ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಟಿಎಸ್‌ಐ ಲಿಮೆಟೆಡ್ ಎಡಿಷನ್ ಪೊಲೊ ಮತ್ತು ವೆಂಟೊ ಮಾದರಿಗಳನ್ನು ಈ ವರ್ಷದ ಮೇ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಪೊಲೊ ಮತ್ತು ವೆಂಟೊ ಟಿಎಸ್‌ಐ ಆವೃತ್ತಿಗಳು 'ಹೈಲೈನ್ ಪ್ಲಸ್' ಮಾದರಿಯನ್ನು ಆಧರಿಸಿದೆ.

ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಈ ತಿಂಗಳ ಆರಂಭದಲ್ಲಿ ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ಟಿಎಸ್‌ಐ ಲಿಮೆಟೆಡ್ ಎಡಿಷನ್ ಪೊಲೊ ಮತ್ತು ವೆಂಟೊ ಮಾದರಿಗಳ ಹೆಸರನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ಬಿಡುಗಡೆಗೊಳಿಸಿದ ಕೆಲವೇ ತಿಂಗಳಲ್ಲಿ ಈ ಕಾರುಗಳ ಹೆಸರನ್ನು ತೆಗೆದು ಹಾಕಿರುವುದರಿಂದ ಹಲವು ಊಹಾಪೋಹಗಳು ಹರಿದಾಡುತ್ತಿತ್ತು. ಈ ಲಿಮೆಟೆಡ್ ಎಡಿಷನ್ ಪೊಲೊ ಮತ್ತು ವೆಂಟೊ ಮಾದರಿಗಳು ಸ್ಥಗಿತವಾಗಿದೆ ಎಂದು ವರದಿಗಳು ಪ್ರಕಟವಾಗಿತ್ತು.

ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ಈ ಲಿಮೆಟೆಡ್ ಎಡಿಷನ್ ಪೊಲೊ ಮತ್ತು ವೆಂಟೊ ಮಾದರಿಗಳನ್ನು ಸ್ಥಗಿತಗೊಳಿಸಿಲ್ಲವೆಂದು ಸ್ಪಷ್ಟಪಡಿಸಿದೆ. ಅಲ್ಲದೇ ಈ ಮಾದರಿಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಈ ಲಿಮೆಟೆಡ್ ಎಡಿಷನ್ ಪೊಲೊ ಮತ್ತು ವೆಂಟೊ ಮಾದರಿಗಳು ಕಂಪನಿಯ ಡೀಲರ್ ಬಳಿ ಮತ್ತು ಆನ್‌ಲೈನ್ ನಲ್ಲಿ ಕೂಡ ಬುಕ್ಕಿಂಗ್ ಮಾಡಲು ಲಭ್ಯವಿದೆ ಎಂದು ಕಂಪನಿಯು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ

ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಎರಡು ಫೋಕ್ಸ್‌ವ್ಯಾಗನ್ ಪೊಲೊ ಟಿಎಸ್‌ಐ ಮತ್ತು ವೆಂಟೊ ಟಿಎಸ್‌ಐ ಮಾದರಿಗಳು ಸೀಮಿತ ಆವೃತ್ತಿಯಾಗಿದೆ. ಎರಡು ಕಾರುಗಳು ಕಾಸ್ಮೆಟಿಕ್ ನವೀಕರಣಗಳು ಮತ್ತು ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಿತ್ತು.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಮ್ಯಾಕನಿಕಲ್ ಅಂಶಗಳು ಒಂದೇ ಆಗಿದ್ದು, ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಫೋಕ್ಸ್‌ವ್ಯಾಗನ್ ಪೋಲೊ ಟಿಎಸ್‌ಐ ಮತ್ತು ವೆಂಟೊ ಟಿಎಸ್‌ಐ ಕಾರುಗಳನ್ನು ಭಾರತದ ಎಕ್ಸ್ ಶೋರೂಂ ಪ್ರಕಾರ ಕ್ರಮವಾಗಿ ರೂ.7.89 ಲಕ್ಷ ಮತ್ತು ರೂ.10.99 ಲಕ್ಷ ಬೆಲೆಯಲ್ಲಿ ಬಿಡುಗಡೆಗೊಳಿಸಿದ್ದರು.

ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಕಾಸ್ಮೆಟಿಕ್ ನವೀಕರಣಗಳ ವಿಷಯದಲ್ಲಿ, ಫೋಕ್ಸ್‌ವ್ಯಾಗನ್ ಪೊಲೊ ಟಿಎಸ್‌ಐ ಮತ್ತು ವೆಂಟೊ ಟಿಎಸ್‌ಐ ಸೀಮಿತ ಮಾದರಿಗಳು ಸ್ಪೋರ್ಟಿ ಬಾಡಿ ಗ್ರಾಫಿಕ್ಸ್, ಬ್ಲ್ಯಾಕ್ಡ್-ಔಟ್, ಒಆರ್‌ವಿಎಂಗಳು, ಬ್ಲ್ಯಾಕ್ ರೂಫ್ ಮತ್ತು ಸ್ಪಾಯ್ಲರ್ಗಳು, ಸ್ಟೈಲಿಶ್ ಹನಿಕ್ಯೂಬ್ ಗ್ರಿಲ್ ಮತ್ತು ಪ್ರಯಾಣಿಕರ ಡೋರ್ ನಲ್ಲಿ ದಪ್ಪ ಟಿಎಸ್‌ಐ ಬ್ಯಾಡ್ಜ್ ಗ್ರಾಫಿಕ್ಸ್ ಅನ್ನು ಒಳಗೊಂಡಿವೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಹೊಸ ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಪೊಲೊ ಮಾದರಿಗಳಲ್ಲಿ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 110 ಬಿ‍‍ಹೆಚ್‍‍‍ಪಿ ಪವರ್ ಮತ್ತು 175 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಫೋಕ್ಸ್‌ವ್ಯಾಗನ್ ಪೋಲೊ ಟಿಎಸ್‌ಐ ಮತ್ತು ವೆಂಟೊ ಟಿಎಸ್‌ಐ ಕಾರುಗಳು ಕೇವಲ ಕಾಸ್ಮೆಟಿಕ್ ನವೀಕರಣವನ್ನು ಮಾತ್ರ ಹೊಂದಿದೆ. ಪೊಲೊ ಮತ್ತು ವೆಂಟೊ ಜರ್ಮನ್ ಬ್ರಾಂಡ್‌ನ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಮಾದರಿಗಳಾಗಿವೆ.

Most Read Articles

Kannada
English summary
Volkswagen Polo, Vento TSI Editions NOt Discontinued Details. Read In Kannada.
Story first published: Tuesday, July 14, 2020, 19:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X