Just In
- 36 min ago
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- 1 hr ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 2 hrs ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 2 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
Don't Miss!
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- News
ಚುನಾವಣೆಗೂ ಮುನ್ನ ಅಮಿತ್ ಶಾ ಜೊತೆ ಇಪಿಎಸ್ ಮಹತ್ವದ ಚರ್ಚೆ
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು ಪವರ್ಫುಲ್ ಫೋಕ್ಸ್ವ್ಯಾಗನ್ ಗಾಲ್ಫ್ ಆರ್ ಕಾರು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋಕ್ಸ್ವ್ಯಾಗನ್ ಕಂಪನಿಯು ತನ್ನ ಬಹುನಿರೀಕ್ಷಿತ ಹೊಸ ಗಾಲ್ಫ್ ಆರ್ ಕಾರನ್ನು ಅನಾವರಣಗೊಳಿಸಿದೆ. ಈ ಹೊಸ ಫೋಕ್ಸ್ವ್ಯಾಗನ್ ಗಾಲ್ಫ್ ಆರ್ ಕಾರು ಪವರ್ಫುಲ್ ಲೀಟರ್ ಟರ್ಬೊ ಎಂಜಿನ್ ಅನ್ನು ಪಡೆದುಕೊಂಡಿದೆ.

ಈ ಹೊಸ ಫೋಕ್ಸ್ವ್ಯಾಗನ್ ಗಾಲ್ಫ್ ಆರ್ ಹಿಂದಿನ ತಲೆಮಾರಿಗಿಂತ 25 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಕಾರು ಆಲ್-ವ್ಹೀಲ್-ಡ್ರೈವ್ ಮತ್ತು ಡ್ರಿಫ್ಟ್ ಮೋಡ್ ಅನ್ನು ಸಹ ಪಡೆಯುತ್ತದೆ. ಹೊಸ ಫೋಕ್ಸ್ವ್ಯಾಗನ್ ಗಾಲ್ಫ್ ಆರ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸಾಕಷ್ಟು ನವೀಕರಣಗಳನ್ನು ಪಡೆಯುತ್ತದೆ. ಈ ಹೊಸ ಕಾರು ಮೋಟಾರ್ಸ್ಪೋರ್ಟ್-ಶೈಲಿಯ ಸ್ಪ್ಲಿಟರ್ ಮತ್ತು ಆರ್-ಸ್ಪೆಸಿಫಿಕ್ ಏರ್ ಇಂಟೆಕ್ ಗ್ರಿಲ್ಸ್ ಹೊಂದಿರುವ ಹೊಸ ಫ್ರಂಟ್ ಬಂಪರ್ ಅನ್ನು ಒಳಗೊಂಡಿದೆ.

ಇದು ಬ್ಲೂ ಕ್ರಾಸ್ಬಾರ್ ಅನ್ನು ಸಹ ಹೊಂದಿದೆ, ಇದು ಎಂಜಿನ್ ಪ್ರಾರಂಭವಾದ ತಕ್ಷಣ ಎಲ್ಇಡಿ ಸ್ಟ್ರಿಪ್ ಆಗಿ ಪ್ರಕಾಶಿಸುತ್ತದೆ. ಹೊಸ ಗಾಲ್ಫ್ ಆರ್ ಮಾದರಿಯು 19 ಇಂಚಿನ ಅಲ್ಯೂಮಿನಿಯಂ-ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ಹೊಸ 19 ಇಂಚಿನ ಆರ್ ಲೋಗೊ ಹೊಂದಿರುವ ನೀಲಿ ಬ್ರೇಕ್ ಕ್ಯಾಲಿಪರ್ಗಳು. ಹಿಂಭಾಗದ ಬಂಪರ್ ಹೊಸದಾಗಿ ವಿನ್ಯಾಸಗೊಳಿಸಲಾದ ಹೈ-ಗ್ಲೋಸ್ ಬ್ಲ್ಯಾಕ್ ಡಿಫ್ಯೂಸರ್ ಅನ್ನು ಪಡೆಯುತ್ತದೆ. ಇದನ್ನು ಕ್ರೋಮ್-ಲೇಪಿತ ಟ್ವಿನ್ ಟೈಲ್ಪೈಪ್ಗಳಿಂದ ಬದಿಗಳಲ್ಲಿ ರಚಿಸಲಾಗಿದೆ.

ಈ ಹೊಸ ಫೋಕ್ಸ್ವ್ಯಾಗನ್ ಗಾಲ್ಫ್ ಆರ್ ಎಂದಿಗಿಂತಲೂ ಹೆಚ್ಚು ಸ್ಪೋರ್ಟಿ ಆಗಿ ಕಾಣುತ್ತದೆ. ಫೋಕ್ಸ್ವ್ಯಾಗನ್ ಗೋಲ್ಡ್ ಆರ್ ಇಂಟಿರಿಯರ್ ನಲ್ಲಿ 10 ಇಂಚಿನ ಡಿಸ್ಕವರ್ ಪ್ರೊ ಟಚ್ಸ್ಕ್ರೀನ್ ಡಿಸ್ ಪ್ಲೇಯನ್ನು ಕೂಡ ಹೊಂದಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮುಂಭಾಗದ ಸ್ಪೋರ್ಟ್ ಸೀಟುಗಳು ನಪ್ಪಾ ಲೆದರ್ ಗಳನ್ನು ಒಳಗೊಂಡಿವೆ. ಅದು ಕಾರ್ಬನ್-ಲುಕ್ ಅಂಶಗಳನ್ನು ಸೈಡ್ ವಿಭಾಗಗಳಲ್ಲಿ ಬ್ಲೂ ಅಸ್ಸೆಂಟ್ ಗಳನ್ನು ಹೊಂದಿರುತ್ತದೆ. ಜೊತೆಗೆ ಬ್ಯಾಕ್ರೆಸ್ಟ್ನಲ್ಲಿ ಬ್ಲೂ ಆರ್ ಲೋಗೊವನ್ನು ಹೊಂದಿರುತ್ತದೆ.

ಇನ್ನು ಈ ಹೊಸ ಕಾರಿನಲ್ಲಿ ಮಲ್ಟಿಫಂಕ್ಷನ್ ಲೆದರ್ ಸ್ಪೋರ್ಟ್ ಸ್ಟೀಯರಿಂಗ್ ವ್ಹೀಲ್ ಅನ್ನು ನೀಡಲಾಗಿದೆ. ಇನ್ನು ಡಿಎಸ್ಜಿ ಪ್ಯಾಡಲ್ಗಳು, ಬ್ಲೂ ಕಾಂಟ್ರಾಸ್ಟ್ ಸ್ಟ್ರೀಚ್ ಮತ್ತು ವಿವಿಧ ಚಾಲನಾ ಪ್ರೊಫೈಲ್ಗಳ ನೇರ ಆಯ್ಕೆಗಾಗಿ ಆರ್ ಬಟನ್ ಅನ್ನು ಹೊಂದಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಫೋಕ್ಸ್ವ್ಯಾಗನ್ ಗಾಲ್ಫ್ ಆರ್ ಕಾರಿನಲ್ಲಿ ಇತರ ಸ್ಟ್ಯಾಂಡರ್ಡ್ ಫೀಚರ್ ಗಳೆಂದರೆ ಕಾರ್ಬನ್ ಲುಕ್ ಡ್ಯಾಶ್ ಪ್ಯಾನಲ್, ಆರ್-ಸ್ಪೆಸಿಫಿಕ್ ಡೋರ್ ಟ್ರಿಮ್, ಬ್ರಷ್ಡ್ ಸ್ಟೇನ್ಲೆಸ್-ಸ್ಟೀಲ್ ಪೆಡಲ್ ಕ್ಯಾಪ್ಸ್ ಮತ್ತು ಡ್ರೈವರ್ ಫುಟ್ರೆಸ್ಟ್, ಡ್ಯಾಶ್ ಪ್ಯಾನೆಲ್ ಮತ್ತು 30-ಬಣ್ಣಗಳ ಆಂಬಿಯೆಂಟ್ ಲೈಟಿಂಗ್.ಅನ್ನು ಹೊಂದಿದೆ.

ಹೊಸ ಫೋಕ್ಸ್ವ್ಯಾಗನ್ ಗಾಲ್ಫ್ ಆರ್ ಕಾರಿನಲ್ಲಿ ಲೀಟರ್ ಸಿಸಿ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಟಿಎಸ್ಐ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 315 ಬಿಹೆಚ್ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಮತ್ತು 7-ಸ್ಪೀಡ್ ಡಿಎಸ್ಜಿ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗುತ್ತದೆ. ಈ ಪವರ್ ಫುಲ್ ಫೋಕ್ಸ್ವ್ಯಾಗನ್ ಗಾಲ್ಫ್ ಆರ್ ಕಾರು ಕೇವಲ 4.7 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆಯುತ್ತದೆ. ಈ ಕಾರು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.