Just In
- 50 min ago
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- 1 hr ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 2 hrs ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 3 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
Don't Miss!
- News
ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ?
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಗರಿಷ್ಟ ರೇಟಿಂಗ್ ಪಡೆದುಕೊಂಡ ಫೋಕ್ಸ್ವ್ಯಾಗನ್ ಎಲೆಕ್ಟ್ರಿಕ್ ಕಾರು
ಹೊಸ ವಾಹನಗಳಲ್ಲಿ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ವಿವಿಧ ಆಟೋ ಉತ್ಪಾದನಾ ಕಂಪನಿಗಳು ಗರಿಷ್ಠ ಮಟ್ಟದ ಫೀಚರ್ಸ್ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಪೋಕ್ಸ್ವ್ಯಾಗನ್ ನಿರ್ಮಾಣದ ಇವಿ ಕಾರು ಕೂಡಾ ಇದೀಗ ಸುರಕ್ಷತೆಯಲ್ಲಿ ಗಮನಸೆಳೆಯುತ್ತಿದ್ದು, ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಗಮನಸೆಳೆದಿದೆ.

ಜಗತ್ತಿನಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚುತ್ತಿದ್ದು, ವಿವಿಧ ಆಟೋ ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಹಲವು ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಮಾರಾಟ ಮಾಡುತ್ತಿವೆ. ಜರ್ಮನ್ ಕಾರು ಫೋಕ್ಸ್ವ್ಯಾಗನ್ ಕೂಡಾ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಐಡಿ.3 ಕಾರು ಮಾದರಿಯು ಕೂಡಾ ಅತ್ಯುತ್ತಮ ಫೀಚರ್ಸ್ನೊಂದಿಗೆ ಸುರಕ್ಷತೆಯಲ್ಲೂ ಗಮನಸೆಳೆಯುತ್ತದೆ.

ಹೊಸ ವಾಹನಗಳಲ್ಲಿನ ಪ್ರಯಾಣಿಕರ ಸುರಕ್ಷಾ ಫೀಚರ್ಸ್ಗಳಲ್ಲಿ ಫೋಕ್ಸ್ವ್ಯಾಗನ್ ಐಡಿ.3 ಕಾರು ಮಾದರಿಯು ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡಿದ್ದು, ಅತ್ಯುತ್ತಮ ಸೇಫ್ಟಿ ಫೀಚರ್ಸ್ ಮೂಲಕ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿದೆ.

ಸದ್ಯ ಅಮೆರಿಕ ಮತ್ತು ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿರುವ ಐಡಿ.3 ಪ್ರೀಮಿಯಂ ಹ್ಯಾಚ್ಬ್ಯಾಕ್ ಎಲೆಕ್ಟ್ರಿಕ್ ಕಾರು ಮಾದರಿಯು ಯುರೋ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ನಲ್ಲಿ 5ಕ್ಕೆ 5 ಸ್ಟಾರ್ ರೇಟಿಂಗ್ ತನ್ನದಾಗಿಸಿಕೊಂಡಿದೆ.

ಯುರೋ ಕ್ರ್ಯಾಶ್ ಟೆಸ್ಟ್ ವರದಿ ಪ್ರಕಾರ ಫೋಕ್ಸ್ವ್ಯಾಗನ್ ಐಡಿ.3 ಇವಿ ಕಾರು ಮಾದರಿಯು ಅಪಘಾತಗಳ ಸಂದರ್ಭದಲ್ಲಿ ಮಧ್ಯಮ ವಯಸ್ಸಿನ ಪ್ರಯಾಣಿಕರಿಗೆ ಶೇ.87ರಷ್ಟು, ಸೇಫ್ಟಿ ಅಸಿಸ್ಟ್ನಲ್ಲಿ ಶೇ.88ರಷ್ಟು, ಚೈಲ್ಡ್ ಸೇಫ್ಟಿನಲ್ಲಿ ಶೇ. 89ರಷ್ಟು ಮತ್ತು ಆಟೋಮ್ಯಾಟಿಕ್ ಬ್ರೇಕಿಂಗ್ ಸಿಸ್ಟಂ ನಿರ್ವಹಣೆಯಲ್ಲಿ ಶೇ. 71 ಅಂಕಗಳನ್ನು ಪಡೆದುಕೊಂಡಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ಈ ಮೂಲಕ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ಅತಿ ಹೆಚ್ಚು ಸುರಕ್ಷಾ ಕಾರು ಮಾದರಿಯಾಗಿ ಹೊರಹೊಮ್ಮಿರುವ ಐಡಿ.3 ಕಾರು ಮಾದರಿಯು ಹೈ ಟೆಕ್ ಸೆನ್ಸಾರ್ ಸೌಲಭ್ಯದೊಂದಿಗೆ ಪಾದಾಚಾರಿಗಳಿಗೂ ಕಾರು ಡಿಕ್ಕಿಯಾಗದಂತೆ ತಡೆಯುವ ಸೌಲಭ್ಯವು ಈ ಕಾರಿನಲ್ಲಿದೆ.
ಅಟೊನೊಮಸ್ ಕಾರ್ಯನಿರ್ವಹಣೆ ಮಾಡುವ ಕ್ರ್ಯಾಶ್ ಅವೈಡ್ ಸಿಸ್ಟಂ ಸೌಲಭ್ಯವು ಪಾದಾಚಾರಿಗೆ ಸಾಕಷ್ಟು ಸಹಕಾರಿಯಾಗಿದ್ದು, ರಸ್ತೆ ದಾಟುವ ಸಂದರ್ಭಗಳಲ್ಲಿ ಪಾದಾಚಾರಿಗಳು ಆಕಸ್ಮಿಕವಾಗಿ ಅಡ್ಡಬಂದರೂ ಕೂಡಾ ಸೆನ್ಸಾರ್ ನೆರವಿನೊಂದಿಗೆ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಂ ಚಾಲಕನ ನೆರವಿಗೆ ಧಾವಿಸುತ್ತದೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಈ ಮೂಲಕ ಆಗಾಬಹುದಾದ ಅಪಘಾತ ತಡೆಯಲು ಸಾಕಷ್ಟು ಸಹಕಾರಿಯಾಗಿದ್ದು, ಅಪಘಾತ ಸಂಭವಿಸಿದರು ಕೂಡಾ ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷಾ ಫೀಚರ್ಸ್ನೊಂದಿಗೆ ಹೆಚ್ಚಿನ ಮಟ್ಟದ ಹಾನಿಯಾಗದಂತೆ ಸುರಕ್ಷಾ ಕವಚ ನಿರ್ಮಿಸುತ್ತದೆ.