Just In
- 5 hrs ago
ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ನ್ಯೂ ಜನರೇಷನ್ ಸ್ಕಾರ್ಪಿಯೋ
- 7 hrs ago
ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಯಮಹಾ ವೈಝಡ್ಎಫ್-ಆರ್25 ಬೈಕ್
- 8 hrs ago
ಮಾಲಿನ್ಯ ಉಂಟುಮಾಡುವ ವಾಹನಗಳಿಗೆ ಬ್ರೇಕ್ ಹಾಕಲು 'ಹಸಿರು ತೆರಿಗೆ' ಅಸ್ತ್ರ
- 9 hrs ago
ಒಂದೂವರೆ ವರ್ಷದಲ್ಲಿ ದಾಖಲೆ ಸಂಖ್ಯೆಯ ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್
Don't Miss!
- News
ಹಿರಿಯೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೊಸ ರೂಪ
- Sports
ಐಎಸ್ಎಲ್: ನಾರ್ತ್ಈಸ್ಟ್ vs ಮೋಹನ್ ಬಾಗನ್, Live ಸ್ಕೋರ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Movies
ರಾಜಮೌಳಿಯ RRR ಚಿತ್ರಕ್ಕೆ ಎದುರಾಗಿ ಅಜಯ್ ದೇವಗನ್ ಸಿನಿಮಾ?
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಗೆ ಸಿದ್ದವಾದ ಫೋಕ್ಸ್ವ್ಯಾಗನ್ ಮತ್ತು ಸ್ಕೋಡಾ ಸಹಭಾಗೀತ್ವದ ಹೊಸ ಕಾರು ಮಾದರಿಗಳಿವು..
ಫೋಕ್ಸ್ವ್ಯಾಗನ್ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಸ್ಕೋಡಾ ಕಂಪನಿಯು ತನ್ನ ಪ್ರಮುಖ ಕಾರು ಉತ್ಪನ್ನಗಳ ಮಾರಾಟವನ್ನು ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಸಹಭಾಗೀತ್ವ ಯೋಜನೆಯಡಿ ಅಡಿ ಹೊಸ ಕಾರು ಮಾದರಿಗಳೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳ ನವೀಕೃತ ಮಾದರಿಗಳನ್ನು ಸಹ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

01. ಆಕ್ಟಿವಿಯಾ ಫೇಸ್ಲಿಫ್ಟ್
ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾಗಬೇಕಿದ್ದ ಆಕ್ಟಿವಿಯಾ ಫೇಸ್ಲಿಫ್ಟ್ ಮಾದರಿಯ ಬಿಡುಗಡೆಗೆ ಅಂತಿಮ ಹಂತದ ಸಿದ್ದತೆ ನಡೆಸಿರುವ ಸ್ಕೋಡಾ ಕಂಪನಿಯು ಕರೋನಾ ವೈರಸ್ ಸಂಕಷ್ಟದಿಂದ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಿದ್ದು, ಹೊಸ ಕಾರು 2021ರ ಜನವರಿ ಅಥವಾ ಫೆಬ್ರುವರಿ ಹೊತ್ತಿಗೆ ಬಿಡುಗಡೆಯಾಗಲಿದೆ. ಹೊಸ ಆಕ್ಟಿವಿಯಾ ಫೇಸ್ಲಿಫ್ಟ್ ಕಾರು ಎಂಕ್ಯೂವಿ ಪ್ಲಾಟ್ಫಾರ್ಮ್ನಡಿಯಲ್ಲಿ ಅಭಿವೃದ್ದಿಪಡಿಸಲಾಗುತ್ತಿದ್ದು, ಈ ಹೊಸ ಪ್ರಸ್ತುತ ಮಾದರಿಗಿಂತ 19 ಎಂಎಂ ಉದ್ದ ಮತ್ತು 15 ಎಂಎಂ ಹೆಚ್ಚುವರಿ ಅಗಲ ಹೊಂದಿದೆ.

ಸ್ಕೋಡಾ ಆಕ್ಟಿವಿಯಾ ಕಾರಿನಲ್ಲಿ ಕಂಪನಿಯು ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾದ 1.5-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅಥವಾ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದಾಗಿದ್ದು, ಆಕ್ಟಿವಿಯಾ ಮಾದರಿಯು ಸ್ಕೋಡಾ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರು ಮಾದರಿಗಳಲ್ಲಿ ಒಂದಾಗಿದೆ.

02. ವಿಷನ್ ಇನ್ ಕಾನ್ಸೆಪ್ಟ್ ಕಂಪ್ಯಾಕ್ಟ್ ಎಸ್ಯುವಿ
ಸ್ಕೋಡಾ ಕಂಪನಿಯು ಮಧ್ಯಮ ಕ್ರಮಾಂಕದ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಇದರಲ್ಲಿ ಕಂಪ್ಯಾಕ್ಟ್ ಎಸ್ಯುವಿ ಮಾದರಿಯು ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ. 2020ರ ದೆಹಲಿ ಆಟೋ ಎಕ್ಸ್ಪೋದಲ್ಲಿ ಅನಾವರಣಗೊಂಡಿದ್ದ ವಿಷನ್ ಇನ್ ಕಾನ್ಸೆಪ್ಟ್ ಮಾದರಿಯನ್ನು ಕ್ಲಿಕ್ ಹೆಸರಿನೊಂದಿಗ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರು 2021ರ ಮಧ್ಯಂತರದಲ್ಲಿ ಬಿಡುಗಡೆಯಾಗಲಿದೆ.

ಹೊಸ ಕಾರಿನಲ್ಲಿ ಸಾಮಾನ್ಯ ಮಾದರಿಯ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 1.-0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪರಿಚಯಿಸುವ ಸಾಧ್ಯತೆಗಳಿದ್ದು, ಸಾಮಾನ್ಯ ಆವೃತ್ತಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆ ಹೊಂದಿದ್ದರೆ ಟರ್ಬೋ ಮಾದರಿಯು 7-ಸ್ಪೀಡ್ ಡ್ಯಯುಲ್ ಕ್ಲಚ್ ಗೇರ್ಬಾಕ್ಸ್ ಆಯ್ಕೆ ಪಡೆದುಕೊಳ್ಳಲಿದೆ.

03. ಕೊಡಿಯಾಕ್ ಎಸ್ಯುವಿ
ಸದ್ಯ ಮಾರುಕಟ್ಟೆ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿರುವ ಸ್ಕೋಡಾ ಕಂಪನಿಯು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಹೊಸ ಡೀಸೆಲ್ ಎಂಜಿನ್ ಅನ್ನು ಅಭಿವೃದ್ದಿ ಪಡಿಸುತ್ತಿದ್ದು, ವಿವಿಧ ಎಸ್ಯುವಿ ಮಾದರಿಗಳಿಗೆ ಪೈಪೋಟಿಯಾಗಿ ಕೊಡಿಯಾಕ್ ಎಸ್ಯುವಿಯನ್ನು ಸಹ ಹೊಸ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಲು ಯೋಜನೆ ರೂಪಿಸಲಾಗಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಭಾರತೀಯ ಮಾರುಕಟ್ಟೆಯಲ್ಲಿ ಪಾರುಪಾತ್ಯ ಸಾಧಿಸಲು ಸಜ್ಜಾಗುತ್ತಿರುವ ಸ್ಕೋಡಾ ಆಟೋ ಇಂಡಿಯಾ ಕಂಪನಿಯು ಭಾರತದಲ್ಲಿ 2.0 ಯೋಜನೆಯಡಿ ಮುಂದಿನ ವರ್ಷದಿಂದ ಹೆಚ್ಚಿನ ಮಟ್ಟದ ಸ್ಥಳೀಯವಾಗಿ ವಾಹನಗಳನ್ನು ಉತ್ಪಾದಿಸಲು ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ವಿವಿಧ ಮಾದರಿಯ ಕಾರು ಮಾದರಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.

04. ಟಿಗ್ವಾನ್ ಫೇಸ್ಲಿಫ್ಟ್
ಈ ವರ್ಷದ ಆರಂಭದಲ್ಲಿ ಟಿಗ್ವಾನ್ ಆಲ್ಸ್ಪೆಸ್ ಮಾದರಿಯನ್ನು ಸ್ಕೋಡಾ ಜೊತೆಗೂಡಿ ಬಿಡುಗಡೆ ಮಾಡಿದ್ದ ಫೋಕ್ಸ್ವ್ಯಾಗನ್ ಕಂಪನಿಯು ಶೀಘ್ರದಲ್ಲೇ ಹೊಸ ಎಂಜಿನ್ ಪ್ರೇರಿತ ಫೇಸ್ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, 2.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಹೊಸ ಕಾರು ಫೇಸ್ಲಿಫ್ಟ್ ಮಾದರಿಯಲ್ಲಿ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

05. ವೆಂಟೊ ಹೊಸ ಆವೃತ್ತಿ
ಭಾರತೀಯ ಮಾರುಕಟ್ಟೆಯಲ್ಲಿ ಧೀರ್ಘಾವಧಿಯ ಮಾರಾಟ ಹೊಂದಿರುವ ವೆಂಟೊ ಸೆಡಾನ್ ಮಾದರಿಯು ಸದ್ಯ ಬಿಎಸ್-6 ನಿಮನಾಸಾರ 1.0-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ ಮಾರಾಟಗೊಳ್ಳುತ್ತಿದ್ದು, ಫೋಕ್ಸ್ವ್ಯಾಗನ್ ಕಂಪನಿಯು ವೆಂಟೊ ಮಾದರಿಯನ್ನು ಸ್ಥಗಿತಗೊಳಿಸಿ ಹೊಸ ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಆದರೆ ಹೊಸ ಸೆಡಾನ್ ಕಾರು ಮಾದರಿಯ ಮುಂಬರುವ 2021 ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಅದಕ್ಕೂ ಮುನ್ನ ಹೊಸ ಕಾರು ಮಾದರಿಯಾದ ಟೈಗನ್ ಕಂಪ್ಯಾಕ್ಟ್ ಎಸ್ಯುವಿ ಬಿಡುಗಡೆಯ ಸಿದ್ದತೆಯಲ್ಲಿದೆ.