ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗರಿಷ್ಟ ರೇಟಿಂಗ್ ಪಡೆದುಕೊಂಡ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು

ಹೊಸ ವಾಹನಗಳಲ್ಲಿ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ವಿವಿಧ ಆಟೋ ಉತ್ಪಾದನಾ ಕಂಪನಿಗಳು ಗರಿಷ್ಠ ಮಟ್ಟದ ಫೀಚರ್ಸ್‌ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಪೋಕ್ಸ್‌ವ್ಯಾಗನ್ ನಿರ್ಮಾಣದ ಇವಿ ಕಾರು ಕೂಡಾ ಇದೀಗ ಸುರಕ್ಷತೆಯಲ್ಲಿ ಗಮನಸೆಳೆಯುತ್ತಿದ್ದು, ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದಿದೆ.

ಗರಿಷ್ಟ ರೇಟಿಂಗ್ ಪಡೆದುಕೊಂಡ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು

ಜಗತ್ತಿನಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚುತ್ತಿದ್ದು, ವಿವಿಧ ಆಟೋ ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಹಲವು ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಮಾರಾಟ ಮಾಡುತ್ತಿವೆ. ಜರ್ಮನ್ ಕಾರು ಫೋಕ್ಸ್‌ವ್ಯಾಗನ್ ಕೂಡಾ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಐಡಿ.3 ಕಾರು ಮಾದರಿಯು ಕೂಡಾ ಅತ್ಯುತ್ತಮ ಫೀಚರ್ಸ್‌ನೊಂದಿಗೆ ಸುರಕ್ಷತೆಯಲ್ಲೂ ಗಮನಸೆಳೆಯುತ್ತದೆ.

ಗರಿಷ್ಟ ರೇಟಿಂಗ್ ಪಡೆದುಕೊಂಡ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು

ಹೊಸ ವಾಹನಗಳಲ್ಲಿನ ಪ್ರಯಾಣಿಕರ ಸುರಕ್ಷಾ ಫೀಚರ್ಸ್‌ಗಳಲ್ಲಿ ಫೋಕ್ಸ್‌ವ್ಯಾಗನ್ ಐಡಿ.3 ಕಾರು ಮಾದರಿಯು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡಿದ್ದು, ಅತ್ಯುತ್ತಮ ಸೇಫ್ಟಿ ಫೀಚರ್ಸ್ ಮೂಲಕ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿದೆ.

ಗರಿಷ್ಟ ರೇಟಿಂಗ್ ಪಡೆದುಕೊಂಡ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು

ಸದ್ಯ ಅಮೆರಿಕ ಮತ್ತು ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿರುವ ಐಡಿ.3 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರು ಮಾದರಿಯು ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5ಕ್ಕೆ 5 ಸ್ಟಾರ್ ರೇಟಿಂಗ್ ತನ್ನದಾಗಿಸಿಕೊಂಡಿದೆ.

ಗರಿಷ್ಟ ರೇಟಿಂಗ್ ಪಡೆದುಕೊಂಡ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು

ಯುರೋ ಕ್ರ್ಯಾಶ್ ಟೆಸ್ಟ್ ವರದಿ ಪ್ರಕಾರ ಫೋಕ್ಸ್‌ವ್ಯಾಗನ್ ಐಡಿ.3 ಇವಿ ಕಾರು ಮಾದರಿಯು ಅಪಘಾತಗಳ ಸಂದರ್ಭದಲ್ಲಿ ಮಧ್ಯಮ ವಯಸ್ಸಿನ ಪ್ರಯಾಣಿಕರಿಗೆ ಶೇ.87ರಷ್ಟು, ಸೇಫ್ಟಿ ಅಸಿಸ್ಟ್‌ನಲ್ಲಿ ಶೇ.88ರಷ್ಟು, ಚೈಲ್ಡ್ ಸೇಫ್ಟಿ‌ನಲ್ಲಿ ಶೇ. 89ರಷ್ಟು ಮತ್ತು ಆಟೋಮ್ಯಾಟಿಕ್ ಬ್ರೇಕಿಂಗ್ ಸಿಸ್ಟಂ ನಿರ್ವಹಣೆಯಲ್ಲಿ ಶೇ. 71 ಅಂಕಗಳನ್ನು ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಗರಿಷ್ಟ ರೇಟಿಂಗ್ ಪಡೆದುಕೊಂಡ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು

ಈ ಮೂಲಕ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ಅತಿ ಹೆಚ್ಚು ಸುರಕ್ಷಾ ಕಾರು ಮಾದರಿಯಾಗಿ ಹೊರಹೊಮ್ಮಿರುವ ಐಡಿ.3 ಕಾರು ಮಾದರಿಯು ಹೈ ಟೆಕ್ ಸೆನ್ಸಾರ್ ಸೌಲಭ್ಯದೊಂದಿಗೆ ಪಾದಾಚಾರಿಗಳಿಗೂ ಕಾರು ಡಿಕ್ಕಿಯಾಗದಂತೆ ತಡೆಯುವ ಸೌಲಭ್ಯವು ಈ ಕಾರಿನಲ್ಲಿದೆ.

ಅಟೊನೊಮಸ್ ಕಾರ್ಯನಿರ್ವಹಣೆ ಮಾಡುವ ಕ್ರ್ಯಾಶ್ ಅವೈಡ್ ಸಿಸ್ಟಂ ಸೌಲಭ್ಯವು ಪಾದಾಚಾರಿಗೆ ಸಾಕಷ್ಟು ಸಹಕಾರಿಯಾಗಿದ್ದು, ರಸ್ತೆ ದಾಟುವ ಸಂದರ್ಭಗಳಲ್ಲಿ ಪಾದಾಚಾರಿಗಳು ಆಕಸ್ಮಿಕವಾಗಿ ಅಡ್ಡಬಂದರೂ ಕೂಡಾ ಸೆನ್ಸಾರ್ ನೆರವಿನೊಂದಿಗೆ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಂ ಚಾಲಕನ ನೆರವಿಗೆ ಧಾವಿಸುತ್ತದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಗರಿಷ್ಟ ರೇಟಿಂಗ್ ಪಡೆದುಕೊಂಡ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು

ಈ ಮೂಲಕ ಆಗಾಬಹುದಾದ ಅಪಘಾತ ತಡೆಯಲು ಸಾಕಷ್ಟು ಸಹಕಾರಿಯಾಗಿದ್ದು, ಅಪಘಾತ ಸಂಭವಿಸಿದರು ಕೂಡಾ ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷಾ ಫೀಚರ್ಸ್‌ನೊಂದಿಗೆ ಹೆಚ್ಚಿನ ಮಟ್ಟದ ಹಾನಿಯಾಗದಂತೆ ಸುರಕ್ಷಾ ಕವಚ ನಿರ್ಮಿಸುತ್ತದೆ.

Most Read Articles

Kannada
English summary
Volkswagen First EV ID.3 Scores 5 Star Rating In Euro NCAP. Read in Kannada.
Story first published: Monday, October 26, 2020, 21:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X