ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಹೊಸ ಪೊಲೊ ಮತ್ತು ವೆಂಟೊ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿವೆ. ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಮತ್ತು ವೆಂಟೊ ಕಾರುಗಳನ್ನು ಬಿಎಸ್-6 ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಹೊಸ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.5.82 ಲಕ್ಷಗಳಾಗಿದ್ದರೆ, ಹೊಸ ವೆಂಟೊ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.82 ಲಕ್ಷಗಳಾಗಿದೆ. ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಮಾದರಿಗಳಲ್ಲಿ ಬಿಎಸ್-6, 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನ್ನು ಪರಿಚಯಿಸಿದೆ. ಈ ಹೊಸ ಎಂಜಿನ್ ಉತ್ತಮ ದಕ್ಷತೆಯನ್ನು ನೀಡುತ್ತದೆ ಮತ್ತು ಪವರ್ ಫುಲ್ ಎಂಜಿನ್ ಆಗಿದೆ. ಈ 1.0 ಲೀಟರ್ ಪೆಟ್ರೋಲ್ ಎಂಜಿನ್‍ನಲ್ಲಿ ಟಿ‍ಎಸ್ಐ ಮತ್ತು ಎಂಪಿಐ ಸಿಸ್ಟಂ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಪೊಲೊ ಮಾದರಿಗಳಲ್ಲಿ 1.2 ಲೀಟರ್ ಎಂಜಿನ್ ಅನ್ನು ಬದಲಾಯಿಸಿ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 110 ಬಿ‍‍ಹೆಚ್‍‍‍ಪಿ ಪವರ್ ಮತ್ತು 175 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನ್ಯುವಲ್ ಗೇರ್‍‍‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಪೊಲೊ ಮತ್ತು ವೆಂಟೊ ಮಾದರಿಗಳ ಇತರ ರೂಪಾಂತರಗಳಲ್ಲಿ 6 ಸ್ಫೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಹಿಂದಿನ ಮಾದರಿಗಳಲ್ಲಿ ಇದ್ದ 7 ಸ್ಪೀಡ್ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಅನ್ನು ಬದಲಾಯಿಸಿದೆ.

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಫೋಕ್ಸ್‌ವ್ಯಾಗನ್ ಪ್ರಕಾರ ಹೊಸ 1.0 ಲೀಟರ್ ಟಿ‍ಎಸ್ಐ ಪೆಟ್ರೋಲ್ ಎಂಜಿನ್ ಹೆಚ್ಚಿನ ಪವರ್ ಡ್ರೈವಿಬಿಲಿಟಿ, ಉತ್ತಮ ಕಾರ್ಯಕ್ಷಮತೆ, ಸುಧಾರಿತ ಇಂಧನ ದಕ್ಷತೆಯನ್ನು ನೀಡುತ್ತದೆ ಮತ್ತು ಹೆಚ್ಚು ಸಮರ್ಥನೀಯ ಎಂಜಿನ್ ಆಯ್ಕೆಯಾಗಿದೆ.

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ಸ್ ಕಾರಿನ ನಿರ್ದೇಶಕ ಸ್ಟೆಫೆನ್ ನ್ಯಾಪ್ ಅವರು ಮಾತನಾಡಿ, ಫೋಕ್ಸ್‌ವ್ಯಾಗನ್ ಕಂಪನಿಯು ಮಾಲಿನ್ಯದ ಬಗ್ಗೆ ಅರಿತುಕೊಂಡು ಭಾರತದಲ್ಲಿ ತನ್ನ ಗ್ರಾಹಕರಿಗೆ ಉತ್ತಮ ತಂತ್ರಜ್ಞಾನವನ್ನು ನೀಡಲು ಯಾವಾಗಲೂ ಬದ್ದವಾಗಿದೆ. ನಮ್ಮ ಬಿಎಸ್-6 ಪೊಲೊ ಮತ್ತು ವೆಂಟೊ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಹೆಮ್ಮೆಪಡುತ್ತೇವೆ ಎಂದರು.

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಈ ಎರಡು ಹೊಸ ಮಾದರಿಗಳಲ್ಲಿ ಎಂಪಿಐ ಎಂಜಿನ್ ಮತ್ತು ಫೋಕ್ಸ್‌ವ್ಯಾಗನ್‍ನ ಪ್ರಶಸ್ತಿ ವಿಜೇತ ಟಿ‍ಎಸ್‍ಐ ತಂತ್ರಜ್ಞಾನವನ್ನು ಒಳಗೊಂಡಿದೆ. ಹೊಸ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಭಾರತೀಯ ಸರ್ಕಾರದ ಮಾನದಂಡಗಳಿಗೆ ಅನುಸಾರವಾಗಿದೆ ಎಂದು ಹೇಳಿದರು.

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಹೊಸ ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಪೊಲೊ ಮಾದರಿಗಳಲ್ಲಿ ಹಲವಾರು ರೂಪಾಂತಗಳಿವೆ. ಇದು ಟ್ರೆಂಡ್‍‍‍ಲೈನ್, ಕಂಫರ್ಟ್‍‍ಲೈನ್ ಹೈಲೈನ್ ಮತ್ತು ಹೈಲೈನ್ ಪ್ಲಸ್ ಆಗಿದೆ. ಹೊಸ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ-ಲೈನ್ ಟಾಪ್-ಸ್ಪೆಕ್ ರೂಪಾಂರವಾಗಿದೆ.

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಮತ್ತು ವೆಂಟೊ ಕಾರುಗಳಲ್ಲಿ ಹೊಸ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಫೋಕ್ಸ್‌ವ್ಯಾಗನ್ ವೆಂಟೊ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಿಯಾಝ್, ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Volkswagen Polo & Vento BS6 Models Launched In India. Read in Kannada.
Story first published: Thursday, March 5, 2020, 15:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X