ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಎಮಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಎಮಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 2016ರಲ್ಲಿ ಪರಿಚಯಿಸಿದ್ದರು.

ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಫೋಕ್ಸ್‌ವ್ಯಾಗನ್ ಎಮಿಯೊ ಸಬ್ ಫೋರ್ ಮೀಟರ್ ಸೆಡಾನ್ ಆಗಿದೆ. ಫೋಕ್ಸ್‌ವ್ಯಾಗನ್ ಎಮಿಯೊ ಕಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ಈ ಕಾರನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಈ ಕಾರಿನ ಉತ್ಪಾದನೆಗೆ ಸುಮಾರು ರೂ.720 ಕೋಟಿ ಹೂಡಿಕೆಯನ್ನು ಮಾಡಿದ್ದರು. 2016ರ ಆಟೋ ಎಕ್ಸ್ ಪೋದಲ್ಲಿ ಎಮಿಯೊ ಕಾರನ್ನು ಮೊದಲ ಬಾರಿಗೆ ಪರಿಚಯಿಸಿದ್ದರು. 2016ರ ಮೇ ತಿಂಗಳಲ್ಲಿ ಈ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ್ದರು.

ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಫೋಕ್ಸ್‌ವ್ಯಾಗನ್ ಎಮಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂ.5.14 ಲಕ್ಷಕ್ಕೆ ಮಾರಾಟ ಮಾಡಲಾಗುತ್ತದೆ. ಬಿಡುಗಡೆಯಾದ ಬಳಿಕ ಎಮಿಯೊ ಕಾರು ಉತ್ತಮವಾಗಿ ಮಾರಾಟವಾಗುತ್ತಿತ್ತು. ಆದರೆ ದಿನಗಳು ಕಳೆದಂತೆ ಪ್ರತಿ ಸ್ಪರ್ಧಿಯಾಗಿ ಹಲವು ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಯ್ತು.

ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಪ್ರತಿಸ್ಪರ್ಧಿಗಳ ಪ್ರಬಲ ಪೈಪೋಟಿಯಿಂದ ಎಮಿಯೊ ಕಾರಿನ ಮಾರಾಟದಲ್ಲಿ ಕುಸಿತವಾಗಿತ್ತು. ಫೋಕ್ಸ್‌ವ್ಯಾಗನ್ ಎಮಿಯೊ ಕಾರು ಬಿಡುಗಡೆಯಾದ ಮೂರು ತಿಂಗಳಲ್ಲಿ ಒಟ್ಟು 50,000 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ.

ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಪ್ರತಿಸ್ಪರ್ಧಿಗಳ ಪ್ರಬಲ ಪೈಪೋಟಿಯಿಂದ ಎಮಿಯೊ ಕಾರಿನ ಮಾರಾಟದಲ್ಲಿ ಕುಸಿತವಾಗಿತ್ತು. ಫೋಕ್ಸ್‌ವ್ಯಾಗನ್ ಎಮಿಯೊ ಕಾರು ಬಿಡುಗಡೆಯಾದ ಬಳಿಕ ಒಟ್ಟು 50,000 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ.

ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಇನ್ನು ಮಾರುತಿ ಸುಜುಕಿ ಡಿಜೈರ್ ಕಾರಿನ ವಾರ್ಷಿಕ ಮಾರಾಟವು 2018ರಲ್ಲಿ 2,64,612 ಮತ್ತು 2019ರಲ್ಲಿ 1,98,904 ಯುನಿಟ್‌ಗಳು ಮಾರಾಟವಾಗಿದೆ. ಹೋಂಡಾ ಅಮೇಜ್ ಕಾರಿನ ವಾರ್ಷಿಕ ಮಾರಾಟವು 2018ರಲ್ಲಿ 67,584 ಅಮೇಜ್ ಮತ್ತು 2019ರಲ್ಲಿ 67,715 ಯುನಿಟ್‌ಗಳು ಮಾರಾಟವಾಗಿದೆ. ಕಳೆದ ವರ್ಷ ಅಮಿಯೊ ಕಾರಿನ ಕೇವಲ 500 ಯುನಿಟ್‌ಗಳು ಮಾತ್ರ ಮಾರಾಟವಾಗಿದೆ.

ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಫೋಕ್ಸ್‌ವ್ಯಾಗನ್ ಎಮಿಯೊ ಕಾರನ್ನು ಬಿಎಸ್-4 ಎಂಜಿನ್ ನಲ್ಲಿ ಬಿಡುಗಡೆ ಮಾಡಲಾಯಿತು. ಎಮಿಯೊ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಗಳ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ಪೆಟ್ರೋಲ್ ಎಂಜಿನ್ 74 ಬಿಹೆಚ್‌ಪಿ ಪವರ್ ಮತ್ತು 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಎಂಟಿ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ 109 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಎಂಟಿ ಗೇರ್‌ಬಾಕ್ಸ್ ಅನ್ನು ಅಳವಡಿಸಲಾಗಿದೆ. ನಂತರ 2018ರಲ್ಲಿ ಫೋಕ್ಸ್‌ವ್ಯಾಗನ್ ಎಮಿಯೊ ಕಾರಿನಲ್ಲ್ಲಿ 1.2-ಲೀಟರ್ ಪೆಟ್ರೋಲ್ ಅನ್ನು ಬದಲಾಯಿಸಿ 1-ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದರು.

ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಫೋಕ್ಸ್‌ವ್ಯಾಗನ್ ಮತ್ತು ಸ್ಖೋಡಾ ದೇಶಿಯ ಮಾರುಕಟ್ಟೆಯಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಲು ಸಜ್ಜಾಗುತ್ತಿದೆ. ಫೋಕ್ಸ್‌ವ್ಯಾಗನ್ ಮತ್ತು ಸ್ಖೋಡಾ ಕಂಪನಿಗಳು ಮುಂದಿನ ಎರಡು ವರ್ಷಗಳಲ್ಲಿ 2.0 ಯೋಜನೆಯಡಿಯಲ್ಲಿ ಹಲವು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿವೆ.

Most Read Articles

Kannada
English summary
Volkswagen Ameo discontinued. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X