾರೀ ಕುಸಿತ ಕಂಡ ವಾಹನ ಮಾರಾಟ

ಜೂನ್ ತಿಂಗಳಿನಲ್ಲಿಯೂ ಭಾರತದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಮುಂದುವರೆದಿದ್ದೇ ಇದಕ್ಕೆ ಕಾರಣ. ಜುಲೈ ತಿಂಗಳಿನಲ್ಲಿ ಲಾಕ್‌ಡೌನ್ ನಿಂದ ಹಲವು ವಿನಾಯಿತಿಗಳನ್ನು ನೀಡಲಾಯಿತು. ಗಮನಿಸಬೇಕಾದ ಸಂಗತಿಯೆಂದರೆ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ವಾಹನಗಳ ಮಾರಾಟ ಪ್ರಮಾಣವು ಹೆಚ್ಚಾಗಿದೆ.

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಫಾಡಾ, ಭಾರೀ ಕುಸಿತ ಕಂಡ ವಾಹನ ಮಾರಾಟ

ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಕಮರ್ಷಿಯಲ್ ವಾಹನಗಳು, ಟ್ರಾಕ್ಟರ್ ಹಾಗೂ ಬೈಕ್ ಗಳ ಮಾರಾಟವು ಹೆಚ್ಚಾಗಿದೆ. ಇದರ ಜೊತೆಗೆ ವಾಹನಗಳ ಮೇಲಿನ ಸಾಲದ ಪ್ರಮಾಣವು ಸಹ ಕಡಿಮೆಯಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಫಾಡಾ, ಭಾರೀ ಕುಸಿತ ಕಂಡ ವಾಹನ ಮಾರಾಟ

ಹೆಚ್ಚಿನ ಪ್ರಮಾಣದ ಹಣವನ್ನು ಹೊಂದಿದ್ದರೂ ಸಹ ಬ್ಯಾಂಕುಗಳು ಹಾಗೂ ಎನ್‌ಬಿಎಫ್‌ಸಿಗಳು ವಾಹನ ಸಾಲ ನೀಡಲು ಹೆಚ್ಚು ಜಾಗರೂಕತೆಯನ್ನು ವಹಿಸುತ್ತಿವೆ. 2020ರ ಜುಲೈ ತಿಂಗಳಿನಲ್ಲಿ ವಾಹನಗಳ ಮೇಲಿನ ಸಾಲ ಪ್ರಮಾಣವು ಸುಮಾರು 10%ನಿಂದ 15%ವರೆಗೆ ಕಡಿಮೆಯಾಗಿದೆ.

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಫಾಡಾ, ಭಾರೀ ಕುಸಿತ ಕಂಡ ವಾಹನ ಮಾರಾಟ

ಇದು ಸಹ ಬೇಡಿಕೆ ಮೇಲೆ ಪರಿಣಾಮ ಬೀರಿದೆ. ಎಫ್‌ಎಡಿಎ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 2020ರ ಜುಲೈ ತಿಂಗಳಿನಲ್ಲಿ ದ್ವಿಚಕ್ರ ವಾಹನಗಳ ಮಾರಾಟವು 37.47%ನಷ್ಟು ಕಡಿಮೆಯಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಫಾಡಾ, ಭಾರೀ ಕುಸಿತ ಕಂಡ ವಾಹನ ಮಾರಾಟ

ಜುಲೈ ತಿಂಗಳಿನಲ್ಲಿ ದ್ವಿಚಕ್ರ ವಾಹನ ತಯಾರಕ ಕಂಪನಿಗಳು 8,74,638 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿವೆ. ಇನ್ನು 15,132 ಯುನಿಟ್‌ ತ್ರಿ ಚಕ್ರ ವಾಹನಗಳು ಮಾರಾಟವಾಗಿವೆ. ಅಂಕಿಅಂಶಗಳ ಪ್ರಕಾರ ತ್ರಿ ಚಕ್ರ ವಾಹನಗಳ ಮಾರಾಟದಲ್ಲಿ 74.33%ನಷ್ಟು ಕುಸಿತ ಕಂಡುಬಂದಿದೆ.

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಫಾಡಾ, ಭಾರೀ ಕುಸಿತ ಕಂಡ ವಾಹನ ಮಾರಾಟ

2019ರ ಜುಲೈ ತಿಂಗಳಿನಲ್ಲಿ 58,940 ಯುನಿಟ್‌ ತ್ರಿ ಚಕ್ರ ವಾಹನಗಳು ಮಾರಾಟವಾಗಿದ್ದವು. ಜುಲೈ ತಿಂಗಳಿನಲ್ಲಿ ಪ್ಯಾಸೆಂಜರ್ ವಾಹನಗಳ ಮಾರಾಟವು 25.19%ನಷ್ಟು ಕುಸಿದು 1,57,373 ಯುನಿಟ್‌ಗಳು ಮಾರಾಟವಾಗಿವೆ.

Most Read Articles

Kannada
English summary
Vehicle sales decline by 36 percent in 2020 July as per FADA report. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X