ರಸ್ತೆಗಿಳಿಯುವಂತಿಲ್ಲ 15 ವರ್ಷಕ್ಕಿಂತ ಹಳೆಯ ವಾಹನಗಳು

15 ವರ್ಷಕ್ಕಿಂತ ಹಳೆಯ ವಾಹನಗಳ ಚಾಲನೆಗೆ ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ತಿರಸ್ಕರಿಸಿದೆ. ಕರೋನಾ ಸಂಕಷ್ಟದ ಸಮಯದಲ್ಲಿ ವಯಸ್ಸಾದವರು ಯಾವುದೇ ತೊಂದರೆಯನ್ನು ಎದುರಿಸದಂತೆ ಸಂಚರಿಸಲು ಕೋರಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಮನವಿ ಮಾಡಲಾಗಿತ್ತು.

ರಸ್ತೆಗಿಳಿಯುವಂತಿಲ್ಲ 15 ವರ್ಷಕ್ಕಿಂತ ಹಳೆಯ ವಾಹನಗಳು

ದೆಹಲಿಯ ಹಿರಿಯ ನಾಗರಿಕ ಕಮಲ್ ಸಹೈರವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದರು. ಕರೋನಾ ಸಾಂಕ್ರಾಮಿಕ ರೋಗವು ಅಂತ್ಯವಾಗುವವರೆಗೆ ದೆಹಲಿಯ ಹಿರಿಯ ನಾಗರಿಕರಿಗೆ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಚಾಲನೆ ಮಾಡಲು ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿಯಲ್ಲಿ ಮಾಡಲಾಗಿತ್ತು. ದೆಹಲಿಯಲ್ಲಿ ಸಾಕಷ್ಟು ಜನರು 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಹೊಂದಿದ್ದಾರೆ.

ರಸ್ತೆಗಿಳಿಯುವಂತಿಲ್ಲ 15 ವರ್ಷಕ್ಕಿಂತ ಹಳೆಯ ವಾಹನಗಳು

ಕರೋನಾ ಸಂಕಷ್ಟದ ಸಮಯದಲ್ಲಿ ಹಿರಿಯ ನಾಗರಿಕರು ಈ ವಾಹನಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಬಹುದು. ಜೊತೆಗೆ ಕಾರಿನಲ್ಲಿ ಪ್ರಯಾಣಿಸುವುದರಿಂದ ಸೋಂಕಿನ ಅಪಾಯವೂ ಕಡಿಮೆಯಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ರಸ್ತೆಗಿಳಿಯುವಂತಿಲ್ಲ 15 ವರ್ಷಕ್ಕಿಂತ ಹಳೆಯ ವಾಹನಗಳು

ಈ ವಿಷಯದ ಬಗ್ಗೆ ನ್ಯಾಯಮಂಡಳಿ ತೆಗೆದುಕೊಳ್ಳುವ ನಿರ್ಧಾರವು ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ನ್ಯಾಯಮಂಡಳಿಯ ನಿರ್ಧಾರವು ಕರೋನಾ ವೈರಸ್ ಸೋಂಕಿನ ಅಪಾಯದಲ್ಲಿರುವ ಹಿರಿಯ ನಾಗರಿಕರಿಗೆ ನೆರವಾಗಲಿದೆ ಎಂದು ಮನವಿ ಮಾಡಲಾಗಿತ್ತು.

ರಸ್ತೆಗಿಳಿಯುವಂತಿಲ್ಲ 15 ವರ್ಷಕ್ಕಿಂತ ಹಳೆಯ ವಾಹನಗಳು

ದೆಹಲಿಯಲ್ಲಿ ಸಾಕಷ್ಟು ಹಿರಿಯ ನಾಗರಿಕರು ಏಕಾಂಗಿಯಾಗಿ ವಾಸಿಸುತ್ತಿದ್ದು, ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಹಳೆಯ ವಾಹನಗಳನ್ನು ಚಾಲನೆ ಮಾಡುವ ಆಯ್ಕೆಯನ್ನು ಅವರಿಗೆ ನೀಡುವುದರಿಂದ ಅನುಕೂಲವಾಗಲಿದೆ ಎಂದು ಸಹ ಮೇಲ್ಮನವಿಯಲ್ಲಿ ತಿಳಿಸಲಾಗಿತ್ತು.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ರಸ್ತೆಗಿಳಿಯುವಂತಿಲ್ಲ 15 ವರ್ಷಕ್ಕಿಂತ ಹಳೆಯ ವಾಹನಗಳು

ಆದರೆ ನ್ಯಾಯಾಧಿಕರಣವು ಮೇಲ್ಮನವಿಯಲ್ಲಿನ ಬೇಡಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಹಿಂದಿನ ತೀರ್ಪನ್ನು ಪುನರುಚ್ಚರಿಸಿದೆ. 2014ರ ನವೆಂಬರ್‌ನಲ್ಲಿ ನೀಡಲಾಗಿದ್ದ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ದೆಹಲಿ ರಸ್ತೆಗಳಲ್ಲಿ ಚಾಲನೆ ಮಾಡುವಂತಿಲ್ಲ ಎಂಬ ತೀರ್ಪನ್ನು ಪುನರುಚ್ಚರಿಸಿದೆ.

ರಸ್ತೆಗಿಳಿಯುವಂತಿಲ್ಲ 15 ವರ್ಷಕ್ಕಿಂತ ಹಳೆಯ ವಾಹನಗಳು

ಈ ತೀರ್ಪಿನಂತೆ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ರಸ್ತೆಗಳಲ್ಲಿ ನಿಲ್ಲಿಸುವುದು ಸಹ ಕಾನೂನುಬಾಹಿರವಾಗಿದೆ. ಅಂತಹ ವಾಹನಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಅವಕಾಶ ನೀಡಲಾಗಿದ್ದು, ಅವುಗಳನ್ನು ಚಾಲನೆ ಮಾಡಿದ ಕಾರಣಕ್ಕೆ ದಂಡ ವಿಧಿಸಲೂ ಬಹುದು.

Most Read Articles

Kannada
English summary
Vehicles older than 15 years cannot be operated in Delhi, NGT upholds old order. Read in Kannada.
Story first published: Thursday, July 9, 2020, 17:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X