ಭಾರತದ ಮಾರುಕಟ್ಟೆಗೂ ಕಾಲಿಡಲಿದೆ ಕಡಿಮೆ ವೆಚ್ಚದ ಕಾರು ಉತ್ಪಾದಿಸುವ ಜನಪ್ರಿಯ ಬ್ರ್ಯಾಂಡ್

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಕಡಿಮೆ ವೆಚ್ಚದ ಕಾರು ಉತ್ಪಾದಿಸುವ ಜೆಟ್ಟಾ ಬ್ರ್ಯಾಂಡ್ ಅನ್ನು ಪರಿಚಯಿಸಲಿದೆ. ವಿಡಬ್ಲ್ಯೂ ಗ್ರೂಪ್ ಭಾರತದಲ್ಲಿ ಜೆಟ್ಟಾ ಬ್ರ್ಯಾಂಡ್ ಅನ್ನು ಪರಿಚಯಿಸುವ ಮೂಲಕ ಮತ್ತಷ್ಟು ಸುಧಾರಣೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ವರದಿಗಳಾಗಿದೆ.

ಭಾರತದ ಮಾರುಕಟ್ಟೆಗೂ ಕಾಲಿಡಲಿದೆ ಕಡಿಮೆ ವೆಚ್ಚದ ಕಾರು ಉತ್ಪಾದಿಸುವ ಜನಪ್ರಿಯ ಬ್ರ್ಯಾಂಡ್

ಜೆಟ್ಟಾ ಎಫ್‌ಎಡಬ್ಲ್ಯೂ ಗ್ರೂಪ್ ಸಹಯೋಗದೊಂದಿಗೆ ಚೀನಾದಲ್ಲಿ ಕೈಗೆಟುಕುವ ದರದಲ್ಲಿ ಕಾರು ಮಾರಾಟ ಮಾಡುವ ಸಂಸ್ಥೆಯಾಗಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹಲವು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜಿಸುತ್ತಿದೆ. ಜಿಟ್ಟಾ ಬ್ರ್ಯಾಂಡ್ ಕಾರುಗಳನ್ನು ಚೀನಾದಲ್ಲಿ ಉತ್ಪಾದಿಸಲಾಗುತ್ತಿದೆ. ಚೀನಾದಿಂದ ಇತರ ಏಷ್ಯಾದ ಮಾರುಕಟ್ಟೆಗೆ ರಫ್ತು ಮಾಡಲಾಗುವುದು.

ಭಾರತದ ಮಾರುಕಟ್ಟೆಗೂ ಕಾಲಿಡಲಿದೆ ಕಡಿಮೆ ವೆಚ್ಚದ ಕಾರು ಉತ್ಪಾದಿಸುವ ಜನಪ್ರಿಯ ಬ್ರ್ಯಾಂಡ್

ಫೋಕ್ಸ್‌ವ್ಯಾಗನ್ ಕಂಪನಿಯು ಜಿಟ್ಟಾ ಬ್ರ್ಯಾಂಡ್ ನೊಂದಿಗೆ ಟ್ಯಾಕ್ಸಿ ವಿಭಾಗಕ್ಕೆ ಕಡಿಮೆ ಬೆಲೆಯ ಜೆಟ್ಟಾ ಕಾರುಗಳ ಪೂರೈಕೆಯನ್ನು ಮಾಡಬಹುದು. ಜಿಟ್ಟಾ ಬ್ರ್ಯಾಂಡ್ ಭಾರತದಲ್ಲಿ ಹಲವಾರು ಮಾದರಿಗಳನ್ನು ಪರಿಚಯಿಸುವ ಸಾಧ್ಯತೆಗಳಿದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಭಾರತದ ಮಾರುಕಟ್ಟೆಗೂ ಕಾಲಿಡಲಿದೆ ಕಡಿಮೆ ವೆಚ್ಚದ ಕಾರು ಉತ್ಪಾದಿಸುವ ಜನಪ್ರಿಯ ಬ್ರ್ಯಾಂಡ್

ಜಿಟ್ಟಾ ಬ್ರ್ಯಾಂಡ್ ಕಡಿಮೆ ಬೆಲೆಯ ಕಾರುಗಳನ್ನು ಭಾರತದಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯ ಸಹಯೋಗದೊಂದಿಗೆ ಮಾರಾಟ ಮಾಡಲಾಗುತ್ತದೆ. ಇದರಿಂದ ಫೋಕ್ಸ್‌ವ್ಯಾಗನ್ ಕಂಪನಿಗೆ ವೆಚ್ಚವನ್ನು ಉಳಿಸಲು ಸಹಾಯ ಮಾಡುತ್ತದೆ. ಸ್ಥಳಿಯವಾಗಿ ಜಿಟ್ಟಾ ಬ್ರ್ಯಾಂಡ್ ಕಾರುಗಳನ್ನು ತಯಾರಿಸುವ ಬಗ್ಗೆ ಚಿಂತಿಸುವ ಸಾಧ್ಯತೆಗಳಿದೆ.

ಭಾರತದ ಮಾರುಕಟ್ಟೆಗೂ ಕಾಲಿಡಲಿದೆ ಕಡಿಮೆ ವೆಚ್ಚದ ಕಾರು ಉತ್ಪಾದಿಸುವ ಜನಪ್ರಿಯ ಬ್ರ್ಯಾಂಡ್

ಫೋಕ್ಸ್‌ವ್ಯಾಗನ್ ಗ್ರೂಪ್ ಭಾರತದಲ್ಲಿ 2.0 ಯೋಜನೆಯಡಿ ತನ್ನ ಮಾರಾಟವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ 7,900 ಕೋಟಿ ಹೂಡಿಕೆ ಮಾಡುತ್ತಿದೆ. ಫೋಕ್ಸ್‌ವ್ಯಾಗನ್ 2.0 ಯೋಜನೆಯಡಿಯಲ್ಲಿ ಬಿಡುಗಡೆಯಾಗಲಿರುವ ಮೊದಲ ಮಾದರಿ ಟೈಗನ್ ಆಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದ ಮಾರುಕಟ್ಟೆಗೂ ಕಾಲಿಡಲಿದೆ ಕಡಿಮೆ ವೆಚ್ಚದ ಕಾರು ಉತ್ಪಾದಿಸುವ ಜನಪ್ರಿಯ ಬ್ರ್ಯಾಂಡ್

ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ಟೈಗನ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಈ ಹೊಸ ಟೈಗನ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದ್ದರು.

ಭಾರತದ ಮಾರುಕಟ್ಟೆಗೂ ಕಾಲಿಡಲಿದೆ ಕಡಿಮೆ ವೆಚ್ಚದ ಕಾರು ಉತ್ಪಾದಿಸುವ ಜನಪ್ರಿಯ ಬ್ರ್ಯಾಂಡ್

ಹೊಸ ಫೋಕ್ಸ್‌ವ್ಯಾಗನ್ ಟೈಗನ್ ಮಾದರಿಯು ಭಾರತದಲ್ಲಿ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ. ಹೊಸ್ ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿನ್ಯಾಸವು ಟಿ-ಕ್ರಾಸ್ ಎಸ್‍ಯುವಿಗೆ ಹೋಲುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಭಾರತದ ಮಾರುಕಟ್ಟೆಗೂ ಕಾಲಿಡಲಿದೆ ಕಡಿಮೆ ವೆಚ್ಚದ ಕಾರು ಉತ್ಪಾದಿಸುವ ಜನಪ್ರಿಯ ಬ್ರ್ಯಾಂಡ್

ಮುಂಭಾಗದಲ್ಲಿ ಸಾಕಷ್ಟು ಪ್ರಮಾಣದ ಕ್ರೋಮ್ ಅನ್ನು ಬಳಸಲಾಗುತ್ತದೆ ಗ್ರಿಲ್ ಕ್ರೋಮ್ ಅಲಂಕರಿಸುವಿಕೆಯೊಂದಿಗೆ ಸ್ಲ್ಯಾಟ್‌ಗಳನ್ನು ಪಡೆಯುತ್ತದೆ. ಹೆಡ್‌ಲ್ಯಾಂಪ್‌ಗಳು ನಯವಾದ ಯುನಿಟ್ ಗಳಾಗಿವೆ ಮತ್ತು ಗ್ರಿಲ್‌ನ ವಿಸ್ತೃತ ಭಾಗದಂತೆ ಕಾಣುತ್ತವೆ. ಫಾಗ್ ಲ್ಯಾಂಪ್ ಗಳ ಸುತ್ತ ಕ್ರೋಮ್ ಸ್ಟ್ರಿಪ್ ಇದೆ ಮತ್ತು ಸ್ಕಿಡ್ ಪ್ಲೇಟ್ ಇದಕ್ಕೆ ಬಹಳ ಮಸ್ಕಲರ್ ನಿಲುವನ್ನು ನೀಡುತ್ತದೆ.

ಭಾರತದ ಮಾರುಕಟ್ಟೆಗೂ ಕಾಲಿಡಲಿದೆ ಕಡಿಮೆ ವೆಚ್ಚದ ಕಾರು ಉತ್ಪಾದಿಸುವ ಜನಪ್ರಿಯ ಬ್ರ್ಯಾಂಡ್

ಮುಂಭಾಗದಲ್ಲಿರುವಂತೆಯೇ, ಹಿಂಭಾಗದಲ್ಲಿ ಸ್ಕಿಡ್ ಪ್ಲೇಟ್ ಮತ್ತು ಅದರ ಮೇಲೆ ಕ್ರೋಮ್ ಅಲಂಕರಿಸುವ ಬಂಪರ್ ಹೊಂದಿದೆ. ಇನ್ನು ಈ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಈ ವಿಭಾಗದ ಕಾರುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆಧುನಿಕ ಫಿಚರ್ ಗಳೊಂದಿಗೆ ಪ್ರೀಮಿಯಂ ಕಾಣುವ ಕ್ಯಾಬಿನ್ ಪಡೆಯುವ ನಿರೀಕ್ಷೆಯಿದೆ.

ಭಾರತದ ಮಾರುಕಟ್ಟೆಗೂ ಕಾಲಿಡಲಿದೆ ಕಡಿಮೆ ವೆಚ್ಚದ ಕಾರು ಉತ್ಪಾದಿಸುವ ಜನಪ್ರಿಯ ಬ್ರ್ಯಾಂಡ್

ಈ ಹೊಸ ಟೈಗನ್ ಎಸ್‌ಯುವಿ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ ನೊಂದಿಗೆ ಮ್ಯಾನುಯಲ್ ಅಥವಾ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆಯುವ ನಿರೀಕ್ಷೆಯಿದೆ. ಇತರ ಅನೇಕ ವಾಹನ ತಯಾರಕರಂತೆ, ಫೋಕ್ಸ್‌ವ್ಯಾಗನ್ ಸಹ ಡೀಸೆಲ್ ಎಂಜಿನ್‌ಗಳಿಂದ ದೂರ ಸರಿದಿದೆ.

ಭಾರತದ ಮಾರುಕಟ್ಟೆಗೂ ಕಾಲಿಡಲಿದೆ ಕಡಿಮೆ ವೆಚ್ಚದ ಕಾರು ಉತ್ಪಾದಿಸುವ ಜನಪ್ರಿಯ ಬ್ರ್ಯಾಂಡ್

ಮುಂದಿನ ವರ್ಷ ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿಯು ಭಾರತದಲ್ಲಿ ಬಿಡುಗಡೆಯಾಗಲಿದೆ. ಫೋಕ್ಸ್‌ವ್ಯಾಗನ್ ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿ ಎಂಕ್ಯೂಬಿ ಎ0 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಈ ಪ್ಲಾಟ್‌ಫಾರ್ಮ್ ಪಡೆದ ಭಾರತದ ಮೊದಲ ವಾಹನವಾಗಲಿದೆ.

Most Read Articles

Kannada
English summary
Volkswagen Jetta Low-Cost Car Company Could Be Launched In India. Read In Kannada.
Story first published: Tuesday, December 22, 2020, 17:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X